Beef Export| ಕರ್ನಾಟಕದಿಂದ ಗೋವಾಕ್ಕೆ ಪ್ರತಿದಿನ 2,000 ಕೆ.ಜಿ ಗೋ ಮಾಂಸ ರಫ್ತು; ಸಿಎಂ ಪ್ರಮೋದ್ ಸಾವಂತ್ ಸ್ಪಷ್ಟನೆ

ದನದ ಮಾಂಸ ರಫ್ತಿನಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಸಾವಿರಾರು ಕೋಟಿ ಮೌಲ್ಯದ ದನದ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಇದೀಗ ಕರ್ನಾಟಕದಿಂದ ರಫ್ತು ಮಾಡಲಾಗುವ ಮಾಂಸದ ಪ್ರಮಾಣವನ್ನು ಸ್ವತಃ ಗೋವಾ ಸಿಎಂ ಪ್ರಮೋದ್ ಸಾವಂತ್ ಸ್ಪಷ್ಟಪಡಿಸಿದ್ದಾರೆ.

ಗೋವಾ ಸಿಎಂ ಪ್ರಮೋದ್​ ಸಾವಂತ್.

ಗೋವಾ ಸಿಎಂ ಪ್ರಮೋದ್​ ಸಾವಂತ್.

  • Share this:
    ಗೋವಾ: ಬಿಜೆಪಿ (BJP) ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲೂ ಪ್ರಸ್ತುತ ಗೋ ಹತ್ಯೆಯನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಅದರಂತೆ ಕರ್ನಾಟಕ (Karnataka) ಸೇರಿದಂತೆ ಅನೇಕ ರಾಜ್ಯಗಳಲ್ಲಿ ಗೋ ಹತ್ಯೆಯನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಕರ್ನಾಟಕ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದರೆ, ನೆರೆಯ ಗೋವಾದಲ್ಲೂ ಬಿಜೆಪಿ ಸರ್ಕಾರವೇ ಆಳ್ವಿಕೆಯಲ್ಲಿದ್ದರೂ ಸಹ ಅಲ್ಲಿ ಗೋಹತ್ಯೆ ನಿಷೇಧವನ್ನು ಈವರೆಗೆ ಜಾರಿ ಮಾಡಲಾಗಿಲ್ಲ. ಅಲ್ಲದೆ, ಪ್ರತಿದಿನ ಕರ್ನಾಟಕ ಸುಮಾರು 2,000 ಕೆಜಿ ಗೋ ಮಾಂಸವನ್ನು ಗೋವಾಕ್ಕೆ ಪೂರೈಕೆ ಮಾಡುತ್ತದೆ ಎಂದು ಸ್ವತಃ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pamod Sawant) ಮಾಹಿತಿ ನೀಡಿದ್ದು ಸಾರ್ವಜನಿಕವಾಗಿ ಸಾಕಷ್ಟು ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ.

    ಕರ್ನಾಟಕದಿಂದ ಗೋವಾಕ್ಕೆ 2000 ಕೆ.ಜಿ ರಫ್ತು:

    ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರವಾಗಿ ಗೋವಾ ವಿಧಾನಸಭೆಗೆ ಮಂಗಳವಾರ ಲಿಖಿತ ರೂಪದಲ್ಲಿ ಸಿಎಂ ಪ್ರಮೋದ್ ಸಾವಂತ್ ಉತ್ತರ ನೀಡಿದ್ದಾರೆ. ಈ ಉತ್ತರದಲ್ಲಿ, “ಕಳೆದ 6 ತಿಂಗಳಿನಲ್ಲಿ ಕರ್ನಾಟಕ ಗೋವಾಕ್ಕೆ 388 ಟನ್ ಗಳಷ್ಟು ದನದ ಮತ್ತು ಎಮ್ಮೆಯ ಮಾಂಸವನ್ನು ತರಿಸಿಕೊಳ್ಳಲಾಗಿದೆ. ಕರ್ನಾಟಕದ ವ್ಯಾಪಾರಿಗಳು ಪ್ರತಿದಿನ ಗೋವಾಕ್ಕೆ ದನದ ಮಾಂಸವನ್ನು ರಫ್ತು ಮಾಡುತ್ತಿದ್ದು, ಈ ಉದ್ಯಮ ಪ್ರಬಲವಾಗಿ ಬೆಳೆಯುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.

    ಇತ್ತೀಚೆಗೆ ಗೋವಾ ಮತ್ತು ಕರ್ನಾಟಕ ಗಡಿಯಲ್ಲಿ ಸಂಬಂಧಿತ ಅಧಿಕಾರಿಗಳು ಕರ್ನಾಟಕದ ದನದ ಮಾಂಸ ವ್ಯಾಪಾರಿಗಳಿಂದ ಸಂಗ್ರಹಿಸುವ ತೆರಿಗೆಯ ಮೊತ್ತದಿಂದ ಈ ಪ್ರಮಾಣವನ್ನು ಲೆಕ್ಕಹಾಕಲಾಗಿದೆ. ಪ್ರತಿದಿನ ಕರ್ನಾಟಕದಿಂದ ಸರಾಸರಿ 2,120 ಕೆ.ಜಿಯಷ್ಟು ದನ ಮತ್ತು ಎಮ್ಮೆಯ ಮಾಂಸ ಗೋವಾಗೆ ಬರುತ್ತದೆ ಎಂದು ತೆರಿಗೆ ದಾಖಲೆಗಳು ಹೇಳುತ್ತವೆ ಎಂದು ಮುಖ್ಯಮಂತ್ರಿ ಸಾವಂತ್ ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.

    ಕರ್ನಾಟಕ ವಿಧಾನಸಭೆಯ ಗೋಹತ್ಯೆ ತಡೆ ಕಾಯ್ದೆಯನ್ನು ಜಾರಿಗೆ ತಂದ ನಂತರ ಗೋವಾಗೆ ಪೂರೈಕೆಯಾಗುವ ದನದ ಮಾಂಸದಲ್ಲಿ ಭಾರಿ ವ್ಯತ್ಯಯವಾಗಿದೆ ಎಂದು ಅವರು ಹೇಳಿದ್ದಾರೆ. ಗೋವಾದ ಒಟ್ಟು ಜನಸಂಖ್ಯೆಯಲ್ಲಿ ಶೇ 30 ರಷ್ಟು ಜನರು ದನ ಮತ್ತು ಎಮ್ಮೆಯ ಮಾಂಸವನ್ನು ತಿನ್ನುತ್ತಾರೆ. ಈ ಮಾಂಸಕ್ಕಾಗಿ ಗೋವಾ ರಾಜ್ಯವು ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಅವಲಂಬಿಸಿವೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: Uttarakhand Flood| ಉತ್ತರಾಖಂಡ ಮಹಾಮಳೆ; 45ಕ್ಕೂ ಹೆಚ್ಚು ಜನ ಸಾವು, ಅಮಿತ್ ಶಾ ಭೇಟಿ ಪರಿಸ್ಥಿತಿ ಅವಲೋಕನ

    ತಿನ್ನಲು ವಿಧಿಸುವ ನಿಷೇಧ ರಫ್ತಿಗಿಲ್ಲವೆ?

    ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದನದ ಮಾಂಸ ತಿಂದ ಕಾರಣಕ್ಕೆ ಅಥವಾ ದನದ ಮಾಂಸ ಎಂಬ ಸಂಶಯಕ್ಕೆ ಅನೇಕರ ಮೇಲೆ ಹಲ್ಲೆ ನಡೆಸಿ ಕೊಲ್ಲಲಾಗಿರುವ ಸಾಕಷ್ಟು ಘಟನೆಗಳು ನಡೆದಿವೆ. ದನಗಳಿಗಾಗಿ ಸಾಕಷ್ಟು ಜನರನ್ನು ಕೊಲ್ಲಲಾಗಿದೆ. ಇನ್ನೂ ಉತ್ತರಪ್ರದೇಶ ರಾಜ್ಯ ದನಗಳ ರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.

    ಇದನ್ನೂ ಓದಿ: Final Assault: ಭಾರತೀಯ ಸೇನಾ ಪಡೆಯಿಂದ ಉಗ್ರರ ಅಂತಿಮ ಬೇಟೆ: ಅಡಗಿ ಕುಳಿತವರ ವಿರುದ್ಧ ಅಂತಿಮ ಕಾರ್ಯಾಚರಣೆ

    ಆದರೆ, ಮತ್ತೊಂದೆಡೆ ದನದ ಮಾಂಸ ರಫ್ತಿನಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಸಾವಿರಾರು ಕೋಟಿ ಮೌಲ್ಯದ ದನದ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಇದೀಗ ಕರ್ನಾಟಕದಿಂದ ರಫ್ತು ಮಾಡಲಾಗುವ ಮಾಂಸದ ಪ್ರಮಾಣವನ್ನು ಸ್ವತಃ ಗೋವಾ ಸಿಎಂ ಪ್ರಮೋದ್ ಸಾವಂತ್ ಸ್ಪಷ್ಟಪಡಿಸಿದ್ದಾರೆ. ಆದರೆ, ದನದ ಮಾಂಸ ತಿನ್ನಲು ನಿಷೇಧ ಹೇರಿರುವ ಬಿಜೆಪಿ ಸರ್ಕಾರಗಳು ದನದ ಮಾಂಸದ ರಫ್ತಿಗೆ ನಿಷೇಧ ಏಕೆ ಹೇರಿಲ್ಲ? ಬಿಜೆಪಿಯೇ ಅಧಿಕಾರದಲ್ಲಿರುವ ಗೋವಾದಲ್ಲಿ ಏಕೆ ದನದ ಮಾಂಸಕ್ಕೆ ನಿಷೇಧ ಇಲ್ಲ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.
    Published by:MAshok Kumar
    First published: