Uttar Pradeshದಲ್ಲಿ ಶೇಕಡಾ 25ರಷ್ಟು ಮದ್ಯದ ಅಂಗಡಿಗಳು ಮಹಿಳೆಯರ ಪಾಲು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹಂಚಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕತೆಯೊಂದಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಮಾಡಲಾಗುತ್ತಿದೆ ಎಂದು ಯುಪಿಯ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್‌ಪಿ ಸಿಂಗ್ ಹೇಳಿದ್ದಾರೆ.

  • Share this:
  • published by :

ಒಂದು ಕಾಲದಲ್ಲಿ ಮದ್ಯದ ವ್ಯಾಪಾರವೆಂದರೆ ಅದು ಬರೀ ಪುರುಷರು ಮಾಡುವಂಥದ್ದು ಅಂತ ಪರಿಗಣಿತವಾಗಿತ್ತು. ಅದರಲ್ಲೂ ಉತ್ತರ ಪ್ರದೇಶದಂಥ (Uttar Pradesh) ರಾಜ್ಯಗಳಲ್ಲಿ ಸ್ಥಳೀಯ ಪ್ರಬಲ ವ್ಯಕ್ತಿಗಳೇ ಇಂಥ ವ್ಯಾಪಾರ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಈ ದೃಷ್ಟಿಕೋನ ಬದಲಾಗಿದೆ. ಮದ್ಯದ ವ್ಯಾಪಾರವೆಂದರೆ ಅದು ಬರೀ ಪ್ರಬಲ ವ್ಯಕ್ತಿಗಳು, ಪುರುಷರು (Men) ಮಾಡುವಂಥದ್ದಲ್ಲ. ಯಾರು ಬೇಕಾದರೂ ಅದನ್ನು ಮಾಡಬಹುದು ಎಂಬುದನ್ನು ಮಹಿಳೆಯರು (Women) ತೋರಿಸಿಕೊಡುತ್ತಿದ್ದಾರೆ. ಹೌದು  ಒಂದು ಕಾಲದಲ್ಲಿ ಸ್ಥಳೀಯ ಪ್ರಬಲ ವ್ಯಕ್ತಿಗಳ ಡೊಮೇನ್ ಎಂದು ಪರಿಗಣಿಸಲಾಗಿದ್ದ ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ಮದ್ಯದ ವ್ಯಾಪಾರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ.


ಮದ್ಯದ ರಿಟೇಲ್‌ ಬ್ಯುಸಿನೆಸ್‌ನಲ್ಲಿ ಶೇ. 25 ರಷ್ಟು ಮಹಿಳೆಯರು!


ಏಪ್ರಿಲ್ 1 ರಿಂದ, ಉತ್ತರ ಪ್ರದೇಶ ರಾಜ್ಯದಲ್ಲಿ ಮಹಿಳೆಯರು ಶೇ. 25 ರಷ್ಟು ಚಿಲ್ಲರೆ ಮದ್ಯದ ವ್ಯಾಪಾರವನ್ನು ನಿಯಂತ್ರಿಸುತ್ತಾರೆ. ರಾಜ್ಯಾದ್ಯಂತ 2023-24ನೇ ಹಣಕಾಸು ವರ್ಷದಲ್ಲಿ ಭಾಂಗ್ ಶಾಪ್‌ಗಳು ಸೇರಿದಂತೆ ಇಲಾಖೆಯು ತೆರೆದಿರುವ ಒಟ್ಟು 28,930 ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ 7,216 ಅಂಗಡಿಗಳು ಮಹಿಳೆಯರ ಪಾಲಾಗಿದೆ ಎಂದು ಪ್ರಯಾಗ್‌ರಾಜ್‌ನಲ್ಲಿರುವ ಅಬಕಾರಿ ಇಲಾಖೆಯ ಪ್ರಧಾನ ಕಚೇರಿ ತಿಳಿಸಿದೆ.


ಈ ಅಂಕಿ ಅಂಶಗಳ ಪ್ರಕಾರ ಲಕ್ನೋ, ಪ್ರಯಾಗರಾಜ್ ಮತ್ತು ಕಾನ್ಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಹಿಳಾ ಭಾಗವಹಿಸುವಿಕೆ ಕಂಡುಬಂದಿದೆ. ಅಲ್ಲದೇ ಇದೇ ಮೊದಲ ಬಾರಿಗೆ, ಟ್ರಾನ್ಸ್‌ಜೆಂಡರ್‌ಗಳು ಸಹ ಮದ್ಯದ ವ್ಯವಹಾರಕ್ಕೆ ಪ್ರವೇಶಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದ ನಂತರ ಅಂದರೆ 2018 ರಿಂದ ಇಂಥದ್ದೊಂದು ಬದಲಾವಣೆ ಸಾಧ್ಯವಾಗಿದೆ ಎಂದು ಮದ್ಯದ ಉದ್ಯಮದ ಪ್ರಮುಖರು ಹೇಳುತ್ತಾರೆ.


ಇದನ್ನೂ ಓದಿ: Business Ideas: ಕೈಯಲ್ಲಿ ಕಡಿಮೆ ದುಡ್ಡಿದ್ರೂ ಸಾಕು, ಈ ಬ್ಯುಸಿನೆಸ್ ಆರಂಭಿಸಿ ಬಿಂದಾಸ್​ ಆಗಿರಬಹುದು!


ಆಟ ಬದಲಿಸಿದ ನಿಯಮ ಬದಲಾವಣೆ!
ಇನ್ನು ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಗೆ ಕೇವಲ ಎರಡು ಅಂಗಡಿಗಳನ್ನು ಹಂಚಿಕೆ ಮಾಡಲು ಅನುಮತಿಸುವ ಷರತ್ತು ಯಾವುದೇ ಪೂರ್ವಾನುಭವವಿಲ್ಲದ ಹೊಸಬರಿಗೆ ಹೆಚ್ಚು ಅವಕಾಶ ಮಾಡಿಕೊಟ್ಟಿದೆ. “2018-19ರ ಮದ್ಯದ ನೀತಿಯು ರಾಜ್ಯದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಮದ್ಯದ ವ್ಯಾಪಾರದಲ್ಲಿ ಪ್ರಾಬಲ್ಯ ಸಾಧಿಸಿದ ಏಕಸ್ವಾಮ್ಯ ಮತ್ತು ಕಾರ್ಟೆಲ್‌ಗೀಗೆ ಸರಿಯಾದ ಪಾಠ ಕಲಿಸಿದೆ ಎಂದು ಹೇಳಲಾಗುತ್ತಿದೆ.


ಆನ್‌ಲೈನ್‌ ಮೂಲಕ ಹಂಚಿಕೆ ಪ್ರಕ್ರಿಯೆ


ಕೆಲವು ವ್ಯಕ್ತಿಗಳು ಹಲವಾರು ಜಿಲ್ಲೆಗಳಲ್ಲಿ ನಡೆಸಲಾಗುತ್ತಿರುವ ಆನ್‌ಲೈನ್ ಲಾಟರಿಯಲ್ಲಿ ಭಾಗವಹಿಸುವ ಮೂಲಕ ಡಜನ್‌ಗಟ್ಟಲೆ ಮದ್ಯದ ಅಂಗಡಿಗಳನ್ನು ಹೊಂದಲು ಸಾಧ್ಯವಾಗಿತ್ತು. ನಂತರದಲ್ಲಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದರ ಪರಿಣಾಮ ಒಬ್ಬ ವ್ಯಕ್ತಿಗೆ ಕೇವಲ ಎರಡು ಲಿಕ್ಕರ್‌ ರಿಟೇಲ್‌ ಶಾಪ್‌ಗಳನ್ನು ಹೊಂದಲು ಅನುಮತಿಸಲಾಯಿತು ಎಂದು ಯುಪಿ ಸರ್ಕಾರ ಹೇಳಿದೆ.


ಹಂಚಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕತೆಯೊಂದಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಮಾಡಲಾಗುತ್ತಿದೆ ಎಂದು ಯುಪಿಯ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್‌ಪಿ ಸಿಂಗ್ ಹೇಳಿದ್ದಾರೆ. ಅವರು ಲಕ್ನೋದಲ್ಲಿ ಎರಡು ದಶಕಗಳಿಂದ ಅಂಗಡಿಗಳನ್ನು ನಡೆಸುತ್ತಿದ್ದಾರೆ.
“2019-2020 ರಿಂದ, ನಾವು ಮಹಿಳಾ ಚಿಲ್ಲರೆ ವ್ಯಾಪಾರಿಗಳ ಸಂಖ್ಯೆಯಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಗಮನಿಸುತ್ತಿದ್ದೇವೆ. ಅಂಗಡಿಗಳನ್ನು ಮುಕ್ತವಾಗಿ ಮತ್ತು ನ್ಯಾಯಯುತವಾಗಿ ನಡೆಸುವ ಜವಾಬ್ದಾರಿ ಮಾಲೀಕರ ಮೇಲಿದೆ. ಅವ್ಯವಹಾರಗಳು ಕಂಡುಬಂದಲ್ಲಿ, ಮಹಿಳಾ ಪರವಾನಗಿದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇನ್ನು, ಕಳೆದ ವರ್ಷ ಮದ್ಯದ ವ್ಯಾಪಾರದಿಂದ ನಿರ್ಗಮಿಸಿದ ಇಂದಿರಾನಗರ ಮೂಲದ ಉದ್ಯಮಿ ವಿಕಾಸ್ ಚಂದ್ರ ಹೇಳುವ ಪ್ರಕಾರ, “ಹೆಚ್ಚಿನ ಅಂಗಡಿಗಳನ್ನು ಹೊಂದಲು ಬಹಳಷ್ಟು ಜನರು ತಮ್ಮ ಪತ್ನಿ ಅಥವಾ ಸಹೋದರಿಯ ಹೆಸರಿನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಮಹಿಳಾ ಭಾಗವಹಿಸುವಿಕೆ ಹೆಚ್ಚಿರುವುದಕ್ಕೆ ಇದೂ ಒಂದು ಕಾರಣ ಅಂತ ಅಭಿಪ್ರಾಯ ಪಡುತ್ತಾರೆ.

First published: