ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆ (NDA – National Defence Academy) ಬರೆಯಲು ಮಹಿಳೆಯರಿಗೂ (NDA For Women) ಅವಕಾಶ ನೀಡಿ ಸುಪ್ರೀಂ ಕೋರ್ಟ್ (Supreme Court) ಅನುಮತಿ ನೀಡಿದೆ. ಈಗಾಗಲೇ ಈ ಮಹಿಳೆಯರ ನೇಮಕ ಪ್ರಕ್ರಿಯೆ ಸಂಬಂಧ ಆಟರ್ನಿ ಜನರಲ್ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದ್ದು, ಸೇನೆಯ ಅತ್ಯುನ್ನತ ಹಂತ ತಲುಪಲು ಅನೇಕ ಮಹಿಳಾ ಅಭ್ಯರ್ಥಿಗಳು ಕೂಡ ತಯಾರಿ ನಡೆಸಿದ್ದಾರೆ. ಮೇ 2022ರಲ್ಲಿ ಮಹಿಳೆಯರು ಪರೀಕ್ಷೆಗೆ ಹಾಜರಾಗಬಹುದು ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದ್ದು, ಮೊದಲ ಹಂತವಾಗಿ ಸುಮಾರು 20 ಮಹಿಳಾ ಕೆಡೆಟ್ಗಳನ್ನು ಎನ್ಡಿಎ ಅಡಿಯಲ್ಲಿ ನೇಮಕಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
ಮುಂದಿನ ವರ್ಷ ಸೇನೆಗೆ ಮಹಿಳಾ ಅಧಿಕಾರಿಗಳು
ಇನ್ನು ಮುಂದಿನ ವರ್ಷ ಎನ್ಡಿಎ ಮುಖಾಂತರ ಸೇನೆಗೆ ಸೇರಲಿರುವ ಮಹಿಳಾ ಕೆಡಿಟ್ಗಳಿ ಮೂರು ವಿಭಾಗಗಳಲ್ಲೂ (ಭೂ, ವಾಯು ಮತ್ತು ನೌಕೆ)ಸೇವೆ ಸಲ್ಲಿಸಲಿದ್ದಾರೆ. ಪ್ರದಾನ ಕಚೇರಿಯ ಅವಶ್ಯಕತೆಗೆ ಅನುಗುಣವಾಗಿ ಈ ನೇಮಕಾತಿ ನಡೆಯಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 20 ಅಧಿಕಾರಿಗಳು
20 ಮಹಿಳಾ ಕೆಡೆಟ್ಗಳನ್ನು 10 ಮಹಿಳಾ ಅಧಿಕಾರಿಗಳು ಭಾರತೀಯು ಸೇನೆ ಸೇರಲಿದ್ದಾರೆ. ಇನ್ನುಳಿದ 10 ಮಹಿಳಾ ಅಧಿಕಾರಿಗಳಲ್ಲಿ ತಲಾ ಐದು ಮಂದಿ ಭಾರತೀಯ ವಾಯುಪಡೆ ಮತ್ತು ನೌಕಪಡೆಯಲ್ಲಿ ಅಧಿಕಾರ ಪಡೆಯಲಿದ್ದಾರೆ.
ಮಹಿಳೆಯರಿಗೆ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್
ಮುಂದಿನ ವರ್ಷದಿಂದ ಎನ್ಡಿಎ ಪ್ರವೇಶ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂಬ ಕೇಂದ್ರದ ಮನವಿಯನ್ನು ಸುಪ್ರೀಂ ಕೋರ್ಟ್ ಕಳೆದ ಸೆಪ್ಟೆಂಬರ್ನಲ್ಲಿ ತಿರಸ್ಕರಿಸಿತ್ತು. ಮಹಿಳೆಯರು ತಮ್ಮ ಹಕ್ಕುಗಳಿಂದ ವಂಚಿತರಾಗುವುದನ್ನು ಬಯಸುವುದಿಲ್ಲ . ಎನ್ಡಿಎಗೆ ಸೇರ್ಪಡೆಗೊಳ್ಳಲು ಮಹಿಳೆಯರು ಒಂದು ವರ್ಷ ಕಾಯುವಂತಿಲ್ಲ ಎಂದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.
ಲಿಂಗ ತಾರತಮ್ಯ ನಿರ್ಮೂಲನೆ
ಸುಮಾರು ಒಂದ ತಿಂಗಳು ಎನ್ಡಿಎಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ಬರೆಯಲು ನಿರಾಕರಣೆ ಕುರಿತ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಭಾರತೀಯ ಸೇನೆಯನ್ನು ತರಾಟೆಗೆ ತೆಗೆದುಕೊಂದು ಛೀಮಾರಿ ಹಾಕಿತ್ತು. ನೀತಿ ನಿರ್ಧಾರದ ಮೇಲೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಹೇಳುವ ಸೇನೆಯ ಕ್ರಮ ‘ಲಿಂಗ ತಾರತಮ್ಯ‘ವನ್ನು ತೋರಿಸುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿತು.
ಕುಶ್ ಕಾಲ್ರಾ ಎಂಬುವವರು ಎನ್ಡಿಎ ಪರೀಕ್ಷೆಯನ್ನ ಮಹಿಳೆಯರೂ ಬರೆಯುವಂತೆ ಅವಕಾಶ ಕೋರಿ ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ, ಸೇನೆಯಲ್ಲಿರುವ ಲಿಂಗ ತಾರತಮ್ಯ ಧೋರಣೆಯನ್ನ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಇದನ್ನು ಓದಿ: ತಮಿಳುನಾಡಿನಲ್ಲಿ ಇಂದು ಮತ್ತು ನಾಳೆ ಕೂಡ ರೆಡ್ ಆಲರ್ಟ್; ಚೆನ್ನೈ ಜನರಿಗೆ ಎಚ್ಚರಿಕೆ ಸೂಚನೆ
ಶಾಶ್ವತ ಆಯೋಗ ರಚಿಸಿದ ಕೇಂದ್ರ
ಸದ್ಯ ಮಹಿಳೆಯರು ಸೇನೆಗೆ ಸೇರಬೇಕೆಂದರೆ ಎಸ್ ಎಸ್ ಸಿ (ಶಾರ್ಟ್ ಸರ್ವಿಸ್ ಕಮಿಷನ್) ಪರೀಕ್ಷೆಯೊಂದೇ ದಾರಿಯಾಗಿದೆ. ಇದರಲ್ಲೂ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ಸ್ಥಾನ ಸಿಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ ಎಸ್ ಎಸ್ ಸಿಯ ಮಹಿಳಾ ಅಧಿಕಾರಿಗಳಿಗೆ ಸೇನೆಯಲ್ಲಿ ಪರ್ಮನೆಂಟ್ ಕಮಿಷನ್ ಸಿಗುವಂತೆ ವ್ಯವಸ್ಥೆ ಮಾಡಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಇದನ್ನು ಓದಿ: ಬಸ್-ಟ್ಯಾಂಕರ್ ನಡುವೆ ಭೀಕರ ಅಪಘಾತ; 12 ಮಂದಿ ಸಜೀವ ದಹನ: ಮೋದಿ ಸಂತಾಪ
ಇದಾದ ಬಳಿಕ ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರ ಸರ್ಕಾರ ಎನ್ಡಿಎ ಮೂಲಕ ಸೇನೆಯಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿತು.
ಎನ್ಡಿಎ ಮೂಲಕ ಸೇನೆ ಸೇರ ಬಯಸುವ ಮಹಿಳಾ ಅಭ್ಯರ್ಥಿಗಳು ದ್ವೀತಿಯ ಪಿಯುಸಿ ಅಥವಾ 12ನೇ ತರಗತಿ ಉತ್ತೀರ್ಣರಾದ ಬಳಿಕ ಎನ್ಡಿಎ ಪರೀಕ್ಷೆಯನ್ನು ಎದುರಿಸಬಹುದು. ಇದಕ್ಕಾಗಿ ಪ್ರತಿ ವರ್ಷ ಆಯೋಗ ಸ್ಪರ್ಥಾತ್ಮಕ ಪರೀಕ್ಷೆ ನಡೆಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ