HOME » NEWS » National-international » 22 YEAR OLD AGRA MAN BOOKED FOR REFUSING TO END AFFAIR WITH 60 YEAR OLD MARRIED WOMAN LG

ಏಳು ಮೊಮ್ಮಕ್ಕಳ ಅಜ್ಜಿ ಜೊತೆ ಅಕ್ರಮ ಸಂಬಂಧ; 22 ವರ್ಷದ ಯುವಕನ ಮೇಲೆ ಕೇಸ್

ಪ್ರೇಮಿಗಳು ಯಾವಾಗ ಮನೆಯವರ ಮಾತು ಕೇಳಲಿಲ್ಲ, ಆಗ ವೃದ್ಧೆಯ ಮನೆಯವರು 22 ವರ್ಷದ ಯುವಕನ ವಿರುದ್ಧ ಶಾಂತಿ ಕದಡಿದ್ದಾನೆ ಎಂದು ಆರೋಪಿಸಿ ಕೇಸು ದಾಖಲಿಸಿದ್ದಾರೆ.

news18-kannada
Updated:January 25, 2020, 12:27 PM IST
ಏಳು ಮೊಮ್ಮಕ್ಕಳ ಅಜ್ಜಿ ಜೊತೆ ಅಕ್ರಮ ಸಂಬಂಧ; 22 ವರ್ಷದ ಯುವಕನ ಮೇಲೆ ಕೇಸ್
ಸಾಂದರ್ಭಿಕ ಚಿತ್ರ
  • Share this:
ಆಗ್ರಾ(ಜ.25): ಏಳು ಮೊಮ್ಮಕ್ಕಳ ವೃದ್ದೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ 22 ವರ್ಷದ ಯುವಕನ ವಿರುದ್ಧ ಕೇಸ್​ ದಾಖಲಾಗಿದೆ. ಶಾಂತಿಯನ್ನು ಕದಡಿದ್ದಾನೆ ಎಂಬ ಆರೋಪದ ಮೇಲೆ ವೃದ್ಧೆ ಮನೆಯವರು ಯುವಕನ ಮೇಲೆ ಕೇಸು ದಾಖಲಿಸಿದ್ದಾರೆ. ಈ ಸಂಬಂಧ ತಾಜ್​​ಮಹಲ್​​​​​ ನಗರದ ಎತ್ಮಾದುದ್ದಲ್ಲಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

60 ವರ್ಷದ ವೃದ್ಧೆಯ ಗಂಡ ಮತ್ತು ಆಕೆಯ ಮಗ ಯುವಕನ ವಿರುದ್ಧ ಕೇಸ್​ ದಾಖಲಿಸಲು ಪೊಲೀಸ್​ ಠಾಣೆಗೆ ತೆರಳಿದಾಗ, ಯುವಕನೂ ಸಹ ತನ್ನ ಮನೆಯವರ ಜೊತೆ ಬಂದಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ವೃದ್ಧೆ ಮತ್ತು ಯುವಕ ಇಬ್ಬರೂ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಇದರಿಂದ ಎರಡು ಕುಟುಂಬಗಳ ನಡುವೆ ಪೊಲೀಸ್ ಠಾಣೆಯ ಹೊರಗೆ ಜಗಳ ಶುರುವಾಗಿದೆ.

ಚೀನಾದಲ್ಲಿ ಭಯಾನಕ ಕೊರೊನಾ ವೈರಸ್​​: ಬಲಿಯಾದವರ ಸಂಖ್ಯೆ 41ಕ್ಕೆ ಏರಿಕೆ

ಇನ್ನು, 60 ವರ್ಷದ ಅಜ್ಜಿಗೆ 7 ಜನ ಮಕ್ಕಳಿದ್ದು, 7 ಜನ ಮೊಮ್ಮಕ್ಕಳೂ ಇದ್ದಾರೆ. ಇವರ ಕುಟುಂಬ ಪ್ರಕಾಶ್​ ನಗರದಲ್ಲಿ ವಾಸಿಸುತ್ತಿದ್ದಾರೆ. ಅಜ್ಜಿ ಮತ್ತು ಯುವಕ ಈ ಎರಡೂ ಕುಟುಂಬಗಳ ಸದಸ್ಯರು ಮಧ್ಯಪ್ರವೇಶಿಸಿ ಸಂಬಂಧವನ್ನು ಮುಂದುವರೆಸದಂತೆ ಮನವೊಲಿಸಿದ್ದಾರೆ. ಆದರೆ ಇಬ್ಬರೂ ಸಹ ಅವರ ಒತ್ತಾಯಕ್ಕೆ ಮಣಿದಿಲ್ಲ.

ಪ್ರೇಮಿಗಳು ಯಾವಾಗ ಮನೆಯವರ ಮಾತು ಕೇಳಲಿಲ್ಲ, ಆಗ ವೃದ್ಧೆಯ ಮನೆಯವರು 22 ವರ್ಷದ ಯುವಕನ ವಿರುದ್ಧ ಶಾಂತಿ ಕದಡಿದ್ದಾನೆ ಎಂದು ಆರೋಪಿಸಿ ಕೇಸು ದಾಖಲಿಸಿದ್ದಾರೆ.

60 ವರ್ಷದ ಮಹಿಳೆಗೆ ತಾಳಿ ಕಟ್ಟಿದ 20ರ ಯುವಕ; ಇದು ರಾಂಗ್ ​ನಂಬರ್​ನಿಂದ ಶುರುವಾದ ಲವ್ ಸ್ಟೋರಿ!
Youtube Video
 
First published: January 25, 2020, 12:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories