Mumbai Rains: ಮಹಾರಾಷ್ಟ್ರದಲ್ಲಿ ಒಡೆದ ತಿವಾರೆ ಡ್ಯಾಂ; ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆ

Tiware Dam: ಅಣೆಕಟ್ಟು ನಿರ್ವಹಣೆಯಲ್ಲಿ ಸರ್ಕಾರ ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Sushma Chakre | news18
Updated:July 4, 2019, 12:37 PM IST
Mumbai Rains: ಮಹಾರಾಷ್ಟ್ರದಲ್ಲಿ ಒಡೆದ ತಿವಾರೆ ಡ್ಯಾಂ; ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆ
ತಿವಾರೆ ಡ್ಯಾಂ
Sushma Chakre | news18
Updated: July 4, 2019, 12:37 PM IST
ಮುಂಬೈ (ಜು.4): ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಿನ್ನೆ ಭಾರೀ ಮಳೆಯಿಂದಾಗಿ ತಿವಾರೆ ಡ್ಯಾಂ ಒಡೆದು 12 ಮನೆಗಳು ಕೊಚ್ಚಿಹೋಗಿದ್ದವು. ಘಟನೆಯಲ್ಲಿ ಸತ್ತವರ ಸಂಖ್ಯೆ 23ಕ್ಕೇರಿದ್ದು, ಇನ್ನೂ ಅನೇಕ ಜನರು ನಾಪತ್ತೆಯಾಗಿದ್ದಾರೆ. ಅವರ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.

ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ಈ ಘಟನೆ ನಡೆದಿದ್ದು, ಭಾರೀ ಮಳೆಯಿಂದ ಪ್ರವಾಹವುಂಟಾಗಿ ಡ್ಯಾಂನಲ್ಲಿ ಬಿರುಕು ಮೂಡಿತ್ತು. ರತ್ನಗಿರಿ ಜಿಲ್ಲೆಯ ಚಿಪ್ಲುನ್ ತಾಲೂಕಿನಲ್ಲಿರುವ ತಿವಾರೆ ಅಣೆಕಟ್ಟು 20 ಲಕ್ಷ ಕ್ಯೂಬಿಕ್  ಮೀಟರ್​ ವಿಸ್ತೀರ್ಣ ಹೊಂದಿದೆ. ಇದುವರೆಗೂ 11 ಮೃತದೇಹಗಳು ಪತ್ತೆಯಾಗಿದ್ದು, ಒಟ್ಟು 23 ಜನ ಮೃತಪಟ್ಟಿದ್ದಾರೆ.

Mumbai Rains: ಮಹಾಮಳೆಗೆ ತತ್ತರಿಸಿದ ಮುಂಬೈ; ದಾಖಲೆಯ ಮಳೆಯಿಂದ ಡ್ಯಾಂ ಒಡೆದು ಜನಜೀವನ ಅಸ್ತವ್ಯಸ್ತ

ತಗ್ಗುಪ್ರದೇಶದಲ್ಲಿರುವ 7 ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. 12 ಮನೆಗಳು ಸಂಪೂರ್ಣ ಮುಳುಗಡೆಯಾಗಿ ಕೊಚ್ಚಿಹೋಗಿದ್ದವು. ಅಣೆಕಟ್ಟು ನಿರ್ವಹಣೆಯಲ್ಲಿ ಸರ್ಕಾರ ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಡ್ಯಾಂನಲ್ಲಿ ಬಿರುಕು ಮೂಡುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರೂ ಅದನ್ನು ಗಂಭಿರವಾಗಿ ಪರಿಗಣಿಸಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

tiware-dam2

ಮುಳುಗಡೆಯಾದ ಮನೆಗಳಲ್ಲಿ ವಾಸ ಮಾಡುತ್ತಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

 
Loading...

First published:July 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...