60 ವರ್ಷದ ಮಹಿಳೆಗೆ ತಾಳಿ ಕಟ್ಟಿದ 20ರ ಯುವಕ; ಇದು ರಾಂಗ್ ​ನಂಬರ್​ನಿಂದ ಶುರುವಾದ ಲವ್ ಸ್ಟೋರಿ!

60 ವರ್ಷದ ವಿಧವೆ ಕೇಸರವತಿ ಮತ್ತು 20 ವರ್ಷದ ರಾಕೇಶ್ ಪಾಲ್ ನಡುವೆ ಫೋನ್ ಕಾಲ್ ಮೂಲಕ ಪ್ರೀತಿ ಬೆಳೆದಿತ್ತು. ಕೇಸರವತಿ ಬಳಿ ಪ್ರೇಮ ನಿವೇದನೆ ಮಾಡಿದ್ದ ರಾಕೇಶ್ ಪಾಲ್ ಆಕೆಯನ್ನು ಮದುವೆಯಾಗಿದ್ದಾನೆ.

Sushma Chakre | news18-kannada
Updated:January 21, 2020, 9:58 AM IST
60 ವರ್ಷದ ಮಹಿಳೆಗೆ ತಾಳಿ ಕಟ್ಟಿದ 20ರ ಯುವಕ; ಇದು ರಾಂಗ್ ​ನಂಬರ್​ನಿಂದ ಶುರುವಾದ ಲವ್ ಸ್ಟೋರಿ!
ಕೇಸರವತಿಯನ್ನು ಮದುವೆಯಾದ ರಾಕೇಶ್ ಪಾಲ್
  • Share this:
ರಾಮಪುರ್ (ಜ.21): ಎಲ್ಲೋ ಇದ್ದವರು ಹೇಗೋ ಪರಿಚಯವಾಗಿ ಮದುವೆಯಾಗುತ್ತಾರೆ. ಅಪರಿಚಿತರಾದವರು ಜೀವನಪೂರ್ತಿ ಒಟ್ಟಿಗೇ ಗಂಡ-ಹೆಂಡತಿಯಾಗಿ ಬದುಕು ಸಾಗಿಸುತ್ತಾರೆ. ಇದೇ ಕಾರಣಕ್ಕೆ ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಹಾಗೇ, ಪ್ರೀತಿ ಕುರುಡು ಎಂಬ ಮಾತು ಕೂಡ ಇದೆ. ಉತ್ತರ ಪ್ರದೇಶದ ಜೋಡಿಯೊಂದು ಈ ಮಾತನ್ನು ನಿಜವಾಗಿಸಿದೆ.

ಉತ್ತರ ಪ್ರದೇಶದ ರಾಮಪುರದಲ್ಲಿ 20 ವರ್ಷದ ಯುವಕನೊಬ್ಬ 60 ವರ್ಷದ ವಿಧವೆಯನ್ನು ಪ್ರೀತಿಸಿ, ಆಕೆಗೆ ತಾಳಿ ಕಟ್ಟುವ ಮೂಲಕ ಭಾರೀ ಸುದ್ದಿಯಾಗಿದ್ದಾನೆ. ರಾಮಪುರದ ಜಠಪುರದಲ್ಲಿ ಸದ್ಯಕ್ಕೀಗ ಇದರ ಬಗ್ಗೆಯೇ ಬಿಸಿಬಿಸಿ ಚರ್ಚೆ. ಅಷ್ಟಕ್ಕೂ ಇದು ಹೇಗೆ ಸಾಧ್ಯವಾಯಿತು? ಎಂದು ಗೊತ್ತಾದರೆ ನೀವು ಕೂಡ ಆಶ್ಚರ್ಯ ಪಡುತ್ತೀರಿ. ಇದೆಲ್ಲ ಆಗಿದ್ದು ಒಂದು ಮಿಸ್​ಕಾಲ್​ನಿಂದ ಎಂಬುದು ಇನ್ನೂ ವಿಶೇಷವಾದ ಸುದ್ದಿ.

ರಾಂಗ್​ ನಂಬರ್​ನಿಂದ ಶುರುವಾದ ಪ್ರೀತಿ ಆ ಇಬ್ಬರನ್ನೂ ಈಗ ದಾಂಪತ್ಯ ಜೀವನಕ್ಕೆ ತಂದು ನಿಲ್ಲಿಸಿದೆ. 2 ವರ್ಷಗಳ ಹಿಂದೆ ಆ ಯುವಕನ ಮೊಬೈಲ್​ಗೆ ಅಕಸ್ಮಾತ್ ಆಗಿ ಫೋನ್ ಮಾಡಿದ್ದ 60ರ ಮಹಿಳೆಗೆ ಅದು ರಾಂಗ್ ನಂಬರ್ ಎಂದು ಗೊತ್ತಾಗಿತ್ತು. ಆದರೆ, ಆ ರಾಂಗ್​ ನಂಬರ್ ಕತೆ ಅಲ್ಲಿಗೇ ಮುಗಿಯಲಿಲ್ಲ. ಅಪರಿಚಿತರಾಗಿದ್ದ ಆ ಇಬ್ಬರು ರಾಂಗ್ ನಂಬರ್ ಮೂಲಕ ಪರಿಚಿತರಾಗಿದ್ದರು. ಇಬ್ಬರ ನಡುವೆಯೂ ಆಪ್ತತೆ ಬೆಳೆದಿತ್ತು. ಇಬ್ಬರೂ ಪ್ರತಿದಿನವೂ ಗಂಟೆಗಟ್ಟಲೆ ವಿಡಿಯೋ ಕಾಲ್ ಮಾಡಿಕೊಂಡು ಮಾತನಾಡುತ್ತಿದ್ದರು.

ಇದನ್ನೂ ಓದಿ: ಕಾಶ್ಮೀರದಲ್ಲಿ ಭಾರೀ ಹಿಮಪಾತ: ತನ್ನದೇ ಮದುವೆಗೆ ಗೈರಾದ ಯೋಧ; ಮುಂದೇನಾಯ್ತು ಗೊತ್ತಾ?

60 ವರ್ಷದ ಕೇಸರವತಿ ಮತ್ತು 20 ವರ್ಷದ ರಾಕೇಶ್ ಪಾಲ್ ಇಬ್ಬರೂ ರಾಮಪುರದ ಬೇರೆ ಬೇರೆ ಊರಿನವರು. ಮೊಬೈಲ್ ಫೋನ್ ಮೂಲಕ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. 60 ವರ್ಷದ ವಿಧವೆ ಕೇಸರವತಿಗೆ ಪ್ರೇಮ ನಿವೇದನೆ ಮಾಡಿದ್ದ ರಾಕೇಶ್ ಪಾಲ್ ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದ. ರಾಕೇಶ್ ಮೇಲೂ ಪ್ರೀತಿಯಿದ್ದ ಕೇಸರವತಿ ಅದಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ, ಅದಕ್ಕೆ ಇಬ್ಬರ ಮನೆಯವರ ವಿರೋಧ ಉಂಟಾಗಿತ್ತು. ಆಕೆ ತನ್ನ ಮೊಮ್ಮಗನ ವಯಸ್ಸಿನ ಯುವಕನನ್ನು ಮದುವೆಯಾಗಲು ಕೇಸರವತಿ ಮನೆಯವರು ಒಪ್ಪಿರಲಿಲ್ಲ. ರಾಕೇಶ್ ಮನೆಯಲ್ಲೂ ಇದೇ ಕಾರಣಕ್ಕೆ ವಿರೋಧ ಉಂಟಾಗಿತ್ತು.

ಆದರೆ, ಆ ವಿರೋಧವನ್ನು ಲೆಕ್ಕಿಸದೆ ಶನಿವಾರ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಕೇಸರವತಿ ಮನೆಗೆ ತೆರಳಿದ ರಾಕೇಶ್ ಸಿನಿಮೀಯವಾಗಿ ಆಕೆಯನ್ನು ಕರೆದುಕೊಂಡು ಹೋಗಿ ಯಾರಿಗೂ ಹೇಳದೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಈ ಜೋಡಿ ಸಾಬೀತುಪಡಿಸಿದೆ.
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ