news18-kannada Updated:February 23, 2021, 12:51 PM IST
ಜಾಸ್ಮಿನ್ ಹ್ಯಾರಿಸನ್
ಸಾಧನೆ ಎಂಬುದು ಒಬ್ಬರಿಗೆ ಸಿಮೀತವಲ್ಲ. ಪ್ರಯತ್ನವಿದ್ದರೆ ಪ್ರತಿಯೊಬ್ಬರಿಗೆ ಸಾಧನೆ ಸ್ವಂತ ಎಂಬುದು ಸಾಧಕರ ಮಾತು. ಇನ್ನು, ಸಾಧಕರನ್ನು ನೋಡಿ ಪ್ರೇರಿತಗೊಂಡು ನಾವೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಿದವರು ಸಾಹಸಿಗರು ಇದ್ದಾರೆ. 2018ರ ಅಟ್ಲಾಂಟಿಕ್ ಚಾಲೆಂಜ್ ಅನ್ನು ನೋಡಿ ಸ್ಪೂರ್ತಿಯಾಗಿ ತೆಗೆದುಕೊಂಡು 21 ವರ್ಷದ ಈಜು ಶಿಕ್ಷಕಿ ಇದೀಗ ಅಟ್ಲಾಂಟಿಕ್ ಮಹಾಸಾಗರವನ್ನು ಏಕಾಂಕಿಯಾಗಿ ಸುತ್ತಿದ ಅತ್ಯಂತ ಕಿರಿಯ ಮಹಿಳೆ ಎಂಬ ಖ್ಯಾತಿ ಗಳಿಸಿದ್ದಾಳೆ.
ನಾರ್ತ್ ಯಾರ್ಕ್ಶೈರ್ 21 ವರ್ಷದ ಈಜು ಶಿಕ್ಷಕಿ ಜಾಸ್ಮಿನ್ ಹ್ಯಾರಿಸನ್, ಈಕೆ 2018ರ ವೇಳೆ ನಡೆದ ತಾಲಿಸ್ಕರ್ ವಿಸ್ಕಿ ಅಟ್ಲಾಂಟಿಕ್ ಚಾಲೆಂಜ್ ಅನ್ನು ನೋಡಿ ಪ್ರೇರಿತಗೊಂಡಿದ್ದರು. ಮಹಾಸಾಗರವನ್ನು 70 ದಿನ ಸುತ್ತಿದ್ದಾರೆ. ಪ್ರಯಾಣದ ವೇಳೆ ಎರಡು ಗಂಟೆ ಪ್ರಯಾಣಿಸಿದರೆ, ಎರಡು ಗಂಟೆ ನಿದ್ರೆ ಮಾಡುತ್ತಿದ್ದರು. ಇನ್ನು, ಜಾಸ್ಮಿನ್ ತನ್ನ ತಾಯಿಯೊಂದಿಗೆ ಸ್ಯಾಟಲೈಟ್ ಫೋನ್ ಸಹಾಯದೊಂದಿಗೆ ಮಾತನಾಡುತ್ತಿದ್ದರು.
ಪ್ರಯಾಣದ ಅನುಭವಗಳನ್ನು ದಿ ಗಾರ್ಡಿಯನ್ನೊಂದಿಗೆ ಹಂಚಿಕೊಂಡಿದ್ದಾರೆ. ಪ್ರಯಾಣದ ವೇಳೆ ಸಾಗರದಿಂದ ಹೊರಗೆ ಬಂದ ತಕ್ಷಣ ನಿಮಗೆ ಯಾವುದರ ಬಗ್ಗೆ ಆಸಕ್ತಿ ಇದೆ ಎಂದು ಸಂದರ್ಶನದಲ್ಲಿ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಜಾಸ್ಮಿನ್, ಆಹಾರವನ್ನು ತಿನ್ನಲು ಆಸಕ್ತಿ ವಹಿಸುತ್ತೇನೆ ಎಂದಿದ್ದಳು.
3,000 ಮೈಲಿ ಪ್ರಯಾಣ; 40 ಕೆಜಿ ಚಾಕೊಲೇಟ್ ಸೇವನೆ!
ಜಾಸ್ಮಿನ್ ತನ್ನ ಸಾಗರ ಪ್ರಯಾಣವನ್ನು ಸ್ಪೇನ್ನ ಲಾ ಕ್ಯಾನರಿ ದ್ವೀಪಗಳ ಗೊಮೆರಾದಲ್ಲಿ ಆರಂಭಿಸಿದರು. ಶನಿವಾರ ಆಂಟಿಗುವಾ ತಲುಪಿದರು. ಇನ್ನು 70 ದಿನದಲ್ಲಿ 3,000 ಮೈಲಿ ಪ್ರಯಾಣವನ್ನು ಜಾಸ್ಮಿನ್ ಪೂರ್ಣಗೊಳಿಸಿದರು. ಆದರೆ, ದೀರ್ಘ ಪ್ರಯಾಣದ ಸಂದರ್ಭಗಳಲ್ಲಿ ದಿನಸಿ ಪದಾರ್ಥ ಮತ್ತು ಹಣ್ಣುಗಳನ್ನು ತೆಗೆದುಕೊಂಡು ಹೋಗುವವರನ್ನು ನೋಡಿರುತ್ತೇವೆ. ಇದಕ್ಕೆ ವಿರುದ್ಧವಾಗಿ ಜಾಸ್ಮಿನ್ ಆಹಾರ ಪದಾರ್ಥಗಳನ್ನು ತೆಗೆದುಕೊಂಡಿದ್ದರು. ಈಕೆ ಪ್ರಯಾಣದ ವೇಳೆ ಬಿಸ್ಕತ್ತು ಮತ್ತು ಚಾಕೊಲೇಟ್ ಅನ್ನು ತಿನ್ನುತ್ತಿದ್ದರು. 70 ದಿನದಲ್ಲಿ ಅಂದಾಜು ನಾನು 40 ಕೆಜಿ ಚಾಕೊಲೇಟ್ ಅನ್ನು ತಿಂದಿದ್ದೇನೆ ಎಂದು ಹೇಳಿದ್ದಾಳೆ.
100 ಮೈಲಿ ದಾಣಿ ದಾಟಿದಾಗ ಗಾಯಗೊಂಡ ಜಾಸ್ಮಿನ್ಸಾಗರ ಪ್ರಯಾಣದ ಬಗ್ಗೆ ಹೇಳಿಕೊಂಡಿರುವ ಜಾಸ್ಮಿನ್, ದಿನದ 12 ಗಂಟೆಗಳ ಕಾಲ ಸುದೀರ್ಘ ರೋಯಿಂಗ್ ಮಾಡುತ್ತಿದ್ದರು. ಮಳೆ ಬಂದರೆ ರೋಯಿಂಗ್ ಮಾಡುವುದನ್ನು ನಿಲ್ಲಿಸುತ್ತಿದ್ದರು. ಇನ್ನು, ಸಂಜೆ ವೇಳೆ ದೋಣಿಯನ್ನು ಸ್ವಚ್ಛಗೊಳಿಸಿ, ಆಹಾರ ಸೇವಿಸಿ ಸಣ್ಣ ವಿರಾಮ ತೆಗೆದುಕೊಳ್ಳುತ್ತಿದ್ದಳು. ದೋಣಿಯೂ 100 ಮೈಲುಗಳಷ್ಟು ದೂರ ಸಾಗಿದಾಗ ದೋಣಿ ಉರುಳಿ ತನ್ನ ಎಡ ಮೊಣಕೈಗೆ ಜಾಸ್ಮಿನ್ ಗಾಯ ಮಾಡಿಕೊಂಡಿದ್ದಳು. ದೋಣಿಯೂ 100 ಮೈಲಿ ದೂರ ಸಾಗಿದಾಗ ಆಕೆಗೆ ಅಪಾಯಕಾರಿ, ಮೀನುಗಳು, ತಿಮಿಂಗಲಗಳು, ಡಾಲ್ಫಿನ್ಗಳನ್ನು ಸಾಗರದಲ್ಲಿ ಕಂಡಳು. ಆದರೂ ಹೆದರದೇ 70 ದಿನದಲ್ಲಿ ಮಹಾಸಾಗರವನ್ನು ಸುತ್ತಿದ್ದಾಳೆ. ಇನ್ನು, 2019ರಲ್ಲಿ 18 ವಯಸ್ಸಿನ ಲುಕಾಸ್ ಹೈ ಹೈಟ್ಜ್ಮನ್ ಎಂಬಾತ ಅಟ್ಲಾಂಟಿಕ್ ಮಹಾಸಾಗರವನ್ನು ಸುತ್ತಿದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾನೆ.
Published by:
Harshith AS
First published:
February 23, 2021, 12:51 PM IST