ಆಗ್ರಾ(ಮೇ 14): ಏಳು ಮೊಮ್ಮಕ್ಕಳ ವೃದ್ದೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ 22 ವರ್ಷದ ಯುವಕನ ವಿರುದ್ಧ ಕೇಸ್ ದಾಖಲಾಗಿದೆ. ಶಾಂತಿಯನ್ನು ಕದಡಿದ್ದಾನೆ ಎಂಬ ಆರೋಪದ ಮೇಲೆ ವೃದ್ಧೆ ಮನೆಯವರು ಯುವಕನ ಮೇಲೆ ಕೇಸು ದಾಖಲಿಸಿದ್ದಾರೆ. ಈ ಸಂಬಂಧ ತಾಜ್ಮಹಲ್ ನಗರದ ಎತ್ಮಾದುದ್ದಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
60 ವರ್ಷದ ವೃದ್ಧೆಯ ಗಂಡ ಮತ್ತು ಆಕೆಯ ಮಗ ಯುವಕನ ವಿರುದ್ಧ ಕೇಸ್ ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದಾಗ, ಯುವಕನೂ ಸಹ ತನ್ನ ಮನೆಯವರ ಜೊತೆ ಬಂದಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ವೃದ್ಧೆ ಮತ್ತು ಯುವಕ ಇಬ್ಬರೂ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಇದರಿಂದ ಎರಡು ಕುಟುಂಬಗಳ ನಡುವೆ ಪೊಲೀಸ್ ಠಾಣೆಯ ಹೊರಗೆ ಜಗಳ ಶುರುವಾಗಿದೆ.
Coronavirus India Updates: ದೇಶದಲ್ಲಿ ಮುಂದುವರೆದ ಕೊರೋನಾ ಅಬ್ಬರ; ಮೂರೂವರೆ ಲಕ್ಷದಷ್ಟು ಪ್ರಕರಣಗಳು ಪತ್ತೆ
ಇನ್ನು, 60 ವರ್ಷದ ಅಜ್ಜಿಗೆ 7 ಜನ ಮಕ್ಕಳಿದ್ದು, 7 ಜನ ಮೊಮ್ಮಕ್ಕಳೂ ಇದ್ದಾರೆ. ಇವರ ಕುಟುಂಬ ಪ್ರಕಾಶ್ ನಗರದಲ್ಲಿ ವಾಸಿಸುತ್ತಿದ್ದಾರೆ. ಅಜ್ಜಿ ಮತ್ತು ಯುವಕ ಈ ಎರಡೂ ಕುಟುಂಬಗಳ ಸದಸ್ಯರು ಮಧ್ಯಪ್ರವೇಶಿಸಿ ಸಂಬಂಧವನ್ನು ಮುಂದುವರೆಸದಂತೆ ಮನವೊಲಿಸಿದ್ದಾರೆ. ಆದರೆ ಇಬ್ಬರೂ ಸಹ ಅವರ ಒತ್ತಾಯಕ್ಕೆ ಮಣಿದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ