• Home
  • »
  • News
  • »
  • national-international
  • »
  • Chhawla Rape Case: ಪೊಲೀಸರ ನಿರ್ಲಕ್ಷ್ಯ, ಸುಪ್ರೀಂನಿಂದ ಮೂವರು ಅತ್ಯಾಚಾರ ಆರೋಪಿಗಳ ಖುಲಾಸೆ!

Chhawla Rape Case: ಪೊಲೀಸರ ನಿರ್ಲಕ್ಷ್ಯ, ಸುಪ್ರೀಂನಿಂದ ಮೂವರು ಅತ್ಯಾಚಾರ ಆರೋಪಿಗಳ ಖುಲಾಸೆ!

ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್

ಅತ್ಯಾಚಾರದ ಮೂವರು ಅಪರಾಧಿಗಳನ್ನು ಖುಲಾಸೆಗೊಳಿಸುವ ತನ್ನ ತೀರ್ಪಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ, ಇದನ್ನೇ ಆಧಾರವಾಗಿ ಈ ನಿರ್ಧಾರ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸುಪ್ರೀಂ ಅಸಹಾಯಕತೆ ತೋಡಿಕೊಂಡಿದೆ. ನ್ಯಾಯಾಲಯಗಳು ಸಾಕ್ಷ್ಯಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆಯೇ ಹೊರತು ಭಾವನೆಗಳನ್ನು ಆಧರಿಸಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಆರೋಪಿಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಂಪೂರ್ಣ ಅವಕಾಶ ಸಿಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ನವದೆಹಲಿ(ನ.08): ನಾನು ಸೋತಿದ್ದೇನೆ, ಹೀಗಂತ ಸುಪ್ರೀಂಕೋರ್ಟ್ ತೀರ್ಪಿನ (Supreme Court Verdict) ಬಗ್ಗೆ ಅಳಲು ತೋಡಿಕೊಂಡ ತಾಯಿ, ಮಗಳಿಗೆ ನ್ಯಾಯ ದೊರಕಿಸಿಕೊಡಲು 10 ವರ್ಷಗಳ ಕಾಲ ಹಲವು ನ್ಯಾಯಾಲಯಗಳ ಮೊರೆ ಹೋಗಿದ್ದೇನೆ ಎಂದಿದ್ದಾರೆ. ಗ್ಯಾಂಗ್‌ರೇಪ್ ಮತ್ತು ಕೊಲೆಗೆ (Rape and Murder Case) ಸಂಬಂಧಿಸಿದ ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಿ ಕೆಳ ನ್ಯಾಯಾಲಯ ಮತ್ತು ಹೈಕೋರ್ಟ್ ಮೂವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿತ್ತು. ಆದರೆ 10 ವರ್ಷಗಳ ಹಿಂದಿನ ಈ ಪ್ರಕರಣದ ತೀರ್ಪನ್ನು ಬದಲಾಯಿಸಿದ ಸುಪ್ರೀಂ ಕೋರ್ಟ್ ಸೋಮವಾರ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.


ದೆಹಲಿಯ 10 ವರ್ಷದ ಚಾವ್ಲಾ ಅತ್ಯಾಚಾರ ಪ್ರಕರಣ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ದೇಶದ ಅತ್ಯುನ್ನತ ನ್ಯಾಯಾಲಯವು ಸಾಮೂಹಿಕ ಅತ್ಯಾಚಾರ ಮತ್ತು ವಿಧ್ವಂಸಕ ಪ್ರಕರಣದ ಮೂವರು ಅಪರಾಧಿಗಳನ್ನು ಖುಲಾಸೆಗೊಳಿಸಿದೆ. ಈ ನಿರ್ಧಾರ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಸಂತ್ರಸ್ತೆಯ ತಾಯಿ ಸುಪ್ರೀಂ ಕೋರ್ಟ್ ತೀರ್ಪನ್ನು ತನ್ನ ಸೋಲು ಎಂದು ಕರೆದಿದ್ದಾರೆ. ನಾನು ಸೋತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಈ ತೀರ್ಪಿಗಾಗಿಯೇ ನಾವು ಇಲ್ಲಿಯವರೆಗೆ ಬದುಕಿದ್ದೆವು. ಆದರೆ ಈಗ ಸೋತಿದ್ದೇವೆ. ಮಗಳಿಗೆ ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಿಗುತ್ತದೆ ಎಂದು ನಾವು ಆಶಿಸಿದ್ದೆವು. ಆದರೆ ಈ ನಿರ್ಧಾರದ ನಂತರ, ಇನ್ನು ಮುಂದೆ ಬದುಕಲು ಯಾವುದೇ ಕಾರಣವಿಲ್ಲ ಎಂದಿದ್ದಾರೆ.


ಇದನ್ನೂ ಓದಿ:  Veerendra Heggade: ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸುಳ್ಳು ವದಂತಿ; ಮೆರವಣಿಗೆಯಲ್ಲಿ ಬಂದು ಕೋರ್ಟ್​ ಮುಂದೆ ಶರಣಾದ ವ್ಯಕ್ತಿ


ನ್ಯಾಯಾಲಯವು ಸಾಕ್ಷ್ಯವನ್ನಾಧರಿಸಿ ತೀರ್ಪು ನೀಡುತ್ತದೆ, ಭಾವನೆಗಳ ಮೇಲೆ ಅಲ್ಲ: ಸುಪ್ರೀಂ ಕೋರ್ಟ್


ಅತ್ಯಾಚಾರದ ಮೂವರು ಅಪರಾಧಿಗಳನ್ನು ಖುಲಾಸೆಗೊಳಿಸುವ ತನ್ನ ತೀರ್ಪಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ, ಇದನ್ನೇ ಆಧಾರವಾಗಿ ಈ ನಿರ್ಧಾರ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸುಪ್ರೀಂ ಅಸಹಾಯಕತೆ ತೋಡಿಕೊಂಡಿದೆ. ನ್ಯಾಯಾಲಯಗಳು ಸಾಕ್ಷ್ಯಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆಯೇ ಹೊರತು ಭಾವನೆಗಳನ್ನು ಆಧರಿಸಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಆರೋಪಿಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಂಪೂರ್ಣ ಅವಕಾಶ ಸಿಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಇನ್ನು 19ರ ಹರೆಯದ ಯುವತಿಗೆ ಕ್ರೌರ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದು ಪೊಲೀಸರ ನಿರ್ಲಕ್ಷ್ಯದಿಂದ ಎಂಬುವುದು ಉಲ್ಲೇಖನೀಯ.


2012 ರ ಪ್ರಕರಣ


ಅದು ಫೆಬ್ರವರಿ 2012ರ ಪ್ರಕರಣವಾಗಿದೆ. ಛಾವ್ಲಾದ 19 ವರ್ಷದ ಯುವತಿಯೊಬ್ಬಳು ಗುರ್ಗಾಂವ್‌ನಿಂದ ಕೆಲಸ ಮುಗಿಸಿ ಬಸ್‌ನಲ್ಲಿ ಮನೆಗೆ ಮರಳುತ್ತಿದ್ದಳು. ಸ್ವಲ್ಪ ಹೊತ್ತಿನ ನಂತರ ಬಸ್ಸಿನಿಂದ ಇಳಿದು ತನ್ನ ಮನೆಯತ್ತ ನಡೆಯತೊಡಗಿದಳು. ಅಷ್ಟರಲ್ಲಿ ಹಿಂದೆ ಕೆಂಪು ಬಣ್ಣದ ಕಾರೊಂದು ಬಂದಿದ್ದು, ಅದರಲ್ಲಿದ್ದ ಮೂವರು ಯುವಕರು ಬಲವಂತವಾಗಿ ಆಕೆಯನ್ನು ಕಾರಿನೊಳಗೆ ಎಳೆದುಕೊಂಡು ಹೋಗಿದ್ದಾರೆ.


ಮಿತಿ ಮೀರಿ ಕ್ರೌರ್ಯ


ಯುವತಿಯನ್ನು ಹರ್ಯಾಣಕ್ಕೆ ಕರೆದುಕೊಂಡು ಹೋಗಲು ದುಷ್ಕರ್ಮಿಗಳು ನಿರ್ಧರಿಸಿದ್ದಾರೆ. ಕಾರಿನಲ್ಲಿ ಗಂಟೆಗಟ್ಟಲೆ ಚಿತ್ರಹಿಂಸೆ ನೀಡಿದ್ದರು. ಅಲ್ಲಿಗೆ ತಲುಪಿದಾಗ, ಎಲ್ಲಕ್ಕಿಂತ ಮೊದಲು, ಮೂವರೂ ಮದ್ಯವನ್ನು ಖರೀದಿಸಿ ಕಾರನ್ನು ಏಕಾಂತ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಇಲ್ಲಿ ಮದ್ಯ ಸೇವಿಸಿ ಯುವತಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಮೂವರು ಕಾಮುಕರು ಯುವತಯ ಮೇಲೆರಗಿದ್ದರು. ಆಕೆಯ ದೇಹವನ್ನು ಕಚ್ಚಿದ್ದರು. ಆಕೆಯ ತಲೆ ಮೇಲೆ ಮಡಿಕೆ ಎಸೆದು ಹಲ್ಲೆ ನಡೆಸಲಾಗಿದೆ. ಇಷ್ಟಕ್ಕೇ ಸುಮ್ಮನಾಗದ ಕಿಡಿಗೇಡಿಗಳು ಕಾರಿನಲ್ಲಿದ್ದ ಕಬ್ಬಿಣದ ಪ್ಯಾನ್ ಮತ್ತು ಜಾಕ್ ತೆಗೆದು ತಲೆಗೆ ಹೊಡೆದಿದ್ದಾರೆ. ಬಳಿಕ ಆಕೆಯನ್ನು ಸುಟ್ಟು ಕಿಡಿಗೇಡಿಗಳು ಮುಖ ಕುರೂಪಗೊಳಿಸಲು ಕಾರಿನ ಸೈಲೆನ್ಸರ್ ನಿಂದ ಇತರೆ ಉಪಕರಣಗಳನ್ನು ಕಾಯಿಸಿ ದೇಹದ ಮೇಲೆ ಬರೆ ಎಳೆದಿದ್ದಾರೆ.


Note ban review supreme court directive to central govt and rbi to submit comprehensive stg asp
ಸುಪ್ರೀಂ ಕೋರ್ಟ್


ಖಾಸಗಿ ಅಂಗದಲ್ಲಿ ಬಾಟಲಿ ಚೂರು


ಆಕೆಯ ಖಾಸಗಿ ಅಂಗವನ್ನೂ ಸುಡಲಾಗಿತ್ತು. ಇದಾದ ಬಳಿಕ ಆರೋಪಿ ಬಿಯರ್ ಬಾಟಲಿ ಒಡೆದು ಯುವತಿಯ ದೇಹವನ್ನು ಕತ್ತರಿಸಲಾರಂಭಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಯುವತಿ ಮೃತಪಟ್ಟಿದ್ದಳು. ಇದಾದ ಬಳಿಕ ಆಕೆಯ ಖಾಸಗಿ ಭಾಗದಲ್ಲಿ ಒಡೆದ ಬಾಟಲಿಯನ್ನೂ ಚೂರುಗಳನ್ನು ಹಾಕಿದ್ದಾರೆ. ಅಂತಿಮವಾಗಿ ಯುವತಿಯ ಕಣ್ಣುಗುಡ್ಡೆಗಳನ್ನು ಕಿತ್ತು ಹಾಕಿದ ಕಿಡಿಗೇಡಿಗಳು ಕಾರಿನ ಬ್ಯಾಟರಿಯ ಆಸಿಡ್ ಅನ್ನು ಅವುಗಳಲ್ಲಿ ತುಂಬಿದ್ದಾರೆ.


ಇದನ್ನೂ ಓದಿ:  Hubballi: ಬಿಜೆಪಿ ಕಚೇರಿ ಮುಂದೆ ಹೈಡ್ರಾಮಾ; ಕಾಂಗ್ರೆಸ್ ಪ್ರತಿಭಟನೆಯಲ್ಲಿ ಹಾರಾಡಿದ ಕೇಸರಿ ಶಾಲು


ಪೊಲೀಸರಿಗೆ ಬಲೆಗೆ ಬಿದ್ದಿದ್ದ ಆರೋಪಿ


ಯುವತಿಯ ತಂದೆ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದರು. ಎಷ್ಟು ಹೊತ್ತಾದರೂ ಯುವತಿ ಮನೆಗೆ ಬಾರದೇ ಇದ್ದಾಗ ಹುಡುಕಾಟ ಆರಂಭಿಸಿದ್ದಾರೆ. ಇದಾದ ಬಳಿಕ ಅವರು ಈ ವಿಚಾರವಾಗಿ ಪೊಲೀಸರ ಮೊರೆ ಹೋಗಿ ಸಹಾಯ ಕೇಳಿದ್ದಾನೆ. ಸಂತ್ರಸ್ತೆಯ ಮನೆಯವರು ಇಡೀ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಶಂಕಿತ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತನ್ನ ಬಳಿ ವಾಹನವಿಲ್ಲ ಎಂದು ದೆಹಲಿ ಪೊಲೀಸರು ಹೇಳಿದಾಗ ಅವರು ಅಚ್ಚರಿಗೀಡಾಗಿದ್ದಾರೆ. ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೂವರು ಆರೋಪಿಗಳು ಹರಿಯಾಣ ನಿವಾಸಿಗಳು ಎಂದು ತಿಳಿದುಬಂದಿದೆ. ಅವರನ್ನು ರವಿ, ರಾಹುಲ್ ಮತ್ತು ವಿನೋದ್ ಎಂದು ಗುರುತಿಸಲಾಗಿದೆ. ಮೂವರೂ ಕಾರು ಚಾಲಕರಾಗಿದ್ದರು. ಮೂವರ ಮೊಬೈಲ್ ಫೋನ್ ಸ್ಥಳ ಮತ್ತು ಕಾರನ್ನು ಗುರುತಿಸಿದ ನಂತರ ಪೊಲೀಸರು ಮೂವರನ್ನೂ ಬಂಧಿಸಿದ್ದರು.


ಪೊಲೀಸರ ನಿರ್ಲಕ್ಷ್ಯ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪು


ಫೆಬ್ರವರಿ 16 ರಂದು ಪೊಲೀಸರು ಆರೋಪಿಗಳ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ತೆಗೆದುಕೊಂಡಿದ್ದರು. ಆದರೆ ಪೊಲೀಸರ ನಿರ್ಲಕ್ಷ್ಯ ಅದೆಷ್ಟರ ಮಟ್ಟಿಗೆ ಇತ್ತೆಂದರೆ ಮುಂದಿನ 11 ದಿನಗಳವರೆಗೆ ಸ್ಯಾಂಪಲ್‌ಗಳು ಠಾಣೆಯ ಗೋದಾಮಿನಲ್ಲಿ ಬಿದ್ದಿದ್ದವು. ಅಂದರೆ, ಫೆಬ್ರವರಿ 27 ರಂದು, ಆ ಮಾದರಿಗಳನ್ನು CFSL ಗೆ ಕಳುಹಿಸಲಾಗಿದೆ. ಪೊಲೀಸರ ಈ ನಿರ್ಲಕ್ಷ್ಯಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ ಆರೋಪಿಗಳಿಗೆ ಲಾಭ ಸಿಕ್ಕಿದೆ.\


49 ಸಾಕ್ಷಿಗಳ ಪೈಕಿ ಹತ್ತು ಮಂದಿಯನ್ನು ವಿಚಾರಣೆ ನಡೆಸಿಲ್ಲ


ಆರೋಪಿಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಂಪೂರ್ಣ ಅವಕಾಶ ಸಿಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಸಾಕ್ಷಿಗಳು ಕೂಡ ಆರೋಪಿಗಳನ್ನು ಗುರುತಿಸಿಲ್ಲ ಎಂಬುದು ಅವರ ವಾದವಾಗಿತ್ತು. ಒಟ್ಟು 49 ಸಾಕ್ಷಿಗಳ ಪೈಕಿ ಹತ್ತು ಮಂದಿಯನ್ನು ವಿಚಾರಣೆ ನಡೆಸಿಲ್ಲ. ಆರೋಪಿಗಳನ್ನು ಗುರುತಿಸಲು ಪರೇಡ್ ನಡೆಸಿಲ್ಲ. ಅಷ್ಟೇ ಅಲ್ಲ, ಕೆಳ ನ್ಯಾಯಾಲಯವೂ ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಚಾರಣಾ ನ್ಯಾಯಾಲಯವು ತನ್ನ ವಿವೇಚನೆಯಿಂದ ಸತ್ಯದ ತಳಹದಿಯನ್ನು ಪಡೆಯಲು ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 165 ರ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದನ್ನು ಏಕೆ ಮಾಡಲಿಲ್ಲ? ಎಂದೂ ಪ್ರಶ್ನಿಸಿದೆ.


ಇದನ್ನೂ ಓದಿ:  Karnataka Weather Report: ಮನೆಯಿಂದ ಹೊರ ಹೋಗುವ ಮುನ್ನ ಕೈಯಲ್ಲಿರಲಿ ಛತ್ರಿ; ನೆರೆಯ ರಾಜ್ಯದಲ್ಲಿ 72 ವರ್ಷದಲ್ಲೇ ದಾಖಲೆಯ ಮಳೆ


ತನಿಖೆಯ ವೇಳೆ ಎಎಸ್‌ಐಗೆ ಸಿಕ್ಕ ದೇಹದ ಕೂದಲು ಸಾಕಷ್ಟು ಅನುಮಾನಾಸ್ಪದವಾಗಿದೆ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಗದ್ದೆಯಲ್ಲಿ ಪತ್ತೆಯಾದ ಬಾಲಕಿಯ ಮೃತದೇಹ ಕೊಳೆತಿರಲಿಲ್ಲ ಎಂದು ಆದೇಶದ ವೇಳೆ ಕೋರ್ಟ್ ಉಲ್ಲೇಖಿಸಿದೆ. ಮೂರು ದಿನಗಳಿಂದ ಶವ ಗದ್ದೆಯಲ್ಲಿ ಬಿದ್ದಿದ್ದರೂ ಯಾರೂ ಯಾಕೆ ಅತ್ತ ಗಮನ ಹರಿಸಿರಲಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ.


ಆರೋಪಿಗಳ ಧೈರ್ಯ ಹೆಚ್ಚುತ್ತದೆ


'ಅಪರೂಪದಲ್ಲಿ ಅಪರೂಪದ' ಪ್ರಕರಣ ಎಂದು ಕರೆಯಲ್ಪಡುವ ಈ ಪ್ರಕರಣದಲ್ಲಿ ಎಲ್ಲ ಮೂವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಪ್ರಶ್ನಿಸಲಾಗಿದೆ. ಹಲವಾರು ಮಹಿಳಾ ಹಕ್ಕುಗಳ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಟೀಕಿಸಿದ್ದಾರೆ ಮತ್ತು ಇದು ಆರೋಪಿಳಿಗೆ ಅಪರಾಧವೆಸಗಲು ಮತ್ತಷ್ಟು ಧೈರ್ಯ ನೀಡುತ್ತದೆ ಎಂದು ಹೇಳಿದೆ.


ಇದನ್ನೂ ಓದಿ:  BMTC Accident: ಬೈಕ್ ಸವಾರನ ಬಲಿ ಪಡೆದ ಬಿಎಂಟಿಸಿ ಬಸ್; ಚಾಲಕನಿಗೆ ಥಳಿತ


ಅತ್ಯಾಚಾರಿಗಳ ಬೆಂಬಲ ನೀಡುವುದಿಲ್ಲವೇ


ತೀರ್ಪಿನ ಸಮಯದಲ್ಲಿ, ಸಂತ್ರಸ್ತೆಯ ತಾಯಿ ಮತ್ತು ತಂದೆಯೊಂದಿಗೆ ನ್ಯಾಯಾಲಯದ ಹೊರಗೆ ಹಾಜರಿದ್ದ ಕಾರ್ಯಕರ್ತೆ ಯೋಗಿತಾ ಭಯಾನಾ, ಬೆಳಿಗ್ಗೆ ನ್ಯಾಯಾಲಯವು ಮರಣದಂಡನೆಯನ್ನು ಎತ್ತಿಹಿಡಿಯುತ್ತದೆ ಎಂಬ ಸಂಪೂರ್ಣ ಭರವಸೆಯನ್ನು ಹೊಂದಿದ್ದೆವು ಎಂದು ಹೇಳಿದ್ದಾರೆ. ಆದರೆ ಅಪರಾಧಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಹೇಳಿದಾಗ ಈ ವಿಚಾರ ನಂಬಲಾಗಲಿಲ್ಲ. ಈ ನಿರ್ಧಾರದ ವಿರುದ್ಧ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ. ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್, ಸಂತ್ರಸ್ತೆಗೆ ನಡೆದ ಕ್ರೌರ್ಯವನ್ನು ಉಲ್ಲೇಖಿಸಿ, ಇದು ಅತ್ಯಾಚಾರಿಗಳ ಬೆಂಬಲ ನೀಡುವುದಿಲ್ಲವೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

Published by:Precilla Olivia Dias
First published: