• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಮಾಸ್ಕ್​ ಧರಿಸದಿದ್ದರೆ 2000.ರೂ ದಂಡ; ಕೊರೋನಾ ನಿಯಂತ್ರಣಕ್ಕೆ ಹೊಸ ಆದೇಶ ಹೊರಡಿಸಿದ ದೆಹಲಿ ಸರ್ಕಾರ

ಮಾಸ್ಕ್​ ಧರಿಸದಿದ್ದರೆ 2000.ರೂ ದಂಡ; ಕೊರೋನಾ ನಿಯಂತ್ರಣಕ್ಕೆ ಹೊಸ ಆದೇಶ ಹೊರಡಿಸಿದ ದೆಹಲಿ ಸರ್ಕಾರ

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಜನರು ಮಾಸ್ಕ್‌ಗಳನ್ನು ಧರಿಸುತ್ತಿದ್ದಾರೆ. ಆದರೆ, ಕೆಲವರಿಗೆ ಈ ಬಗ್ಗೆ ಅಸಡ್ಡೆ ಇದೆ. ಹಾಗಾಗಿ ನಾವು ನಿಯಮಗಳನ್ನು ಬಿಗಿಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ದಂಡವನ್ನು 500 ರಿಂದ 2000 ಕ್ಕೆ ಏರಿಸಲಾಗಿದೆ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. 

  • Share this:

ನವ ದೆಹಲಿ (ನವೆಂಬರ್​ 19); ದೇಶದಲ್ಲಿ ಕೊರೋನಾ ಅಟ್ಟಹಾಸ ಇನ್ನೂ ನಿಂತಿಲ್ಲ. ಅದರಲ್ಲೂ ದೆಹಲಿಯಲ್ಲಿ ಎರಡನೇ ಹಂತದ ಸೋಂಕು ಹರಡುವಿಕೆ ಆರಂಭವಾಗಿದ್ದು, ಮತ್ತೊಂದು ಅವಧಿಗೆ ಲಾಕ್​ಡೌನ್​ ಹೇರುವ ಕುರಿತ ಮಾತುಗಳು ಚಾಲ್ತಿಯಲ್ಲಿದೆ. ಅಲ್ಲದೆ, ಮನೆಯಿಂದ ಹೊರಬರುವ ಸಂದರ್ಭದಲ್ಲಿ ಮಾಸ್ಕ್​ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅಲ್ಲದೆ, ಈ ಹಿಂದೆ ಮಾಸ್ಕ್​ ಧರಿಸದವರಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಆದರೆ, ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಪ್ರಮಾಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಆದೇಶ ಹೊರಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಸ್ಕ್​ ಧರಿಸದವರ ದಂಡದ ಪ್ರಮಾಣವನ್ನು 500 ರೂಪಾಯಿಯಿಂದ 2,000 ಕ್ಕೆ ಏರಿಕೆ ಮಾಡಿದ್ದಾರೆ.


ದೆಹಲಿಯ ಕೊರೋನಾ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನಡೆದ ಸರ್ವಪಕ್ಷ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅರವಿಂದ ಕೇಜ್ರಿವಾಲ್, "ಜನರು ಮಾಸ್ಕ್‌ಗಳನ್ನು ಧರಿಸುತ್ತಿದ್ದಾರೆ. ಆದರೆ, ಕೆಲವರಿಗೆ ಈ ಬಗ್ಗೆ ಅಸಡ್ಡೆ ಇದೆ. ಹಾಗಾಗಿ ನಾವು ನಿಯಮಗಳನ್ನು ಬಿಗಿಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ದಂಡವನ್ನು 500 ರಿಂದ 2000 ಕ್ಕೆ ಏರಿಸಲಾಗಿದೆ" ಎಂದು ತಿಳಿಸಿದ್ದಾರೆ.


ಅಲ್ಲದೆ, "ಕೊರೋನಾ ರೋಗಿಗಳಿಗೆ ಆದಷ್ಟು ಗರಿಷ್ಠ ಆರೈಕೆ ನೀಡಲು ಸರ್ಕಾರವು ತುರ್ತು ಪರಿಸ್ಥಿತಿಯ ಶಸ್ತ್ರಚಿಕಿತ್ಸೆ ಬಿಟ್ಟು ಬೇರೆ ಶಸ್ತ್ರಚಿಕಿತ್ಸೆಗಳನ್ನು ಸ್ಥಗಿತಗೊಳಿಸುವಂತೆ ಆಸ್ಪತ್ರೆಗಳನ್ನು ಒತ್ತಾಯಿಸಲಾಗಿದೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ಐಸಿಯು ಹಾಸಿಗೆಗಳಲ್ಲಿ ಶೇ.80 ಮತ್ತು ಐಸಿಯು ಅಲ್ಲದ ಹಾಸಿಗೆಗಳಲ್ಲಿ ಶೇ.60 ಹಾಸಿಗೆಗಳನ್ನು ಕೊರೋನಾ ಸೋಂಕಿತ ರೋಗಿಗಳಿಗೆ ಕಾಯ್ದಿರಿಸಲು ತಿಳಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.


ಇನ್ನು ಛತ್ ಪೂಜೆಯ ಮೇಲಿನ ನಿರ್ಬಂಧಗಳ ಕುರಿತು ಟೀಕಿಸಿದ ಬಿಜೆಪಿಗೆ "ಇದು ರಾಜಕೀಯ ಮತ್ತು ಆರೋಪಗಳನ್ನು ಮಾಡುವ ಸಮಯವಲ್ಲ. ದೆಹಲಿ ಜನರು ಛತ್ ಪೂಜೆ ಆಚರಿಸಲು ನಾನು ಯಾಕೆ ಬಯಸುವುದಿಲ್ಲ..? ಇದು ಶುಭ ಸಂದರ್ಭ. ಹೀಗಾಗಿ ಜನರು ಅದನ್ನು ಆಚರಿಸಬೇಕು. ಆದರೆ. ಕೊರೋನಾ ಸಂದರ್ಭದಲ್ಲಿ ಇಂತಹ ಆಚರಣೆಗಳು ಅವರ ಮನೆಯೊಳಗೆ ಆಚರಿಸುವುದು ಒಳಿತು. ಹೊರಗೆ ಗುಂಪುಗೂಡಿ ಆಚರಿಸಬಾರದು" ಎಂದು ಮನವಿ ಮಾಡಿದ್ದಾರೆ.


ಇದನ್ನೂ ಓದಿ : ಭ್ರಷ್ಟಾಚಾರ ಆರೋಪ; ಅಧಿಕಾರ ಸ್ವೀಕರಿಸಿದ ಮೂರೇ ದಿನಕ್ಕೆ ರಾಜೀನಾಮೆ ನೀಡಿದ ಬಿಹಾರದ ಶಿಕ್ಷಣ ಸಚಿವ


"ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವಾಗ ದೆಹಲಿಯ ಜನರಿಗೆ ಇದು ಕಷ್ಟದ ಸಮಯ ಎಂದು ನಾನು ಸಭೆಯಲ್ಲಿ ಎಲ್ಲ ಪಕ್ಷಗಳಿಗೆ ಹೇಳಿದೆ. ಇದು ರಾಜಕೀಯದ ಸಮಯವಲ್ಲ, ರಾಜಕೀಯ ಮಾಡಲು ಸಂಪೂರ್ಣ ಜೀವಿತಾವಧಿ ಇದೆ. ನಾವು ಕೆಲವು ದಿನಗಳ ಕಾಲ ರಾಜಕೀಯ ಮತ್ತು ಆರೋಪಗಳನ್ನು ಬದಿಗಿಡಬೇಕು. ಜನರಿಗೆ ಸೇವೆ ಸಲ್ಲಿಸುವ ಸಮಯವಿದು"ಎಂದು ಅಭಿಪ್ರಾಯ ಪಟ್ಟಿದ್ದಾರೆ.


ಸರ್ವಪಕ್ಷ ಸಭೆಯ ನಂತರ ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ "ಎಎಪಿ ಸರ್ಕಾರ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ದೆಹಲಿ ಸರ್ಕಾರವು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ ಜನರು ಒಟ್ಟಾಗಿ ಛತ್ ಪೂಜೆಯನ್ನು ಆಚರಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರಲಿಲ್ಲ" ಎಂದು ಕಿಡಿಕಾರಿದ್ದಾರೆ.

top videos
    First published: