Union Budget 2019 – ಬಜೆಟ್ ಮಂಡನೆ ವೇಳೆ ತಿಳಿದುಕೊಳ್ಳಬೇಕಾದ ಕೆಲ ಪದಗಳ ಅರ್ಥಗಳು

ಜುಲೈ 5ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಈ ವೇಳೆ ಬಳಕೆಯಾಗುವ ಕೆಲ ಪದಗಳ ಅರ್ಥವಿಶ್ಲೇಷಣೆ ಇಲ್ಲಿದೆ.

Vijayasarthy SN | news18
Updated:July 4, 2019, 6:59 PM IST
Union Budget 2019 – ಬಜೆಟ್ ಮಂಡನೆ ವೇಳೆ ತಿಳಿದುಕೊಳ್ಳಬೇಕಾದ ಕೆಲ ಪದಗಳ ಅರ್ಥಗಳು
ಬಜೆಟ್ 2019
Vijayasarthy SN | news18
Updated: July 4, 2019, 6:59 PM IST
ನವದೆಹಲಿ: ಬಜೆಟ್ ವೇಳೆ ಜನಸಾಮಾನ್ಯರಿಗೆ ಅತಿ ಹೆಚ್ಚು ಕುತೂಹಲ ಇರುವುದು ಯಾವ ವಸ್ತುಗಳ ಮೇಲೆ ಹೆಚ್ಚು ತೆರಿಗೆ ಬಿತ್ತು, ಯಾವುದರ ಬೆಲೆ ಇಳಿಯುತ್ತದೆ ಎಂಬಿತ್ಯಾದಿ ವಿಚಾರಗಳಲ್ಲಿ. ಮುಂಗಡಪತ್ರದ ಅನೇಕ ಪದಪ್ರಯೋಗಗಳು ಬಹಳಷ್ಟು ಜನರಿಗೆ ಅರ್ಥವಾಗುವುದಿಲ್ಲ. ಇಂಥ ಕೆಲ ಪ್ರಮುಖ ಪದಗಳ ಅರ್ಥ ವಿವರಣೆ ಇಲ್ಲಿದೆ:

1) Fiscal Deficit – ವಿತ್ತೀಯ ಕೊರತೆ:
ಸರ್ಕಾರದ ಒಟ್ಟಾರೆ ಆದಾಯಕ್ಕಿಂತ ಅದರ ವ್ಯಯದ ಪ್ರಮಾಣ ಹೆಚ್ಚಾಗಿದ್ದರೆ ಆಗ ವಿತ್ತೀಯ ಕೊರತೆಯ ಸ್ಥಿತಿ ಉದ್ಭವಿಸುತ್ತದೆ. ಭಾರತದ ಆರ್ಥಿಕತೆಯಲ್ಲಿ ಶೇ. 5ಕ್ಕಿಂತ ಕಡಿಮೆ ವಿತ್ತೀಯ ಕೊರತೆ ಇದ್ದರೆ ಅದು ಆರೋಗ್ಯ ಸ್ಥಿತಿ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Union Budget 2019 – ಬಜೆಟ್ ಹೆಸರು ಮತ್ತು ಸೂಟ್​ಕೇಸ್ ಹಿಂದಿವೆ ಕೆಲ ಕುತೂಹಲಕಾರಿ ವಿಚಾರಗಳು

2) Capital Expenditure – ಆಸ್ತಿ ನಿರ್ಮಾಣ ವೆಚ್ಚ:
ಹೆದ್ದಾರಿಗಳು, ಕಟ್ಟಡಗಳು, ಅಣೆಕಟ್ಟುಗಳು, ಸಲಕರಣೆಗಳಂತಹ ಸ್ಥಿರಾಸ್ತಿಯ ನಿರ್ಮಾಣಕ್ಕಾಗಿ ಮತ್ತು ಪಾಲನೆಗಾಗಿ ಹಾಗೂ ಕೇಂದ್ರದಿಂದ ರಾಜ್ಯಗಳಿಗೆ ವಿತರಣೆಯಾಗುವ ಸಾಲ ಈ ವೆಚ್ಚವೆಲ್ಲವನ್ನೂ ಕ್ಯಾಪಿಟಲ್ ಎಕ್ಸ್​ಪೆಂಡಿಚರ್ ಎಂದು ವರ್ಗೀಕರಿಸಲಾಗುತ್ತದೆ.

3) Revenue Expenditure – ಆದಾಯ ವೆಚ್ಚ:
Loading...

ಯಾವುದೇ ಆಸ್ತಿ ನಿರ್ಮಾಣವಾಗದ ಸಬ್ಸಡಿ, ಬಡ್ಡಿ ಪಾವತಿ ಇತ್ಯಾದಿಗಳಿಗೆ ವ್ಯಯಿಸುವುದನ್ನು ಆದಾಯ ವೆಚ್ಚ ಎನ್ನಲಾಗುತ್ತದೆ.

4) Direct Taxes – ನೇರ ತೆರಿಗೆ:
ವ್ಯಕ್ತಿಗಳು ಹಾಗೂ ಸಂಸ್ಥೆಗಳು ನೇರವಾಗಿ ಸರ್ಕಾರಕ್ಕೆ ಪಾವತಿ ಮಾಡುವ ತೆರಿಗೆ ಇದಾಗಿದೆ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಇತ್ಯಾದಿಗಳು ಇದಕ್ಕೆ ಉದಾಹರಣೆ.

ಇದನ್ನೂ ಓದಿ: Economic Survey - ನಿರುದ್ಯೋಗ ಸಮಸ್ಯೆ ನಿವಾರಣೆಗೆ ಚೀನಾ ಮಾದರಿಯತ್ತ ಆರ್ಥಿಕ ಸಮೀಕ್ಷೆಯ ಚಿತ್ತ

5) Indirect Taxes – ಪರೋಕ್ಷ ತೆರಿಗೆ:
ಇವು ನಾವು ಖರೀದಿಸುವ ವಸ್ತುಗಳು ಹಾಗೂ ಸೇವೆಗಳ ಮೇಲೆ ವಿಧಿಸಲಾಗುವ ತೆರಿಗೆಗಳಾಗಿವೆ. ಉದಾಹರಣೆಗೆ ಅಬಕಾರಿ ಸುಂಕ, ಕಸ್ಟಮ್ಸ್ ಡ್ಯೂಟಿ ಇತ್ಯಾದಿಗಳು.

6) Budget Estimates - ಬಜೆಟ್ ಎಸ್ಟಿಮೇಟ್:
ಮುಂಬರುವ ಹಣಕಾಸು ವರ್ಷದಲ್ಲಿ ಒಂದು ಸಚಿವಾಲಯಕ್ಕೆ ಅಥವಾ ಯೋಜನೆಗೆ ಬಜೆಟ್​ನಲ್ಲಿ ನಿಯೋಜಿಸಲಾದ ಹಣದ ಮೊತ್ತವನ್ನು ಬಜೆಟ್ ಎಸ್ಟಿಮೇಟ್ ಎನ್ನುತ್ತಾರೆ.

ಇದನ್ನೂ ಓದಿ: Union Budget 2019: ಕೇಂದ್ರ ಬಜೆಟ್​​ ಮೇಲೆ ಜನರ ನಿರೀಕ್ಷೆ ಬೆಟ್ಟದಷ್ಟು; ಸಿಗುವುದೆಷ್ಟು?

7) Annual Accounts – ವಾರ್ಷಿಕ ಖಾತೆ:
ಬಜೆಟ್ ವರ್ಷ ಮುಕ್ತಾಯವಾದ ನಂತರ ವಾಸ್ತವವಾಗಿ ಆದ ವೆಚ್ಚ ಮತ್ತು ವರಮಾನದ ನಿಖರ ವಿವರಗಳಿವು.

8) Corporate Tax – ಕಾರ್ಪೊರೇಟ್ ತೆರಿಗೆ:
ಸಂಸ್ಥೆಗಳು, ನಿಗಮಗಳು ತಾವು ಗಳಿಸುವ ಆದಾಯಕ್ಕೆ ನೀಡುವ ತೆರಿಗೆ ಇದಾಗಿದೆ.

9) Repo Rate – ರೆಪೋ ದರ:
ವಾಣಿಜ್ಯ ಬ್ಯಾಂಕುಗಳು ಆರ್​ಬಿಐನಿಂದ ಪಡೆದ ಅಲ್ಪಾವಧಿಯ ಸಾಲಕ್ಕೆ ನೀಡಬೇಕಾದ ಬಡ್ಡಿ ದರ ಇದಾಗಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:July 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...