• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Budget 2023: ಈ ಬಾರಿ ಬಜೆಟ್‌ನಲ್ಲಿ ಕೃಷಿಕರಿಗೆ ಖುಷಿ, ಸ್ವಾವಲಂಬಿ ಮಹಿಳೆಯರಿಗೆ ಸಹಾಯ! ಅಮೃತಕಾಲದ ಬಜೆಟ್ ಅಂತ ಬಣ್ಣಿಸಿದ ಮೋದಿ

Budget 2023: ಈ ಬಾರಿ ಬಜೆಟ್‌ನಲ್ಲಿ ಕೃಷಿಕರಿಗೆ ಖುಷಿ, ಸ್ವಾವಲಂಬಿ ಮಹಿಳೆಯರಿಗೆ ಸಹಾಯ! ಅಮೃತಕಾಲದ ಬಜೆಟ್ ಅಂತ ಬಣ್ಣಿಸಿದ ಮೋದಿ

ನರೇಂದ್ರ ಮೋದಿ

ನರೇಂದ್ರ ಮೋದಿ

ವರ್ಷದ ಬಜೆಟ್​ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವರ್ಷದ ಬಜೆಟ್ ಭಾರತದ ಅಭಿವೃದ್ಧಿ ಪಥಕ್ಕೆ ಹೊಸ ಶಕ್ತಿಯನ್ನು ತುಂಬುತ್ತದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಲವಾದ ಅಡಿಪಾಯವನ್ನು ನಿರ್ಮಿಸುತ್ತದೆ. ಈ ಬಜೆಟ್ ಬಡವರು, ಮಧ್ಯಮ ವರ್ಗದ ಜನರು, ರೈತರು ಸೇರಿದಂತೆ ಮಹತ್ವಾಕಾಂಕ್ಷೆಯ ಸಮಾಜದ ಕನಸುಗಳನ್ನು ನನಸಾಗಿಸುತ್ತದೆ

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • New Delhi, India
  • Share this:

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman)​ ಅವರು ಬುಧವಾರ 2023ರ ಆಯವ್ಯಯವನ್ನು(2023 Budget) ಮಂಡಿಸಿದ್ದಾರೆ. ಈ ವರ್ಷದ ಬಜೆಟ್​ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವರ್ಷದ ಬಜೆಟ್ ಭಾರತದ ಅಭಿವೃದ್ಧಿ ಪಥಕ್ಕೆ ಹೊಸ ಶಕ್ತಿಯನ್ನು ತುಂಬುತ್ತದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಲವಾದ ಅಡಿಪಾಯವನ್ನು ನಿರ್ಮಿಸುತ್ತದೆ. ಈ ಬಜೆಟ್ ಬಡವರು, ಮಧ್ಯಮ ವರ್ಗದ ಜನರು, ರೈತರು ಸೇರಿದಂತೆ ಮಹತ್ವಾಕಾಂಕ್ಷೆಯ ಸಮಾಜದ ಕನಸುಗಳನ್ನು ನನಸಾಗಿಸುತ್ತದೆ ಎಂದು ಮೋದಿ ಬಜೆಟ್​ ನಂತರದ ಭಾಷಣದದಲ್ಲಿ ಹೇಳಿದ್ದಾರೆ.


      ವಿಶ್ವಕರ್ಮ ಸಮೂದಾಯಕ್ಕೆ  ಕೌಶಲ್ ಸಮ್ಮಾನ್


    ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್ ಯೋಜನೆಯೊಂದಿಗೆ ಮಾತು ಆರಂಭಿಸಿದ ಪ್ರಧಾನಿ ಮೋದಿ ಪರಂಪರಾಗತ ರೂಪದಲ್ಲಿ ಕಠಿಣ ಪರಿಶ್ರಮದ ಮೂಲಕ ಭಾರತ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ವಿಶ್ವಕರ್ಮ ಸಮುದಾಯಕ್ಕೆ ಇದೇ ಮೊದಲ ಬಾರಿಗೆ ಬಜೆಟ್‌ನಲ್ಲಿ ಹಲವು ಪ್ರೋತ್ಸಾಹ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸಮುದಾಯದ ಜನರಿಗೆ ತರಬೇತಿ, ತಂತ್ರಜ್ಞಾನ, ಸಾಲ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಿದೆ. ಪಿಎಂ ವಿಶ್ವಕರ್ಮ ಕೌಶಲ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೋಟ್ಯಾಂತರ ವಿಶ್ವಕರ್ಮ ಸಮುದಾಯದಲ್ಲಿ ಮಹತ್ತರ ಬದಲಾವಣೆ ಆಗಲಿದೆ ಎಂದು ಮೋದಿ ಹೇಳಿದ್ದಾರೆ.


    ಕುಶಲ ಕರ್ಮಿಗಳ ತರಬೇತಿ, ತಂತ್ರಜ್ಞಾನ, ಸಾಲ ಮತ್ತು ಮಾರುಕಟ್ಟೆ ಬೆಂಬಲಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಪಿಎಂ ವಿಶ್ವಕರ್ಮ ಕೌಶಲ್ ಸಮ್ಮಾನ್ ಕೋಟ್ಯಂತರ ವಿಶ್ವಕರ್ಮರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತಾದೆ ಎಂದು ಪ್ರಧಾನಿ ಹೇಳಿದ್ದಾರೆ.


    ಇದನ್ನೂ ಓದಿ: Kalaburagi: ಪ್ರಧಾನಿ ಮೋದಿ ಮೆಚ್ಚಿದ ಕಲಬುರಗಿಯ ಸಿರಿಧಾನ್ಯ ಸಂಸ್ಥೆಯಿದು!


    ಮಧ್ಯಮ ವರ್ಗದ ಜನರಿಗೆ ಹಲವು ಯೋಜನೆ


    ನಮ್ಮ ಸರ್ಕಾರ ಮಧ್ಯಮ ವರ್ಗದವರಿಗೆ ಸುಲಭ ಜೀವನ ನಡೆಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಿದ್ದೇವೆ. ವೈಯಕ್ತಿಕ ತೆರಿಗೆದಾರರ ರಿಯಾಯಿತಿಯನ್ನು ವರ್ಷಕ್ಕೆ 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಿಲಾಗಿದೆ. ಸುಸ್ಥಿರ ಭವಿಷ್ಯಕ್ಕಾಗಿ ಈ ಬಜೆಟ್ ಹಸಿರು ಶಕ್ತಿ, ಹಸಿರು ಬೆಳವಣಿಗೆ, ಹಸಿರು ಮೂಲಸೌಕರ್ಯ ಮತ್ತು ಹಸಿರು ಉದ್ಯೋಗಗಳನ್ನು ಮತ್ತಷ್ಟು ಉತ್ತೇಜಿಸಲಿದೆ. ನಾವು ಬಜೆಟ್​ನಲ್ಲಿ ತಂತ್ರಜ್ಞಾನದ ಮತ್ತು ಹೊಸ ಆರ್ಥಿಕತೆಯ ಕಡೆ ಗಮನ ಹರಿಸಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.




    ಗ್ರಾಮೀಣ ಪ್ರದೇಶ ಮಹಿಳೆಯರಿಗೆ ಪ್ರೋತ್ಸಾಹ


    ನಮ್ಮ ಸರ್ಕಾರ ಗ್ರಾಮೀಣ ಪ್ರದೇಶದ ಮತ್ತು ನಗರ ಪ್ರದೇಶದಲ್ಲಿ ಮಹಿಳೆಯರ ತಮ್ಮ ಬದುಕು ಕಟ್ಟಿಕೊಳ್ಳಲು ಹಲವು ಕ್ರಮಗಳನ್ನು ಕೈಗೊಂಡಿದೆ. ಮಹಿಳಾ ಸ್ವಸಹಾಯ ಸಂಘಗಳು ಅವರನ್ನು ಮತ್ತಷ್ಟು ಸಬಲರನ್ನಾಗಿ ಮಾಡಲಿದೆ. ಗೃಹಿಣಿಯರಿಗಾಗಿ ಮಹಿಳಾ ಸಮ್ಮಾನ್ ಬಚತ್​ ಯೋಜನೆ ಘೋಷಿಸಲಾಗಿದೆ. ಗೃಹಿಣಿಯರ ಸಬಲೀಕರಣಕ್ಕಾಗಿ ಈ ವಿಶೇಷ ಉಳಿತಾಯ ಯೋಜನೆ ಆರಂಭಿಸಲಾಗುವುದು. ಈ ಮೂಲಕ ಮಹಿಳೆಯರು, ಗೃಹಿಣಿಯರು ಉಳಿತಾಯದ ಮೂಲಕ ಶೇಕಡಾ 7.5 ರಷ್ಟು ಬಡ್ಡಿಯನ್ನು ಪಡೆಯಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.


    2023ರ ಬಜೆಟ್​ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


    ಸಿರಿಧಾನ್ಯ ಪ್ರೋತ್ಸಾಹಕ್ಕೆ ಹಲವು ಯೋಜನೆ


    ಡಿಜಿಟಲ್ ವಯಲದಿಂದ ಕೃಷಿ ಕ್ಷೇತ್ರದವರೆಗೆ ಹಲವು ಬದಲಾವಣೆಯಾಗಿದೆ. ಭಾರತ ಸಿರಿಧಾನ್ಯಗಳ ವರ್ಷವಾಗಿ ಆಚರಿಸುತ್ತಿದೆ. ಭಾರತದ ಸಿರಿಧಾನ್ಯ ವಿಶ್ವದ ಮೂಲೆ ಮೂಲೆ ತಲುಪಿದೆ. ಇದರ ಲಾಭ ಸಣ್ಣ ಗ್ರಾಮದಲ್ಲಿರುವ ಸಣ್ಣ ರೈತನಿಗೆ ಸಿಗಲಿದೆ. ಸಿರಿಧಾನ್ಯ ಪ್ರೋತ್ಸಾಹಕ್ಕೆ ಹಲವು ಯೋಜನೆ ಜಾರಿ ಮಾಡಲಾಗಿದೆ. ಇದರಿಂದ ಸಣ್ಣ ರೈತರಿಗೆ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ. ಈ ಬಜೆಟ್ ಗ್ರೀನ್ ಏಕಾನಮಿ, ಗ್ರೀನ್ ಗ್ರೋಥ್ , ಗ್ರೀನ್ ಎನರ್ಜಿ, ಗ್ರೀನ್ ಮೂಲಭೂತ ಸೌಕರ್ಯ ಹಾಗೂ ಹಸಿರು ಉದ್ಯೋಗ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂದರು.



    ಮೂಲಭೂರ ಸೌಕರ್ಯಕ್ಕೆ 10 ಲಕ್ಷ ಕೋಟಿ


    ಬಜೆಟ್​ನಲ್ಲಿ ಮುಂದಿನ ಪೀಳಿಗೆಯ ಮೂಲಭೂತ ಸೌಕರ್ಯದ ಅಗತ್ಯವಿದೆ. ಅದಕ್ಕಾಗಿ 10 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಿಂದ ಯುವ ಸಮೂಹಕ್ಕೆ ಉದ್ಯೋಗ ಒದಗಿಸಲಿದೆ. ಈ ಬಜೆಟ್‌ನಲ್ಲಿ ಉದ್ಯೋಗ ಕ್ಷೇತ್ರಕ್ಕೂ ಮಹತ್ವ ನೀಡಲಾಗಿದೆ. ಮಧ್ಯಮ ಹಾಗೂ ಸಣ್ಣ ಕೈಗಾರಿಗೆ ಕ್ಷೇತ್ರದ ಉತ್ತೇಜನೆಕ್ಕೆ ಕಡಿಮೆ ಬಡ್ಡಿದರಲ್ಲಿ ಸಾಲದ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.


    ದೂರದೃಷ್ಠಿ ಬಜೆಟ್​


    ಬಜೆಟ್​ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ. ಅಮೃತ ಕಾಲದ  ಈ ಬಜೆಟ್ ದೂರದೃಷ್ಟಿಯನ್ನು ತೋರಿಸುತ್ತದೆ. ಈ ಬಜೆಟ್ ನಮ್ಮ ಸ್ಥಿರ ಆರ್ಥಿಕತೆ, ಯುವ ಭಾರತದ ಶಕ್ತಿಯನ್ನು ತೋರಿಸುತ್ತದೆ. ಈ ಬಜೆಟ್ ಕೆಳಸ್ತರದ ಜನರಿಗೆ ಯೋಜನೆಗಳನ್ನು ರೂಪಿಸುವ ಪ್ರಧಾನಿ ಮೋದಿಯವರ ಪ್ರಮುಖ ದೃಷ್ಟಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

    Published by:Rajesha B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು