2007ರ ಹೈದರಾಬಾದ್​ ಅವಳಿ ಬಾಂಬ್​ ಸ್ಫೋಟ ತೀರ್ಪು ಪ್ರಕಟ; ಇಬ್ಬರನ್ನು ಅಪರಾಧಿಗಳೆಂದು ಘೋಷಿಸಿದ ನ್ಯಾಯಾಲಯ

news18
Updated:September 4, 2018, 12:57 PM IST
2007ರ ಹೈದರಾಬಾದ್​ ಅವಳಿ ಬಾಂಬ್​ ಸ್ಫೋಟ ತೀರ್ಪು ಪ್ರಕಟ; ಇಬ್ಬರನ್ನು ಅಪರಾಧಿಗಳೆಂದು ಘೋಷಿಸಿದ ನ್ಯಾಯಾಲಯ
news18
Updated: September 4, 2018, 12:57 PM IST
ನ್ಯೂಸ್​18 ಕನ್ನಡ

ಹೈದರಾಬಾದ್​ (ಸೆ. 4): ಹೈದರಾಬಾದ್​ನ ಗೋಕುಲ್​ ಚಾಟ್​ ಮತ್ತು ಲುಂಬಿನಿ ಪಾರ್ಕ್​ನಲ್ಲಿ 2007ರಲ್ಲಿ ನಡೆದಿದ್ದ ಅವಳಿ ಬಾಂಬ್​ ಸ್ಫೋಟ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಐವರಲ್ಲಿ ಇಬ್ಬರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದೆ.

ಈ ಅವಳಿ ಬಾಂಬ್ ಸ್ಫೋಟದಲ್ಲಿ 44 ಜನ ಸಾವನ್ನಪ್ಪಿದ್ದರು ಮತ್ತು 68 ಜನ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಕ್ ಹಾಗೂ ಇಸ್ಲಾಯಿಲ್ ಅವರನ್ನು ಆರೋಪಿಗಳೆಂದು ಬಂಧಿಸಲಾಗಿತ್ತು. ಈ ಕುರಿತು ಇಂದು ವಿಚಾರಣೆ ನಡೆಸಿರುವ ವಿಶೇಷ ನ್ಯಾಯಾಲಯ ಅವರಿಬ್ಬರನ್ನೂ ಅಪರಾಧಿಗಳೆಂದು ತೀರ್ಪು ಪ್ರಕಟಿಸಿದೆ.

ಬಾಂಬ್​ ಸ್ಫೋಟದ ಬಗ್ಗೆ ತನಿಖೆ ನಡೆಸಿರುವ ತೆಲಂಗಾಣ ಪೊಲೀಸ್​ ಇಲಾಖೆಯ ಕೌಂಟರ್​ ಇಂಟಲಿಜೆನ್ಸ್​ (ಸಿಐ) ವಿಭಾಗ ಐವರನ್ನು ಆರೋಪಿಗಳೆಂದು ಪರಿಗಣಿಸಿ ಬಂಧಿಸಿತ್ತು. ಅವರೆಲ್ಲರೂ ಇಂಡಿಯನ್​ ಮುಜಾಹಿದ್ದೀನ್​ ಕಾರ್ಯಕರ್ತರಾಗಿದ್ದರು. ಐವರು ಆರೋಪಿಗಳ ವಿರುದ್ಧ 4 ಚಾರ್ಜ್​ಶೀಟ್​ ಸಲ್ಲಿಸಿದ್ದ ಸಿಐ ಕೈಯಿಂದ ಇನ್ನಿಬ್ಬರು ಆರೋಪಿಗಳಾದ ರಿಯಾಜ್​ ಭಟ್ಕಳ ಮತ್ತು ಇಕ್ಬಾಲ್​ ಭಟ್ಕಳ ತಪ್ಪಿಸಿಕೊಂಡಿದ್ದರು.

ಆರೋಪಿಗಳಾದ ಮಹಮ್ಮದ್​ ಅಕ್ಬರ್​ ಇಸ್ಮಾಯಿಲ್​ ಚೌಧರಿ ಮತ್ತು ಅನೀಕ್​ ಶಫೀಕ್​ ಸಯೀದ್​ ಅವರನ್ನು ಅಪರಾಧಿಗಳೆಂದು ತೀರ್ಪು ನೀಡಿರುವ ನ್ಯಾಯಾಲಯ, ಫಾರೂಕ್​ ಶಾಫುದ್ದೀನ್​ ತಾರಕ್ಷ್​, ಮೊಹಮ್ಮದ್​ ಸಾದಿಕ್​ ಇಸ್ರಾರ್​ ಅಹಮದ್ ಶೇಖ್ ಮತ್ತು ತಾರಿಕ್​ ಅಂಜುಂ ಅವರನ್ನು ಖುಲಾಸೆಗೊಳಿಸಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ