Crime News: ಪುಷ್ಪ ಸಿನಿಮಾ ನೋಡಿ 24 ವರ್ಷದ ಯುವಕನನ್ನ ಕೊಂದ ಅಪ್ರಾಪ್ತರು

ಪುಷ್ಪಾ ಸಿನಿಮಾ ಮತ್ತು ಬದ್ನಾಮ್ (Badnam) ವೆಬ್ ಸಿರೀಸ್ ನಿಂದ ಪ್ರೇರಣೆಗೊಂಡ ಅಪ್ರಾಪ್ತರ ಗುಂಪು ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದೆ.

ಪುಷ್ಪ

ಪುಷ್ಪ

  • Share this:
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಪುಷ್ಪಾ- ದಿ ರೈಸ್ (Pushpa The Raise) ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರ ಅಪರಾಧ ಪ್ರಕರಣದ ಕುರಿತ ಕತೆಯನ್ನು ಹೊಂದಿದ್ದು, ಎರಡನೇ ಭಾಗಕ್ಕಾಗಿ ಜನರು ಕಾಯುತ್ತಿದ್ದಾರೆ. ಪುಷ್ಪಾ ಸಿನಿಮಾ ಮತ್ತು ಬದ್ನಾಮ್ (Badnam) ವೆಬ್ ಸಿರೀಸ್ ನಿಂದ ಪ್ರೇರಣೆಗೊಂಡ ಅಪ್ರಾಪ್ತರ ಗುಂಪು ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದೆ. ಕೊಲೆಗೂ ಮುನ್ನ ವ್ಯಕ್ತಿಯನ್ನ ಥಳಿಸಿ ವಿಡಿಯೋ (Video) ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ(Social Media)ದಲ್ಲಿ ಹವಾ ಕ್ರಿಯೇಟ್ ಮಾಡಲು ವಿಡಿಯೋ ಅಪ್ಲೋಡ್ ಮಾಡಲು ಸಹ ಮುಂದಾಗಿದ್ದರು. ಸರಿಯಾದ ಸಮಯಕ್ಕೆ ಪೊಲೀಸರು ತಲುಪಿದ ಹಿನ್ನೆಲೆ ವಿಡಿಯೋ ಅಪ್ಲೋಡ್ ಮಾಡೋದನ್ನು ತಡೆದಿದ್ದಾರೆ.

ಜನವರಿ 19ರಂದು ದೆಹಲಿಯಲ್ಲಿ ಈ ಕೊಲೆ ನಡೆದಿದೆ. ಕೊಲೆಯಾದ ಯುವಕನನ್ನು 24 ವರ್ಷದ ಶಿಬು ಹುಸೇನ್ ಎಂದು ಗುರುತಿಸಲಾಗಿದೆ. ಹುಡುಗರು ಗಿಲ್ಲಿ ದಾಂಡು ಆಡೋದಕ್ಕೆ ಶಿಬು ಹುಸೇನ್ ವಿರೋಧಿಸಿದ್ದರು. ಈ ಹಿನ್ನೆಲೆ ಶಿಬುವಿನ ಕೊಲೆಯಾಗಿದೆ.

12 ಗಂಟೆಯಲ್ಲಿ ಮೂವರ ಬಂಧನ

ಶಿಬು ದಾಖಲಾದ ಆಸ್ಪತ್ರೆಯಿಂದ ಕರೆ ಬಂದಿತ್ತು. ಕೂಡಲೇ ಘಟನಾ ಸ್ಥಳಕ್ಕೆ ಕೇವಲ 12 ಗಂಟೆಯೊಳಗೆ ಮೂವರು ಅಪ್ರಾಪ್ತರನ್ನು ಬಂಧಿಸಲಾಗಿದೆ. ಹುಡುಗರು ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಹೊರಟಿದ್ದರು. ಆದ್ರೆ ಆ ವಿಡಿಯೋ ತುಂಬಾನೇ ಕ್ರೂರ ಮತ್ತು ಭಯಾನಕವಾಗಿತ್ತು. ಹುಡುಗರು ಅಪರಾಧ ಆಧರಿತ ಸಿನಿಮಾಗಳಿಂದ ಪ್ರೇರಪಿತರಾಗಿರೋದು ತಿಳಿದು ಬಂದಿದೆ ಎಂದು ಡಿಸಿಪಿ (ವಾಯುವ್ಯ) ಉಷಾ ರಂಗಾನಿ ಹೇಳಿದ್ದಾರೆ.

ಇದನ್ನೂ ಓದಿ:  Bengaluru Crime News: ಕಟ್ಕೊಂಡ ಪತ್ನಿ ಜೊತೆಯಲ್ಲಿದ್ರೂ ನಾದಿನಿಯ ಮೇಲೆ ಕಣ್ಣಾಕಿದವ ಮಾಡಿದ್ದೇನು?

ಎಸಿಪಿ ತಿಲಕ್ ಚಂದ್ರ ಬಿಷ್ತ್ ಅವರ ತಂಡ ಅಡಗುತಾಣ ಬದಲಾಯಿಸುತ್ತಿದ್ದ ಬಾಲಕರನ್ನು ಹಿಡಿದು ಅವರ ಬಳಿ ಇದ್ದ ಹರಿತವಾದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಮೂವರು ವಯಸ್ಸು 15, 16 ಮತ್ತು 17 ವರ್ಷವಾಗಿದೆ. ಸಿನಿಮಾದ ರೀತಿಯೇ ಹುಡುಗರು ನಡೆದುಕೊಳ್ಳುತ್ತಿದ್ದರು. ಒಂದು ವೇಳೆ ಬಂಧನವಾದರೂ ಎರಡ್ಮೂರು ತಿಂಗಳಲ್ಲಿ ಬಿಡುಗಡೆ ಆಗುತ್ತೆ ಎಂದು ಹುಡುಗರು ತಿಳಿದುಕೊಂಡಿದ್ದರು. ಹಾಗಾಗಿ ಸಣ್ಣ ಪುಟ್ಟ ಅಪರಾಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ರು ಎಂದು ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.

ಪೋಷಕರಿಗೆ ಏನೂ ಗೊತ್ತಿರಲಿಲ್ಲ

ಪ್ರಕರಣ ಸಂಬಂಧ ಇಂಡಿಯನ್ ಎಕ್ಸಪ್ರೆಸ್ ಬಾಲಕರ ಪೋಷಕರನ್ನು ಮಾತಾಡಿಸಿದೆ. 15 ವರ್ಷದ ಬಾಲಕನ ತಾಯಿ ಮಾತನಾಡಿ. ನಾನು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡೆ. ಈಗ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದೇನೆ. ನನ್ನ ಮಗ ಕೊಲೆ ಮಾಡಿದ್ದಾನೆ ಎಂದ್ರೆ ನಂಬಲು ಆಗುತ್ತಿಲ್ಲ. ಸಿನಿಮಾಗಳಿಂದ ಸ್ಫೂರ್ತಿ ಪಡೆದು ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ನನ್ನ ಮಗ ಯಾವುದೇ ಸೋಶಿಯಲ್ ಮೀಡಿಯಾ ಖಾತೆ ಹೊಂದಿಲ್ಲ ಎಂದು ಹೇಳಿದ್ದಾರೆ

16 ವರ್ಷದ ಹುಡುಗನ ತಂದೆ ಮಾತನಾಡಿ, ಅವನು ಯಾವಾಗಲೂ ಚಲನಚಿತ್ರಗಳ ಬಗ್ಗೆ ಮಾತನಾಡೋದನ್ನು ಕಂಡು ಅವನು ನಟಿಸಲು ಇಷ್ಟಪಡುತ್ತಾನೆ ಎಂದು ನಾವು ಭಾವಿಸಿದ್ದೇವೆ. ಕೆಲಸ ಮಾಡಬೇಕೆಂದು ಹೇಳಿದ್ದರಿಂದ ಫೋನ್ ಪಡೆದುಕೊಂಡಿದ್ದನು. ವರ್ಷಗಳ ಹಿಂದೆಯೇ ಶಾಲೆ ಬಿಟ್ಟಿದ್ದನು. ಮಗ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳುತ್ತಾರೆ. ವಕೀಲರನ್ನ ನೇಮಿಸಲು ಸಹ ನಮ್ಮ ಬಳಿ ಹಣವಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕುತ್ತಾರೆ.

ಇದನ್ನೂ ಓದಿ: Crime News: ದೃಶ್ಯಂ ಸಿನಿಮಾ ಸ್ಟೈಲ್​​ನಲ್ಲಿ ಕಳ್ಳತನದ ನಾಟಕ ಆಡಲು ಹೋಗಿ ಸಿಕ್ಕಿಬಿದ್ದ ಖತರ್ನಾಕ್ ಕುಟುಂಬ

ಹುಡುಗರು ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿದ್ದು, ಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ /  ಡ್ಯಾನ್ಸ್ ಮಾಡುವ ರೀಲ್‌ಗಳು/ವಿಡಿಯೋಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಅನೇಕ ಪೋಸ್ಟ್‌ ಗಳು ನಿಂದನೆ, ಹಿಂಸೆ, ಧೂಮಪಾನದಂತಹ ಕಂಟೆಂಟ್ ಗಳನ್ನು ಒಳಗೊಂಡಿವೆ. ಸದ್ಯ ಎಲ್ಲರೂ ಬಾಲಗೃಹದಲ್ಲಿ ಇರಿಸಲಾಗಿದೆ.
Published by:Mahmadrafik K
First published: