Dead Sea: ಜಾಗೃತಿ ಮೂಡಿಸಲು ಬಂದ 200 ಮಂದಿ ತೀರದಲ್ಲಿ ನಗ್ನರಾಗಿ ಪೋಸ್ ಕೊಟ್ಟರು..!

ಡೆಡ್‌ ಸೀ ಕೆಲವು ವರ್ಷಗಳಿಂದ ಬತ್ತಿ ಹೋಗಲು ಆರಂಭಿಸಿದೆ. “Environmental Justice Atlas ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಮೃತ ಸಮುದ್ರವು ಶೇಕಡಾ 30ರ ದರದಲ್ಲಿ ಬತ್ತಿ ಹೋಗುತ್ತಿದೆ. ಈ ಕುರಿತಾಗಿ ಜಾಗೃತಿ ಮೂಡಿಸಲು ಬಂದಿದ್ದ 200 ಮಂದಿ ನಗ್ನರಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಡೆಡ್‌ ಸೀ ರಕ್ಷಣೆಗಾಗಿ ಜಾಗೃತಿ ಕಾರ್ಯಕ್ರಮ

ಡೆಡ್‌ ಸೀ ರಕ್ಷಣೆಗಾಗಿ ಜಾಗೃತಿ ಕಾರ್ಯಕ್ರಮ

  • Share this:
ಇಸ್ರೇಲಿನಲ್ಲಿ (Israel ) ಡೆಡ್‌ ಸೀ  (Dead Sea) ತೀರ ದಿನೇ ದಿನೇ ಹಿಂದಕ್ಕೆ ಹೋಗುತ್ತಿರುವುದರ ಬಗ್ಗೆ ಗಮನ ಸೆಳೆಯಲು, ಲೈವ್ ಇನ್‍ಸ್ಟಾಲೇಶನ್ ಭಾಗವಾಗಿ 200 ಮಂದಿ ನಗ್ನರಾಗಿ ಸಮುದ್ರ ತೀರದಲ್ಲಿ ಪೋಸ್ ನೀಡಿದರು. ಪರಿಸರ ಹಾನಿಯನ್ನು ಎತ್ತಿ ತೋರಿಸಲು ನಗ್ನ ಪೋಟೋ ಶೂಟ್‍ಗಳನ್ನು ಆಯೋಜಿಸುವುದಕ್ಕೆ ಹೆಸರುವಾಸಿ ಆಗಿರುವ ಕಲಾವಿದ ಸ್ಪೆನ್ಸೆರ್ ಟ್ಯೂನಿಕ್ (Spencer Tunick) ಈ ಈವೆಂಟ್‍ನ ಪರಿಕಲ್ಪನೆ ಮಾಡಿದ್ದರು. ಡೆಡ್‌ ಸೀ   ಮಿನರಲ್ ತೀರವನ್ನು ಮುಚ್ಚುವುದು, ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವುದನ್ನು ನೆನಪಿಸುವ ಕಾರ್ಯ ಮಾಡುತ್ತದೆ ಎಂದು ಟ್ಯೂನಿಕ್ ಹೇಳಿದ್ದಾರೆ. ಆ ಸ್ಥಳದ ಉದ್ದಕ್ಕೂ ದೈತ್ಯ ಸಿಂಕ್‍ ಹೋಲ್‍ಗಳು ಕಾಣಿಸಿಕೊಳ್ಳಲು ಆರಂಭವಾದ ನಂತರ ಸಮುದ್ರ ತೀರವು ಸಂದರ್ಶಕರ ಪಾಲಿಗೆ ಮುಚ್ಚಲ್ಪಟ್ಟಿತು.

ಬಿಬಿಸಿ ವರದಿಯ ಪ್ರಕಾರ, ನಗ್ನರಾಗಿ ಈ ಈವೆಂಟ್‍ನಲ್ಲಿ ಪಾಲ್ಗೊಂಡಿದ್ದ ಮಂದಿಯ ದೇಹಕ್ಕೆ ಡೆಡ್‌ ಸೀ ಉಪ್ಪಿನ ಸ್ಥಂಭಗಳಂತೆ ಬಿಳಿ ಬಣ್ಣವನ್ನು ಬಳಿಯಲಾಗಿತ್ತು. “ಇದು ದುರ್ಬಲತೆ ಮತ್ತು ದೇಹದ ಶಕ್ತಿಯ ನಡುವಿನ ದ್ವಂದ್ವ , ನನಗೆ ಅದರಲ್ಲಿ ಆಸಕ್ತಿ ಇದೆ. ನಗ್ನ ವ್ಯಕ್ತಿಯದ್ದು ಒಂದು ಶಕ್ತಿಯುತ ಅಸ್ಥಿತ್ವ, ಆದರೆ ಅದೇ ಸಮಯದಲ್ಲಿ ನಾವು ತುಂಬಾ ದುರ್ಬಲರಾಗಿದ್ದೇವೆ. ಬೆತ್ತಲೆ ಆಗುವುದು ಮಾಹಿತಿಯನ್ನು ಅಧಿಕವಾಗಿಸಬಹುದು” ಎಂದು ಕಲಾವಿದ ಸ್ಪೆನ್ಸರ್​ ಟ್ಯೂನಿಕ್ ಬಿಬಿಸಿಗೆ ಹೇಳಿದ್ದಾರೆ.

save dead see, 200 Persons Go Nude By The Dead Sea, Dead Sea To Raise Awareness About Receding Shoreline, The Dead Sea is drying up at the rate of 30%,  Israel, Dead sea, Spencer Tunic, ಇಸ್ರೇಲ್, ಮೃತ ಸಮುದ್ರ, ಸ್ಪೆನ್ಸರ್ ಟ್ಯೂನಿಕ್, 200 persons stripped by the dead sea in Israel to draw attention
ಡೆಡ್‌ ಸೀ ರಕ್ಷಣೆಗಾಗಿ ಜಾಗೃತಿ ಕಾರ್ಯಕ್ರಮ


ಕಲಾವಿದ ಸ್ಪೆನ್ಸರ್​ ಟ್ಯೂನಿಕ್ ಅವರ ಈ ಇನ್‍ಸ್ಟಾಲೇಶನ್‍ಗೆ ಕೆಲವು ಯಹೂದಿ ಸಮುದಾಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಟ್ಯೂನಿಕ್‌ರಿಗೆ ವಿವಾದಗಳು ಹೊಸತೇನಲ್ಲ.ಈ ಹಿಂದೆ ಸಾರ್ವಾಜನಿಕವಾಗಿ ನಗ್ನವಾಗುವುದನ್ನು ನಿಷೇಧಿಸಲು, ‘ಸ್ಪೆನ್ಸರ್ ಟ್ಯೂನಿಕ್’ ಮಸೂದೆಗೆ ಇಸ್ರೇಲಿ ಶಾಸಕರೊಬ್ಬರು ಒತ್ತಾಯಿಸಿದ್ದರು.

ಇದನ್ನೂ ಓದಿ: ಚುಂಬಿಸುವುದು-ಬಿಕಿನಿ ತೊಡುವುದರ ಬಗ್ಗೆ ಆಸಕ್ತಿಕರ ಹೇಳಿಕೆ ಕೊಟ್ಟ ನಟಿ Mallika Sherawat

ಅವರ ಈ ಈವೆಂಟ್‍ಗೆ ಆಕ್ಷೇಪಗಳು ವ್ಯಕ್ತವಾಗಿರುವ ಬಗ್ಗೆ ಮಾತನಾಡಿರುವ ಕಲಾವಿದ, “ನನ್ನನ್ನು ತಡೆಯಲು, ನನ್ನದೇ ಹೆಸರಿನ ಮಸೂದೆ ಹೊಂದಿರುವುದಕ್ಕೆ ನಾನು ಅದೃಷ್ಟಶಾಲಿ ಅನಿಸುತ್ತಿದೆ. ಅದೊಂದು ಗೌರವ. ಧನ್ಯವಾದಗಳು. ಆದರೆ, ನನ್ನ ಯಾವುದಾದರೂ ಒಂದು ಕೆಲಸಕ್ಕೆ ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಬೆತ್ತಲಾಗಬೇಕು ಎಂಬ ಒಂದು ಮಸೂದೆ ಇರಬೇಕು ಎಂದು ನನಗೆ ಅನಿಸುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Sneha - Prasanna: ಜಾಹೀರಾತುಗಳಿಂದಲೇ ಕೋಟಿ ಕೋಟಿ ಗಳಿಸುತ್ತಿದ್ದಾರೆ ಈ ಸ್ಟಾರ್​ ದಂಪತಿ..!

ಈ ಕಲಾವಿದನ ವೆಬ್‍ಸೈಟ್‍ನಲ್ಲಿರುವ ಮಾಹಿತಿಗಳ ಪ್ರಕಾರ, ಟ್ಯೂನಿಕ್ 1992ರಿಂದಲೂ ಫೋಟೋಗ್ರಫಿ ಮತ್ತು ವಿಡಿಯೋಗಳ ಮೂಲಕ ನೇರ ಸಾರ್ವಜನಿಕ ನಗ್ನತೆ ಪ್ರದರ್ಶನದ ದಾಖಲೆಗಳನ್ನು ಮಾಡುತ್ತಿದ್ದಾರೆ. 1994ರಿಂದ ಅವರು 100ಕ್ಕೂ ಹೆಚ್ಚು ಸ್ಥಳ - ಸಂಬಂಧಿ ತಾತ್ಕಾಲಿಕ ಇನ್‍ಸ್ಟಾಲೇಶನ್‍ಗಳನ್ನು ಆಯೋಜಿಸಿದ್ದು, ಡಜನ್‍ಗಟ್ಟಲೆ, ನೂರಾರು ಅಥವಾ ಸಾವಿರಾರು ಸ್ವಯಂ ಸೇವಕರು ಅದರಲ್ಲಿ ಪಾಲ್ಗೊಂಡಿದ್ದಾರೆ. ಅವರ ಫೋಟೋಗ್ರಾಫ್‍ಗಳು ಆ ಈವೆಂಟ್‍ಗಳ ದಾಖಲೆಗಳಾಗಿವೆ.
ಡೆಡ್‌ ಸೀ ಕೆಲವು ವರ್ಷಗಳಿಂದ ಬತ್ತಿ ಹೋಗಲು ಆರಂಭಿಸಿದೆ. “Environmental Justice Atlas ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಮೃತ ಸಮುದ್ರವು ಶೇಕಡಾ 30ರ ದರದಲ್ಲಿ ಬತ್ತಿ ಹೋಗುತ್ತಿದೆ. ಇದು ಜೋರ್ಡಾನ್, ಇಸ್ರೇಲ್ ಮತ್ತು ಪ್ಯಾಲೆಸ್ತೇನ್‍ನ ಜನರ ನೀರಿನ ಸರಬರಾಜು ವ್ಯವಸ್ಥೆಯನ್ನು ಅಪಾಯಕ್ಕೆ ತಳ್ಳುವ ಆ ನಿರ್ಜಲೀಕರಣದ ಮುನ್ಸೂಚನೆ ಮುಂದುವರಿಯುತ್ತಿದೆ ಮತ್ತು ಇನ್ನಷ್ಟು ವೇಗವಾಗುತ್ತಿದೆ. ಇಸ್ರೇಲಿ - ಪ್ಯಾಲೆಸ್ತೀನ್ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಈ ಪ್ರದೇಶದಲ್ಲಿ ನೀರು ಮತ್ತು ಇತರ ಸಂಪನ್ಮೂಲಗಳ ವಿತರಣೆಯು ನಿರಂತರ ವಿವಾದಾತ್ಮಕ ವಿಷಯವಾಗಿದೆ” ಎಂದು ವಿಶ್ವ ಆರ್ಥಿಕ ವೇದಿಕೆ ತಿಳಿಸಿದೆ.
Published by:Anitha E
First published: