SSM: ರಾಜಕೀಯ ಪ್ರವೇಶಕ್ಕೆ ಸಿದ್ಧವಾದ ರೈತ ಸಂಘಟನೆಗಳು; ಪಂಜಾಬ್​ನ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ

 22 ರೈತ ಸಂಘಟನೆಗಳು ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದು, ತಮ್ಮ ರಾಜಕೀಯ ಪಕ್ಷಕ್ಕೆ ಸಂಯುಕ್ತ ಸಮಾಜ ಮೋರ್ಚಾ ( Samyukta Samaj Morcha- SSM) ಎಂದು ನಾಮಕರಣ ಮಾಡಿದೆ

ಸಂಯುಕ್ತ ಸಮಾಜ ಮೋರ್ಚಾ

ಸಂಯುಕ್ತ ಸಮಾಜ ಮೋರ್ಚಾ

  • Share this:
    ಪಂಜಾಬ್​ (ಡಿ. 25):  ಕೇಂದ್ರದ ವಿವಾದಿತ ಮಸೂದೆ ಹಿಂಪಡೆಯಬೇಕು ಎಂದು ವರ್ಷಗಳ ಕಾಲ ದೆಹಲಿಯ ಗಡಿಭಾಗದಲ್ಲಿ ರೈತರ ಪ್ರತಿಭಟನೆ (Farmer Protest) ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ( Samyukta Kisan Morcha- SKM) ಸದಸ್ಯರು ಇದೀಗ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧವಾಗಿದೆ. ರೈತ  ಸಂಘಟನೆಯ ಭಾಗವಾಗಿದ್ದ 22 ರೈತ ಸಂಘಟನೆಗಳು ಈಗ ತಮ್ಮದೇ ಆದ ಒಕ್ಕೂಟ ನಿರಮಿಸಿ ರಾಜಕೀಯಕ್ಕೆ (Politics) ಧುಮುಕಲು ಸಿದ್ಧವಾಗಿದೆ. ಮುಂಬರುವ ಪಂಜಾಬ್​  ವಿಧಾನಸಭಾ ಚುನಾವಣೆಯಲ್ಲಿ  ಎಲ್ಲಾ 117 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿವೆ.

    ಸಂಯುಕ್ತ ಸಮಾಜ ಮೋರ್ಚಾ ಹುಟ್ಟು ಹಾಕಿದ ರೈತ ಮುಖಂಡರು

    22 ರೈತ ಸಂಘಟನೆಗಳು ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದು, ತಮ್ಮ ರಾಜಕೀಯ ಪಕ್ಷಕ್ಕೆ ಸಂಯುಕ್ತ ಸಮಾಜ ಮೋರ್ಚಾ ( Samyukta Samaj Morcha- SSM) ಎಂದು ನಾಮಕರಣ ಮಾಡಿದೆ.  ಇದರ ನೇತೃತ್ವವನ್ನು ಬಲ್ಬೀರ್ ಸಿಂಗ್ ರಾಜೇವಾಲ್ ವಹಿಸಿಕೊಂಡಿದ್ದಾರೆ.

    ಈ ಕುರಿತು ಸಭೆ ನಡೆಸಿದ ಬಳಿಕ ಮಾತನಾಡಿದ ರಾಜೇವಾಲ್ ಹಾಗೂ ರೈತ ಮುಖಂಡರಾದ ಹರ್ಮೀತ್ ಸಿಂಗ್ ಖಾಡಿಯನ್ ಮತ್ತು ಕುಲ್ವಂತ್ ಸಿಂಗ್ ಸಂಧು, ತಮ್ಮ ರಾಜಕೀಯ ಪಕ್ಷಕ್ಕೆ ಇನ್ನೂ ಮೂರು ರೈತ ಸಂಘಟನೆಗಳು ಸೇರಲಿದೆ ಎಂದಿದ್ದಾರೆ. ರಾಜಕೀಯ ಪಕ್ಷ ಸ್ಥಾಪನೆ ಮಾಡಬೇಕು ಎಂಬುದು ರಾಜ್ಯದ ಜನತೆಯ ಬೇಡಿಕೆಯಾಗಿತ್ತು, ನಾವು ರೈತ ಪ್ರತಿಭಟನೆಯಲ್ಲಿ ಜಯಶಾಲಿಯಾಗಿದ್ದೇವೆ. ಇದೀಗ ರಾಜಕೀಯ ರಂಗದಲ್ಲಿಯೂ ಹೋರಾಡಬೇಕು ಎಂದು ಅವರು ಹೇಳಿದರು'

    ಎಎಪಿಯೊಂದಿಗಿನ ಮೈತ್ರಿ ನಿರ್ಧಾರವಾಗಿಲ್ಲ 

    ಇನ್ನು ಇದೇ ವೇಳೆ, ಆಮ್ ಆದ್ಮಿ ಪಕ್ಷದೊಂದಿಗೆ (ಎಎಪಿ) ಮೈತ್ರಿ ಮಾಡಿಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಈ ಸಂಬಂಧಜೊತೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಕಳೆದ ಚುನಾವಣೆಯಲ್ಲಿ ಎಎಪಿ ಬಹುದೊಡ್ಡ ಎರಡನೇ ಪಕ್ಷವಾಗಿ ಇಲ್ಲಿ ಹೊರ ಹೊಮ್ಮಿತು.

    ಇದನ್ನು ಓದಿ: ಫೆಬ್ರವರಿಯಲ್ಲಿ ಕೋವಿಡ್ ಮೂರನೇ ಅಲೆ ಹೆಚ್ಚಳ ಸಾಧ್ಯತೆ: ಐಐಟಿ-ಕಾನ್ಪುರ್ ಅಧ್ಯಯನ

    ಇನ್ನು ಮೂರು ಸಂಘಟನೆಗಳು ಸೇರ್ಪಡನೆ

    ರೈತ ಸಂಘಟನೆಗಳಾದ ಬಿಕೆಯು (ದಕೊಂಡ), ಬಿಕೆಯು (ಲಖೋವಲ್) ಮತ್ತು ಬಿಕೆಯು (ಮೇಜರ್ ಸಿಂಗ್ ಪೂನೆವಾಲಾ) ತಮ್ಮ ಪಕ್ಷ ಸೇರಲಿವೆ ಎಂದಿದ್ದಾರೆ. ಈ ರೈತ ಸಂಘಟನೆಗಳು ರಾಜಕೀಯಕ್ಕೆ ಧುಮುಕಲು ಅನುಮತಿಸುವುದಿಲ್ಲ ಸಂವಿಧಾನ ಅವಕಾಶ ನೀಡುವುದಿಲ್ಲ. ಈ ಹಿನ್ನಲೆ ಅವರು ಮೊದಲು ಅದನ್ನು ತಿದ್ದುಪಡಿ ಮಾಡಬೇಕಾಗುತ್ತದೆ ಎಂದರು. ಇದು ನಮ್ಮ ಚಳುವಳಿ,  ಇದು ಪಕ್ಷವಲ್ಲ ಏಕೆಂದರೆ ಮತ್ತೆ ವಿಭಿನ್ನ ಸಿದ್ಧಾಂತಗಳ ಜನರು ಒಟ್ಟಿಗೆ ಸೇರಲಿದ್ದೇವೆ.

    ಇದನ್ನು ಓದಿ: ದೇಣಿಗೆ ಅಭಿಯಾನಕ್ಕೆ ಚಾಲನೆ ನೀಡಿದ ಬಿಜೆಪಿ; ಪಕ್ಷಕ್ಕೆ 1000 ರೂ ನೀಡಿದ ಪ್ರಧಾನಿ ಮೋದಿ

    ಎಸ್​ಎಸ್​ಕೆ ಹೆಸರು, ಚೆಹ್ನೆ ಬಳಕೆ ಇಲ್ಲ

    ವರ್ಷಗಳ ಕಾಲ ದೆಹಲಿಯ ಗಡಿಯಲ್ಲಿ ನಡೆದ ರೈತ ಸಂಘಟನೆ ನೇತೃತವ ವಹಿಸಿದ ಸಂಯುಕ್ತ ಕಿಸಾನ್​ ಮೋರ್ಚಾ ಈ ಮೊದಲು ರಾಜಕೀಯ ಪಾದಾರ್ಪಣೆಯನ್ನು ನಿರಾಕರಿಸಿತು. ಅಲ್ಲದೇ ತಮ್ಮ ಸಂಘಟನೆಯನ್ನು ಯಾವುದೇ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿತು. ಈಗ ಸಂಘಟನೆ ಕೆಲ ಸದಸ್ಯರು ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದಾರೆ.

    ಇನ್ನು ಚುನಾವಣಾ ಕಣಕ್ಕೆ ಇಳಿಯುತ್ತಿರುವ ಈ ನಿರ್ಧಾರ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ನಾಯಕರು, ಎಸ್​ಕೆಎಂನ ಎಲ್ಲಾ 32 ಸದಸ್ಯರಿಗೆ ನಾವು ರಾಜಕೀಯಕ್ಕೆ ಬರುತ್ತಿರುವ ನಿರ್ಧಾರ ಒಪ್ಪಿಗೆ ಇಲ್ಲ. 9 ಸದಸ್ಯರು  ಮಾತ್ರ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಹಿನ್ನಲೆ ತಮ್ಮ ರಾಜಕೀಯ ಪಕ್ಷಕ್ಕೆ ಸಂಯುಕ್ತ ಕಿಸಾನ್​ ಮೋರ್ಚಾ ಎಂದು ಹೆಸರಿಸದಿರಲು ನಿರ್ಧಾರಿಸಲಾಗಿದೆ. ಅಲ್ಲದೇ ಈ ಸಂಬಂಧ ಸಂಘಟನೆ ಯಾವುದೇ ಚಿಹ್ನೆಯನ್ನು ನಾವು ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ರೈತ ಮುಖಂಡರು ತಿಳಿಸಿದ್ದಾರೆ.
    Published by:Seema R
    First published: