ಅಪಾಯ ಮಟ್ಟದಲ್ಲಿ ಜಾಗತಿಕ ತಾಪಮಾನ: ಕೇರಳ-ಕ್ಯಾಲಿಫೋರ್ನಿಯಾ ದುರಂತಕ್ಕೆ ಇದುವೇ ಕಾರಣ!

2015 ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಹವಾಮಾನ ಒಪ್ಪಂದದಲ್ಲಿ ಜಾಗತಿಕ ತಾಪಮಾನ ನಿಯಂತ್ರಿಸಲು 200 ರಾಷ್ಟ್ರಗಳು  ಪಳೆಯುಳಿಕೆ ಇಂಧನದ (ಫಾಸಿಲ್ ಫ್ಯುಯೆಲ್) ಬಳಕೆ ಸ್ಥಗಿತಗೊಳಿಸಲು ಸಮ್ಮತಿ ಸೂಚಿಸಿದ್ದಾರೆ.

zahir | news18
Updated:February 7, 2019, 1:17 PM IST
ಅಪಾಯ ಮಟ್ಟದಲ್ಲಿ ಜಾಗತಿಕ ತಾಪಮಾನ: ಕೇರಳ-ಕ್ಯಾಲಿಫೋರ್ನಿಯಾ ದುರಂತಕ್ಕೆ ಇದುವೇ ಕಾರಣ!
ಕೇರಳ ಪ್ರವಾಹದ ಚಿತ್ರ
zahir | news18
Updated: February 7, 2019, 1:17 PM IST
ಕಳೆದ ವರ್ಷ ವಿಶ್ವದ ಹಲವೆಡೆ ಸಂಭವಿಸಿದ ಪ್ರಾಕೃತಿಕ ವಿಕೋಪಗಳನ್ನು ನೆನಸಿಕೊಂಡರೆ ಎಲ್ಲರ ಎದೆಯಲ್ಲೂ ಒಮ್ಮೆ ಭಯ ಆವರಿಸುತ್ತದೆ. ಅಪಾರ ಸಾವು ನೋವಿಗೆ ಕಾರಣವಾಗಿದ್ದ ಈ ವಿಕೋಪಗಳಿಗೆ ಭೂಮಿಯ ತಾಪಮಾನ ಹೆಚ್ಚಳ ಮುಖ್ಯ ಕಾರಣ ಎಂದು ಯುಎನ್​ ವರದಿಯಲ್ಲಿ ತಿಳಿಸಿದೆ. ಕಳೆದ ವರ್ಷ ಜಾಗತಿಕ ತಾಪಮಾನ ದಾಖಲೆ ಮಟ್ಟಕ್ಕೇರಿದ್ದು, ಈ ದುರಂತಗಳಿಗೆ ಕಾರಣ ಎಂದು ಹೇಳಿದೆ. ಇದೊಂದು ಅಪಾಯಕಾರಿ ಬೆಳವಣಿಗೆ ಎಂದು ಅಭಿಪ್ರಾಯ ಪಟ್ಟಿರುವ ಸಂಸ್ಥೆಯು ಈ ಬಗ್ಗೆ ಎಲ್ಲಾ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದೆ.

2018 ರಲ್ಲಿ ಹವಾಮಾನದಲ್ಲಿ ಉಂಟಾದ ತೀವ್ರತೆಯಿಂದ ಕ್ಯಾಲಿಫೋರ್ನಿಯಾ ಮತ್ತು ಗ್ರೀಸ್​ನಲ್ಲಿ ಕಾಳ್ಗಿಚ್ಚು, ದಕ್ಷಿಣ ಆಫ್ರಿಕಾದಲ್ಲಿ ಬರ ಮತ್ತು ಕೇರಳ ರಾಜ್ಯದಲ್ಲಿ ಪ್ರವಾಹಗಳು ಉಂಟಾಗಿತ್ತು. ಹಾಗೆಯೇ ಮಾನವ ನಿರ್ಮಿತ ಹಸಿರುಮನೆ ಅನಿಲ ಹೊರಸೂಸುವಿಕೆಯು ದಾಖಲೆ ಮಟ್ಟಕ್ಕೇರಿದೆ. ಇದರೊಂದಿಗೆ ಪಳೆಯುಳಿಕೆ ಇಂಧನಗಳ ಬಳಕೆ ಕೂಡ ಭೂಮಿಯ ಮೇಲಿನ ಉಷ್ಣತೆಯನ್ನು ಹೆಚ್ಚಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಈ ವರ್ಷದ ಮಳೆಗೆ ದೇಶದಲ್ಲಿ 1,276 ಬಲಿ; ಕೇರಳವೊಂದರಲ್ಲೇ 443 ಸಾವು

ಅಮೆರಿಕ, ಬ್ರಿಟೀಷ್, ಜಪಾನಿ ಮತ್ತು ಯುರೋಪಿಯನ್ ಹವಾಮಾನ ಇಲಾಖೆಯ ಅಂಕಿಅಂಶಗಳ ಆಧಾರದ ಮೇಲೆ ಈ ವರದಿಯನ್ನು ನೀಡಲಾಗಿದ್ದು, 2018ರಲ್ಲಿ ಸರಾಸರಿ ಜಾಗತಿಕ ತಾಪಮಾನವು ಸರಾಸರಿ 1 ಡಿಗ್ರಿ ಸೆಲ್ಷಿಯಸ್ (1.8 ಡಿಗ್ರಿ ಫ್ಯಾರನ್ಹೀಟ್) ಆಗಿತ್ತು. ಇದು ಅಪಾಯ ಮಟ್ಟಕ್ಕೆ ಏರುತ್ತಿದೆ ವಿಶ್ವ ಹವಾಮಾನ ಸಂಸ್ಥೆ (WMO) ಎಚ್ಚರಿಸಿದೆ.

ಇದನ್ನೂ ಓದಿ: ಕ್ಯಾಲಿಫೋರ್ನಿಯಾ ಇತಿಹಾಸದಲ್ಲೇ ಭೀಕರ ದುರಂತ; ಕಾಡ್ಗಿಚ್ಚಿಗೆ ಬಲಿಯಾದ ಜೀವಗಳು 42

ದೀರ್ಘಾವಧಿಯ ಉಷ್ಣತೆ ಟ್ರೆಂಡ್ ಎಂಬುದು ಸಾಮಾನ್ಯ ವರ್ಷಗಳ ತಾಪಮಾನದ ಶ್ರೇಯಾಂಕಕ್ಕಿಂತ ಹೆಚ್ಚು ಮುಖ್ಯವಾಗಿರುತ್ತದೆ. ಈ ಟ್ರೆಂಡ್​ ಇತ್ತೀಚಿನ ವರ್ಷಗಳಲ್ಲಿ ಮೇಲ್ಮುಖವಾಗಿದೆ. ಕಳೆದ 22 ವರ್ಷಗಳಲ್ಲಿ ದಾಖಲೆಯ 20 ತಾಪಮಾನದ ವರ್ಷಗಳು ಬಂದಿವೆ. ಅದರಲ್ಲಿ 2018ರ ಜಾಗತಿಕ ತಾಪಮಾನ ನಾಲ್ಕನೇ ಸ್ಥಾನದಲ್ಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಪೆಟ್ಟೇರಿ ತಾಲಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2015 ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಹವಾಮಾನ ಒಪ್ಪಂದದಲ್ಲಿ ಜಾಗತಿಕ ತಾಪಮಾನ ನಿಯಂತ್ರಿಸಲು 200 ರಾಷ್ಟ್ರಗಳು  ಪಳೆಯುಳಿಕೆ ಇಂಧನದ (ಫಾಸಿಲ್ ಫ್ಯುಯೆಲ್) ಬಳಕೆ ಸ್ಥಗಿತಗೊಳಿಸಲು ಸಮ್ಮತಿ ಸೂಚಿಸಿದ್ದಾರೆ. ಕರಾವಳಿ ಪ್ರವಾಹ, ತೀವ್ರದ ಶಾಖದ ಅಲೆಗಳು, ಅನಿರ್ದಿಷ್ಟ ಮಳೆ ಮತ್ತು ನೈಸರ್ಗಿಕ ಬದಲಾವಣೆಗಳಿಗೆ ದೀರ್ಘಕಾಲೀನ ಜಾಗತಿಕ ತಾಪಮಾನ ಏರಿಕೆಯೇ ಮುಖ್ಯ ಕಾರಣ ಎಂದು ನಾಸಾ ವಿಜ್ಞಾನ ಸಂಸ್ಥೆಯ ನಿರ್ದೇಶಕ ಗಾವಿನ್ ಸ್ಕ್ಮಿಡ್ತ್ ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್​ ಜಗತ್ತಿನ ಅತ್ಯಂತ ಹೀನಾಯ ಪಂದ್ಯ: ಆಸ್ಟ್ರೇಲಿಯಾ ತಂಡ ಕೇವಲ 10 ರನ್​ಗೆ ಆಲೌಟ್!

ಕಳೆದ ವರ್ಷ ಯುನೈಟೆಡ್ ಸ್ಟೇಟ್ಸ್​ನ ರಾಜ್ಯಗಳಲ್ಲಿ 14 ಹವಾಮಾನ ವೈಪರೀತ್ಯ ಮತ್ತು ಹವಾಮಾನ ವಿಪತ್ತುಗಳು ಸಂಭವಿಸಿದೆ. ಇದರಿಂದ 1 ಬಿಲಿಯನ್​ ಡಾಲರ್​ಗೂ ಮೀರಿದ ನಷ್ಟಗಳು ಉಂಟಾಗಿದೆ ಅಮೆರಿಕದ ಎನ್​ಒಎಎ ಸಂಸ್ಥೆ ವರದಿಯಲ್ಲಿ ತಿಳಿಸಿದೆ. 19 ನೇ ಶತಮಾನದ ಅತ್ಯಂತ ತಾಪಮಾನದ ವರ್ಷ ಎಂದು 2016 ಅನ್ನು ಪರಿಗಣಿಸಲಾಗಿದ್ದು, ಈ ಬಳಿಕ ಜಾಗತಿಕ ತಾಪಮಾನ ನಿಯಂತ್ರಿಸಲು ಕೆಲ ದೇಶಗಳು ಕೈಗೊಂಡ ಕ್ರಮಗಳಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಅತಿ ಹೆಚ್ಚು ತಾಪಮಾನಕ್ಕೆ ಕಾರಣವಾಗಿದ್ದ ವರ್ಷಗಳಲ್ಲಿ 2015, 2017 ನಂತರ ಸ್ಥಾನದಲ್ಲಿದ್ದರೆ, 2018 ಮತ್ತೊಮ್ಮೆ 4ನೇ ಸ್ಥಾನಕ್ಕೆ ಬರುವ ಮೂಲಕ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಇದು ಮುಂದಿನ ಐದು ವರ್ಷಗಳಲ್ಲಿ ಮಿತಿ ಮೀರುವ ಸಾಧ್ಯತೆ ಹೆಚ್ಚಿದೆ ಎಂದು ಫ್ರೊಫೆಸೆರ್​ ಆ್ಯಡಂ ಸ್ಕೈಫ್ ತಿಳಿಸಿದ್ದಾರೆ. ಹೀಗಾಗಿ ಪ್ರತಿಯೊಂದು ದೇಶವು ಈ ನಿಟ್ಟಿನಲ್ಲಿ ಮುನ್ನೆಚರಿಕೆ ವಹಿಸುವಂತೆ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನಟಸಾರ್ವಭೌಮ ಅಪ್ಪು ಆರ್ಭಟ: ಕೆ.ಜಿ.ಎಫ್ ದಾಖಲೆ ಧೂಳೀಪಟ!
First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...