Italy Boat Tragedy: ಇಟಲಿಯಲ್ಲಿ ಭೀಕರ ದೋಣಿ ದುರಂತ, ಪಾಕಿಸ್ತಾನದ 24 ವಲಸಿಗರೂ ಸೇರಿ 59 ಮಂದಿ ಜಲಸಮಾಧಿ!

ಇಟಲಿ ದೋಣಿ ದುರಂತ

ಇಟಲಿ ದೋಣಿ ದುರಂತ

ವಲಸೆ ಕಾರ್ಮಿಕರಿಂದ ತುಂಬಿದ್ದ ದೋಣಿ ಸಮುದ್ರದ ಮಧ್ಯದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಬಂಡೆಗಳಿಗೆ ಡಿಕ್ಕಿ ಹೊಡೆದು ಎರಡು ಭಾಗವಾಗಿದೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ವಲಸೆ ಕಾರ್ಮಿಕರು ಸಮುದ್ರ ಮಾರ್ಗದ ಮೂಲಕ ಯುರೋಪ್‌ಗೆ ಪ್ರವೇಶಿಸಲು ಇಟಲಿ ಪ್ರಮುಖ ಲ್ಯಾಂಡಿಂಗ್ ಪಾಯಿಂಟ್‌ಗಳಲ್ಲಿ ಒಂದಾಗಿದೆ.

ಮುಂದೆ ಓದಿ ...
  • Share this:

ರೋಮ್, ಇಟಲಿ : ದಕ್ಷಿಣ ಇಟಲಿಯ (Southern Italy) ಕರಾವಳಿ ಪ್ರದೇಶದ ಕ್ರೋಟೋನ್‌ನಲ್ಲಿ ವಲಸಿಗರಿಂದ (migrants) ತುಂಬಿದ್ದ ದೋಣಿ (Boat) ಮುಳುಗಿದ ಪರಿಣಾಮ 12 ಮಕ್ಕಳು ಸೇರಿದಂತೆ 59 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಕ್ರೋಟೋನ್ ಬಳಿ ಹಡಗು ಮುಳುಗಿದೆ, ಇದರಲ್ಲಿದ್ದ ಅಫ್ಘಾನಿಸ್ತಾನ, ಪಾಕಿಸ್ತಾನ (Pakistan), ಸೊಮಾಲಿಯಾ ಮತ್ತು ಇರಾನ್‌ನಿಂದ ಬಂದಂತಹ ವಲಸಿಗರು ಇದ್ದರೆಂದು ತಿಳಿದುಬಂದಿದೆ. ವಲಸಿಗರನ್ನು ತುಂಬಿಕೊಂಡು ಬರುತ್ತಿದ್ದ ದೋಣಿ ಅಲೆಗಳ ಹೊಡೆತಕ್ಕೆ ಸಿಲುಕಿ ಎರಡು ಭಾಗವಾಗಿತ್ತು. ಇದರಲ್ಲಿ ಕೆಲವರನ್ನು ರಕ್ಷಿಸಿದರೆ, 59 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.


ವಲಸೆ ಕಾರ್ಮಿಕರಿಂದ ತುಂಬಿದ್ದ ದೋಣಿ ಸಮುದ್ರದ ಮಧ್ಯದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಬಂಡೆಗಳಿಗೆ ಡಿಕ್ಕಿ ಹೊಡೆದು ಎರಡು ಭಾಗವಾಗಿದೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ವಲಸೆ ಕಾರ್ಮಿಕರು ಸಮುದ್ರ ಮಾರ್ಗದ ಮೂಲಕ ಯುರೋಪ್‌ಗೆ ಪ್ರವೇಶಿಸಲು ಇಟಲಿ ಪ್ರಮುಖ ಲ್ಯಾಂಡಿಂಗ್ ಪಾಯಿಂಟ್‌ಗಳಲ್ಲಿ ಒಂದಾಗಿದೆ.


ರಕ್ಷಣಾ ತಂಡದಿಂದ 81 ಜನರ ರಕ್ಷಣೆ


ರಕ್ಷಣಾ ತಂಡದ ಕಾರ್ಯಾಚರಣೆಯಿಂದಾಗಿ 81 ಜನರನ್ನು ರಕ್ಷಿಸಲಾಗಿದೆ. ಇದರಲ್ಲಿ 22 ಜನರನ್ನು ಆಸ್ಪತ್ರಗೆ ಸಾಗಿಸಲಾಗಿದೆ. ರಕ್ಷಿಸಲ್ಪಟ್ಟವರಲ್ಲಿ ಹಲವರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  ಅಲ್ಲದೆ ಬದುಕುಳಿದಿರುವವರಲ್ಲಿ ಬಹುತೇಕರು ಅಫ್ಘಾನಿಸ್ತಾನದ ವಲಸಿಗ, ಕೆಲವು ಪಾಕಿಸ್ತಾನಿಗಳು ಹಾಗೂ ಒಂದಿಬ್ಬರು ಸೊಮಾಲಿಯಾದವರೆಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Pakistan: ಪಾಕಿಸ್ತಾನದ ಮೊದಲ ಟ್ರಾನ್ಸ್‌ಜೆಂಡರ್‌ ಟಿವಿ ನಿರೂಪಕಿ ಮಾರ್ವಿಯಾ ಮಲಿಕ್ ಮೇಲೆ ಗುಂಡಿನ ದಾಳಿ!


200 ಜನರಿದ್ದ ದೋಣಿ


ಮುಳುಗಡೆಯಾಗಿರುವ ದೋಣಿಯಲ್ಲಿ ಸುಮಾರು 200 ಕ್ಕೂ ಹೆಚ್ಚು ಜನರ ಪ್ರಯಾಣಿಸುತ್ತಿದ್ದರು ಎಂದು ರಕ್ಷಣಾ ಕಾರ್ಯಕರ್ತರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ 60 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಅನೇಕ ರಾಷ್ಟ್ರಗಳ ವಲಸಿಗರು ಬಹಳ ಕಷ್ಟಕರ ಪರಿಸ್ಥಿತಿಗಳಿಂದ ಜಲಮಾರ್ಗದ ಮೂಲಕ ಯುರೋಪ್​ಗೆ ಪಲಾಯನ ಮಾಡುತ್ತಿದ್ದಾರೆ ಎಂದು ಇಟಲಿಯ ಅಧ್ಯಕ್ಷ ಹೇಳಿದ್ದಾರೆ.




ಸತ್ತವರಲ್ಲಿ ಹೆಚ್ಚು ಪಾಕಿಸ್ತಾನದವರು


ದೋಣಿ ಮುಳುಗಿ ಸಾವನ್ನಪ್ಪಿದವರಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಪಾಕಿಸ್ತಾನಿಯರು ಇದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸಾಧ್ಯವಾದಷ್ಟು ಬೇಗ ಸತ್ಯಾ ಸತ್ಯತೆಯನ್ನು ಪತ್ತೆ ಹಚ್ಚಲು ಪಾಕಿಸ್ತಾನದ ವಿದೇಶಾಂಗ ಕಚೇರಿಗೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.


ಇಟಲಿ ಪ್ರಮುಖ ಲ್ಯಾಂಡಿಂಗ್ ಪಾಯಿಂಟ್‌


ಸಮುದ್ರ ಮಾರ್ಗದ ಮೂಲಕ ಯುರೋಪ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವ ವಲಸಿಗರಿಗೆ ಇಟಲಿ ಪ್ರಮುಖ ಲ್ಯಾಂಡಿಂಗ್ ಪಾಯಿಂಟ್‌ಗಳಲ್ಲಿ ಒಂದಾಗಿದೆ. ಅನೇಕರು ಉತ್ತರ ಯುರೋಪಿಯನ್ ರಾಷ್ಟ್ರಗಳಿಗೆ ಪ್ರಯಾಣಿಸಲು ಈ ಮಾರ್ಗವನ್ನು ಬಯಸುತ್ತಾರೆ. ಇವರೆಲ್ಲಾ ಟರ್ಕಿ ಮಾರ್ಗವಾಗಿ ಇಲ್ಲಿಗೆ ಆಗಮಿಸುತ್ತಾರೆ ಎಂದು ತಿಳಿದುಬಂದಿದೆ.


ವಿಶ್ವಸಂಸ್ಥೆಯ ನಾಪತ್ತೆಯಾದ ವಲಸಿಗರ ಯೋಜನೆ ಪ್ರಕಾರ 2014 ರಿಂದ ಇಲ್ಲಿಯವರೆಗೆ ಮಧ್ಯ ಮೆಡಿಟರೇನಿಯನ್‌ನಲ್ಲಿ ಸುಮಾರು 17,000 ಕ್ಕೂ ಹೆಚ್ಚು ಸಾವುಗಳು ಮತ್ತು ನಾಪತ್ತೆ ಪ್ರಕರಣಗಳನ್ನು ದಾಖಲಾಗಿವೆ. ಈ ವರ್ಷ 220 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಅಥವಾ ಕಣ್ಮರೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.


1,00,000 ಕ್ಕೂ ಹೆಚ್ಚು ನಿರಾಶ್ರಿತರ ಆಗಮನ


2022 ರಲ್ಲಿ 1,00,000 ಕ್ಕೂ ಹೆಚ್ಚು ನಿರಾಶ್ರಿತರು ದೋಣಿಯ ಮೂಲಕ ಇಟಲಿಗೆ ಬಂದಿದ್ದಾರೆ. ಅಕ್ಟೋಬರ್‌ನಲ್ಲಿ ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿಯ ರಾಷ್ಟ್ರೀಯತಾವಾದಿ ಸರ್ಕಾರ ಸಮುದ್ರ ಮಾರ್ಗದ ಮೂಲಕ ಅಕ್ರಮ ಪ್ರವೇಶ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ವಿಧಿಸಿದೆ. ಅಕ್ರಮವಾಗಿ ಸಮುದ್ರ ಮಾರ್ಗವಾಗಿ ಆಗಮಿಸುವವರಿಗೆ 44 ಲಕ್ಷ ರೂಪಾಯಿ ದಂಡ ವಿಧಿಸುವುದಕ್ಕೆ ನಿರ್ಧರಿಸಿದೆ.

Published by:Rajesha M B
First published: