ಪಾಕ್​ನಿಂದ ಈ ವರ್ಷ 2050 ಬಾರಿ ಕದನ ವಿರಾಮ ಉಲ್ಲಂಘನೆ; ಶತ್ರು ದೇಶದ ಉದ್ಧಟತನಕ್ಕೆ 21 ಭಾರತೀಯರು ಬಲಿ

ಭಾರತದೊಳಗೆ ನುಸುಳುವುದು ಮತ್ತು ಅಪ್ರಚೋದಿತ ಗುಂಡಿನ ದಾಳಿಯನ್ನು ನಿಂಯಂತ್ರಿಸುವಂತೆ ಪಾಕಿಸ್ತಾನಕ್ಕೆ ಕೋರಿದ್ದೇವೆ. ಗಡಿ ಭಾಗದ ಸೈನಿಕರು ಮತ್ತು ಜನರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಈ ವರ್ಷ 2050 ಅಪ್ರಚೋದಿತ ದಾಳಿಗಳ ಹಾಗೂ ಕದನ ವಿರಾಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ

Sushma Chakre | news18-kannada
Updated:September 15, 2019, 7:28 PM IST
ಪಾಕ್​ನಿಂದ ಈ ವರ್ಷ 2050 ಬಾರಿ ಕದನ ವಿರಾಮ ಉಲ್ಲಂಘನೆ; ಶತ್ರು ದೇಶದ ಉದ್ಧಟತನಕ್ಕೆ 21 ಭಾರತೀಯರು ಬಲಿ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ (ಸೆ. 15): ಪಾಕಿಸ್ತಾನ ಪದೇ ಪದೆ ಗಡಿ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದು, ಈ ವರ್ಷವೊಂದರಲ್ಲೇ 2 ಸಾವಿರಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಪಾಕಿಸ್ತಾನದ ಈ ವರ್ತನೆಗೆ ಭಾರತದ 21 ಜನರು ಬಲಿಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಪಾಕಿಸ್ತಾನ ನಡೆಸಿರುವ ಅಪ್ರಚೋದಿತ ಗುಂಡಿನ ದಾಳಿಯಿಂದ 21 ಜನ ಸಾವನ್ನಪ್ಪಿದ್ದಾರೆ. 2003ರ ಒಪ್ಪಂದವನ್ನು ಪಾಲಿಸುವಂತೆ ಮತ್ತು ಅಂತಾರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಶಾಂತಿ ಕಾಪಾಡುವಂತೆ ನಾವು ಪಾಕಿಸ್ತಾನಕ್ಕೆ ಸಂದೇಶ ಕಳುಹಿಸುತ್ತಲೇ ಇದ್ದೇವೆ. ಈ ರೀತಿಯ ಗುಂಡಿನ ದಾಳಿಗಳನ್ನು ಭಾರತೀಯ ಪಡೆಗಳು ಅತ್ಯಂತ ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿವೆ ಮತ್ತು ಅಪ್ರಚೋದಿತ ಗುಂಡಿನ ದಾಳಿ ಮತ್ತು ಗಡಿಯೊಳಗೆ ನುಸುಳುವಿಕೆ ಯತ್ನಗಳಿಗೆ ನಾವು ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದೇವೆ ಎಂದು ತಿಳಿಸಿದೆ.

200 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ; ಪಾಕ್​ನಲ್ಲಿ ಕೂದಲೆಳೆಯಲ್ಲಿ ತಪ್ಪಿತು ಭಾರೀ ದುರಂತ

ಭಾರತದೊಳಗೆ ನುಸುಳುವುದು ಮತ್ತು ಅಪ್ರಚೋದಿತ ಗುಂಡಿನ ದಾಳಿಯನ್ನು ನಿಂಯಂತ್ರಿಸುವಂತೆ ಪಾಕಿಸ್ತಾನಕ್ಕೆ ಕೋರಿದ್ದೇವೆ. ಗಡಿ ಭಾಗದ ಸೈನಿಕರು ಮತ್ತು ಜನರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಈ ವರ್ಷ 2050 ಅಪ್ರಚೋದಿತ ದಾಳಿಗಳ ಹಾಗೂ ಕದನ ವಿರಾಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

2003 ರ ಕದನ ವಿರಾಮ ಒಪ್ಪಂದವನ್ನು ಅನುಸರಿಸಲು ಮತ್ತು ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಭಾರತ ಪಾಕಿಸ್ತಾನಕ್ಕೆ ಸೂಚಿಸಿದೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ. ಭಾರತೀಯ ಪಡೆಗಳು ಹೆಚ್ಚಿನ ಸಂಯಮ ಮತ್ತು ಅಪ್ರಚೋದಿತ ಉಲ್ಲಂಘನೆ ಮತ್ತು ಗಡಿಯಾಚೆಗಿನ ಭಯೋತ್ಪಾದಕ ಒಳನುಸುಳುವ ಪ್ರಯತ್ನಗಳಿಗೆ ಸ್ಪಂದಿಸುತ್ತವೆ ಎಂದು ಅವರು ಹೇಳಿದ್ದಾರೆ.

First published:September 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ