HOME » NEWS » National-international » 20 YEAR OLD STABS FATHER AND GRANDFATHER TO DEATH THEN JUMPS OFF MUMBAI FLAT LG

Crime News:ಅಪ್ಪ-ಅಜ್ಜನನ್ನು ಬರ್ಬರವಾಗಿ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ...!

ಮನೆಗೆಲಸದವನಾದ ಕಂಬ್ಲೆ ಬಾತ್​ರೂಂನಲ್ಲಿ ಬಚ್ಚಿಟ್ಟುಕೊಂಡಿದ್ದ. ಇದಾದ ಬಳಿಕ ಶಾರ್ದೂಲ್ ಬಾಲ್ಕನಿಗೆ ಬಂದು ಕೆಳಗೆ ಜಿಗಿದಿದ್ದಾನೆ. ಇವರು 6ನೇ ಮಹಡಿಯಲ್ಲಿ ವಾಸವಿದ್ದರು. ಶಾರ್ದೂಲ್ ರಕ್ತಸಿಕ್ತನಾಗಿ ಬಿದ್ದಿದ್ದ ಎಂದು ಪೊಲೀಸರು ಹೇಳಿದ್ದಾರೆ.

news18-kannada
Updated:March 7, 2021, 3:56 PM IST
Crime News:ಅಪ್ಪ-ಅಜ್ಜನನ್ನು ಬರ್ಬರವಾಗಿ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ...!
ಸಾಂದರ್ಭಿಕ ಚಿತ್ರ
  • Share this:
ಮುಂಬೈ(ಮಾ.07): ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 20 ವರ್ಷದ ಯುವಕನೋರ್ವ ತನ್ನ ತಂದೆ ಮತ್ತು ಅಜ್ಜನನ್ನು ಕೊಲೆ ಮಾಡಿ, ಬಳಿಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಶಾರ್ದುಲ್ ಮಂಗ್ಲೆ ಎಂಬಾತ ಕೊಲೆ ಮಾಡಿದ ಆರೋಪಿ. ಈತ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕೆ ತನ್ನ 55 ವರ್ಷದ ತಂದೆ ಹಾಗೂ 85 ವರ್ಷದ ತಾತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಅಪಾರ್ಟ್​​ಮೆಂಟ್​ನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾರ್ದುಲ್​​ನ ಮನೆಕೆಲಸದವನಾದ ಕಂಬ್ಲೆ, ಶಾರ್ದುಲ್​​ಗೆ ಆನ್​ಲೈನ್ ಕ್ಲಾಸ್ ಅಟೆಂಡ್ ಮಾಡುವಂತೆ ಹೇಳಿ, ಕಾಫಿ ಮಾಡಲು ಅಡುಗೆ ಮನೆಗೆ ಹೋಗಿದ್ದಾನೆ. ಇದು ಶಾರ್ದೂಲ್​ನನ್ನು ಕೆರಳಿಸಿದೆ. ಆಗ ಆತ ಅಡುಗೆ ಮನೆಗೆ ಹೋಗಿ ಚಾಕುವನ್ನು ತೆಗೆದುಕೊಂಡು ತನ್ನ ತಂದೆ ಮಿಲಿಂದ್​​ನ ಗಂಟಲನ್ನು ಸೀಳಿದ್ದಾನೆ. ಇದರಿಂದ ತಪ್ಪಿಸಿಕೊಳ್ಳಲು ಮುಂದಾದರೂ ಸಹ ಬಿಡದ ಶಾರ್ದೂಲ್​ ಹಲವು ಬಾರಿ ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾನೆ. ಬಳಿಕ ಹಾಸಿಗೆ ಹಿಡಿದು ಮಲಗಿದ್ದ ತನ್ನ ಅಜ್ಜನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ ಎಂದು ಮುಲುಂದ್ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಹರಕೆ ತೀರುವವರೆಗೆ ದೇವರಿಗೆ ಬೀಗ ಹಾಕೋ ಭಕ್ತರು; ಇದು ವಿಚಿತ್ರವಾದ್ರೂ ಸತ್ಯ..!

ಮನೆಗೆಲಸದವನಾದ ಕಂಬ್ಲೆ ಬಾತ್​ರೂಂನಲ್ಲಿ ಬಚ್ಚಿಟ್ಟುಕೊಂಡಿದ್ದ. ಇದಾದ ಬಳಿಕ ಶಾರ್ದೂಲ್ ಬಾಲ್ಕನಿಗೆ ಬಂದು ಕೆಳಗೆ ಜಿಗಿದಿದ್ದಾನೆ. ಇವರು 6ನೇ ಮಹಡಿಯಲ್ಲಿ ವಾಸವಿದ್ದರು. ಶಾರ್ದೂಲ್ ರಕ್ತಸಿಕ್ತನಾಗಿ ಬಿದ್ದಿದ್ದ ಎಂದು ಪೊಲೀಸರು ಹೇಳಿದ್ದಾರೆ.
Youtube Video

ಶಾರ್ದೂಲ್​ನ ತಂದೆ-ತಾಯಿ ಬೇರೆ-ಬೇರೆಯಾಗಿದ್ದರು. ಹೀಗಾಗಿ ಈತ ತಂದೆ ಹಾಗೂ ಹಾಸಿಗೆ ಹಿಡಿದಿದ್ದ ತಾತನ ಜೊತೆ ವಾಸವಿದ್ದ. ಈತನ ತಾಯಿ ಮತ್ತು ತಂಗಿ ಗಟ್ಕೋಪರ್​​ನಲ್ಲಿ ವಾಸವಿದ್ದರು.
Published by: Latha CG
First published: March 7, 2021, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories