HOME » NEWS » National-international » 24 YR OLD WHO IS ACTIVE ON TWITTER ARRESTED FOR SPREADING RUMORS ABOUT RIOTS IN DELHI LG

ದೆಹಲಿ ಗಲಭೆ ಕುರಿತು ಟ್ವಿಟರ್​​ನಲ್ಲಿ ಸುಳ್ಳು ವದಂತಿ; 24 ವರ್ಷದ ಯುವಕನ ಬಂಧನ

Delhi Violence: ಆರೋಪಿ ಶುಕ್ಲಾನ ಮೊಬೈಲ್​ ಫೋನ್​​ನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಆಗ ಆತ ಸೋಷಿಯಲ್ ಮೀಡಿಯಾದಲ್ಲಿ ದೆಹಲಿ ಗಲಭೆ ಕುರಿತು ವದಂತಿ ಹಬ್ಬಿಸಿರುವುದು ಖಚಿತವಾಗಿದೆ ಎಂದು ತಿಳಿದುಬಂದಿದೆ.

Latha CG | news18-kannada
Updated:March 3, 2020, 9:09 AM IST
ದೆಹಲಿ ಗಲಭೆ ಕುರಿತು ಟ್ವಿಟರ್​​ನಲ್ಲಿ ಸುಳ್ಳು ವದಂತಿ; 24 ವರ್ಷದ ಯುವಕನ ಬಂಧನ
ದೆಹಲಿ ಗಲಬೆ ಚಿತ್ರಣ
  • Share this:
ನವದೆಹಲಿ(ಮಾ.03): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಹಿಂಸಾರೂಪ ತಳೆದಿದ್ದು, ಈವರೆಗೆ 47 ಮಂದಿ ಸಾವನ್ನಪ್ಪಿದ್ದಾರೆ. ಈ ದೆಹಲಿ ಹಿಂಸಾಚಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹಬ್ಬಿಸಿದ್ದ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಟ್ವಿಟರ್​​ನಲ್ಲಿ 10 ಸಾವಿರ ಹಿಂಬಾಲಕರನ್ನು ಹೊಂದಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿ ತನ್ನ ಟ್ವಿಟರ್​ ಖಾತೆಯಲ್ಲಿ ದೆಹಲಿ ಗಲಭೆ ಬಗ್ಗೆ ಇಲ್ಲಸಲ್ಲದ, ಸುಳ್ಳು ಮಾಹಿತಿಗಳನ್ನು ಹಂಚಿಕೊಂಡಿದ್ದ ಎನ್ನಲಾಗಿದೆ. ಪಶ್ಚಿಮ ದೆಹಲಿಯ ನಿಹಾಲ್ ವಿಹಾರ್​​ ಪ್ರದೇಶದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಸುಳ್ಳು ಮಾಹಿತಿ ಹಾಕಿ ಪೋಸ್ಟ್​ ಮಾಡಿದ್ದ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಯನ್ನು ಅಭಿಷೇಕ್​ ಶುಕ್ಲಾ ಎಂದು ಗುರುತಿಸಲಾಗಿದೆ. ದೆಹಲಿ ಸೈಬರ್ ಕ್ರೈಮ್​ ಪೊಲೀಸರು ನಿಹಾಲ್​ ವಿಹಾರ್​​​ನಲ್ಲಿ ಆರೋಪಿಯನ್ನು  ಬಂಧಿಸಿದ್ದಾರೆ. "ಈತ ಸಾಮಾಜಿಕ ಜಾಲತಾಣದಲ್ಲಿ 10 ಸಾವಿರ ಹಿಂಬಾಲಕರನ್ನು​​ ಹೊಂದಿದ್ದು ಇದರ ಮೂಲಕ ನಿಹಾಲ್​ ವಿಹಾರ್​ ಪ್ರದೇಶದ ಗಲಭೆ ಬಗ್ಗೆ ವದಂತಿ ಹಬ್ಬಿಸಿದ್ದ" ಎಂದು ಪೊಲೀಸರು ತಿಳಿಸಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ 6ಕ್ಕೆ ಏರಿಕೆ; ವಿಶ್ವಾದ್ಯಂತ 3,000 ಬಲಿ

ಆರೋಪಿ ಶುಕ್ಲಾನ ಮೊಬೈಲ್​ ಫೋನ್​​ನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಆಗ ಆತ ಸೋಷಿಯಲ್ ಮೀಡಿಯಾದಲ್ಲಿ ದೆಹಲಿ ಗಲಭೆ ಕುರಿತು ವದಂತಿ ಹಬ್ಬಿಸಿರುವುದು ಖಚಿತವಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣ ಸಂಬಂಧ ಇನ್ನೂ 24 ಮಂದಿಯನ್ನು ಬಂಧಿಸಲಾಗಿದೆ. ಎರಡು ಪ್ರಕರಣಗಳನ್ನು ದಾಖಲಿಸಲಾಗಿದ್ದು, 18 ಮಂದಿಯ ವಿರುದ್ಧ ಆರಂಭಿಕ ಕ್ರಮ ಕೈಗೊಳ್ಳಲಾಗಿದೆ. ಈ ಸುಳ್ಳು ವದಂತಿ ಹಬ್ಬಿಸಿರುವ ಕೃತ್ಯದ ಹಿಂದೆ ಇಬ್ಬರು ಶಂಕಿತರ ಕೈವಾಡ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಭಾನುವಾರ ರಾತ್ರಿ ಗಲಭೆ ಸಂಬಂಧ 1880 ದೂರವಾಣಿ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ದೆಹಲಿ ಹಿಂಸಾಚಾರ: ಅಂಕಿತ್​ ಶರ್ಮಾ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ ಸಿಎಂ ಕೇಜ್ರಿವಾಲ್​
Youtube Video
First published: March 3, 2020, 8:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories