ನಿದ್ರೆಯಿಂದ ಎಬ್ಬಿಸಿದ್ದಕ್ಕೆ ಹತ್ಯೆ; 20 ವರ್ಷಗಳ ನಂತರ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮುಂಬೈ ನ್ಯಾಯಾಲಯ

20 ವರ್ಷಗಳ ಹಿಂದೆ ಅಂದರೆ 1999ರಲ್ಲಿ ರಸ್ತೆ ಪಕ್ಕ ಮಲಗಿದ್ದ ಖುಷಿ ಗಫರ್​ನನ್ನು ಅಶೋಕ್ ಯಾದವ್​ ನಿದ್ರೆಯಿಂದ ಎಬ್ಬಿಸಿದ ಎಂಬ ಒಂದೇ ಕಾರಣಕ್ಕೆ ಯಾದವ್ ಮೇಲೆ ಗಫರ್​ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿದ್ದ.

Sushma Chakre | news18
Updated:June 29, 2019, 9:03 AM IST
ನಿದ್ರೆಯಿಂದ ಎಬ್ಬಿಸಿದ್ದಕ್ಕೆ ಹತ್ಯೆ; 20 ವರ್ಷಗಳ ನಂತರ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮುಂಬೈ ನ್ಯಾಯಾಲಯ
ಸಾಂದರ್ಭಿಕ ಚಿತ್ರ.
  • News18
  • Last Updated: June 29, 2019, 9:03 AM IST
  • Share this:
ಮುಂಬೈ (ಜೂ. 29): ಕೆಲವರಿಗೆ ನಿದ್ರೆಯಿಂದ ಎಬ್ಬಿಸಿದರೆ ಇನ್ನಿಲ್ಲದ ಕೋಪ ಬರುತ್ತದೆ. ಕೋಪದಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವೂ ಅವರಿಗೆ ಇರುವುದಿಲ್ಲ. ಇದೇರೀತಿ, ನಿದ್ರೆ ಮತ್ತು ಕೋಪದ ಗುಂಗಿನಲ್ಲಿದ್ದ ಮುಂಬೈನ ವ್ಯಕ್ತಿಯೋರ್ವ ತನ್ನನ್ನು ನಿದ್ರೆಯಿಂದ ಎಬ್ಬಿಸಿದವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಆ ಘಟನೆ ನಡೆದು 20 ವರ್ಷಗಳೇ ಆಗಿವೆ. ಆದರೆ, ಇದೀಗ ಆ ಆರೋಪಿಗೆ ಮುಂಬೈ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಮುಂಬೈನ ಸಾಂತಾಕ್ರೂಸ್​ನಲ್ಲಿ 20 ವರ್ಷಗಳ ಹಿಂದೆ ಈ ಘಟನೆ ನಡೆದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಅಡಿಷನಲ್ ಸೆಷನ್ಸ್​ ಜಡ್ಜ್​ ದಿನೇಶ್​ ಕೊತಾಲಿಕರ್ ಆರೋಪಿ ಖುಷಿ ಗಫರ್​ (50) ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. 20 ವರ್ಷಗಳ ಹಿಂದೆ ಅಂದರೆ 1999ರಲ್ಲಿ ಅಶೋಕ್ ಯಾದವ್​ ತನ್ನನ್ನು ನಿದ್ರೆಯಿಂದ ಎಬ್ಬಿಸಿದ ಎಂಬ ಒಂದೇ ಕಾರಣಕ್ಕೆ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಖುಷಿ ಗಫರ್ ಕೊಲೆಗೈದಿದ್ದ. ಸಾಂತಾಕ್ರೂಸ್​ನ ರಸ್ತೆಯ ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದ ಖುಷಿ ಗಫರ್​ನನ್ನು ಅಶೋಕ್​ ಎಬ್ಬಿಸಲು ಪ್ರಯತ್ನಿಸಿದ್ದ.

ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಪುಣೆಯಲ್ಲಿ ಅಪಾರ್ಟ್​ಮೆಂಟ್ ಗೋಡೆ ಕುಸಿದು 15 ಸಾವು

ಖುಷಿ ಗಫರ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂಬ ದಾಖಲೆಗಳನ್ನು ನೀಡಿದ ಆರೋಪಿಯ ಪರ ವಕೀಲರು ಆತನ ಪರ ವಾದಿಸಿದ್ದರು. 2001ರ ವಿಚಾರಣೆ ವೇಳೆ ಗಫರ್​ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ಸಾಬೀತಾಗಿತ್ತು. ತನ್ನನ್ನು ರಕ್ಷಿಸಿಕೊಳ್ಳಲು ಆತನಿಗೆ ಸಾಧ್ಯವಿಲ್ಲದ ಕಾರಣ ಯಾರನ್ನೇ ನೋಡಿದರೂ ಅವರ ಮೇಲೆ ಹಲ್ಲೆ ಮಾಡುತ್ತಾನೆ ಎಂದು ಹೇಳಲಾಗಿತ್ತು. ಹೀಗಾಗಿ, ಕೋರ್ಟ್​ ಆತನನ್ನು ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಿತ್ತು. ಆದರೆ, ಆತ ಮಾನಸಿಕವಾಗಿ ಯಾವುದೇ ಸಮಸ್ಯೆ ಹೊಂದಿಲ್ಲ ಎಂದು ವೈದ್ಯರು ಘೋಷಿಸಿದ್ದರಿಂದ ಕೋರ್ಟ್​ ಪುನಃ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

2012ರಲ್ಲಿ ಘಟನೆಯ ವಿಚಾರಣೆ ನಡೆಸುವಾಗ ಗಫರ್​ ಒಂದಕ್ಕೊಂದು ಸಂಬಂಧವಿಲ್ಲದ ಹೇಳಿಕೆಗಳನ್ನು ನೀಡತೊಡಗಿದ್ದರಿಂದ ಮತ್ತೊಮ್ಮೆ ಮಾನಸಿಕ ಆಸ್ಪತ್ರೆಯ ವೈದ್ಯರ ಬಳಿ ಆತನನ್ನು ಕಳುಹಿಸಲಾಗಿತ್ತು. ಥಾಣೆಯ ಸೈಕಾಲಜಿ ಹೆಲ್ತ್​ ಇನ್​ಸ್ಟಿಟ್ಯೂಟ್​ನಿಂದ ಆತನಿಗೆ ಯಾವುದೇ ಸಮಸ್ಯೆಯಿಲ್ಲ ಎಂಬ ವರದಿ ಬಂದ ನಂತರ 2019ರ ಫೆಬ್ರವರಿಯಲ್ಲಿ ಮತ್ತೆ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಗಫರ್​ ಅಪರಾಧಿ ಎಂದು ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆ ಘೋಷಿಸಲಾಯಿತು.

First published:June 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading