ಮೈಕ್ರೋಸಾಫ್ಟ್‌ನ ಅಜೂರ್ ಕ್ಲೌಡ್ ಸಿಸ್ಟಮ್‌ನಲ್ಲಿ ದೋಷವನ್ನು ಗುರುತಿಸಿದ್ದಕ್ಕಾಗಿ ದೆಹಲಿಯ 20 ವರ್ಷದ ಎಥಿಕಲ್ ಹ್ಯಾಕರ್ ಅದಿತಿ ಸಿಂಗ್ ಗೆ 30,000 ಡಾಲರ್ (ಅಂದಾಜು 22 ಲಕ್ಷ ರೂ.) ಬಹುಮಾನ ನೀಡಲಾಗಿದೆ. ಅಷ್ಟೇ ಅಲ್ಲ, ಎರಡು ತಿಂಗಳ ಹಿಂದೆ, ಅದಿತಿ ಫೇಸ್‌ಬುಕ್‌ನಲ್ಲಿ ಇದೇ ರೀತಿಯ ದೋಷವನ್ನು ಪತ್ತೆಹಚ್ಚಿದ್ದಕ್ಕೆ ಯುವತಿ 7500 ಡಾಲರ್ ಬಹುಮಾನ (ಅಂದಾಜು 5.5 ಲಕ್ಷ ರೂ.) ಗೆದ್ದಿದ್ದರು. ಎರಡೇ ತಿಂಗಳಲ್ಲಿ ಸುಮಾರು 27.5 ಲಕ್ಷ ರೂ. ಬಹುಮಾನವನ್ನು ಗೆದ್ದುಕೊಂಡಿದ್ದಾರೆ ಅದಿತಿ ಸಿಂಗ್. ಈ ದೋಷಗಳ ಬಗ್ಗೆ 20 ವರ್ಷದ ಯುವತಿ ವಿವರಿಸಿದ್ದು ಹೀಗೆ..
ಎರಡೂ ಕಂಪೆನಿಗಳು ರಿಮೋಟ್ ಎಕ್ಸಿಕ್ಯೂಶನ್ ಬಗ್ (ಆರ್‌ಸಿಇ) ಯನ್ನು ಹೊಂದಿದ್ದು ಅದು ತುಲನಾತ್ಮಕವಾಗಿ ಹೊಸದಾಗಿದೆ ಮತ್ತು ಪ್ರಸ್ತುತ ಅದರ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಿಲ್ಲ ಎಂದು ಅವರು ವಿವರಿಸಿದರು.
ಅಂತಹ ದೋಷಗಳ ಮೂಲಕವೇ ಹ್ಯಾಕರ್‌ಗಳು ಆಂತರಿಕ ವ್ಯವಸ್ಥೆಗಳಿಗೆ ಪ್ರವೇಶವನ್ನು ಪಡೆಯಬಹುದು ಮತ್ತು ಖಾಸಗಿ ಮಾಹಿತಿಯನ್ನು ಪಡೆಯಬಹುದು ಎಂದು ಹೇಳಿದ್ದಾರೆ.
ಎರಡು ತಿಂಗಳ ಹಿಂದೆಯೇ ನಾನು ದೋಷವನ್ನು ಕಂಡುಕೊಂಡ ಬಳಿಕ ಮೈಕ್ರೋಸಾಫ್ಟ್‌ಗೆ ಇದರ ಬಗ್ಗೆ ಎಚ್ಚರಿಸಿದ್ದೆ. ಆದರೆ ವ್ಯವಸ್ಥೆಯ ಅಸುರಕ್ಷಿತ ಆವೃತ್ತಿಯನ್ನು ಯಾರಾದರೂ ಡೌನ್‌ಲೋಡ್ ಮಾಡಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದ ಕಂಪನಿ ತಕ್ಷಣ ಕಾಯಲಿಲ್ಲ ಎಂದು ಅದಿತಿ ಹೇಳಿರುವ ಬಗ್ಗೆ ಇಂಡಿಯಾ ಟುಡೆ ವರದಿ ತಿಳಿಸಿದೆ.
ಡೆವಲಪರ್‌ಗಳು ಮೊದಲು ಕೋಡ್ ಅನ್ನು ನೇರವಾಗಿ ಬರೆಯುವ ಬದಲು ನೋಡ್ ಪ್ಯಾಕೇಜ್ ಮ್ಯಾನೇಜರ್ (NPM) ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಡೆವಲಪರ್‌ಗಳು NPM ಹೊಂದಿದ ನಂತರವೇ ಕೋಡ್‌ಗಳನ್ನು ಬರೆಯಬೇಕು ಎಂದು ದೆಹಲಿ ಮೂಲದ ಹ್ಯಾಕರ್ ಅದಿತಿ ಸಿಂಗ್ ಆರ್‌ಸಿಇ ದೋಷದ ಹಿಂದಿನ ಕಾರಣವನ್ನು ವಿವರಿಸಿದರು.
ಅಂತಹ ದೋಷಗಳನ್ನು ಗುರುತಿಸುವುದು ಸುಲಭವಲ್ಲ ಮತ್ತು ನೈತಿಕ ಹ್ಯಾಕರ್‌ಗಳು ಯಾವಾಗಲೂ ತಮ್ಮ ಗೇಮ್‌ನಲ್ಲಿ ಟಾಪ್‌ನಲ್ಲಿರಬೇಕು. ಇದರಿಂದ ಅವರು ಕಂಪನಿಗಳ ಸಾಫ್ಟ್‌ವೇರ್ ದೋಷದ ಬಗ್ಗೆ ರಿಪೋರ್ಟ್ ಮಾಡಬಹುದು ಮತ್ತು ಅವರು ಪಾವತಿಗಳಿಗೆ ಅರ್ಹರಾಗಿರುತ್ತಾರೆ ಎಂದು ಅದಿತಿ ಸಿಂಗ್ ಹೇಳಿದರು. ಆದರೂ, ಹ್ಯಾಕರ್‌ಗಳು ಕೇವಲ ಹಣವನ್ನು ಗಳಿಸುವುದರ ಮೇಲೆ ಕೇಂದ್ರೀಕರಿಸುವ ಬದಲು ಜ್ಞಾನವನ್ನು ಪಡೆದುಕೊಳ್ಳುವುದು ಮತ್ತು ನೈತಿಕ ಹ್ಯಾಕಿಂಗ್ ಬಗ್ಗೆ ಕಲಿಯುವ ಅಗತ್ಯತೆಯ ಬಗ್ಗೆಯೂ ಹೇಳಿದರು.
ದೋಷವನ್ನು ಪತ್ತೆಹಚ್ಚಲು ಪ್ರಾರಂಭಿಸುವ ಮೊದಲು, ಆ ಕಂಪನಿಯ ಸಪೋರ್ಟ್ ಟೀಂ ಅನ್ನು ಹ್ಯಾಕರ್‌ಗಳು ಬೌಂಟಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೀರಾ ಎಂದು ಕೇಳಬೇಕು ಮತ್ತು ಅಂತಹ ಕಾರ್ಯಕ್ರಮದ ಬಗ್ಗೆ ಆ ಕಂಪನಿಯು ದೃಢಪಡಿಸಿದರೆ ಬೌಂಟಿ ಹಂಟರ್‌ಗಳು ಬಗ್ ಅಥವಾ ದೋಷಗಳನ್ನು ಕಂಡುಕೊಳ್ಳಲು ಮುಂದುವರಿಯಬಹುದು ಎಂದು ಅದಿತಿ ಸಿಂಗ್ ಸೂಚಿಸುತ್ತಾರೆ.
ಬಗ್ ಬೌಂಟಿ ಹಂಟರ್‌ಗಳು ಹೆಚ್ಚಾಗಿ ಪ್ರಮಾಣೀಕೃತ ಸೈಬರ್ ಸೆಕ್ಯುರಿಟಿ ವೃತ್ತಿಪರರು ಅಥವಾ ಭದ್ರತಾ ಸಂಶೋಧಕರಾಗಿರುತ್ತಾರೆ. ಅವರು ವೆಬ್‌ನಲ್ಲಿ ದೋಷಗಳು ಅಥವಾ ನ್ಯೂನತೆಗಳಿಗಾಗಿ ವ್ಯವಸ್ಥೆಗಳನ್ನು ಸ್ಕ್ಯಾನ್ ಮಾಡುತ್ತಾರೆ. ಈ ಬಗ್‌ಗಳ ಮೂಲಕ ಹ್ಯಾಕರ್‌ಗಳು ನುಸುಳಬಹುದು ಮತ್ತು ಕಂಪನಿಗಳನ್ನು ಎಚ್ಚರಿಸಬಹುದು. ಅವರು ಯಶಸ್ವಿಯಾದರೆ, ಅವರಿಗೆ ನಗದು ಬಹುಮಾನ ನೀಡಲಾಗುತ್ತದೆ.
ತನ್ನ ನೆರೆ ಮನೆಯ ವೈ-ಫೈ ಪಾಸ್‌ವರ್ಡ್ ಅನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಅದಿತಿ ಸಿಂಗ್ ಮೊದಲ ಹ್ಯಾಕಿಂಗ್ ಅನುಭವ. ಈಗ ಸುಮಾರು ಎರಡು ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಯುವತಿ ಹೇಳಿಕೊಂಡಿದ್ದಾಳೆ.
ನೈತಿಕ ಹ್ಯಾಕಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಜನರು ಆನ್‌ಲೈನ್‌ನಲ್ಲಿ ಲಭ್ಯವಿರುವ ಬಹು ಸಂಪನ್ಮೂಲಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ಯುವತಿ ಹಂಚಿಕೊಂಡಿದ್ದು, ಸುಧಾರಿತ ಹ್ಯಾಕಿಂಗ್‌ಗೆ ಬರಲು ಒಬ್ಬರು ಪ್ರೋಗ್ರಾಮಿಂಗ್ ಭಾಷೆಯನ್ನು ತಿಳಿದಿರಬೇಕು. ನೈತಿಕ ಹ್ಯಾಕಿಂಗ್ ಪ್ರಮಾಣಪತ್ರ ಕೋರ್ಸ್‌ನ ಒಎಸ್‌ಸಿಪಿಯನ್ನು ಸಹ ಹೊಂದಿರುವುದು ಒಳ್ಲೆಯದು ಎಂದು ದೆಹಲಿಯ ಮೂಲದ ಎಥಿಕಲ್ ಹ್ಯಾಕರ್ ಅದಿತಿ ಸಿಂಗ್ ಸೂಚಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ