ತಮಿಳುನಾಡು; ಬ್ಲೂ ವೇಲ್​ ಚಾಲೆಂಜ್​ಗೆ ಮತ್ತೊಬ್ಬ ಯುವಕ ಬಲಿ

news18
Updated:September 6, 2018, 11:12 AM IST
ತಮಿಳುನಾಡು; ಬ್ಲೂ ವೇಲ್​ ಚಾಲೆಂಜ್​ಗೆ ಮತ್ತೊಬ್ಬ ಯುವಕ ಬಲಿ
news18
Updated: September 6, 2018, 11:12 AM IST
-ನ್ಯೂಸ್​ 18 ಕನ್ನಡ

ತಮಿಳುನಾಡು,(ಸೆ.06): ಸಾಮಾಜಿಕ ಜಾಲತಾಣಗಳ ಸಹಾಯದಿಂದ ಆಡುವ, ಆತ್ಮಹತ್ಯೆಯಂತಹ ಕೃತ್ಯಕ್ಕೆ ಪ್ರಚೋದನೆ ನೀಡುವ 'ಬ್ಲೂ ವೇಲ್​ ಚಾಲೆಂಜಿಂಗ್​ ಗೇಮ್​'ಗೆ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ.

ತಮಿಳುನಾಡಿನ ಶೇಷಾದ್ರಿ (22) ಬಲಿಯಾದ ಯುವಕ. ಈತ ಇಂಜಿನಿಯರ್​ ಓದುತ್ತಿದ್ದ ಎನ್ನಲಾಗಿದೆ. ಬ್ಲೂ ವೇಲ್​ ಗೇಮ್​ ಚಾಲೆಂಜ್​ ಸ್ವೀಕರಿಸಿದ್ದ ಈತ ಆಟದ ಕೊನೆಯಲ್ಲಿ ಆತ್ಮಹತ್ಯೆ ಟಾಸ್ಕ್​ ನೀಡಲಾಗಿದೆ. ಹೀಗಾಗಿ ಆತ ಮನೆಯಲ್ಲಿ ಯಾರು ಇಲ್ಲದ ವೇಳೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತನ ಬಳಿಯಿದ್ದ ಭೂತದ ಪುಸ್ತಕಗಳು ಮತ್ತು ಮೊಬೈಲ್​ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಗೇಮ್​ನಲ್ಲಿ ತಂಡದ ನಿರ್ವಾಹಕರು ಸದಸ್ಯರಿಗೆ ಪ್ರತಿದಿನ ಒಂದೊಂದು ಸವಾಲನ್ನು ಕೊಡುತ್ತಾರೆ. 50 ದಿನಗಳ ಕಾಲ ಈ ಟಾಸ್ಕ್​ನ್ನು ನೀಡುತ್ತಾರೆ. ಹಾನಿ ತಂದೊಡ್ಡಬಹುದಾದ ಚಾಲೆಂಜ್​ಗಳನ್ನು ಮಾಡುವಂತೆ ಸೂಚಿಸುತ್ತಾರೆ. ದಿನ ಕಳೆದಂತೆ ಟಾಸ್ಕ್​ಗಳು ಕಠಿಣವಾಗುತ್ತಾ ಹೋಗುತ್ತವೆ. ಕೊನೆಗೆ 50 ನೇ ದಿನಕ್ಕೆ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗುತ್ತದೆ ಎನ್ನಲಾಗಿದೆ. ಯುವಕರು ಹೆಚ್ಚಾಗಿ ಈ ಬ್ಲೂ ವೇಲ್​ ಚಾಲೆಂಜ್​ನ್ನು ಸ್ವೀಕರಿಸುತ್ತಾರೆ.

ಕಳೆದ ವರ್ಷ ಭಾರತ ಮತ್ತು ಇನ್ನಿತರ ರಾಷ್ಟ್ರಗಳಲ್ಲಿ ಬ್ಲೂ ವೇಲ್​​ ಗೇಮ್​ ಆಡುತ್ತಿ . ಈ ಬಗ್ಗೆ ಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿತ್ತಾದರೂ, ಬ್ಲೂವೇಲ್​ ಗೇಮ್​ ಚಾಲೆಂಜ್​ನಿಂದ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ.

ಬ್ಲೂ ವೇಲ್​ ಆಟದಂತೆಯೇ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಇನ್ನೊಂದು ಗೇಮ್​ 'ಮೊಮೊ' ಇತ್ತೀಚೆಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಮೊಮೊ ಗೇಮ್​ ಇದು ಒಂದು ಸಾವಿನಾಟ. ವಾಟ್ಸಪ್, ಫೇಸ್​ಬುಕ್​, ಮತ್ತು ಯೂಟ್ಯೂಬ್​ನ್ನು ಮಾಧ್ಯಮವಾಗಿ ಬಳಕೆ ಮಾಡಿಕೊಂಡು ವಿಕೃತ ಮುಖಗಳ ಮೂಲಕ ಚಾಲೆಂಜ್​ನ್ನು ಇದರಲ್ಲಿ ನೀಡಲಾಗುತ್ತದೆ.
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ