ಕೇರಳದಲ್ಲಿ ವರುಣನ ಆರ್ಭಟ: ನೆರೆಯ ರಾಜ್ಯಕ್ಕೆ ಸಹಾಯ ಹಸ್ತ ಚಾಚಿದ ಎಚ್​ಡಿಕೆ


Updated:August 10, 2018, 10:15 AM IST
ಕೇರಳದಲ್ಲಿ ವರುಣನ ಆರ್ಭಟ: ನೆರೆಯ ರಾಜ್ಯಕ್ಕೆ ಸಹಾಯ ಹಸ್ತ ಚಾಚಿದ ಎಚ್​ಡಿಕೆ
Vythiri: A car is seen submerged in flood water after heavy rainfall, at Vythiri in Wayanad district of Kerala on Thursday, Aug 9, 2018. (PTI Photo) (PTI8_9_2018_000229B)

Updated: August 10, 2018, 10:15 AM IST
ನ್ಯೂಸ್​-18 ಕನ್ನಡ 

ತಿರುವನಂತಪುರಂ (ಆಗಸ್ಟ್​.09): ಕೇರಳದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಭಾರೀ ಮಳೆಗೆ 26 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಅಮಾನವೀಯ ಘಟನೆ ನಡೆದಿದೆ. ಇಡುಕ್ಕಿ ಎಂಬ ಒಂದೇ ಜಿಲ್ಲೆಯಲ್ಲಿ ಮಳೆಯ ಅವಾಂತರಕ್ಕೆ 10 ಜನ ಸಾವನ್ನಪ್ಪಿದ್ದು, ಒಂದೇ ಕುಟುಂಬಕ್ಕೆ ಸೇರಿದ 5 ಜನರು ಬಲಿಯಾಗಿದ್ದಾರೆ.

ಈ ಸಂಬಂಧ ನ್ಯೂಸ್​-18 ಗೆ ಪ್ರತಿಕ್ರಿಯಿಸಿರುವ ಕೇರಳದ ಸಿಎಂ ಪಿಣರಾಯಿ ವಿಜಯನ್​​, ಮಳೆಯ ಅವಾಂತರದಿಂದ ರಾಜ್ಯಾದ್ಯಂತ ಸಮಸ್ಯೆಳು ಉಂಟಾಗಿವೆ. ಹಲವರು ಧಾರುಣವಾಗಿ ಸಾವನ್ನಪ್ಪಿದ್ದು, ಸಾರ್ವಜನಿಕರ ಆಸ್ತಿಯೂ ನೀರು ಪಾಲಾಗಿ ನಷ್ಟವಾಗಿದೆ ಎಂದರು.

ಅಲ್ಲದೇ ಇಡುಕ್ಕಿ ಹಣೆಕಟ್ಟು ಹೆಬ್ಬಾಗಿಲು ಮುಚ್ಚಿಸಲು ನಾವು ಸರ್ಕಾರದಿಂದ ಆರು ವಿಶೇಷ ತಂಡಗಳನ್ನು ರಚಿಸಿದ್ದೇವೆ. ಮಳೆ ಹೆಚ್ಚಾಗಿದ್ದು, ಇಡುಕ್ಕಿ ಜಲಾಶಯ ಹರಿಯುತ್ತಿದೆ. ಹೀಗಾಗಿ, ನೀರು ಹರಿಯುವಿಕೆ ಹೆಚ್ಚಾಗಿ ಒಂದೇ ಕುಟುಂಬಕ್ಕೆ ಸೇರಿದ ಐವರು ಸಾವನ್ನಪ್ಪಿದ್ದಾರೆ. ಇದು ದುಃಖದ ವಿಷಯ ಎಂದು ಸಂತಾಪ ಸೂಚಿಸಿದರು.

ಇನ್ನು ಇಡುಕ್ಕಿ ಮೂಲದ ಇಂಧನ ಸಚಿವ ಎಂ.ಎಂ ಮಣಿ ಮಾತಾನಾಡುತ್ತ, ನಾನು ಮಳೆಯಿಂದ ಹಾನಿಗೊಳಗಾದ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಪರಿಸ್ಥಿತಿ ಬಹಳ ಹದಗೆಟ್ಟಿದೆ. ಮಳೆ ನೀರಿನ ಪ್ರಮಾಣ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಾಗಿದ್ದ ಕಾರಣ ಹೆಬ್ಬಾಗಿಲು ತೆರೆಯಲಾಗಿದೆ. ಹೀಗಾಗಿ ನೀರು ಹರಿಯುತ್ತಿದ್ದ, ಊರುಗಳೆಲ್ಲ ಜಲಾವೃತಗೊಂಡಿವೆ ಎಂದರು.

ಈ ಹಿಂದೆಯೂ ಕೇರಳದಲ್ಲಿ ಮಳೆಯ ಹೆಚ್ಚಾದ ಹಿನ್ನಲ್ಲೆಯಲ್ಲಿ ಹಲವರು ಧಾರುಣ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆಗಳು ನಡೆದಿದ್ದವು. ಸದ್ಯ ಮಳೆ ಭಾರೀ ಜೋರಾಗಿದ್ದು, ಮತ್ತಷ್ಟು ಅಮಾನವೀಯ ಘಟನೆಗಳ ಸಂಭವಿಸಲಿರುವ ಸಾಧ್ಯತೆಗಳಿವೆ. ಕೂಡಲೇ ಸರ್ಕಾರ ಎಚ್ಚೆತ್ತು ಮಳೆಯಿಂದ ಆಗುತ್ತಿರುವ ಹಾನಿಯನ್ನು ತಡೆಯಬೇಕಾಗಿದೆ.
Loading...
ರಾಜ್ಯದ ಸಹಾಯ:  ಭಾರಿ ಮಳೆಯಿಂದಾಗಿ ತತ್ತರಿಸಿರುವ ರಾಜ್ಯಕ್ಕೆ ತುರ್ತು ಪರಿಹಾರ ಕೈಗೊಳ್ಳಲು ಅಗತ್ಯವಾದ ಸಾಮಗ್ರಿಗಳನ್ನು ಕೂಡಲೇ ರವಾನಿಸುವಂತೆ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಕೇರಳ ಮುಖ್ಯ ಮಂತ್ರಿ ಪಿಣರಾಯ್ ವಿಜಯನ್ ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಆಹಾರ ವೈದ್ಯಕೀಯ ಸಾಮಗ್ರಿ ಸೇರಿದಂತೆ ಅಗತ್ಯ ಪರಿಹಾರ ಗಳನ್ನೂ ಕಳುಹಿಸುವ ಭರವಸೆ ನೀಡಿದರು
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...