ಜಾಜ್ಪುರ್, ಒಡಿಶಾ : ಸಮಾಜ ತಲೆ ತಗ್ಗಿಸುವಂತಹ ಹಾಗೂ ಆಘಾತಕಾರಿ ಘಟನೆ (Shocking Incident) ಒಡಿಶಾದಲ್ಲಿ (Odisha) ನಡೆದಿದೆ. 20 ವರ್ಷದ ಯುವಕನೊಬ್ಬ ತನ್ನ ತಂದೆಯನ್ನು (Father) ಇರಿದು ಕೊಂದು, ಮಲತಾಯಿ (Stepmother) ಮೇಲೆ ಅತ್ಯಾಚಾರ ಎಸಗಿರುವ ದಾರುಣ ಘಟನೆ ಒಡಿಶಾದ ಜಾಜ್ಪುರ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಕೌಟುಂಬಿಕ ಕಲಹದ (Family Dispute) ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ವರದಿಯ ಪ್ರಕಾರ ಆರೋಪಿ ಲುಗು ಹೆಂಬ್ರಮ್ ಎಂಬ ಯುವಕ ಆತನ ತಂದೆ 65 ವರ್ಷದ ಸದೈ ಹೆಂಬ್ರಾಮ್ರನ್ನು ಹತ್ಯೆ ಮಾಡಿದ್ದಾನೆ. ಲುಗು ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ, ಅವನ ಮಲತಾಯಿ ತನ್ನ ತಂದೆಯೊಂದಿಗೆ ಇರುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಇದೇ ವಿಚಾರಕ್ಕೆ ಪ್ರತಿ ದಿನ ಇಬ್ಬರ ನಡುವೆ ನಿರಂತರವಾಗಿ ಜಗಳ ನಡೆಯುತ್ತಿತ್ತು. ತನ್ನ ತಂದೆಯೊಂದಿಗೆ ಇರಲು ಮಲತಾಯಿ ಅವಕಾಶ ನೀಡದ ಕಾರಣ ಯುವಕ ಬೇರೆ ಗ್ರಾಮದಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.
ಅಸಭ್ಯ ವರ್ತನೆ ಪ್ರಶ್ನಿಸಿದ್ದಕ್ಕೆ ತಂದೆಯ ಕೊಲೆ
ಆದರೆ ಭಾನುವಾರ ರಾತ್ರಿ ತಂದೆಯ ಮನೆಗೆ ಯುವಕ ಹೋಗಿದ್ದಾನೆ. ಈ ವೇಳೆ ತನ್ನ ಮಲತಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಶುರುಮಾಡಿದ್ದು, ತಂದೆ ಮಗನನ್ನು ಪ್ರಶ್ನಿಸಿ ಪತ್ನಿಯ ನೆರವಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಯುವಕ ತನ್ನ 65 ವರ್ಷದ ತಂದೆಯನ್ನು ಹರಿತವಾದ ಆಯುಧದಿಂದ ಇರಿದು ಕೊಂದಿದ್ದಾನೆ.
ಇದನ್ನೂ ಓದಿ: Crime News: ಚಪ್ಪಲಿ ಬಿಡುವ ವಿಚಾರಕ್ಕೆ ಮಾರಾಮಾರಿ, ಪಕ್ಕದ ಮನೆಯವನನ್ನೇ ಕೊಂದ ದಂಪತಿ!
ಮಲತಾಯಿ ಮೇಲೆ ಅತ್ಯಾಚಾರ
ತಂದೆಯನ್ನು ಕೊಂದಿದ್ದಲ್ಲದೆ ಆರೋಪಿ ಯುವಕ ನಂತರ ತನ್ನ 50 ವರ್ಷದ ಮಲತಾಯಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಅತ್ಯಾಚಾರ ಸಂತ್ರಸ್ತೆ ಸೋಮವಾರ ಟೊಮ್ಕಾ ಪೊಲೀಸರಿಗೆ ದೂರು ನೀಡಿದ್ದು, " ಭಾನುವಾರ ರಾತ್ರಿ ತಮ್ಮ ಮಲಮಗ ತನ್ನ ಪತಿಯನ್ನು ಕೊಂದು, ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ " ಎಂದು ದೂರು ನೀಡಿದ್ದಾಳೆ. ಮಹಿಳೆ ನೀಡಿರುವ ದೂರಿನ ಮೇಲೆ ಸೋಮವಾರ ಆರೋಪಿಯನ್ನು ಬಂಧಿಸಲಾಗಿದೆ.
ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ
ಸಂತ್ರಸ್ತೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿ ಮತ್ತು ಅತ್ಯಾಚಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಗೆ ಕೌಟುಂಬಿಕ ಕಲಹ ಕಾರಣ?
ಕೊಲೆ ಮತ್ತು ಅತ್ಯಾಚಾರಕ್ಕೆ ನೈಜ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಆರೋಪಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದೇವೆ. ಕೌಟುಂಬಿಕ ಕಲಹವೇ ಆರೋಪಿ ಮತ್ತು ಆತನ ಮಲತಾಯಿಯ ನಡುವೆ ವೈಷಮ್ಯಕ್ಕೆ ಕಾರಣವಾಗಿರಬಹುದು ಎಂದು ನಾವು ಅನುಮಾನಿಸುತ್ತಿದ್ದೇವೆ. ಏಕೆಂದರೆ ಆಕೆ ಯುವಕನನ್ನು ತಂದೆಯೊಂದಿಗೆ ಮನೆಯಲ್ಲಿ ವಾಸಿಸಲು ಬಿಡುತ್ತಿರಲಿಲ್ಲ ಎಂದು ತಿಳಿದುಬಂದಿದೆ ಎಂದು ಟೊಮ್ಕಾ ಪೊಲೀಸ್ ಠಾಣೆಯ ಅಧಿಕಾರಿ ಎಸ್ ಕೆ ಪಾತ್ರ ತಿಳಿಸಿದ್ದಾರೆ.
ಸೊಸೆಯನ್ನೇ ಪಟಾಯಿಸಿ ಎಸ್ಕೇಪ್ ಆದ ಮಾವ
ಮಗನ ಹೆಂಡತಿಯನ್ನೇ ಪಟಾಯಿಸಿದ ವ್ಯಕ್ತಿ ತನ್ನ ಸೊಸೆಯೊಂದಿಗೆ ಪರಾರಿಯಾಗಿರುವ ಘಟನೆ ರಾಜಸ್ಥಾನದ ಬುಂಡಿ ಜಿಲ್ಲೆಯ ಸದಾರ್‌ನ ಸಿಲೋರ್ ಗ್ರಾಮದಲ್ಲಿ ನಡೆದಿದೆ. ತನ್ನ ಹೆಂಡತಿಯನ್ನು ಕರೆದುಕೊಂಡು ಪರಾರಿಯಾದ ಅಪ್ಪನ ವಿರುದ್ಧ ಮಗ ಪೊಲೀಸರಿಗೆ ದೂರು ನೀಡಿದ್ದು, ಜೊತೆಗೆ ಪರಾರಿಯಾಗಲು ತನ್ನ ಬೈಕ್‌ನ್ನು ಕೂಡ ಕಳವು ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.
ತಂದೆ ವಿರುದ್ಧ ಮಗ ದೂರು
ಸಂತ್ರಸ್ತ ವಿವಾಹಿತ ಪವನ್ ವೈರಾಗಿ ತನ್ನ ಹೆಂಡತಿಯ ಜೊತೆ ಪಲಾಯನಗೈದ ತಂದೆ ರಮೇಶ್ ವೈರಾಗಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ತನ್ನ ಪತ್ನಿಗೆ ಆಮೀಷವೊಡ್ಡಿ ಆಕೆಯನ್ನು ತನ್ನಿಂದ ದೂರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಪವನ್‌ಗೆ ಆರು ತಿಂಗಳ ಹೆಣ್ಣು ಮಗು ಇದ್ದು, ತನ್ನ ತಂದೆ ಈ ಹಿಂದಿನಿಂದಲೂ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು. ಆದರೆ ತಾನು ದೂರು ನೀಡಿದರೂ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾನೆ.
ತನ್ನ ಹೆಂಡತಿ ಬಹಳ ಮುಗ್ದೆಯಾಗಿದ್ದು, ಆಕೆಯನ್ನು ತಂದೆ ಮೋಸದಿಂದ ತನ್ನ ಜಾಲಕ್ಕೆ ಬೀಳಿಸಿಕೊಂಡಿದ್ದಾರೆ. ತಾನು ಕೆಲಸದ ಕಾರಣಕ್ಕೆ ಮನೆಗೆ ಅಪರೂಪವಾಗಿ ಹೋಗುತ್ತಿದ್ದೆ. ಈ ಅವಧಿಯಲ್ಲಿ ತನ್ನ ತಂದೆಯೇ ನನಗೆ ಮೋಸ ಮಾಡಿದ್ದಾನೆ ಎಂದು ಪವನ್ ವೈರಾಗಿ ನೋವು ತೋಡಿಕೊಂಡಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ