Crime Story ಕಾರ್ಯಕ್ರಮ ನೋಡಿ ಸ್ಪೂರ್ತಿ ಪಡೆದು ಕನ್ನ ಹಾಕಿದ; ಈತ ಸಿಕ್ಕಿಬಿದ್ದ ಕಥೆಯೇ ರೋಚಕ

ಈ ಕಾರ್ಯಕ್ರಮದಿಂದ ಪ್ರಭಾವಿತನಾದ 20 ವರ್ಷದ ಹುಡುಗ ಕಳ್ಳತನ (Robbery) ಮಾರ್ಗ ಹಿಡಿದು ಸಿಕ್ಕಿ ಬಿದ್ದಿದ್ದಾನೆ. 

ಕ್ರೈಂ ಸರಣಿಯ ಪೋಸ್ಟರ್​

ಕ್ರೈಂ ಸರಣಿಯ ಪೋಸ್ಟರ್​

 • Share this:
  ನವದೆಹಲಿ (ಜ. 20):  ನಮ್ಮ ಸುತ್ತಮುತ್ತಲು ನಡೆಯುವ ಕೆಲವು ಅಪರಾಧ ಚಟುವಟಿಕೆಗಳಿಂದ ಜನರು ಜಾಗೃತಗೊಳ್ಳಲ್ಲಿ ಎಂಬ ಉದ್ದೇಶದಿಂದ ಕಿರುತೆರೆ ವಾಹಿನಿಗಳಲ್ಲಿ ಅನೇಕ ಅಪರಾಧ (Crime Story Program) ಆಧಾರಿತ ಕಾರ್ಯಕ್ರಮಗಳು ಪ್ರಸಾರವಾಗುತ್ತದೆ. ಇಂತಹ ಕಾರ್ಯಕ್ರಮಗಳಿಂದ ಕೆಲವರು ಜಾಗೃತರಾಗುತ್ತಾರೆ. ಆದರೆ, ಇಲ್ಲೊಬ್ಬ 20 ವರ್ಷದ ಹುಡುಗ ಮಾತ್ರ ಈ ಕಾರ್ಯಕ್ರಮದಿಂದ ಪ್ರಭಾವಿತನಾಗಿದ್ದು, ಕಳ್ಳತನ (Robbery) ಮಾರ್ಗ ಹಿಡಿದು, ಅದೇ ಕಾರ್ಯಕ್ರಮದಲ್ಲಿ ತನ್ನ ಕೃತ್ಯವೇ  ಬರುವಂತೆ  ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದಾನೆ. ದೂರದರ್ಶನದಲ್ಲಿ ಪ್ರಸಾರವಾಗುವ ಅಪರಾಧ ಕಾರ್ಯಕ್ರಮ 'ಸಾವಧಾನ್ ಇಂಡಿಯಾ'ದಿಂದ (savdhaan india) ಪ್ರೇರಿತರಾಗಿ ದೆಹಲಿಯ 20 ವರ್ಷದ ಯುವಕ ದರೋಡೆ ನಡೆಸಿ ಪೊಲೀಸರಿಗೆ ಸಿಕ್ಕಿಬಿದ್ದಾನೆ.  ಆರೋಪಿ ಯನ್ನು ದೆಹಲಿಯ ನಿವಾಸಿ ಮೊಹಮ್ಮದ್ ಫೈಜ್ ಎಂದು ಪೊಲೀಸರು ಗುರುತಿಸಿದ್ದಾರೆ.

  ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನಕ್ಕೆ ಸಂಚು

  ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಲಾಹೋರಿ ಗೇಟ್‌ನ ನಿವಾಸಿ 48 ವರ್ಷದ ವ್ಯಕ್ತಿ ಮೊಹಮ್ಮದ್ ಫಹಿಮುದ್ದೀನ್ ಎಂಬುವವರ ದರೋಡೆ ಸಂಬಂಧ ದೂರು ನೀಡಿದ್ದರು. ಜನವರಿ 18 ರಂದು ತಾನು ಮತ್ತು ತನ್ನ ಹೆಂಡತಿ ಬೆಳಿಗ್ಗೆ ಮನೆಯಿಂದ ಹೊರಗೆ ಹೋಗಿದ್ದೇವು. ಸಂಜೆ ಮನೆಗೆ ಬಂದಾಗ ಮುಖ್ಯ ಗೇಟ್‌ನ ಬೀಗ ಮುರಿದಿತು ಎಂದು ಆರೋಪಿಸಿದ್ದಾರೆ.

  ಅಲ್ಲದೇ ಈ ವೇಳೆ ಮನೆಯಲ್ಲಿನ 2.15 ಲಕ್ಷ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣಗಳು ಮತ್ತು ಒಂದು ಮೊಬೈಲ್ ಫೋನ್ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ತನಿಖೆ ಯನ್ನು ಪ್ರಾರಂಭಿಸಿದರು.

  ತನಿಖೆ ಆರಂಭಿಸಿದ ಪೊಲೀಸರಿಗೆ ಸಿಕ್ಕಿದ ಸುಳಿವು

  ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಘಟನಾ ಸ್ಥಳದ ಸುತ್ತಮುತ್ತ ಅಳವಡಿಸಲಾಗಿದ್ದ 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದರು.

  ಇದನ್ನು ಓದಿ: SP ಮುಖಂಡ ಅಖಿಲೇಶ್ ಯಾದವ್ ಸ್ಪರ್ಧೆ ಎಲ್ಲಿಂದ? ಇಲ್ಲಿದೆ ಮಾಹಿತಿ SP ಮುಖಂಡ ಅಖಿಲೇಶ್ ಯಾದವ್ ಸ್ಪರ್ಧೆ ಎಲ್ಲಿಂದ? ಇಲ್ಲಿದೆ ಮಾಹಿತಿ

  ಆರೋಪಿ ಪತ್ತೆ ಹಚ್ಚಿದ ಪೊಲೀಸರು

  ಈ ವೇಳೆ ಆರೋಪಿ ಚಲನವಲನ ಪತ್ತೆ ಹಚ್ಚಿನ, ಭಾರೀ ಶೋಧ ಕಾರ್ಯಾಚರಣೆಯ ನಂತರ ಆರೋಪಿಯ ಸುಳಿವು ಸಿಕ್ಕಿದೆ. ಈತನನನು ಕತ್ರಾ ಹಿಂದೂನಲ್ಲಿರುವ ಆತನ ಮನೆಯಿಂದ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ  ಆತನ ಬಳಿಯಿದ್ದ 2,15,000 ರೂಪಾಯಿ ನಗದು, ಚಿನ್ನದ ಸರ, ಒಂದು ಜೊತೆ ಚಿನ್ನದ ಕಿವಿಯೋಲೆ, ಚಿನ್ನದ ಉಂಗುರ ಹಾಗೂ ಮೊಬೈಲ್ ಅನ್ನು ಕೂಡ ಪೊಲೀಸರು ವಶಪಡಿಸಿ ಕೊಂಡಿದ್ದಾರೆ.

  ಅಪರಾಧ ಕಾರ್ಯಕ್ರಮದಿಂದ ಪ್ರೇರಿತಗೊಂಡು ಕೃತ್ಯ

  ವಿಚಾರಣೆ ವೇಳೆ ಅಪರಾಧದ ಕುರಿತು ತಪ್ಪೊಪ್ಪಿಕೊಂಡ ಆರೋಪಿ ಜನವರಿ 18ರಂದು ಸಂಜೆ  ಮನೆಯಲ್ಲಿ ದರೋಡೆ ಮಾಡಿರುವುದಾಗಿ ತಿಳಿಸಿದ್ದಾನೆ. ಜೊತೆಗೆ ಕಳ್ಳತನಕ್ಕೆ ಪ್ರೇರಣೆ ಬಿಚ್ಚಿಟ್ಟ ಆರೋಪಿ,  'ಸಾವಧಾನ್ ಇಂಡಿಯಾ'  ಕಾರ್ಯಕ್ರಮ ಮತ್ತು ಯೂಟ್ಯೂಬ್ ವೀಡಿಯೊಗಳಿಂದ ಪ್ರೇರಿತಗೊಂಡು ಈ ದರೋಡೆಗೆ ಸಂಚು ರೂಪಿಸಿದೆ. ಮನೆಯಲ್ಲಿ ಎಲ್ಲರೂ ಹೊರ ಹೋಗಿದ್ದನ್ನು ಗಮನಿಸಿದೆ. ಮನೆಯ ಕೀ ಹೋಲಿಕೆ ತಂದು, ಮಾಸ್ಕ್ ಧರಿಸಿ ಈ ಕಳ್ಳತನ ಮಾಡಿದೆ ಎಂದಿದ್ದಾನೆ.

  ಇದನ್ನು ಓದಿ: ವಿಶ್ವದೆಲ್ಲೆಡೆ ತಮ್ಮ ಉದ್ಯೋಗಗಳಿಗೆ ರಾಜೀನಾಮೆ ನೀಡುತ್ತಿರುವ ಜನರು: ಏಕೆ ಗೊತ್ತಾ..?

  ಮದುವೆಯಾಗುವ ಉದ್ದೇಶದಿಂದ ಕಳ್ಳತನ ಎಸಗಿದ ಆರೋಪಿ

  ಇನ್ನು ಆರೋಪಿ ಸಣ್ಣ ಉದ್ಯೋಗ ಮಾಡುತ್ತಿದ್ದು, ಕೇವಲ 8 ಸಾವಿರ ವೇತನ ಪಡೆಯುತ್ತಿದ್ದೆ. ಈ ವೇತನದಿಂದ ಜೀವನ ಸಾಗುತ್ತಿರಲಿಲ್ಲ ಜೊತೆಗೆ ಇದೇ ಪ್ರೇಮಿಗಳ ದಿನದಂದ ನಾನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದೆ. ನನ್ನ ಬಳಿ ಯಾವುದೇ ಉಳಿತಾಯದ ಆದಾಯ ಇರಲಿಲ್ಲ. ಈ ಹಿನ್ನಲೆ ಈ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾನೆ. ಈ ಪ್ರಕರಣ ಸಂಬಂಧ ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
  Published by:Seema R
  First published: