Nalanda: ನಳಂದಾ ಬಳಿ 1200 ವರ್ಷಗಳಷ್ಟು ಹಳೆಯ ಕಾಲದ ಎರಡು ವಿಗ್ರಹಗಳು ಪತ್ತೆ!

ಎರಡು ಶಿಲಾ ವಿಗ್ರಹಗಳು ಪತ್ತೆ

ಎರಡು ಶಿಲಾ ವಿಗ್ರಹಗಳು ಪತ್ತೆ

ಸಾರ್ಲಿಚಾಕ್ ಗ್ರಾಮದಲ್ಲಿರುವ ಇದೇ ತಾರ್ಸಿನ್ಹ್ ಕೊಳದಲ್ಲಿ 1300 ವರ್ಷಗಳಷ್ಟು ಹಿಂದಿನ ನಾಗ ದೇವಿ ವಿಗ್ರಹ ಒಂದು ವರ್ಷದ ಹಿಂದೆ ಪತ್ತೆಯಾಗಿತ್ತು. ಸದ್ಯ ಪಾಲರ ಕಾಲದ ಆ ವಿಗ್ರಹವನ್ನು ನಳಂದಾ ಮ್ಯೂಸಿಯಂನಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ. ಕಾನೂನು ಪ್ರಕ್ರಿಯೆಗಳು ಮುಗಿದ ನಂತರ ಸದ್ಯ ತಾರ್ಸಿನ್ಹ್ ಕೊಳದಲ್ಲಿ ಪತ್ತೆಯಾಗಿರುವ ಎರಡು ವಿಗ್ರಹಗಳನ್ನು ಕೂಡ ನಳಂದಾ ಮ್ಯೂಸಿಯಂನಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡುವ ಸಾಧ್ಯತೆ ಇದೆ.

ಮುಂದೆ ಓದಿ ...
  • Share this:

ಪಾಟ್ನಾ: ಬಿಹಾರದ (Bihar) ಪ್ರಾಚೀನ ನಳಂದಾ ವಿಶ್ವವಿದ್ಯಾಲಯದ (Ancient Nalanda University) ಸಮೀಪದಲ್ಲಿ ಇರುವ ಕೆರೆಯೊಂದರಲ್ಲಿ ಹೂಳು ತೆಗೆಯುವ ಸಂದರ್ಭದಲ್ಲಿ ಸುಮಾರು 1200 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತಿರುವ ಎರಡು ಶಿಲಾ ವಿಗ್ರಹಗಳು (Old Idols) ಪತ್ತೆ ಆಗಿವೆ ಎಂದು ತಿಳಿದು ಬಂದಿದೆ. ಪ್ರಾಚೀನ ಶಿಲಾ ಶಾಸನಗಳು ಪತ್ತೆ ಆಗಿರುವ ಬಗ್ಗೆ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಆದರೆ ಪತ್ತೆಯಾದ ವಿಗ್ರಹಗಳ ಬಗೆಗಿನ ವಿವರಗಳನ್ನು ಭಾರತೀಯ ಪುರಾತತ್ವ ಇಲಾಖೆಯಾಗಲೀ ಅಥವಾ ಯಾವುದೇ ಅಧಿಕಾರಿಯಾಗಲಿ ಬಹಿರಂಗ ಪಡಿಸಿಲ್ಲ.


ಸ್ವಚ್ಛತಾ ಕಾರ್ಯಕ್ರಮದ ವೇಳೆ ಪತ್ತೆಯಾದ ವಿಗ್ರಹ


ಪಾಟ್ನಾದಿಂದ ಸುಮಾರು 88 ಕಿಲೋ ಮೀಟರ್ ದೂರದಲ್ಲಿ ಇರುವ ಜಾಗತಿಕ ಪಾರಂಪರಿಕ ತಾಣವಾದ ಪುರಾತನ ನಳಂದಾ ಮಹಾವೀರ ಸಮೀಪದ ಸಾರ್ಲಿಚಾಕ್ ಗ್ರಾಮದಲ್ಲಿರುವ ತಾರ್ಸಿನ್ಹ್ ಕೊಳದಲ್ಲಿ ನೀರು ಮತ್ತು ಪರಿಸರವನ್ನು ರಕ್ಷಿಸುವ ಹಾಗೂ ಕಾಪಾಡುವ ಸಲುವಾಗಿ ಬಿಹಾರ ಸರ್ಕಾರ ಆರಂಭಿಸಿರುವ ಜಲ ಜೀವನ್ ಹರಿಯಾಲಿ ಯೋಜನೆಯಡಿ ಕೊಳದ ಹೂಳು ತೆಗೆಯುವ ಕಾರ್ಯ ನಡೆಯುತ್ತಿತ್ತು. ಸ್ಥಳೀಯರು ಸೇರಿ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡಿದ್ದರು. ಕೆರೆಯಲ್ಲಿ ತುಂಬಿದ್ದ ಹೂಳುಗಳನ್ನೆಲ್ಲ ಮೇಲಕ್ಕೆ ತೆಗೆಯುವ ವೇಳೆ ಈ ವಿಗ್ರಹಗಳು ಪತ್ತೆಯಾಗಿದೆ.


ಇದನ್ನೂ ಓದಿ:  Ayodhya Ram Mandir: ಅಯೋಧ್ಯೆ ಶ್ರೀರಾಮನಿಗೆ ನೇಪಾಳದಿಂದಲೂ ಉಡುಗೊರೆ, ನೆರೆರಾಷ್ಟ್ರದಿಂದಲೇ ಬರಲಿದೆ ವಿಗ್ರಹದ ಕೆತ್ತನೆಗೆ ಕಲ್ಲು!


ಪೊಲೀಸರ ವಶದಲ್ಲಿರುವ 1200 ವರ್ಷಗಳ ಹಳೆಯ ವಿಗ್ರಹ


ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಾಟ್ನಾ ವಲಯದ ಪುರಾತತ್ವ ಅಧಿಕಾರಿ ಗೌತಮಿ ಭಟ್ಟಾಚಾರ್ಯ, ಪತ್ತೆಯಾದ ವಿಗ್ರಹಗಳು ಸುಮಾರು 1200 ವರ್ಷಗಳಷ್ಟು ಹಳೆಯ ಕಾಲದ್ದು ಎಂಬ ಮಾಹಿತಿ ನಮಗೆ ಸಿಕ್ಕಿದೆ. ಈ ವಿಗ್ರಹಗಳು ಪತ್ತೆ ಆಗಿರುವುದು ತಿಳಿಯುತ್ತಿದ್ದಂತೆ ಆ ಭಾಗದ ಗ್ರಾಮಸ್ಥರು ಅವುಗಳಿಗೆ ದೇವಸ್ಥಾನ ಕಟ್ಟುವ ಆಲೋಚನೆಯನ್ನು ಮುಂದಿಟ್ಟಿದ್ದಾರೆ. ಆ ಭಾಗದಲ್ಲಿ ನಿಯೋಜನೆಗೊಂಡಿದ್ದ ನಮ್ಮ ಅಧಿಕಾರಿಗಳು ವಿಗ್ರಹದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಈ ವಿಗ್ರಹಗಳು ಸ್ಥಳೀಯ ಪೊಲೀಸರ ವಶದಲ್ಲಿದೆ ಎಂದು ತಿಳಿಸಿದರು.


ವಿಗ್ರಹ ಹಸ್ತಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಮನವಿ


ಮುಂದುವರಿದು ಮಾತನಾಡಿರುವ ಅವರು, ‘ಆ ವಿಗ್ರಹಗಳನ್ನು ನಳಂದಾ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲು ನಾವು ನಿರ್ಧಾರ ಮಾಡಿದ್ದೇವೆ. ಭಾರತೀಯ ಅಮೂಲ್ಯ ವಸ್ತುಗಳ ಸಂಗ್ರಹ ಕಾಯ್ದೆ 1878ರ ನಿಯಮಗಳ ಅಡಿ ಈ ಕೂಡಲೇ ವಿಗ್ರಹಗಳನ್ನು ಹಸ್ತಾಂತರ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಪಾಟ್ನಾ ವಲಯದ ಪುರಾತತ್ವ ಅಧಿಕಾರಿ ಗೌತಮಿ ಭಟ್ಟಾಚಾರ್ಯ ಹೇಳಿದರು.


ಇದನ್ನೂ ಓದಿ: Explainer: ಶ್ರೀರಾಮನ ಮೂರ್ತಿ ಕೆತ್ತನೆಗೆ ನೇಪಾಳದಿಂದ ಬಂದ ಸಾಲಿಗ್ರಾಮ ಶಿಲೆ; ಏನಿದರ ವಿಶೇಷತೆ? ಹಿಂದೂ ಪುರಾಣಗಳು ಏನು ಹೇಳುತ್ತವೆ?


ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಸಿಗಲಿದೆ ವಿಗ್ರಹ


ಸಾರ್ಲಿಚಾಕ್ ಗ್ರಾಮದಲ್ಲಿರುವ ಇದೇ ತಾರ್ಸಿನ್ಹ್ ಕೊಳದಲ್ಲಿ 1300 ವರ್ಷಗಳಷ್ಟು ಹಿಂದಿನ ನಾಗ ದೇವಿ ವಿಗ್ರಹ ಒಂದು ವರ್ಷದ ಹಿಂದೆ ಪತ್ತೆಯಾಗಿತ್ತು. ಸದ್ಯ ಪಾಲರ ಕಾಲದ ಆ ವಿಗ್ರಹವನ್ನು ನಳಂದಾ ಮ್ಯೂಸಿಯಂನಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ. ಕಾನೂನು ಪ್ರಕ್ರಿಯೆಗಳು ಮುಗಿದ ನಂತರ ಸದ್ಯ ತಾರ್ಸಿನ್ಹ್ ಕೊಳದಲ್ಲಿ ಪತ್ತೆಯಾಗಿರುವ ಎರಡು ವಿಗ್ರಹಗಳನ್ನು ಕೂಡ ನಳಂದಾ ಮ್ಯೂಸಿಯಂನಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡುವ ಸಾಧ್ಯತೆ ಇದೆ.


ಇದನ್ನೂ ಓದಿ: Ayodhya Rama Mandir: ಮಕರ ಸಂಕ್ರಾಂತಿಯಂದು ವಿರಾಜಮಾನನಾಗಲಿದ್ದಾರೆ ಶ್ರೀರಾಮ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಅಯೋಧ್ಯೆ ದೇಗುಲ

Published by:Avinash K
First published: