ಛತ್ತೀಸ್​ಗಢದಲ್ಲಿ ಅಭಿವೃದ್ದಿಗಾಗಿ ಸರ್ಕಾರದ ನೆರವು ಕೇಳಿದ ಜನರ ಮೇಲೆ ನಕ್ಸಲರ ಹಲ್ಲೆ; 25 ಮಂದಿಗೆ ಗಾಯ

ಇತ್ತೀಚೆಗೆ ದಾಂತೇವಾಡ ಜಿಲ್ಲಾಧಿಕಾರಿ ಪರ್ಚೇಲಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪರ್ಚೇಲಿ ಗ್ರಾಮದ ಕೆಲವರು ತಮ್ಮ ಹಳ್ಳಿಗೆ ರಸ್ತೆ ನಿರ್ಮಿಸಿ, ಅಂಗನವಾಡಿ ಕಟ್ಟಿಸಿ ಹಾಗೂ ಇನ್ನಿತರೆ ಅಭಿವೃದ್ದಿ ಕಾರ್ಯಗಳನ್ನು ತಮ್ಮ ಗ್ರಾಮದಲ್ಲಿ ಮಾಡಿಕೊಡಿ ಎಂದು ಬೇಡಿಕೆ ಇಟ್ಟಿದ್ದರು ಎಂದು ಎಸ್​ಪಿ ಅಭಿಷೇಕ್​ ಹೇಳಿದ್ದಾರೆ.

news18-kannada
Updated:July 19, 2020, 10:24 PM IST
ಛತ್ತೀಸ್​ಗಢದಲ್ಲಿ ಅಭಿವೃದ್ದಿಗಾಗಿ ಸರ್ಕಾರದ ನೆರವು ಕೇಳಿದ ಜನರ ಮೇಲೆ ನಕ್ಸಲರ ಹಲ್ಲೆ; 25 ಮಂದಿಗೆ ಗಾಯ
ಪ್ರಾತಿನಿಧಿಕ ಚಿತ್ರ
  • Share this:
 ಛತ್ತೀಸ್​ಗಢದ ದಾಂತೇವಾಡ ಜಿಲ್ಲೆಯ ಅಭಿವೃದ್ದಿಗಾಗಿ ಸರ್ಕಾರದ ಸಹಾಯ ಕೇಳಿದ ಹಿನ್ನೆಲೆ, ನಕ್ಸಲರು ಅಲ್ಲಿನ ಜನರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಈ ಪರಿಣಾಮ ಸುಮಾರು 25 ಮಂದಿ ಗ್ರಾಮಸ್ಥರು ಗಾಯಗೊಂಡಿದ್ದು, ಅವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಈ ಘಟನೆ ಶುಕ್ರವಾರ ರಾತ್ರಿ ಕತೆಕಲ್ಯಾನ್ ಪೊಲೀಸ್​ ಠಾಣಾ ವ್ಯಾಪ್ತಿಗೆ ಬರುವ ಪರ್ಚೇಲಿ ಗ್ರಾಮದಲ್ಲಿ ನಡೆದಿದೆ. ಭಾನುವಾರ ಪೊಲೀಸರಿಗೆ ವಿಷಯ ತಿಳಿದಿದ್ದು, ಬಳಿಕ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ದಾಂತೇವಾಡದ ಎಸ್​​​​​​ಪಿ ಅಭಿಷೇಕ್​ ಪಲ್ಲವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚೆಗೆ ದಾಂತೇವಾಡ ಜಿಲ್ಲಾಧಿಕಾರಿ ಪರ್ಚೇಲಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪರ್ಚೇಲಿ ಗ್ರಾಮದ ಕೆಲವರು ತಮ್ಮ ಹಳ್ಳಿಗೆ ರಸ್ತೆ ನಿರ್ಮಿಸಿ, ಅಂಗನವಾಡಿ ಕಟ್ಟಿಸಿ ಹಾಗೂ ಇನ್ನಿತರೆ ಅಭಿವೃದ್ದಿ ಕಾರ್ಯಗಳನ್ನು ತಮ್ಮ ಗ್ರಾಮದಲ್ಲಿ ಮಾಡಿಕೊಡಿ ಎಂದು ಬೇಡಿಕೆ ಇಟ್ಟಿದ್ದರು ಎಂದು ಎಸ್​ಪಿ ಅಭಿಷೇಕ್​ ಹೇಳಿದ್ದಾರೆ.

Ram Mandir: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಕೊರೋನಾ ತೊಲಗುತ್ತದೆ ಎಂದು ಮೋದಿ ಭಾವಿಸಿದ್ದಾರೆ; ಶರದ್ ಪವಾರ್ ಲೇವಡಿ

ಆಗ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಬೇಡಿಕೆಗಳನ್ನು ಪರಿಗಣಿಸುವುದಾಗಿ ಭರವಸೆ ಕೂಡ ನೀಡಿದ್ದರು. ಈ ವಿಷಯ ನಕ್ಸಲರಿಗೆ ತಿಳಿಯುತ್ತಿದ್ದಂತೆ, ಸುಮಾರು 10-15 ನಕ್ಸಲರು ಶುಕ್ರವಾರ ರಾತ್ರಿ ರಾಯ್ಪುರದಿಂದ 440 ಕಿ.ಮೀ.ದೂರದಲ್ಲಿರುವ ಪಾರ್ಚೇಲಿಯಲ್ಲಿ ಸಭೆ ನಡೆಸಿದ್ದರು. ಪಾರ್ಚೇಲಿ ಗ್ರಾಮಕ್ಕೆ ನುಗ್ಗಿ ಅಲ್ಲಿನ ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳ ಮೇಲೆ ದೊಣ್ಣೆಯಿಂದ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ತಂಡವು ಭಾನುವಾರ ಬೆಳಗ್ಗೆ ಆ್ಯಂಬುಲೆನ್ಸ್​​ ಸಮೇತ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಗಾಯಗೊಂಡ ಸುಮಾರು 25 ಮಂದಿಯನ್ನು ಹತ್ತಿರದ ಕಮ್ಯುನಿಟಿ ಹೆಲ್ತ್​ ಸೆಂಟರ್​​ಗೆ ದಾಖಲಿಸಿದ್ದಾರೆ. ಅವರಲ್ಲಿ ಓರ್ವ ಮಹಿಳೆ ಸೇರಿ ಒಟ್ಟು 8 ಮಂದಿಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಉಳಿದ 17 ಮಂದಿ ಗ್ರಾಮಸ್ಥರು ಪ್ರಾಥಮಿಕ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರು ಜನರ ಮೇಲೆ ಸಾಮೂಹಿಕ ಹಲ್ಲೆ ನಡೆಸಿರುವುದು ಇದೇ ಮೊದಲೇನಲ್ಲ. ಆಗಾಗ್ಗೆ ಇಂತಹ ಘಟನೆಗಳು ನಡೆಯುತ್ತಿರುತ್ತವೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿ ಹಂತದಲ್ಲಿದೆ. ಗ್ರಾಮಸ್ಥರ ಮೇಲೆ ಹಲ್ಲೆ ಮಾಡುವಲ್ಲಿ ಯಾರು ಭಾಗಿಯಾಗಿದ್ದರು ಎಂಬ ಬಗ್ಗೆ ಶೋಧ ನಡೆಯುತ್ತಿದೆ ಎಂದರು.
Published by: Latha CG
First published: July 19, 2020, 10:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading