• Home
  • »
  • News
  • »
  • national-international
  • »
  • Viral Photo: ತಮಿಳುನಾಡಿನಲ್ಲಿ ಇನ್ನೂ ಇದ್ಯಂತೆ 200 ವರ್ಷಗಳಷ್ಟು ಹಳೆಯ ಹಲಸಿನ ಮರ!

Viral Photo: ತಮಿಳುನಾಡಿನಲ್ಲಿ ಇನ್ನೂ ಇದ್ಯಂತೆ 200 ವರ್ಷಗಳಷ್ಟು ಹಳೆಯ ಹಲಸಿನ ಮರ!

200 ವರ್ಷದ ಹಲಸಿನಿ ಮರ

200 ವರ್ಷದ ಹಲಸಿನಿ ಮರ

200 years Jackfruit tree: ತಂಬಾ ವರ್ಷಗಳಿಂದ ಇರುವ ಮರಗಳೆಂದರೆ ಆಲದ ಮರ ಅಂತ ಹೇಳಬಹುದು. ಇದರಿಂದ ಉಪಯೋಗಗಳು ಹಲವಾರು. ಇದೇ ರೀತಿಯಾಗಿ ಇದೀಗ ಇಲ್ಲೊಂದು ಮರ ಆಲದ ಮರವೇ ನಾನೇನು ಕಮ್ಮಿ ಇಲ್ಲ ಅಂತ 200 ವರ್ಷಗಳಿಂದ ಬಾಳಿ ಜನರಿಗೆ ಆಸತರೆ ನೀಡುತ್ತಾ ಬಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿ ಆಗ್ತಾ ಇದೆ. ಯಾವುದು ಆ ಮರ ?

ಮುಂದೆ ಓದಿ ...
  • Share this:

ಭಾರತ (India) ದೇಶವೇ ಒಂದು ವೈವಿಧ್ಯತೆಗಳ ತವರು. ಇಲ್ಲಿ ಎಷ್ಟೆಲ್ಲ ವೈವಿಧ್ಯತೆ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗೆಯೇ ಭಾರತವು ಶ್ರೀಮಂತ ಜೀವ ವೈವಿಧ್ಯತೆಯನ್ನು ಸಹ ಹೊಂದಿದೆ. ಈ ಜೀವ ವೈವಿಧ್ಯತೆ ಎಂದರೆ ಮರ, ಗಿಡ, ಪ್ರಾಣಿ, ಪಕ್ಷಿಗಳು ಇರುವ ಒಂದು ಗುಂಪು. ಈ ಜೀವ ವೈವಿಧ್ಯತೆಯಲ್ಲಿ ಪ್ರಮುಖವಾದ ಮರ ಗಿಡಗಳು ವಿವಿಧ ಋತುಗಳಲ್ಲಿ ಹಲವು ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ನೀಡುತ್ತಿರುತ್ತದೆ. ಇದೆಲ್ಲವನ್ನು ಗಮನಿಸಿದಾಗ ನಮಗೆ ನಿಜಕ್ಕೂ ಬಹಳ ಆಶ್ಚರ್ಯವೆನಿಸುತ್ತದೆ. ಏನಪ್ಪ ಇವರು ಮರ ಗಿಡಗಳ ಬಗ್ಗೆ ಮಾತನಾಡ್ತಿದಾರೆ, ಅಂದರೆ ಇವತ್ತು ಪರಿಸರ ದಿನಾಚರಣೆ ಇರಬೇಕು ಅಂದ್ಕೊಬೇಡಿ ಮತ್ತೆ. ನಾವಿಲ್ಲಿ ನಿಮಗೆ ಹೇಳಹೊರಟಿರುವುದು ಹೇಗೆ ಒಂದು ಮರ ಸಾಮಾಜಿಕ ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ಫೇಮಸ್‌ ಆಗಿದೆ ಎಂಬುದನ್ನು.


ಸಾಮಾಜಿಕ ಜಾಲತಾಣದಲ್ಲಿ ಫೇಮಸ್‌ ಆಗಿರುವ ಆ ಮರ ಯಾವುದು?


ಸಾಮಾಜಿಕ ಜಾಲತಾಣದಲ್ಲಿ ಫೇಮಸ್‌ ಆಗಿರುವ ಈ ಮರವು ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಕಂಡುಬಂದಿದೆ. ಇದು ಅತಿ ಪುರಾತನವಾದ ಹಲಸಿನ ಮರವಾಗಿದ್ದು, ಇದನ್ನು ತೋರಿಸುವ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆಯನ್ನು ಪಡೆಯುತ್ತಿದೆ. ನೆಟ್ಟಿಗರು ಈ ಮರವನ್ನು ನೋಡಿ ಪುಲ್‌ ಫೀದಾ ಆಗಿದ್ದಾರೆ. ಅದೇನು ವಿಶೇಷ ಎಂಬುದನ್ನು ಮುಂದೆ ನೋಡೋಣ ಬನ್ನಿ.


ಮೂರು ದಿನಗಳ ಹಿಂದೆ ಅಪರ್ಣಾ ಕಾರ್ತಿಕೇಯನ್ ಎಂಬ ಟ್ವಿಟ್ಟರ್‌ ಬಳಕೆದಾರರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೀಡಿಯೊಗೆ ಒಂದು ವಿಶೇಷ ಶೀರ್ಷಿಕೆ ನೀಡಿದ್ದರು.


ಇದನ್ನೂ ಓದಿ: ಮೊನಾಲಿಸಾ ಅತ್ತೆ! ಎಲ್ಲಾ ಕಡೆ ಇವಳದ್ದೇ ಹವಾ, ಚಿತ್ರಗಳಲ್ಲಿ ನೋಡಿ


ಆ ಶೀರ್ಷಿಕೆ ಹೀಗಿದೆ ನೋಡಿ, "ಆಯಿರಂಕಚಿ ಪ್ರದೇಶದ ಸುತ್ತಮುತ್ತವಿರುವ : ಈ ಹಲಸಿನ ಮರವು 200 ವರ್ಷಗಳಷ್ಟು ಹಳೆಯದು ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಯ ವಿಐಪಿಯಾಗಿದೆ. ಈ ಮರದ ಮುಂದೆ ನಿಲ್ಲುವುದೇ ಒಂದು ದೊಡ್ಡ ಗೌರವ. ಅದರ ಸುತ್ತಲೂ ನಡೆಯುವುದು ದೇವರು ನೀಡಿರುವ ಒಂದು ಅದ್ಬುತ ಅವಕಾಶ ಆಗಿದೆ” ಎಂದು ಶೀರ್ಷಿಕೆ ನೀಡಿ ಅದರ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.


ಆ ಮರದಲ್ಲಿ ಹಲವಾರು ಹಲಸುಗಳು ಇರುವುದು, ಹಾಗೂ ಅವು ಸುಂದರವಾಗಿ ನೇತಾಡುತ್ತಿರುವುದನ್ನು ಕಾಣಬಹುದಾದ ವೀಡಿಯೊ ಇದಾಗಿದೆ. ಇದು ತುಂಬಾ ವಿಶಾಲವಾದ ಕೊಂಬೆ ಮತ್ತು ಕಾಂಡವನ್ನು ಹೊಂದಿದೆ.


200 oldest Jackfruit Tree in Tamilnadu, This tree goes to trend in internet, Jackfruit Tree goes to Viral, Kanaada news, karnataka news, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, 200 ವರ್ಷದ ಹಳೆಯ ಹಲಸಿನ ಮರ, ತಮಿಳುನಾಡಿನಲ್ಲಿ 200 ವರ್ಷದ ಹಳೆಯ ಮರ
200 ವರ್ಷದ ಹಳೆಯ ಹಲಸಿನ ಮರ


ಅದರ ಸುತ್ತಲೂ ಅನೇಕಾನೇಕ ಕೊಂಬೆಗಳು ಹರಡಿರುವುದು ನೋಡಿದರೆ ಸುಂದರ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಈ ವಿಡಿಯೋದಲ್ಲಿ ಮರವು ಅತ್ಯಂತ ಸುಂದರವಾಗಿ ಹಣ್ಣುಗಳಿಂದ ಕೂಡಿದ ಸಂಪದ್ಭರಿತ ಮರವಾಗಿ ಕಂಡುಬರುತ್ತದೆ.


ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (PARI) ಪ್ರಕಾರ, ಇದು ಆಯಿರಂಕಾಚಿ ಪ್ರದೇಶದಲ್ಲಿರುವ ವಿಶಾಲವಾದ, ಎತ್ತರದ ಮತ್ತು ಫಲಭರಿತವಾದ ಪಾಲಾ ಮರಮ್ (ಹಲಸು) ಮರವಾಗಿದೆ.


ಇದು ಎಷ್ಟು ಸೊಗಸಾಗಿದೆ ಎಂದರೆ ಅದರ ಕಾಂಡದ ಸುತ್ತ ನಡೆಯಲು 25 ಸೆಕೆಂಡುಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಇದರ ಹಳೆಯ ಕಾಂಡವು ಸುಮಾರು ನೂರು ಮೊನಚಾದ ಹಸಿರು ಹಣ್ಣುಗಳಿಂದ ತುಂಬಿದೆ.ಈ ವಿಡಿಯೋವನ್ನು ಹಂಚಿಕೊಂಡಾಗಿನಿಂದ,13,000 ವೀಕ್ಷಣೆಗಳನ್ನು ಮತ್ತು ನೂರಾರು ಲೈಕ್‌ಗಳನ್ನು ಪಡೆದಿದೆ. ಈ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಅನೇಕ ಟ್ವಿಟ್ಟರ್‌ ಬಳಕೆದಾರರು ಪ್ರಾಚೀನ ಮರದ ಬಗ್ಗೆ ಹೃತ್ಪೂರ್ವಕ ಧನ್ಯವಾದಗಳ ಕಮೆಂಟ್‌ಗಳನ್ನು ಮಾಡಿದ್ದಾರೆ.


ಒಬ್ಬ ಸಾಮಾಜಿಕ ಬಳಕೆದಾರರು "ಆ ಹಣ್ಣುಗಳ ರುಚಿ ನೋಡೋದೆ ದೇವರು ನಮಗೆ ನೀಡಿರುವ ಒಂದು ಆರ್ಶೀವಾದ ಆಗಿದೆ” ಎಂದು ಬರೆದುಕೊಂಡಿದ್ದಾರೆ.


ಮತ್ತೊಬ್ಬರು ಬಳಕೆದಾರರು "ಮರದ ಮುಂದೆ ನಿಲ್ಲುವುದು ಒಂದು ಗೌರವದ ಸಂಕೇತವಾಗಿದೆ. ಅದರ ಸುತ್ತಲೂ ನಡೆಯುವುದು ದೇವರು ನಮಗೆ ನೀಡಿರುವುದು ಒಂದು ಅವಕಾಶ ಆಗಿದೆ. ನಿಜಕ್ಕೂ ಧನ್ಯವಾದಗಳು, ಅಪರ್ಣಾ! ಆ ಪ್ರದೇಶದ ಸುತ್ತಮುತ್ತಲಿನ ಜನರು ಅದರ ಬಗ್ಗೆ ತುಂಬಾ ಪೊಸೆಸಿವ್ ಭಾವನೆಯನ್ನು ಹೊಂದಿದ್ದಾರೆ. ಅವರಿಗೆ, ಆ ಮರವು ಆಧ್ಯಾತ್ಮಿಕ ವಾಸ ಸ್ಥಾನವಾಗಿದೆ. ಪದಗಳಲ್ಲಿ ಆ ಮರದ ಬಗ್ಗೆ ವಿವರಿಸಲು ಸಾಧ್ಯವೇ ಇಲ್ಲ” ಎಂದು ಕಮೆಂಟ್‌ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ವಿಮಾನ ಪ್ರಯಾಣಿಕರು ಲಗೇಜ್​ ಕೊಂಡೊಯ್ಯುವ ಟೆನ್ಷನ್​ ಬಿಟ್ಟುಬಿಡಿ! ಯಾಕಂದ್ರೆ ಕಾರ್ಟರ್​ಎಕ್ಸ್​ ನಿಮಗೆ ಸಹಾಯ ಮಾಡುತ್ತೆ ನೋಡಿ


ಹಲಸಿನ ಹಣ್ಣಿನ ಬಗ್ಗೆ ಒಂದಿಷ್ಟು ಮಾತು


ಪ್ರಪಂಚದಲ್ಲಿಯೇ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳು ಅತ್ಯಂತ ದೊಡ್ಡ ಹಲಸಿನ ಹಣ್ಣುಗಳನ್ನು ನೀಡುವ ನೆಲೆಗಳಾಗಿವೆ. ಇದನ್ನು ಸಾಮಾನ್ಯವಾಗಿ "ಜಾಕ್" ಎಂದು ಕರೆಯಲಾಗುತ್ತದೆ.


ಈ ಹೆಸರು ಜಾಕಾದ ಪೋರ್ಚುಗೀಸ್‌ನ ಅನುವಾದದ ರೂಪಾಂತರವಾಗಿದೆ. ಇದು ಮಲಯಾಳಂ ಪದ "ಚಕ್ಕ" ದಿಂದ ಬಂದಿದೆ. ಆರ್ಟೊಕಾರ್ಪಸ್ ಹೆಟೆರೊಫಿಲ್ಲಸ್ ಇದರ ವೈಜ್ಞಾನಿಕ ಹೆಸರು ಎಂದು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (PARI) ಹೇಳಿದೆ.

First published: