• Home
  • »
  • News
  • »
  • national-international
  • »
  • Narendra Modi: 65 ಗಂಟೆ- 20 ಸಭೆ, ದೀರ್ಘ ವಿಮಾನ ಪ್ರಯಾಣ ಇದ್ರೂ ಮೋದಿ ಸುಸ್ತಾಗದಿರಲು ಕಾರಣವೇನು? ಇಲ್ಲಿದೆ ಪ್ರಧಾನಿ ಎನರ್ಜಿ ಸೀಕ್ರೆಟ್..

Narendra Modi: 65 ಗಂಟೆ- 20 ಸಭೆ, ದೀರ್ಘ ವಿಮಾನ ಪ್ರಯಾಣ ಇದ್ರೂ ಮೋದಿ ಸುಸ್ತಾಗದಿರಲು ಕಾರಣವೇನು? ಇಲ್ಲಿದೆ ಪ್ರಧಾನಿ ಎನರ್ಜಿ ಸೀಕ್ರೆಟ್..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Narendra Modi: 1990 ರ ದಶಕದಲ್ಲಿ ಅವರು US ಗೆ ಭೇಟಿ ನೀಡುತ್ತಿದ್ದಾಗ, ಆ ಸಮಯದಲ್ಲಿ ಒಂದು ವಿಮಾನಯಾನ ಸಂಸ್ಥೆಯು ಭಾರೀ ರಿಯಾಯಿತಿ ದರದಲ್ಲಿ ಮಾಸಿಕ ಪ್ರಯಾಣದ ಪಾಸ್ ನೀಡುತ್ತಿತ್ತು. ಇದರ ಹೆಚ್ಚಿನ ಲಾಭ ಪಡೆಯಲು, ಮೋದಿ ಯಾವಾಗಲೂ ರಾತ್ರಿಯಲ್ಲಿ ಪ್ರಯಾಣಿಸುತ್ತಿದ್ದರು.

  • Share this:

ಪ್ರಧಾನಿ  ನರೇಂದ್ರ ಮೋದಿಯವರ(Narendra Modi) ಕೆಲಸ ಸಮಯದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಹೆಚ್ಚು ಕಾಲ ಅವರು ಯಾವಾಗಲೂ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಹಾಗೆಯೇ ವಿದೇಶ ಪ್ರವಾಸದಲ್ಲಿ(Foreign Tour) ಸಹ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಪ್ರಧಾನಿ ಮೋದಿ ಅವರು ಉತ್ಸಾಹದಿಂದಿರುವುದು ಹಾಗೂ ಅದೇ ಶಕ್ತಿಯನ್ನು ಉಳಿಸಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.


ಅಧಿಕೃತ ಮೂಲಗಳ ಪ್ರಕಾರ,  ಅವರ  ಒಂದು ಪ್ರಮುಖ  ತಂತ್ರವೆಂದರೆ ತನ್ನ ಸಮಯವನ್ನು ಒಂದೂ ನಿಮಿಷವೂ ಬಿಡುವು ನೀಡದೆ ತೊಡಗಿಸಿಕೊಳ್ಳುವುದು.  ಇದರಿಂದ ಮನಸ್ಸು ಯಾವುದೇ ಆಯಾಸದ ಬಗ್ಗೆ ಹೆಚ್ಚು ಯೋಚಿಸಲು ಬಿಡುವುದಿಲ್ಲ. ಮೋದಿ ಅವರು ತಮ್ಮ ಮೂರು ದಿನಗಳ ಯುಎಸ್ ಭೇಟಿಯಿಂದ ಭಾನುವಾರ ಹಿಂದಿರುಗಿದಂತೆ, ಮೂಲಗಳು ಹೇಳುವಂತೆ  ಒಂದೆಲ್ಲ ಒಂದು ಕೆಲಸ ಮಾಡುತ್ತಾ, ಪ್ರಯಾಣಿಸುವುದು ಹಾಗೂ ಆಯಾಸವನ್ನು ದೂರವಿಡುವುದು ಅವರ ಹೊಸ ಗುಣವೇನಲ್ಲ ಎಂದು.


1990 ರ ದಶಕದಲ್ಲಿ ಅವರು US ಗೆ ಭೇಟಿ ನೀಡುತ್ತಿದ್ದಾಗ, ಆ ಸಮಯದಲ್ಲಿ ಒಂದು ವಿಮಾನಯಾನ ಸಂಸ್ಥೆಯು ಭಾರೀ ರಿಯಾಯಿತಿ ದರದಲ್ಲಿ ಮಾಸಿಕ ಪ್ರಯಾಣದ ಪಾಸ್ ನೀಡುತ್ತಿತ್ತು. ಇದರ ಹೆಚ್ಚಿನ ಲಾಭ ಪಡೆಯಲು, ಮೋದಿ ಯಾವಾಗಲೂ ರಾತ್ರಿಯಲ್ಲಿ ಪ್ರಯಾಣಿಸುತ್ತಿದ್ದರು ಏಕೆಂದರೆ ಅದರಿಂದ  ಹೋಟೆಲ್‌ಗಳಿಗೆ ಒಂದು ಪೈಸೆಯನ್ನೂ ಖರ್ಚು ಮಾಡಬೇಕಾದ ಅವಶ್ಯಕತೆ ಇರಲಿಲ್ಲ ಹಾಗೂ  ಹೆಚ್ಚಿನ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗುತಿತ್ತು. ಅವರ ರಾತ್ರಿಯನ್ನು ವಿಮಾನ ನಿಲ್ದಾಣದಲ್ಲಿ ಮತ್ತು ವಿಮಾನದಲ್ಲಿ ನಿರಂತರವಾಗಿ ಕಳೆಯುತ್ತಿದ್ದರು ಎಂದು ಒಂದು ಮೂಲ ಹೇಳಿದೆ.


ಅವರು ವಿಮಾನವನ್ನು ಹತ್ತಿದ ತಕ್ಷಣ ತಲುಪಬೇಕಾದ ದೇಶದ ಸಮಯಕ್ಕೆ ತಕ್ಕಂತೆ ತಮ್ಮ ನಿದ್ರೆಯ ವಿಧಾನವನ್ನು ಬದಲಾಯಿಸಿಕೊಳ್ಳುತ್ತಾರೆ. ಅವರು ಹೊರಡುವಾಗ ಭಾರತದಲ್ಲಿ ರಾತ್ರಿಯಿದ್ದರೂ ಸಹ ಆ ದೇಶದಲ್ಲಿ ಬೆಳಗಿದ್ದರೆ, ಅವರು ನಿದ್ರೆ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಅಮೇರಿಕಾದಿಂದ 157 ಭಾರತೀಯ ಪುರಾತನ ವಸ್ತುಗಳನ್ನು ತರ್ತಿದ್ದಾರೆ ಮೋದಿ, ಯಾವ ವಸ್ತುಗಳು? ಏನದರ ಇತಿಹಾಸ?


ಅವರು ಭಾರತಕ್ಕೆ ಹಿಂದಿರುಗುವಾಗ ಸಹ ಅದೇ ಕೆಲಸವನ್ನು ಮಾಡುತ್ತಾರೆ,  ಮತ್ತು ಭಾರತೀಯ ಸಮಯಕ್ಕೆ ಅನುಗುಣವಾಗಿ ತನ್ನ ದೇಹ ಮತ್ತು ನಿದ್ರೆಯ ಚಕ್ರವನ್ನು ಟ್ಯೂನ್ ಮಾಡಿಕೊಳ್ಳುತ್ತಾರೆ.  ಫ್ರೆಶ್​ ಆಗಿ ಬೆಳಗಿನ ಸಮಯದಲ್ಲಿ ಇಳಿಯುವಾಗ ಹೋಗಲು ಸಿದ್ಧನಾಗಿದ್ದೇನೆ ಎಂದು ಅವರು ಖಾತ್ರಿ ಮಾಡಿಕೊಳ್ಳುತ್ತಾರೆ.


ವಿಮಾನದಲ್ಲಿನ ಗಾಳಿಯು ದೇಹದಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ ಎಂದು ವೈದ್ಯರು ಸೂಚಿಸಿದಂತೆ ಮೋದಿ ಸಾಕಷ್ಟು ನೀರು ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.


ಅವರ ಮೂರು ದಿನಗಳ  ಅಮೆರಿಕಾ ಪ್ರವಾಸವು  ಹೆಚ್ಚು ಸಭೆಗಳಿಂದ ತುಂಬಿ ಹೋಗಿತ್ತು, ಏಕೆಂದರೆ ಅವರು  ಆ ದೇಶದಲ್ಲಿ ಕಳೆದ ಸುಮಾರು 65 ಗಂಟೆಗಳ ಅವಧಿಯಲ್ಲಿ ಅವರು 20 ಸಭೆಗಳಲ್ಲಿ ಭಾಗವಹಿಸಿದ್ದರು. ಅವರು ಅಮೆರಿಕಾದಿಂದ ಮರಳಿ ಬರುವಾಗ  ಅಧಿಕಾರಿಗಳೊಂದಿಗೆ ವಿಮಾನದಲ್ಲಿ ನಾಲ್ಕು ಸುದೀರ್ಘ ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ತಮ್ಮ ಮೂರು ದಿನಗಳ ವಿದೇಶ ಭೇಟಿಯನ್ನು ಮುಗಿಸಿದ್ದು, ತವರಿಗೆ ಮರಳುತ್ತಿದ್ದಾರೆ. ಅಲ್ಲದೇ ಜೊತೆಗೆ ಅಮೆರಿಕ ನೀಡಿದ 157 ಕುತೂಹಲಕಾರಿ ಹಳೆಯ ಅವಶೇಷಗಳನ್ನು ಮರಳಿ ತರುತ್ತಿದ್ದಾರೆ.


ಪ್ರಧಾನ ಮಂತ್ರಿ ನರೇಂದ್ರ ಮೋದಿ  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದಾರೆ. ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಕೆಲವು ರಾಷ್ಟ್ರಗಳು ಭಯೋತ್ಪಾದನೆಯನ್ನು ರಾಜಕೀಯ ದಾಳವಾಗಿ ಬಳಕೆ ಮಾಡುತ್ತಿದೆ. ಜಗತ್ತಿನಲ್ಲಿ ಉಗ್ರವಾದದ ಅಪಾಯ ಹೆಚ್ಚುತ್ತಿದೆ. ಈ ಭಯೋತ್ಪಾದನೆ ಎದುರಾಳಿ ದೇಶಕ್ಕೆ ಮಾತ್ರವಲ್ಲ, ಅವರಿಗೂ ಅಪಾಯ ಎಂಬುದನ್ನು ಅವರು ಮರೆಯಬಾರದು ಎಂದು ಇದೇ ವೇಳೆ ಕಿವಿಮಾತು ಹೇಳಿದರು.


ಇದನ್ನೂ ಓದಿ: ಭಾರತ್ ಬಂದ್ ಹಿನ್ನೆಲೆ, ಬೆಂಗಳೂರಿನಲ್ಲಿ ಖಾಕಿ ಕಣ್ಗಾವಲು, ರಾಜ್ಯದಲ್ಲಿ ಬಂದ್​​ಗೆ ಬೆಂಬಲ ಇದ್ಯಾ?


ಇದೇ ವೇಳೆ ಅಫ್ಘಾನ್ ನೂತನ ಸರ್ಕಾರದ ಕುರಿತು ಮಾತನಾಡಿದ ಅವರು, ಅಫ್ಘಾನಿಸ್ತಾನವೂ ಭಯೋತ್ಪಾದನೆಯನ್ನು ಪ್ರಚೋದಿಸಬಾರರು. ಕೆಲವರು ಅಫ್ಘಾನಿಸ್ತಾನದ ಪರಿಸ್ತಿತಿ ಲಾಭ ಪಡೆಯಲು ಮುಂದಾಗಿದ್ದಾರೆ. ಪ್ರಾಕ್ಸಿ ಯುದ್ಧ, ಭಯೋತ್ಸಾದನೆ ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿ ನಮಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದೆ. ವಿಶ್ವಸಂಸ್ಥೆ ಕೂಡ ಅದರ ಪ್ರಸ್ತುತತೆಗೆ ತಕ್ಕಂತೆ ವರ್ತಿಸಬೇಕು ಎಂದರು.

Published by:Sandhya M
First published: