ದೆಹಲಿ ವಿಧಾನಸಭೆ ಚುನಾವಣೆ: 133 ಅಭ್ಯರ್ಥಿಗಳ ಮೇಲಿವೆ ಅಪರಾಧ ಪ್ರಕರಣಗಳು

ಎಎಪಿ ಪಕ್ಷದ ಟಾಪ್​ ಮೂವರು ಶ್ರೀಮಂತ ಅಭ್ಯರ್ಥಿಗಳಾಗಿದ್ದಾರೆ. ಮುಂಡ್ಕ  ಕ್ಷೇತ್ರದ ಅಭ್ಯರ್ಥಿ ಧರ್ಮಪಾಲ್​ ಲಕ್ರಾ 292 ಕೋಟಿ ಆಸ್ತಿ ಹೊಂದಿದ್ದಾರೆ. ಆರ್​.ಕೆ.ಪುರಂ ಕ್ಷೇತ್ರದ ಅಭ್ಯರ್ಥಿ ಪರ್ಮಿಳಾ ಟೋಕಸ್​ 80 ಕೋಟಿ ಆಸ್ತಿಯನ್ನು ಹೊಂದಿದ್ದಾರೆ ಹಾಗೂ ಬದರ್ಪುರ ಕ್ಷೇತ್ರದ ಅಭ್ಯರ್ಥಿ ರಾಮ್​ ಸಿಂಗ್​ ನೇತಾಜಿ ಕೂಡ 80 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನವದೆಹಲಿ(ಫೆ.02): ದೆಹಲಿ ವಿಧಾಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇವೆ. ಈಗಾಗಲೇ ವಿವಿಧ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆಮ್​ ಆದ್ಮಿ, ಬಿಜೆಪಿ ಮತ್ತು ಕಾಂಗ್ರೆಸ್​ ಅಭ್ಯರ್ಥಿಗಳು ತಾವು ಸಲ್ಲಿಸಿರುವ ನಾಮಪತ್ರಗಳಲ್ಲಿ ತಮ್ಮ ಮೇಲಿರುವ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.

  ಆ ಪೈಕಿ ಆಮ್​ ಆದ್ಮಿ ಪಕ್ಷದ ಶೇ.25ರಷ್ಟು ಅಭ್ಯರ್ಥಿಗಳು, ಬಿಜೆಪಿಯ ಶೇ.20ರಷ್ಟು ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್​​ನ ಶೇ.15ರಷ್ಟು ಅಭ್ಯರ್ಥಿಗಳು​​ ತಮ್ಮ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿರುವುದಾಗಿ ಅಫಿಡವಿಟ್​​ನಲ್ಲಿ ಹೇಳಿಕೊಂಡಿದ್ದಾರೆ ಎಂದು ಅಸೋಸಿಯೇಷನ್​ ಆಫ್​ ಡೆಮಾಕ್ರಟಿಕ್ ರಿಫಾರ್ಮ್ಸ್​​ ​​ ತಿಳಿಸಿದೆ.

  ಇದೇ ಫೆಬ್ರವರಿ 8ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಒಟ್ಟು 672 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2015ಕ್ಕೆ ಹೋಲಿಸಿದರೆ ಒಬ್ಬ ಅಭ್ಯರ್ಥಿಯ ಸಂಖ್ಯೆ ಕಡಿಮೆ ಇದೆ. 2015ರಲ್ಲಿ 673 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

  ವೈದ್ಯಲೋಕಕ್ಕೇ ಸವಾಲಾದ ಕೊರೊನಾ ವೈರಸ್​​ಗೆ ಔಷಧಿ ಕಂಡುಹಿಡಿದ ಹಿಂದೂ ಮಹಾಸಭಾ ಅಧ್ಯಕ್ಷ

  ಎಎಪಿ ಪಕ್ಷದ ಟಾಪ್​ ಮೂವರು ಶ್ರೀಮಂತ ಅಭ್ಯರ್ಥಿಗಳಾಗಿದ್ದಾರೆ. ಮುಂಡ್ಕ  ಕ್ಷೇತ್ರದ ಅಭ್ಯರ್ಥಿ ಧರ್ಮಪಾಲ್​ ಲಕ್ರಾ 292 ಕೋಟಿ ಆಸ್ತಿ ಹೊಂದಿದ್ದಾರೆ. ಆರ್​.ಕೆ.ಪುರಂ ಕ್ಷೇತ್ರದ ಅಭ್ಯರ್ಥಿ ಪರ್ಮಿಳಾ ಟೋಕಸ್​ 80 ಕೋಟಿ ಆಸ್ತಿಯನ್ನು ಹೊಂದಿದ್ದಾರೆ ಹಾಗೂ ಬದರ್ಪುರ ಕ್ಷೇತ್ರದ ಅಭ್ಯರ್ಥಿ ರಾಮ್​ ಸಿಂಗ್​ ನೇತಾಜಿ ಕೂಡ 80 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.

  ಒಟ್ಟು 672 ಅಭ್ಯರ್ಥಿಗಳಲ್ಲಿ 133 (ಶೇ.20) ಅಭ್ಯರ್ಥಿಗಳು ತಮ್ಮ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿರುವುದಾಗಿ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. 2015ರ ವಿಧಾನ ಸಭೆ ಚುನಾವಣೆಯಲ್ಲಿ 673 ಅಭ್ಯರ್ಥಿಗಳಲ್ಲಿ 114(ಶೇ.17) ಅಭ್ಯರ್ಥಿಗಳು ಕ್ರಿಮಿನಲ್​ ಕೇಸ್​ ಇರುವುದಾಗಿ ಘೋಷಿಸಿಕೊಂಡಿದ್ದರು ಎಂದು ಎಡಿಆರ್​​​ ಹೇಳಿದೆ.

  ಬಿಆರ್​​ಟಿಎಸ್ ಸಾರಿಗೆ ಯೋಜನೆಗೆ ಇಂದು ಚಾಲನೆ ನೀಡಲಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

  32 ಅಭ್ಯರ್ಥಿಗಳು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ, ಓರ್ವ ಅಭ್ಯರ್ಥಿ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, 4 ಸ್ಪರ್ಧಿಗಳು ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣ ಹಾಗೂ 8 ಅಭ್ಯರ್ಥಿಗಳು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣ ಸಂಬಂಧ ಕೇಸುಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ.
  First published: