ದನದ ಕಳ್ಳನೆಂದು ಯುವಕನನ್ನು ಥಳಿಸಿ ಸಾಯಿಸಿದ ಗ್ರಾಮಸ್ಥರು

news18
Updated:August 30, 2018, 5:16 PM IST
ದನದ ಕಳ್ಳನೆಂದು ಯುವಕನನ್ನು ಥಳಿಸಿ ಸಾಯಿಸಿದ ಗ್ರಾಮಸ್ಥರು
news18
Updated: August 30, 2018, 5:16 PM IST
-ನ್ಯೂಸ್​ 18 ಕನ್ನಡ

ಲಕ್ನೋ,(ಆ.30):  ದನದ ಕಳ್ಳನೆಂದು ಅನುಮಾನಿಸಿ  20 ವರ್ಷದ ಮುಸ್ಲಿಂ ಯುವಕನ ಮೇಲೆ 50 ಜನರ ಗೊಂಪೊಂದು ಥಳಿಸಿ ಸಾಯಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಭೋಲಾಪುರ ಹಿಂಡೋಲಿ ಗ್ರಾಮದಲ್ಲಿ ನಡೆದಿದೆ. 

ಶಾರುಖ್​ ಖಾನ್ ಮೃತ ಯುವಕ. ಖಾನ್​ ತನ್ನ ಮೂವರು ಗೆಳೆಯರೊಂದಿಗೆ ಹಸುಗಳನ್ನು ಕದಿಯಲು ಮುಂದಾಗಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  ಖಾನ್​ ನ ಮೂವರು ಸ್ನೇಹಿತರು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಮೃತನ ಗೆಳೆಯರು ಮತ್ತು 30 ಜನ ಅಪರಿಚಿತ ಗ್ರಾಮಸ್ಥರ ಮೇಲೆ ಎಫ್​ಐಆರ್​ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಆ ಯುವಕ ಇನ್ನೂ ಜೀವಂತವಾಗಿದ್ದ. ನಂತರ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತಾದರೂ  ಮೃತಪಟ್ಟಿದ್ದಾನೆ ಎಂದು ಬರೇಲಿ ಎಸ್ಪಿ  ಅಭಿನಂದನ್​ ತಿಳಿಸಿದ್ದಾರೆ. ಮೃತ ಯುವಕ ಮತ್ತು ಆತನ ಮೂವರು ಗೆಳೆಯರು ಸುಮಾರು ಮುಂಜಾನೆ 3 ಗಂಟೆ ವೇಳೆಗೆ ಎಮ್ಮೆ ಕದಿಯಲು ಹೋದಾಗ ರೈತನ ಕಣ್ಣಿಗೆ ಬಿದ್ದಿದ್ದಾರೆ. ಆಗ ಗ್ರಾಮಸ್ಥರು ಅವರನ್ನು ಹಿಡಿಯಲು ಹೋದಾಗ, ಶಾರುಖ್​ ಖಾನ್​ ನ ಮೂವರು ಗೆಳೆಯರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಖಾನ್​ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸುಮಾರು 50 ಮಂದಿ ಗ್ರಾಮಸ್ಥರು ಆ ಯುವಕನನ್ನು ಥಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ವಿಪರೀತ ಗಾಯಗೊಂಡ ಯುವಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಖಾನ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

'

ಪಕ್ಕದ ಗ್ರಾಮದ ತನ್ನ ಚಿಕ್ಕಮ್ಮನ ಮನೆಗೆ ಹೋಗಬೇಕೆಂದು ಶಾರುಖ್​ ಪದೇ ಪದೇ ಕೇಳುತ್ತಿದ್ದ. ಆದರೆ ಮನೆಯಲ್ಲಿ ಪೋಷಕರು ಆತನನ್ನು ಹೊರಗೆ ಹೋಗಲು ಬಿಟ್ಟಿರಲಿಲ್ಲ. ಆತನ ಸ್ನೇಹಿತರ ಜೊತೆ ಹೋಗಿ ಈ ದುರಂತ ಸಂಭವಿಸಿದೆ ಎಂದು ಹೇಳುತ್ತಾ ಮೃತನ ಸಹೋದರ ವಾಸಿಂ ಖಾನ್​ ದುಃಖಿತರಾದರು.
Loading...

ಶಾರುಖ್ ದುಬೈನಲ್ಲಿ ತನ್ನ ಚಿಕ್ಕಪ್ಪನ ಜೊತೆ ದರ್ಜಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಬರೇಲಿಗೆ ಬಂದಿದ್ದ ಎನ್ನಲಾಗಿದೆ.  
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626