ರದ್ದತಿಯಾದ 99.3 % ನೋಟುಗಳು ಬ್ಯಾಂಕ್​ಗೆ ವಾಪಸ್​: ಮೋದಿ ನಿರ್ಮಿಸಿದ ದುರಂತಕ್ಕಿದು ಪುರಾವೆ ಎಂದ ಕಾಂಗ್ರೆಸ್​

ಚಲಾವಣೆಯಲ್ಲಿದ್ದ ಒಟ್ಟೂ 15.41 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳಲ್ಲಿ ರದ್ದತಿಯ ನಂತರ ಈವರೆಗೆ 15.31 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಬ್ಯಾಂಕ್​ಗಳಿಗೆ ವಾಪಸಾಗಿವೆ. 

Sharath Sharma Kalagaru | news18
Updated:August 29, 2018, 2:38 PM IST
ರದ್ದತಿಯಾದ 99.3 % ನೋಟುಗಳು ಬ್ಯಾಂಕ್​ಗೆ ವಾಪಸ್​: ಮೋದಿ ನಿರ್ಮಿಸಿದ ದುರಂತಕ್ಕಿದು ಪುರಾವೆ ಎಂದ ಕಾಂಗ್ರೆಸ್​
ಸಾಂದರ್ಭಿಕ ಚಿತ್ರ
Sharath Sharma Kalagaru | news18
Updated: August 29, 2018, 2:38 PM IST
ನವದೆಹಲಿ: ನೋಟು ರದ್ಧತಿ ಬಳಿಕ ಶೇ. 99.3ರಷ್ಟು ಹಳೆ ನೋಟ್ ವಾಪಸ್ ಆಗಿದೆ ಎಂದು ನೋಟು ರದ್ದತಿಯಾಗಿ 21 ತಿಂಗಳ ನಂತರ ಆರ್​ಬಿಐ ಅಧಿಕೃತ ಮಾಹಿತಿ ನೀಡಿದೆ. ರದ್ದತಿಯಾದ ಬಹುತೇಕ ನೋಟುಗಳು ವಾಪಸ್​ ಬಂದಿದೆ ಎಂದರೆ ಇದು ಮೋದಿ ನಿರ್ಮಿಸಿದ ದುರಂತ ಎಂದು ಸಾಬೀತಾದಂತೆ ಅಲ್ಲವೇ ಎಂದು ಕಾಂಗ್ರೆಸ್​ ಮತ್ತಿತರ ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟ್ವಿಟ್ಟರ್​ ವಾರ್​ ಆರಂಭಿಸಿದ್ದಾರೆ.

ನೋಟು ರದ್ದತಿಯಾದ ನಂತರ ಬ್ಯಾಂಕ್​ಗಳಿಗೆ ಶೇ.99.3ರಷ್ಟು ಹಳೆನೋಟುಗಳು ವಾಪಸ್ ಬಂದಿವೆ ಎಂದು ಆರ್​ಬಿಐ ಮಾಹಿತಿ ಹೊರಹಾಕಿದೆ. ರೂ. 500 ಮತ್ತು ರೂ. 1,000 ಮುಖಬೆಲೆಯ ನೋಡುಗಳನ್ನು ಕೇಂದ್ರ ಸರ್ಕಾರ ದಿಢೀರನೆ ರದ್ದು ಮಾಡಿದ ನಂತರ, ಎಷ್ಟು ಲಕ್ಷ ಕೋಟಿ ಮೊತ್ತದ ಹಣ ಬ್ಯಾಂಕಿಗೆ ವಾಪಸ್ಸಾಗಿದೆ, ಎಷ್ಟು ಪ್ರತಿಶತ ಕಾಳಧನ ಸಿಕ್ಕಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿಯೇ ಸಾರ್ವಜನಿಕರಿಗೆ ಇರಲಿಲ್ಲ. ಆರ್​ಬಿಐ ಕೂಡ ಲೆಕ್ಕಾಚಾರ ಹಾಕುತ್ತಿದ್ದೇವೆ ಎಂದಷ್ಟೇ ಹೇಳಿತ್ತು. ಈಗ ಬಹು ಬೇಡಿಕೆಯ ನೋಟು ರದ್ದತಿಯ ಲೆಕ್ಕಾಚಾರ ಬಹಿರಂಗವಾಗಿದೆ.

ನೋಟು ರದ್ಧತಿ ಬಗ್ಗೆ ಆರ್​ಬಿಐ ಮೊದಲ ವರದಿ ಸಲ್ಲಿಕೆ ಮಾಡಿದ್ದು, 15.3 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ವಾಪಸಾಗಿವೆ ಎಂದು ತಿಳಿಸಿದೆ. 2016ರ ನವೆಂಬರ್​ 8ರಂದು ನೋಟು ರದ್ದತಿ ಮಾಡಿದಾಗ ದೇಶದಲ್ಲಿ ಚಲಾವಣೆಯಲ್ಲಿ ಒಟ್ಟೂ 15.41 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳಿದ್ದವು. ರದ್ದತಿಯ ನಂತರ ಈವರೆಗೆ 15.31 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಬ್ಯಾಂಕ್​ಗಳಿಗೆ ವಾಪಸಾಗಿವೆ.

ಟ್ವಿಟ್ಟರ್​ ವಾರ್​:


Loading...ನೋಟು ರದ್ದತಿಯಿಂದ ಕಾಳಧನಿಕರ ಬ್ಲಾಕ್​ ಮನಿ ಬಯಲಿಗೆ ಬರಲಿದೆ. ಆದಾಯ ಮೀರಿ ಆಸ್ತಿ ಗಳಿಸಿದವರಿಗೆ ತೊಂದರೆಯಾಗಲಿದೆ, ಕಳ್ಳನೋಟುಗಳ ಸರಬರಾಜು ನಿಲ್ಲಲಿದೆ, ಟೆರರಿಸ್ಟ್​ಗಳ ಸದ್ದಡಗಲಿದೆ ಎಂಬೆಲ್ಲಾ ಅಂಶಗಳನ್ನು ನೀಡಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ನೋಟು ರದ್ದತಿಯನ್ನು ಸಮರ್ಥಿಸಿಕೊಂಡಿದ್ದರು. ಜತೆಗೆ ಮೂರು ಲಕ್ಷ ಕೋಟಿ ರೂಪಾಯಿ ವಾಪಸ್​ ಬರುವುದಿಲ್ಲ ಅದೇ ನೋಟು ರದ್ದತಿಯ ವಿಜಯ ಎಂದು ಮೋದಿ ಹೇಳಿದ್ದರು. ಆದರೆ ಈಗ ಚಲಾವಣೆಯಲ್ಲಿದ್ದ ಬಹುತೇಕ ನೋಟುಗಳು ವಾಪಸಾಗಿರುವುದನ್ನು ಆರ್​ಬಿಐ ಅಧಿಕೃತ ಗೊಳಿಸಿದೆ. ಹಾಗಾದರೆ ದೇಶದಲ್ಲಿ ಕಾಳಧನ ಕೇವಲ ಬೆರಳೆಣಿಕೆಯಷ್ಟೇ ಇದೆಯೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದರೆ ಆಶ್ಚರ್ಯವಿಲ್ಲ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ