• Home
  • »
  • News
  • »
  • national-international
  • »
  • ನಿರ್ಭಯಾ ಅತ್ಯಾಚಾರಿಗಳಿಗೆ ನಾಳೆಯೂ ಗಲ್ಲು ಶಿಕ್ಷೆಯಿಲ್ಲ; ಮುಂದಿನ ಆದೇಶದವರೆಗೂ ಗಲ್ಲಿಗೇರಿಸದಂತೆ ದೆಹಲಿ ಹೈಕೋರ್ಟ್ ಆದೇಶ

ನಿರ್ಭಯಾ ಅತ್ಯಾಚಾರಿಗಳಿಗೆ ನಾಳೆಯೂ ಗಲ್ಲು ಶಿಕ್ಷೆಯಿಲ್ಲ; ಮುಂದಿನ ಆದೇಶದವರೆಗೂ ಗಲ್ಲಿಗೇರಿಸದಂತೆ ದೆಹಲಿ ಹೈಕೋರ್ಟ್ ಆದೇಶ

ನಿರ್ಭಯಾ ಅತ್ಯಾಚಾರಿಗಳು.

ನಿರ್ಭಯಾ ಅತ್ಯಾಚಾರಿಗಳು.

ನಾಲ್ವರು ಆಪಾದಿತರಲ್ಲಿ ಒಬ್ಬನಾದ ಪವನ್​ ಗುಪ್ತಾ ಕ್ಷಮಾದಾನ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಬಾಕಿ ಇರುವ ಹಿನ್ನೆಲೆಯಲ್ಲಿ ನೇಣು ಶಿಕ್ಷೆಯನ್ನು ನ್ಯಾಯಾಲಯ ಮುಂದೂಡಿದೆ.

  • Share this:

    ನವದೆಹಲಿ: 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರಿಗಳನ್ನು ಮುಂದಿನ ಆದೇಶದವರೆಗೂ ಗಲ್ಲಿಗೆ ಏರಿಸದಂತೆ ದೆಹಲಿ ಹೈಕೋರ್ಟ್ ಸೋಮವಾರ ಸಂಜೆ ಆದೇಶ ನೀಡಿದೆ. ಹೀಗಾಗಿ ಮಂಗಳವಾರ ಬೆಳಗ್ಗೆ ಆರು ಗಂಟೆಗೆ ನೇಣಿನ ಕುಣಿಕೆಗೆ ಏರಬೇಕಿದ್ದ ನಾಲ್ವರು ಆಪಾದಿತರಿಗೆ ಮತ್ತೆ ಕೆಲ ಕಾಲ ರಿಲೀಫ್ ಸಿಕ್ಕಿದಂತಾಗಿದೆ.


    ನಾಲ್ವರು ಆಪಾದಿತರಲ್ಲಿ ಒಬ್ಬನಾದ ಪವನ್​ ಗುಪ್ತಾ ಕ್ಷಮಾದಾನ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಬಾಕಿ ಇರುವ ಹಿನ್ನೆಲೆಯಲ್ಲಿ ನೇಣು ಶಿಕ್ಷೆಯನ್ನು ನ್ಯಾಯಾಲಯ ಮುಂದೂಡಿದೆ.


    ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಧರ್ಮೇಂದ್ರ ರಾಣಾ ಅವರು, ಪವನ್ ಗುಪ್ತಾ ಸಲ್ಲಿಸಿರುವ ಕ್ಷಮಾದಾನ ಅರ್ಜಿ ಬಾಕಿ ಇರುವಾಗ ಮರಣದಂಡನೆ ಶಿಕ್ಷೆ ಜಾರಿ ಮಾಡಲು ಸಾಧ್ಯವಿಲ್ಲ. ಕ್ಷಮಾದಾನ ಅರ್ಜಿ ರಾಷ್ಟ್ರಪತಿಯಿಂದ ಇತ್ಯರ್ಥವಾಗುವವರೆಗೂ ಮರಣದಂಡನೆಯನ್ನು ಮುಂದೂಡಿ ನ್ಯಾಯಾಲಯ ಆದೇಶ ನೀಡುತ್ತದೆ ಎಂದು ಹೇಳಿದರು.


    ಇದನ್ನು ಓದಿ: ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಖಾಯಂಗೊಳಿಸಿದ ಸುಪ್ರೀಂ; ನಾಳೆ ಬೆಳಗ್ಗೆ 6ಕ್ಕೆ ನೆರವೇರಲಿರುವ ಶಿಕ್ಷೆ



    ಮರಣದಂಡನೆ ಶಿಕ್ಷೆಗೆ ತೆ ನೀಡಬೇಕೆಂದು ಕೋರಿ ನಾಲ್ವರು ಅಪರಾಧಿಗಳು ಪಟಿಯಾಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿತ್ತು. ಪವನ್​ ಗುಪ್ತಾ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಅಲ್ಲದೇ, ತನಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಗೆ ತಡೆ ನೀಡಬೇಕು ಎಂಬ ಕೋರಿಕೆಯನ್ನೂ ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಮೂಲಕ ಮರಣದಂಡನೆಯಿಂದ ಪಾರಾಗಲು ಅಪರಾಧಿಗಳ ಮುಂದಿದ್ದ ಎಲ್ಲ ಕಾನೂನು ಆಯ್ಕೆಗಳು ಕೊನೆಗೊಂಡಿವೆ. ಆದರೆ, ಪವನ್ ಗುಪ್ತಾ ರಾಷ್ಟ್ರಪತಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಬಾಕಿ ಇರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಇಂದು ಸಂಜೆ ಮರಣದಂಡನೆ ಶಿಕ್ಷೆಯನ್ನು ಮುಂದೂಡಿದೆ.


    Published by:HR Ramesh
    First published: