24 ಜೀವಂತ ಸಿಡಿಮದ್ದು ಸಾಗಿಸುತ್ತಿದ್ದ ಕಿಡಿಗೇಡಿಗಳು: ಪೊಲೀಸರ ವಶಕ್ಕೆ!

ಇದೇ ರೀತಿಯ ಮತ್ತೊಂದು ಘಟನೆಯಲ್ಲಿ 61 ವರ್ಷದ ವ್ಯಕ್ತಿಯಿಂದ 2 ಜೀವಂತ ಸಿಡಿಮದ್ದುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈತನ ಬಳಿ ಪಿಸ್ತೂಲ್​ ಸಹ ಇದ್ದು, ವಶಕ್ಕೆ ಪಡೆದಿದ್ದಾರೆ ಎನ್ನಲಾಗಿತ್ತು. ಈ ವ್ಯಕ್ತಿ ಇಂಡಿಗೋ ವಿಮಾನದಲ್ಲಿ ನವದೆಹಲಿಗೆ ತೆರಳುತ್ತಿದ್ದ ವೇಳೆ ಸಿಕ್ಕಿಬಿದ್ದ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

Latha CG | news18
Updated:January 10, 2019, 9:06 PM IST
24 ಜೀವಂತ ಸಿಡಿಮದ್ದು ಸಾಗಿಸುತ್ತಿದ್ದ ಕಿಡಿಗೇಡಿಗಳು: ಪೊಲೀಸರ ವಶಕ್ಕೆ!
ಜೀವಂತ ಸಿಡಿಮದ್ದು
Latha CG | news18
Updated: January 10, 2019, 9:06 PM IST
ಪುಣೆ,(ಜ.10): 24 ಜೀವಂತ ಸಿಡಿಮದ್ದುಗಳನ್ನು ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪುಣೆ ಏರ್​ಪೋರ್ಟ್​​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಪುಣೆಯಲ್ಲಿ ಜೀವಂತ ಸಿಡುಮದ್ದು ಸಾಗುತ್ತಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಬೆನ್ನತ್ತಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪೊಲೀಸರಿಂದ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಇದರ ಹಿಂದಿನ ಕೈವಾಡ ಯಾರದು? ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಬಂಧಿತ ಆರೋಪಿಯೊಬ್ಬನ ಬ್ಯಾಗ್​ನಲ್ಲಿ 22 ಜೀವಂತ ಸಿಡಿಮದ್ದುಗಳನ್ನು ಪತ್ತೆ ಹಚ್ಚಿದ್ದಾರೆ. ಈತ ಪುಣೆಯಿಂದ ಬೆಂಗಳೂರಿಗೆ ಹೊರಡಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಈ ವೇಳೆ ಬಂಧಿಸಿದೆವು ಎಂದು ವಿಮಂಟಲ್​ ಪೊಲೀಸ್​ ಠಾಣೆಯ ಹಿರಿಯ ಪೊಲೀಸ್​ ಅಧಿಕಾರಿ ದಿಲಿಪ್​ ಶಿಂಧೆ ತಿಳಿಸಿದ್ದಾರೆ.

ಪತ್ತೆ ಹಚ್ಚಿದ ಆರೋಪಿಗಳನ್ನು ವಿಮಾನ ನಿಲ್ದಾಣ ಪೊಲೀಸರಿಗೆ ಒಪ್ಪಿಸಲಾಗಿದೆ. ಪ್ರಕರಣದ ವಿಚಾರಣೆ ವೇಳೆ ಆರೋಪಿ 32 ಕಾಲಿಬರ್​ ಪಿಸ್ತೂಲ್​ನ ಪರವಾನಿಗೆ ಪಡೆದಿದ್ದಾನೆ ಎಂಬ ಅಂಶ ಬಹಿರಂಗವಾಗಿದೆ.

ಇದನ್ನೂ ಓದಿ: Alok Verma vs Narendra Modi: ಸಿಬಿಐ ನಿರ್ದೇಶಕ ವರ್ಮಾರನ್ನೇ ವಜಾ ಮಾಡಿದ ಮೋದಿ ನೇತೃತ್ವದ ಸಮಿತಿ

ಆರೋಪಿಯು ಏರ್​ಪೋರ್ಟ್​ಗೆ ಆಗಮಿಸುವ ಮುನ್ನ ಆತುರದಲ್ಲಿ ತನ್ನ ಬ್ಯಾಗ್​ನಿಂದ ಸಿಡಿಮದ್ದುಗಳನ್ನು ತೆಗೆದಿಟ್ಟು ಬರಲು ಮರೆತಿದ್ದಾನೆ. ಹಾಗೆಯೇ ಏರ್​​ಪೋರ್ಟ್​ಗೆ ಆಗಮಿಸಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದರು.

ಇದೇ ರೀತಿಯ ಮತ್ತೊಂದು ಘಟನೆಯಲ್ಲಿ 61 ವರ್ಷದ ವ್ಯಕ್ತಿಯಿಂದ 2 ಜೀವಂತ ಸಿಡಿಮದ್ದುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈತನ ಬಳಿ ಪಿಸ್ತೂಲ್​ ಸಹ ಇದ್ದು, ವಶಕ್ಕೆ ಪಡೆದಿದ್ದಾರೆ ಎನ್ನಲಾಗಿತ್ತು. ಈ ವ್ಯಕ್ತಿ ಇಂಡಿಗೋ ವಿಮಾನದಲ್ಲಿ ನವದೆಹಲಿಗೆ ತೆರಳುತ್ತಿದ್ದ ವೇಳೆ ಸಿಕ್ಕಿಬಿದ್ದ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಮಹಾರಾಷ್ಟ್ರದಲ್ಲಿ ಕನ್ನಡದಲ್ಲಿ ಮಾತನಾಡಿದ ವಿಡಿಯೋ ಈಗ ವೈರಲ್
Loading...

ಮೂಲತಃ ದೆಹಲಿಯವನಾದ ಈತ ರೈಲ್ವೆಯಲ್ಲಿ ಲೋಕೋಮೋಟಿವ್ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದ. ಎಂಜಿನಿಯರ್​ ಆಗಿರುವ ತನ್ನ ಮಗನನ್ನು ಭೇಟಿ ಮಾಡಲು ಪುಣೆಗೆ ಆಗಮಿಸಿದ್ದ. ಪಿಸ್ತೂಲ್​ ಹೊಂದಿರುವುದಕ್ಕೆ ಈತನ ಬಳಿ ಯಾವುದೇ ಪರವಾನಗಿ ಇಲ್ಲ. ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

---------------
ನೆಚ್ಚಿನ ನಟರ ಕಟೌಟ್​ಗೆ ಹಾಲಿನಾಭಿಷೇಕ ಮಾಡುವಾಗ ಎಚ್ಚರಿಕೆ: ಅದೃಷ್ಟ ಕೈ ಕೊಟ್ಟರೆ ಜೀವಕ್ಕೆ ಬರುತ್ತೆ ಕುತ್ತು..!
First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ