ಲೋಕಸಭಾ ಚುನಾವಣೆ: ಪುಣೆಯಿಂದ ಮಾಧುರಿ ದೀಕ್ಷಿತ್‌ ಬಿಜೆಪಿ ಅಭ್ಯರ್ಥಿ? ಎದುರಾಳಿಗಳಲ್ಲಿ ಸಣ್ಣ ನಡುಕ!

ಬಾಲಿವುಡ್​ನಲ್ಲಿ ಮಾಧುರಿ ಅವರು ತುಂಬಾ ಹೆಸರು ಮಾಡಿದ್ದಾರೆ. ಹಮ್‌ ಆಪ್ಕೇ ಹೈ ಕೌನ್‌, ಸಾಜನ್‌, ದೇವ್‌ದಾಸ್‌, ದಿಲ್‌ ತೋ ಪಾಗಲ್‌ ಹೇ ಸೇರಿ ಅನೇಕ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಇವರ ಅಭಿನಯಿಸಿರುವ ಚಿತ್ರಗಳನ್ನು ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಪುಣೆಯಲ್ಲೂ ಸಾಕಷ್ಟು ಜನಪ್ರಿಯತೆ ಹೊಂದಿರುವ ಮಾಧುರಿ ಬಿಜೆಪಿಯಿಂದ ಕಣಕ್ಕಿಳಿದರೇ, ಎದುರಾಳಿಗಳಿಗೆ ಸಣ್ಣ ನಡುಕ ಶುರುವಾಗಬಹುದು.

Ganesh Nachikethu
Updated:December 6, 2018, 8:52 PM IST
ಲೋಕಸಭಾ ಚುನಾವಣೆ: ಪುಣೆಯಿಂದ ಮಾಧುರಿ ದೀಕ್ಷಿತ್‌ ಬಿಜೆಪಿ ಅಭ್ಯರ್ಥಿ? ಎದುರಾಳಿಗಳಲ್ಲಿ ಸಣ್ಣ ನಡುಕ!
ಮಾಧುರಿ
Ganesh Nachikethu
Updated: December 6, 2018, 8:52 PM IST
ಮುಂಬೈ(ಡಿ.06): 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿವೆ. ಒಂದೆಡೆ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್​ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಭಾರೀ ಸರ್ಕಸ್​​ ನಡೆಸುತ್ತಿವೆ. ಮುಂದಿನ ಲೋಕಸಭಾ ಚುನಾವಣಾಗಾಗಿ ಈಗಿನಿಂದಲೇ ತಮ್ಮ ಕೆಲಸವನ್ನು ಶುರುಮಾಡಿದೆ. ಇನ್ನೊಂದೆಡೆ ಬಿಜೆಪಿ ಮತ್ತೆ ಅಧಿಕಾರದಲ್ಲಿ ಮುಂದುವರೆಯಲು ತಂತ್ರಗಳನ್ನು ಅನುಸರಿಸುತ್ತಿದೆ. ಹೀಗಾಗಿಯೇ ತಮ್ಮಸರ್ಕಾರದ ಸಾಧನೆಗಳ ಕುರಿತು ಸಿನಿಮಾ ನಟ, ನಟಿಯರು ಸೇರಿದಂತೆ ಕ್ರಿಕೆಟ್​ ಆಟಾಗರರು ಹೀಗೆ ಹಲವು ಗಣ್ಯರ ಮೊರೆ ಹೋಗುತ್ತಿದೆ ಎನ್ನಲಾಗಿದೆ.

ಇದೇ ರೀತಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಅವರು, ತಮ್ಮ ಸರ್ಕಾರದ ಸಾಧನೆಗಳನ್ನು ಎಲ್ಲರಿಗೂ ತಿಳಿಸುವ ಜವಬ್ದಾರಿಯನ್ನು ಹೊತ್ತಿದ್ದಾರೆ. ಇದರ ಭಾಗವಾಗಿಯೇ ಬಿಜೆಪಿಯ 'ಸಂಪರ್ಕ್‌ ಫಾರ್‌ ಸಮರ್ಥನ್‌' ಕಾರ್ಯಕ್ರಮದ ವೇಳೆಯಲ್ಲಿ ಬಾಲಿವುಡ್​ ತಾರೆ ಮಾಧುರಿ ದೀಕ್ಷಿತ್​ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದೇ ಜೂನ್‌ನಲ್ಲಿ ಮುಂಬೈನಲ್ಲಿರುವ ಮಾಧುರಿ ದೀಕ್ಷಿತ್‌ ನಿವಾಸಕ್ಕೆ ಆಗಮಿಸಿದ್ದ ಅಮಿತ್​ ಶಾ ಅವರು, ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದರು.

ಇದನ್ನೂ ಓದಿ: ಶುಕ್ರವಾರದಿಂದ ಯಶವಂತಪುರ ಎಪಿಎಂಸಿ ಮಾರುಕಟ್ಟೆ ಸ್ತಬ್ದ

ಈ ಬೆನ್ನಲ್ಲೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪುಣೆ ಕ್ಷೇತ್ರದಿಂದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌(51) ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು. ಈಗಾಗಲೇ ಮಾಧುರಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ತಯಾರಿ ಕೂಡ ನಡೆಸುತ್ತಿರುವುದಾಗಿ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಅಲ್ಲದೇ ಪುಣೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಧುರಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇನ್ನು ಮಾಧುರಿ ದೀಕ್ಷಿತ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಲೇಬೇಕು. ಪುಣೆ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದರೇ ಕಾಂಗ್ರೆಸ್​ಗೆ ಪ್ರಬಲ ಅಭ್ಯರ್ಥಿಯಾಗಲಿದ್ದಾರೆ. ಇದು ಬಿಜೆಪಿಗೆ ಉತ್ತಮ ಅವಕಾಶವಾಗಿದೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಮಾಧುರಿ ದೀಕ್ಷಿತ್ ಅವರನ್ನು ಅಲ್ಲಿಂದಲೇ ಕಣಕ್ಕಿಳಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆದಿವೆ. ಆದರಿಂದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಅವರು, ಮಾಧುರಿ ಅವರನ್ನು ಭೇಟಿ ಮಾಡಿದ್ದರು.

ಇದನ್ನೂ ಓದಿ: ಮೋಸ ಮಾಡಿ ವಿವಾಹವಾಗಿದ್ದಾರಾ ಪ್ರಿಯಾಂಕಾ: ಪಿಗ್ಗಿ ವಂಚನೆಗೆ ಬಲಿಯಾದರಾ ನಿಕ್​..?

ಬಾಲಿವುಡ್​ನಲ್ಲಿ ಮಾಧುರಿ ಅವರು ತುಂಬಾ ಹೆಸರು ಮಾಡಿದ್ದಾರೆ. ಹಮ್‌ ಆಪ್ಕೇ ಹೈ ಕೌನ್‌, ಸಾಜನ್‌, ದೇವ್‌ದಾಸ್‌, ದಿಲ್‌ ತೋ ಪಾಗಲ್‌ ಹೇ ಸೇರಿ ಅನೇಕ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಇವರ ಅಭಿನಯಿಸಿರುವ ಚಿತ್ರಗಳನ್ನು ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಪುಣೆಯಲ್ಲೂ ಸಾಕಷ್ಟು ಜನಪ್ರಿಯತೆ ಹೊಂದಿರುವ ಮಾಧುರಿ ಬಿಜೆಪಿಯಿಂದ ಕಣಕ್ಕಿಳಿದರೇ, ಎದುರಾಳಿಗಳಿಗೆ ಸಣ್ಣ ನಡುಕ ಶುರುವಾಗಬಹುದು.
Loading...

---------------
PHOTOS: ಮದುವೆಯಾದ ನಂತರ ಮತ್ತಷ್ಟು ಹಾಟ್​ ಆದ ದೀಪಿಕಾ ಪಡುಕೋಣೆ: ಇಲ್ಲಿವೆ ಬೋಲ್ಡ್​ ಚಿತ್ರಗಳು..!
First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...