22 ವರ್ಷದ ಮಹಿಳೆ ಬಂಧನದಲ್ಲಿಟ್ಟು 40 ಜನರಿಂದ 4 ದಿನಗಳ ಕಾಲ ನಿರಂತರ ಅತ್ಯಾಚಾರ


Updated:July 20, 2018, 4:55 PM IST
22 ವರ್ಷದ ಮಹಿಳೆ ಬಂಧನದಲ್ಲಿಟ್ಟು 40 ಜನರಿಂದ 4 ದಿನಗಳ ಕಾಲ ನಿರಂತರ ಅತ್ಯಾಚಾರ
  • Share this:
-ನ್ಯೂಸ್ 18
ಚಂಡೀಗಢ(ಜು.20): ಕೆಲಸ ಹುಡುಕಿಕೊಂಡು ಹೊರಟಿದ್ದ 22 ವರ್ಷದ ಮಹಿಳೆಯನ್ನ ಗೆಸ್ಟ್​ ಹೌಸ್​ನಲ್ಲಿ ಬಂಧನದಲ್ಲಿಟ್ಟು 40 ಮಂದಿ 4 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿರುವ ಘಟನೆ ಹರ್ಯಾಣದ ಪಂಚಕುಲದಲ್ಲಿ ನಡೆದಿದೆ.

ಗುರುವಾರ ಸಾಮೂಹಿಕ ಅತ್ಯಾಚಾರದ ಬಗ್ಗೆ ಚಂಢೀಗಡ ಪೊಲೀಸರಿಗೆ ದೂರು ನೀಡಲಾಗಿದೆ. ಮೊರ್ನಿ ಹಿಲ್ಸ್ ಗೆಸ್ಟ್​ ಹೌಸ್​ನಲ್ಲಿ ಜುಲೈ 15ರಿಂದ 18ರವರೆಗೆ ಬಂಧನದಲ್ಲಿಟ್ಟು ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅತ್ಯಾಚಾರ ಆರೋಪಿಗಳಲ್ಲಿ ಒಬ್ಬ ಸಂತ್ರಸ್ತ ಮಹಿಳೆಯ ಗಂಡನ ಪರಿಚಯಸ್ಥನಾಗಿದ್ದು, ಗೆಸ್ಟ್​ ಹೌಸ್​ನಲ್ಲಿ ಉದ್ಯೋಗದ ಭರವಸೆ ನೀಡಿದ್ದ ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಇಬ್ಬರು ಗೆಸ್ಟ್​ ಹೌಸ್ ಸಿಬ್ಬಂದಿಯನ್ನ ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣ ಸಂಬಂಧ ಕೇಸ್ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಮಣಿಮಜ್ರಾ ಪೊಲಿಸ್ ಠಾಣೆಯ ಠಾಣಾಧಿಕಾರಿ ರಂಜಿತ್ ಸಿಂಗ್ ತಿಳಿಸಿದ್ದಾರೆ.
First published:July 20, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ