Gujarat Cabinet Ministers Swearing: ಪ್ರಮಾಣವಚನ ಸ್ವೀಕರಿಸಿದ ಗುಜರಾತ್ ನೂತನ ಸರ್ಕಾರದ ಸಚಿವರು!; 4.30ಕ್ಕೆ ಮೊದಲ ಸಚಿವ ಸಂಪುಟ ಸಭೆ

'ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ' ಇವರಿಂದ ಮುಂದಿನ ವಿಧಾನಸಭಾ ಚುನಾವಣೆ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಸ್ವತಃ ತಮ್ಮದೇ ಅಭ್ಯರ್ಥಿಯಾದರೂ ವಿಜಯ್ ರೂಪಾಣಿಗೆ ರಾಜೀನಾಮೆ ನೀಡುವಂತೆ ಅಮಿತ್ ಶಾ ಶಾಕಿಂಗ್ ಸೂಚನೆ ನೀಡಿದ್ದಾರೆ. ಅವರ ಜಾಗಕ್ಕೆ ಪಟೇಲ್ ಸಮುದಾಯದ ನಾಯಕ ಭೂಪೇಂದ್ರ ಪಟೇಲ್ ಅವರನ್ನು ಕೂರಿಸಲಾಗಿದೆ.

ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರು.

ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರು.

 • Share this:
  ಗುಜರಾತ್ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸರ್ಕಾರದಲ್ಲಿ (Gujarat New CM Bhupendra Patel) 24 ಸಚಿವರು ಇಂದು ಪ್ರಮಾಣವಚನ ಸ್ವೀಕರಿಸುವ ಮೂಲಕ ಸಚಿವ ಸಂಪುಟ ಸೇರ್ಪಡೆಯಾದರು (Gujarat Cabinet Ministers Swearing). ಇಂದು ಬೆಳಗ್ಗೆ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಜೇಂದ್ರ ತ್ರಿವೇದಿ ಹಾಗೂ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಜಿತು ವಾಘನಿ ಅವರು ಸಹ ಸಚಿವರಾಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಇಂದು ಸಂಜೆ 4.30ಕ್ಕೆ ನಡೆಯಲಿದೆ.

  ರಾಜ್ಯಪಾಲ ಆಚಾರ್ಯ ದೇವರಾತ್ ಅವರು ಇಂದು ರಾಜಭವನದಲ್ಲಿ 10 ಸಚಿವ ಸಂಪುಟ ದರ್ಜೆಯ ಹಾಗೂ ಐದು ಸ್ವತಂತ್ರ ಖಾತೆ ಸೇರಿದಂತೆ 14 ರಾಜ್ಯ ಖಾತೆ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಭೂಪೇಂದ್ರ ಪಟೇಲ್ ಅವರು ಕಳೆದ ಸೋಮವಾರ ಗುಜರಾತ್ ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ವಿಜಯ್ ರೂಪಾನಿ ಅವರು ಶನಿವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿಂದೆ ವಿಜಯ್ ರೂಪಾನಿ ಅವರ ಸಚಿವ ಸಂಪುಟದಲ್ಲಿ ಇದ್ದ ಎಲ್ಲ 23 ಸದಸ್ಯರನ್ನು ಈ ಬಾರಿಯ ಸಂಪುಟದಿಂದ ಕೈಬಿಟ್ಟು ಯುವಕರಿಗೆ ಆದ್ಯತೆ ನೀಡಿಲಾಗಿದೆ. ಹಳಬರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸೂತ್ರವನ್ನು ಬಿಜೆಪಿ ಅನುಸರಿಸಿದೆ. ಇದರಿಂದ ಸಹಜವಾಗಿಯೇ ಹಳಬರು ಅಸಮಾಧಾನಗೊಂಡಿದ್ದಾರೆ. ಇದೀಗ ಅವರನ್ನು ಸಮಾಧಾನಪಡಿಸಿ ಸರ್ಕಾರ ಮುನ್ನಡೆಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ನೂತನ ಸಿಎಂ ಭೂಪೇಂದ್ರ ಪಟೇಲ್ ಮೇಲಿದೆ.  ರಾಜೇಂದ್ರ ತ್ರಿವೇದಿ, ಜಿತು ವಾಘಾನಿ, ಋಷಿಕೇಷ್ ಪಟೇಲ್, ಪೂರ್ಣೇಶ್ ಮೋದಿ, ರಾಘವಾಜಿ ಪಟೇಲ್, ಕನುಭಾಯಿ ದೇಸಾಯಿ, ಕಿರಿತಸಿನ್ಹಾ ರಾಣಾ, ನರೇಶ್ ಪಟೇಲ್, ಪ್ರದೀಪ್ ಪಾರ್ಮರ್ ಹಾಗೂ ಅರ್ಜುನಸಿನ್ಹಾ ಚೌವ್ಹಾಣ್, ಪ್ರದೀಪ್ ಪಾರ್ಮರ್, ಹರ್ಷ ಸಾಂಘ್ವಿ, ಜಗದೀಶ್ ಪಾಂಚಾಲ್, ಬ್ರಿಜೇಶ್ ಮಿರ್ಜಾ, ರಿಜು ಚೌಧರಿ, ಮನೀಶ್ ವಾಕಿಲ್ ಅವರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

  ಬಿಜೆಪಿ ಲೆಕ್ಕಾಚಾರವೇನು?

  ಇತ್ತೀಚೆಗೆ ಉತ್ತರಾಖಂಡ, ಕರ್ನಾಟಕದಲ್ಲೂ ಮುಖ್ಯಮಂತ್ರಿ ಬದಲಾವಣೆ ಮಾಡಿ ಮುಂದಿನ‌‌ ಚುನಾವಣೆಗಳಿಗೆ ಅಣಿಯಾಗುತ್ತಿರುವ ಬಿಜೆಪಿ ಹೈಕಮಾಂಡ್ ಗುಜರಾತಿನಲ್ಲೂ ಮುಖ್ಯಮಂತ್ರಿ ಬದಲಾವಣೆಯ ಅಸ್ತ್ರವನ್ನೇ ಬಳಸಿದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ನಾಯಕನಿಗೆ ಮುಖ್ಯಮಂತ್ರಿ ಕಟ್ಟಬೇಕು ಎಂದು ನಿಶ್ಚಯಿಸಿದಂತೆ ಗುಜರಾತಿನಲ್ಲಿ ಪಟೇಲ್ ಸಮುದಾಯಕ್ಕೆ ಮಣೆ ಹಾಕಿ, ಭೂಪೇಂದ್ರ ಪಟೇಲ್ ಅವರಿಗೆ ಸಿಎಂ ಸ್ಥಾನ ಕರುಣಿಸಿದೆ.

  ಗುಜರಾತ್ ವಿಧಾನಸಭಾ ಚುನಾವಣೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amith Sha) ಅವರ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆ. ಗುಜರಾತ್ ಅವರದೇ ರಾಜ್ಯ ಎನ್ನುವ ಕಾರಣಕ್ಕೆ ಇದು ಮಹತ್ವದ ಚುನಾವಣೆ. ಎಲ್ಲೆಡೆ ಸೋತರೂ ಪರವಾಗಿಲ್ಲ. ತವರು ರಾಜ್ಯದಲ್ಲಿ ಮಾತ್ರ ಮುಖಭಂಗ ಅನುಭವಿಸಬಾರದು ಅಂತಾ ಮೋದಿ ಮತ್ತು ಅಮಿತ್ ಶಾ ಗುಜರಾತ್ ಚುನಾವಣೆ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ.

  ಇದನ್ನು ಓದಿ: Gujarat Political Crisis: ಗುಜರಾತ್ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಆಯ್ಕೆ!

  ರೂಪಾನಿ ರಾಜೀನಾಮೆಗೆ ಕಾರಣವೇನು?

  ಹಾಗೆ ನೋಡಿದರೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಬಗ್ಗೆ ಅಲ್ಲಿ ಅಸಮಾಧಾನ, ಆಕ್ರೋಶ, ಬಂಡಾಯಗಳೇನೂ ಇರಲಿಲ್ಲ. ಒಳ್ಳೆಯವರು ಎಂದೇ ಹೆಸರು ಮಾಡಿದ್ದರು. ಆದರೆ ಅವರ ಆಡಳಿತದಲ್ಲಿ ಚುರುಕಿರಲಿಲ್ಲ. ಕೊರೋನಾ ಕಾಲದಲ್ಲಿ ಜನರಿಗೆ ಸರಿಯಾಗಿ ಸ್ಪಂದಿಸಲಿಲ್ಲ. 'ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ' ಇವರಿಂದ ಮುಂದಿನ ವಿಧಾನಸಭಾ ಚುನಾವಣೆ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಸ್ವತಃ ತಮ್ಮದೇ ಅಭ್ಯರ್ಥಿಯಾದರೂ ವಿಜಯ್ ರೂಪಾಣಿಗೆ ರಾಜೀನಾಮೆ ನೀಡುವಂತೆ ಅಮಿತ್ ಶಾ ಶಾಕಿಂಗ್ ಸೂಚನೆ ನೀಡಿದ್ದಾರೆ. ಅವರ ಜಾಗಕ್ಕೆ ಪಟೇಲ್ ಸಮುದಾಯದ ನಾಯಕ ಭೂಪೇಂದ್ರ ಪಟೇಲ್ ಅವರನ್ನು ಕೂರಿಸಲಾಗಿದೆ.
  Published by:HR Ramesh
  First published: