ಅಸ್ಸಾಂನಲ್ಲಿ ಭಾರೀ ಮಳೆಗೆ ಭೂಕುಸಿತ; ನಾಲ್ವರು ಅಪ್ರಾಪ್ತರು ಸೇರಿದಂತೆ 20 ಮಂದಿ ಸಾವು

ಕಳೆದೊಂದು ವಾರದದಿಂದ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಇಡೀ ಅಸ್ಸಾಂ ರಾಜ್ಯದ ಧೇಮಾಜಿ, ಲಾಖಿಂಪುರ್, ಡರ್ಯಾಂಗ್, ನಾಲ್ಬಾರಿ, ಗೋಲಾಪಾರಾ, ದಿಬ್ರುಗಢ್ ಮತ್ತು ಟಿನ್ ಸುಕಿಯಾ ಜಿಲ್ಲೆಗಳ ಜನರು ಸಂಕಷ್ಟಗೊಳಗಾಗಿದ್ದಾರೆ.

ಅಸ್ಸಾನಂಲ್ಲಿ ಭಾರೀ ಮಳೆಗೆ 20 ಸಾವು

ಅಸ್ಸಾನಂಲ್ಲಿ ಭಾರೀ ಮಳೆಗೆ 20 ಸಾವು

 • Share this:
  ಗುವಾಹಟಿ(ಜೂ.02): ಮಾರಕ ಕೋವಿಡ್​​-19 ಅಟ್ಟಹಾಸದ ನಡುವೆಯೂ ಅಸ್ಸಾಂನಲ್ಲಿ ಧಾರಕಾರ ಮಳೆಯಾಗಿದೆ. ಇದರ ಪರಿಣಾಮ ದಕ್ಷಿಣ ಅಸ್ಸಾಂನ ಬರಾಕ್ ಕಣಿವೆ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಗೆ ಭೂಕುಸಿತ ಸಂಭವಿಸಿದೆ. ಈ ಭೂಕುಸಿತಕ್ಕೆ ನಾಲ್ವರು ಅಪ್ರಾಪ್ತರು ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದಾರೆ. ಜತೆಗೆ ಹಲವರಿಗೆ ತೀವ್ರ ಗಾಯಾಗಳಾಗಿವೆ.

  ಇನ್ನು, ಭಾರೀ ಮಳೆಗೆ ಅಸ್ಸಾಂನ ಜನಜೀವನ ಅಸ್ತವ್ಯವಸ್ಥಗೊಂಡಿದೆ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದಾರೆ. ಹತ್ತಾರು ಸಾವಿರ ಜನರನ್ನು ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆಯೂ ಅವಶೇಷಗಳಡಿಯಲ್ಲಿ ಸಿಲುಕಿದವರನ್ನು ಹೊರತೆಗೆಯುವ ಕಾರ್ಯ ಮಾಡುತ್ತಿದೆ.

  ಸದ್ಯ 20 ಮಂದಿ ಮೃತರ ಪೈಕಿ ಏಳು ಮಂದಿ ಕ್ಯಾಚರ್ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಹಾಗೆಯೇ ಹೈಲಕಂಡಿ ಜಿಲ್ಲೆಯಲ್ಲಿ 7, ಕರಿಮ್‌ಗಂಜ್ ಜಿಲ್ಲೆಯಲ್ಲಿ 7 ಜನ ಅಸುನೀಗಿದ್ಧಾರೆ.

  ಇದನ್ನೂ ಓದಿ: ‘ಹಾಸನ, ಮಂಡ್ಯದಲ್ಲಿ ಜೆಡಿಎಸ್​​ ಒಡೆದು ಹೋಗಿದೆ, ಇನ್ಮುಂದೆ ಏನಾಗಲಿದೆ ಎಂದು ನೀವೆ ನೋಡ್ತೀರಿ‘ - ಸಚಿವ ನಾರಾಯಣಗೌಡ

  ಕಳೆದೊಂದು ವಾರದದಿಂದ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಇಡೀ ಅಸ್ಸಾಂ ರಾಜ್ಯದ ಧೇಮಾಜಿ, ಲಾಖಿಂಪುರ್, ಡರ್ಯಾಂಗ್, ನಾಲ್ಬಾರಿ, ಗೋಲಾಪಾರಾ, ದಿಬ್ರುಗಢ್ ಮತ್ತು ಟಿನ್ ಸುಕಿಯಾ ಜಿಲ್ಲೆಗಳ ಜನರು ಸಂಕಷ್ಟಗೊಳಗಾಗಿದ್ದಾರೆ.  First published: