ನವದೆಹಲಿ : ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಮಾತಿನಂತೆ ಪೋಷಕರು (Parents) ತಮ್ಮ ಮಕ್ಕಳು ಹೇಗಿದ್ದರೂ ಚೆನ್ನ ಎಂದು ಸಾಕಿ ಸಲಹುತ್ತಾರೆ. ಅದೇ ವಯಸ್ಸಾದ ಮೇಲೆ ಮಕ್ಕಳು ತಂದೆ-ತಾಯಿಯನ್ನು ಹಾಗೇ ನೋಡಿಕೊಳ್ಳಬೆಕಾಗಿರುವುದು ಕರ್ತವ್ಯವಾಗಿದೆ. ಆದರೆ ದೆಹಲಿಯಲ್ಲಿ (Delhi) 20 ವರ್ಷದ ಯುವಕನೊಬ್ಬ ತನ್ನ ಪಾರ್ಶ್ವವಾಯು(Paralysis) ಪೀಡಿತ ತಂದೆ ಹಾಸಿಗೆ ಮೇಲೆ ಮೂತ್ರ ಮಾಡಿಕೊಂಡರೆಂಬ ಕಾರಣಕ್ಕೆ ಕತ್ತು ಹಿಸುಕಿ ಕೊಲೆ (Murder) ಮಾಡಿದ್ದಾನೆ. ಕೊಂದಿದ್ದಲ್ಲದೆ ಅದನ್ನು ಸಹಜ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ತಾಯಿಯ ಅನುಮಾನದ ಮೇರೆಗೆ ಮರಣೋತ್ತರ ಪರೀಕ್ಷೆ ಮಾಡಿದಾಗ ಕೊಲೆ ಎಂಬುದು ಬೆಳಕಿಗೆ ಬಂದಿದೆ.
ದೆಹಲಿಯ ಆನಂದ್ ಪರ್ಬತ್ ಪ್ರದೇಶದಲ್ಲಿ ಫೆಬ್ರವರಿ 3ರಂದು ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಜಿತೇಂದ್ರ ಶರ್ಮಾಎಂಬ ವ್ಯಕ್ತಿಯ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಪೊಲೀಸರು ಸ್ಥಳವನ್ನು ತಲುಪಿದ್ದು, ಈ ವೇಳೆ ಶರ್ಮಾ ತನ್ನ ಹಾಸಿಗೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಪತ್ನಿಯ ಅನುಮಾನದ ಮೇರೆಗೆ ಶವಪರೀಕ್ಷೆ
ಮೊದಲು ಜಿತೇಂದ್ರ ಶರ್ಮಾ ಅವರ ಸಾವನ್ನು ಸಹಜ ಸಾವು ಎಂದು ನಂಬಲಾಗಿತ್ತು. ಆದರೆ ಜೀತೇಂದ್ರ ಶರ್ಮಾ ಪತ್ನಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ತನ್ನ ಮಗ ಪತಿಯನ್ನು ಕೊಲೆ ಮಾಡಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಆರ್‌ಎಂಎಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಶನಿವಾರ ಶವಪರೀಕ್ಷೆ ನಡೆಸಲಾಗಿದೆ. ಈ ವೇಳೆ ಕತ್ತು ಹಿಸುಕಿ ಕೊಂದಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟ ಮಗ
ಶವಪರೀಕ್ಷೆ ವರದಿ ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ ನೆರೆಹೊರೆಯವರನ್ನು ವಿಚಾರಣೆ ನಡೆಸಿದ್ದಾರೆ. ಮಗನ ವಿಚಾರಣೆ ವೇಳೆ ಆತ ಕೊಲೆ ಆರೋಪವನ್ನು ಬೇರೆ ಯವರ ಮೇಲೆ ಹೊರಿಸಿದ್ದಾರೆ. ಆದರೆ ನಿರಂತರ ವಿಚಾರಣೆ ಬಳಿಕ ಸತ್ಯ ಬಾಯಿ ಬಿಟ್ಟು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯ ಅಮಲಿನಲ್ಲಿ ಕೊಲೆ
ಜೀತೇಂದ್ರ ಶರ್ಮಾತ ಮದ್ಯ ವ್ಯಸನಿಯಾಗಿದ್ದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದರಿಂದ ಆಕೆ ಮನೆ ಬಿಟ್ಟು ಹೋಗಿದ್ದರು. ಅಲ್ಲಿಂದ ಅಪ್ಪ ಮಗ ಇಬ್ಬರೇ ವಾಸಿಸುತ್ತಿದ್ದರು. ಇತ್ತ ಶರ್ಮಾ ಪಾರ್ಶ್ವವಾಯುಗೆ ತುತ್ತಾದ ಮೇಲೆ ಆತನ ನೋಡಿಕೊಳ್ಳುವ ಜವಾಬ್ದಾರಿ ಮಗನ ಮೇಲಿತ್ತು. ಒಂದು ದಿನ ಅವರಿಬ್ಬರು 11 ಕ್ವಾರ್ಟರ್ ಮದ್ಯ ಸೇವಿಸಿದ್ದರು. ಅದೇ ದಿನ ಸಂಜೆ ಜೀತೇಂದ್ರ ಶರ್ಮಾ ಹಾಸಿಗೆ ಮೇಲೆ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರು. ಇದರಿಂದ ಕೋಪಗೊಂಡ ಸುಮಿತ್ ತಂದೆ ಎನ್ನುವುದನ್ನು ಕಾಣದೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಹತ್ಯೆ
ಗುಜರಾತ್ನ ಸೂರತ್ನಲ್ಲೂ ಇಂತಹದ್ದೇ ಒಂದ ಘಟನೆ ನಡೆದಿದೆ ತಂದೆ ತನ್ನ ಮಗನಿಗೆ ಲೈಟ್ ಆಫ್ ಮಾಡು ಎಂದು ಹೇಳಿದ್ದಕ್ಕೆ ಗಲಾಟೆ ಮಾಡಿಕೊಂಡಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಸಿಟ್ಟಿಗೆದ್ದ ಮಗ ತಂದೆಯನ್ನೇ ಕೊಂದಿದ್ದಾನೆ. ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಶಂಕರ್ ಮುಕಬದಿರ್ ಎಂಬಾತ ಮನೆಯಲ್ಲಿ ಲೈಟ್ ಸ್ವಿಚ್ ಆಫ್- ಆನ್ ಮಾಡುತ್ತಿದ್ದ. ಇದಕ್ಕೆ ತಂದೆ ದೀಪವನ್ನು ಪದೇ ಪದೇ ಆನ್ ಅಂಡ್ ಮಾಡಿದ್ದಕ್ಕೆ ಬೈದಿದ್ದಾರೆ. ಇದಕ್ಕೆ ಅಪ್ಪ ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಮಗನು ತನ್ನ ತಂದೆಯ ಮೇಲೆ ಮಸಾಲೆ ರುಬ್ಬುವ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಗ ಒಳಗಾದ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ