ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಗೆ ಶಾಕ್​ ಮೇಲೆ ಶಾಕ್​; ಮತ್ತೋರ್ವ ಆಪ್ತನ ಎನ್​ಕೌಂಟರ್​

ವಿಕಾಸ್​ ದುಬೆಗಾಗಿ ಉತ್ತರ ಪ್ರದೇಶ ಹುಡುಕಾಟ ನಡೆಯುತ್ತಿದೆ. ಈ ಮಧ್ಯೆ ವಿಕಾಸ್​ ದುಬೆ ಹರಿಯಾಣದ ಫರಿದಾಬಾದ್​ ಹೋಟೆಲ್​ ಒಂದರಲ್ಲಿ ಕಾಣಿಸಿಕೊಂಡಿದ್ದಾನೆ. ಪೊಲೀಸರು ರೇಡ್​ ಮಾಡುವ ಮೊದಲೇ ಆತ ತಪ್ಪಿಸಿಕೊಂಡಿದ್ದ.

ವಿಕಾಸ್​ ದುಬೆ

ವಿಕಾಸ್​ ದುಬೆ

 • Share this:
  ಲಖನೌ (ಜು.9): ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ 8 ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ನಿನ್ನೆ ಅಮರ್​ ದುಬೆ ಹೆಸರಿನ ಆಪ್ತನನ್ನು ಹೊಡೆದುರುಳಿಸಿದ್ದ ಪೊಲೀಸರು ಇಂದು ಮುಂಜಾನೆ ಮತ್ತೋರ್ವ ಆಪ್ತನನ್ನು ಬೆನ್ನುಹತ್ತಿ ಹತ್ಯೆ ಮಾಡಿದ್ದಾರೆ. 

  ಕಾನ್ಪುರದ ಬಿಕ್ರಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಗ್ಯಾಂಗ್​ಸ್ಟರ್ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಪೊಲೀಸರು ವಿಕಾಸ್ ಅಡಗಿ ಕೂತಿದ್ದ ಮನೆ ತಲುಪುತ್ತಿದ್ದಂತೆ ಟೆರೇಸ್ ಮೇಲಿನಿಂದ 8-10 ಜನರು ಗುಂಡಿನ ದಾಳಿ ನಡೆಸಿದ್ದರು. ಶಿವರಾಜ್ಪುರ ಪೊಲೀಸ್ ಠಾಣಾಧಿಕಾರಿ ಮಹೇಶ್ ಯಾದವ್, ಸಬ್ ಇನ್ಸ್ಪೆಕ್ಟರ್, ಐದು ಕಾನ್ಸ್ಟೇಬಲ್ ಹಾಗೂ ಮತ್ತೋರ್ವ ಸ್ಥಳದಲ್ಲೇ ಮೃತಪಟ್ಟಿದ್ದರು.

  ಪೊಲೀಸರ ಮೇಲಿನ ದಾಳಿ ನಂತರ ಮಂಗಳವಾರ ಪೊಲೀಸರು ವಿಕಾಸ್​ ಆಫ್ತ ಪ್ರಭಾತ್​ ಎಂಬಾತನನ್ನು ಬಂಧಿಸಿದ್ದರು. ನಂತರ ಪೊಲೀಸರು ಪ್ರಭಾತ್​ನನ್ನು ಕಾನ್ಪುರ ಜೈಲಿಗೆ ಕರೆತಂದಿದ್ದರು. ಈ ವೇಳೆ ಆತ ತಪ್ಪಿಸಿಕೊಳ್ಳಲು ನೋಡಿದ್ದ. ಈ ವೇಳೆ ಎನ್​ಕೌಂಟರ್​ ಮಾಡಲಾಗಿದೆ.  ಮಂಗಳವಾರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ವಿಕಾಸ್​ ಆಪ್ತ ಅಮರ್​ನನ್ನು ಪೊಲೀಸರು ಹೊಡೆದುರುಳಿಸಿದ್ದರು.

  ಹೋಟೆಲ್​ನಲ್ಲಿ ವಿಕಾಸ್ ದುಬೆ  ಪತ್ತೆ:

  ವಿಕಾಸ್​ ದುಬೆಗಾಗಿ ಉತ್ತರ ಪ್ರದೇಶ ಹುಡುಕಾಟ ನಡೆಯುತ್ತಿದೆ. ಈ ಮಧ್ಯೆ ವಿಕಾಸ್​ ದುಬೆ ಹರಿಯಾಣದ ಫರಿದಾಬಾದ್​ ಹೋಟೆಲ್​ ಒಂದರಲ್ಲಿ ಕಾಣಿಸಿಕೊಂಡಿದ್ದಾನೆ. ಪೊಲೀಸರು ರೇಡ್​ ಮಾಡುವ ಮೊದಲೇ ಆತ ತಪ್ಪಿಸಿಕೊಂಡಿದ್ದ.

  ಎನ್​ಕೌಂಟರ್​ ಮಾಡಿ ಎಂದಿದ್ದ ತಾಯಿ:

  ಪೊಲೀಸರ ಹತ್ಯೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದ ವಿಕಾಸ್ ತಾಯಿ, ನನ್ನ ಮಗನನ್ನು ಗುಂಡಿಕ್ಕಿ ಕೊಂದು ಬಿಡಿ ಎಂದಿದ್ದರು. “ನನ್ನ ಮಗ ಪೊಲೀಸರಿಗೆ ಶರಣಾಗಬೇಕು. ಇಲ್ಲದಿದ್ದರೆ ಆತನನ್ನು ಗುಂಡಿಕ್ಕಿ ಕೊಂದು ಬಿಡಲಿ. ಆತ ಮಾಡಿದ್ದು ತುಂಬಾನೇ ದೊಡ್ಡ ತಪ್ಪು. ಒಂದೊಮ್ಮೆ ಆತ ಶರಣಾದರೂ ಆತನಿಗೆ ಕೋರ್ಟ್ ಮೆಟ್ಟಿಲು ಹತ್ತಲು ಅವಕಾಶವನ್ನೇ ನೀಡಬಾರದು. ಅದಕ್ಕೂ ಮೊದಲೇ ಕೊಲ್ಲಬೇಕು,” ಎಂದು ಹೇಳಿದ್ದರು.
  Published by:Rajesh Duggumane
  First published: