HOME » NEWS » National-international » 2 RUPEE OLD COIN CAN GET YOU 5 LAKH RUPEES HERE IS HOW TO GET MONEY SKTV

Money Tips: ನಿಮ್ಮ ಬಳಿ ಹಳೇ 2 ರೂಪಾಯಿ ನಾಣ್ಯ ಇದ್ಯಾ? 5 ಲಕ್ಷ ರೂಪಾಯಿ ಸಿಗುತ್ತೆ ನೋಡಿ !

ಈಗಾಗಲೇ ಆ ವೆಬ್​ಸೈಟಲ್ಲಿ ಇಂಥಾ ಎರಡು ನಾಣ್ಯಗಳು 5 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿವೆ. ನಿಮ್ಮ ಬಳಿ ಈ ನಾಣ್ಯ ಇದ್ದರೆ ಒಳ್ಳೆಯ ಫೋಟೋ ತೆಗೆದು ಅಪ್​ಲೋಡ್ ಮಾಡಿಬಿಡಿ !

Soumya KN | news18-kannada
Updated:June 9, 2021, 1:28 PM IST
Money Tips: ನಿಮ್ಮ ಬಳಿ ಹಳೇ 2 ರೂಪಾಯಿ ನಾಣ್ಯ ಇದ್ಯಾ? 5 ಲಕ್ಷ ರೂಪಾಯಿ ಸಿಗುತ್ತೆ ನೋಡಿ !
2 ರೂಪಾಯಿ ನಾಣ್ಯ
  • Share this:
ದುಡ್ಡು ಬರುತ್ತೆ ಅಂದರೆ ಬೇಡ ಎನ್ನುವವರು ಯಾರು ಹೇಳಿ? ಅದರಲ್ಲೂ ಈ ಕೊರೊನಾ, ಲಾಕ್​ಡೌನ್ ಬಂದ ಮೇಲಂತೂ ಹಣದ ಅಭಾವವೇ ಎಲ್ಲಾ ಕಡೆ. ಆದರೆ ಆಗಾಗ ಒಂದೊಂದು ಲಾಟರಿ ಹೊಡೆಯುವಂಥಾ ಅವಕಾಶಗಳು ಬರುತ್ತಿರುತ್ತವೆ. ಆ ಅವಕಾಶಗಳನ್ನು ಆದಷ್ಟು ಬೇಗ ನಮ್ಮದಾಗಿಸಿಕೊಂಡು ಅದರಿಂದ ಲಾಭ ತಂದುಕೊಳ್ಳುವುದು ಬುದ್ಧಿವಂತಿಕೆ. ಈಗ ಅಂಥದ್ದೇ ಒಂದು ಲಾಭದ ವಿಚಾರ ನಾವು ನಿಮಗೆ ತಿಳಿಸುತ್ತಿದ್ದೇವೆ. ನಿಮ್ಮ ಬಳಿ ಹಳೆಯದಾದ 2 ರೂಪಾಯಿಯ ನಾಣ್ಯ ಒಂದು ಇದ್ದರೆ ಸಾಕು. ಆ ನಾಣ್ಯವನ್ನು ನೀವು ಹೇಗೆ ಎಲ್ಲಿ ಮಾರಾಟ ಮಾಡಬೇಕು, ಹಣ ಪಡೆಯುವುದು ಹೇಗೆ ಎನ್ನುವ ವಿವರಗಳನ್ನು ನಾವು ನೀಡುತ್ತೇವೆ.

ನಾಣ್ಯ 2 ರೂಪಾಯಿಯದ್ದಾಗಿರಬೇಕು, ಭಾರತದ್ದಾಗಿರಬೇಕು. 1994,1995, 1997 ಮತ್ತು 2000 ಇಸವಿಯ ನಾಣ್ಯವಾಗಿರಬೇಕು. ನಾಣ್ಯದ ಮೇಲೆಯೇ ಅದರ ಇಸವಿಯನ್ನೂ ಬರೆದಿರುತ್ತಾರೆ. ಇಷ್ಟು ವಿವರಗಳು ಸರಿ ಎನಿಸುವ ನಾಣ್ಯಗಳು ನಿಮ್ಮ ಬಳಿ ಇದ್ದರೆ, ನೀವು 5 ಲಕ್ಷ ರೂಪಾಯಿ ಗಳಿಸಬಹುದು. ಒಂದು ನಾಣ್ಯಕ್ಕೆ 5 ಲಕ್ಷ ರೂಪಾಯಿ ಗಳಿಸಬಹುದು. ಅಂದರೆ ನಿಮ್ಮ ಬಳಿ ಏನಾದರೂ ಇಂಥಾ ಹತ್ತಾರು ಕಾಣ್ಯ ಇತ್ತು ಎಂದುಕೊಳ್ಳಿ.. ನೀವು ನೋಡನೋಡುತ್ತಿದ್ದಂತೆಯೇ ಲಕ್ಷಾಧೀಶ್ವರರಾಗುತ್ತೀರಿ.

ಇದನ್ನೂ ಓದಿ: Covishield ಲಸಿಕೆ ಹಾಕಿಸಿಕೊಂಡ ವರ ಬೇಕಾಗಿದ್ದಾನೆ: ವಧುವಿನ ಡಿಮ್ಯಾಂಡ್ ನೋಡಿ ಶಶಿ ತರೂರ್ ತಬ್ಬಿಬ್ಬು !

ಈಗ ನೀವು www.quikr.com ವೆಬ್​ಸೈಟ್​ ತೆರೆಯಿರಿ. ಈಗಾಗಲೇ ಈ ವೆಬ್​ಸೈಟಿನಲ್ಲಿ ಇಂಥಾ ಎರಡು 2 ರೂಪಾಯಿಯ ನಾಣ್ಯಗಳು 5 ಲಕ್ಷ ರೂಪಾಯಿಗೆ ಬಿಕರಿಯಾಗುತ್ತಿವೆ. ನಿಮ್ಮ ಬಳಿ ಇರುವ ನಾಣ್ಯದ ಉತ್ತಮ ಫೋಟೋ ತೆಗೆದುಕೊಳ್ಳಿ. ನಾಣ್ಯದ ಎರಡೂ ಬದಿಯ ಚಿತ್ರಗಳನ್ನು ತೆಗೆದುಕೊಳ್ಳಿ. ಅದರಲ್ಲಿರುವ ಎಲ್ಲಾ ವಿವಗಳು ಸ್ಪಷ್ಟವಾಗಿ ಕಾಣುವಂತಿರಬೇಕು. ನಂತರ ಈ ವೆಬ್​ಸೈಟಿನಲ್ಲಿ ಖಾತೆ ತೆರೆದು ಈ ಚಿತ್ರಗಳನ್ನು ಅಪ್​ಲೋಡ್ ಮಾಡಿ. ನಂತರ ಅದರಲ್ಲಿ ಆಡ್ ಡೀಟೆಲ್ಸ್ ಎಂದು ಕಾಣಿಸುತ್ತದೆ. ಅದರಲ್ಲಿ ನೀವು ನಿಮ್ಮ ವಿವರಗಳನ್ನು ತಿಳಿಸಿ. ನಿಮ್ಮ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಈಮೇಲ್ ಐಡಿ ಮುಂತಾದ ವಿವರಗಳನ್ನು ಅದರಲ್ಲಿ ನಮೂದಿಸಿ. ನಿಮ್ಮ ಪ್ರೊಫೈಲ್ ರೆಡಿ ಆಯ್ತು ಎಂದರೆ ಅಲ್ಲಿಗೆ ನಿಮ್ಮ ಕೆಲಸ ಮುಗಿದಂತೆಯೇ.

ಗ್ರಾಹಕರು ನೇರವಾಗಿ ನಿಮ್ಮನ್ನೇ ಸಂಪರ್ಕಿಸುತ್ತಾರೆ. ಈ ಆಫರ್ ನೋಡಿ ಅದೆಷ್ಟೋ ಜನ ತಮ್ಮ ಮನೆಯ ಮೂಲೆಗಳನ್ನೆಲ್ಲಾ ಜಾಲಾಡಿದ್ದಾರಂತೆ. ಎಲ್ಲರೂ ಬಹುತೇಕ ತಮ್ಮ ಬಾಲ್ಯದ ದಿನಗಳಲ್ಲಿ ಈ ನಾಣ್ಯವನ್ನು ನೋಡಿಯೇ ಇರ್ತೀರಾ… ಆದ್ರೆ ಅದರ ಬಗ್ಗೆ ಅಷ್ಟೆಲ್ಲಾ ಜಾಗರೂಕತೆ ಇರಲಿಕ್ಕಿಲ್ಲ. ಇಷ್ಟು ವರ್ಷಗಳಾದ ನಂತರ ಆ ಹಳೆಯ ನಾಣ್ಯಕ್ಕೆ ಅಷ್ಟೆಲ್ಲಾ ಬೆಲೆ ಬರುತ್ತೆ ಅಂತ ಗೊತ್ತಿದ್ರೆ ಖಂಡಿತಾ ಅಷ್ಟೆಲ್ಲಾ ನಿರ್ಲಕ್ಷ್ಯ ಮಾಡುತ್ತಲೇ ಇರಲಿಲ್ಲ ಎನ್ನುವುದು ಅಷ್ಟೇ ಸತ್ಯ.
Youtube Video

ಹಳೆಯ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಅನೇಕರಿಗೆ ಇರುತ್ತದೆ. ಅದೇ ರೀತಿ ಹಳೆಯ ನಾಣ್ಯಗಳನ್ನೂ ತುಂಬಾ ಜನ ಸಂಗ್ರಹಿಸ್ತಾರೆ. ಆದರೆ ಅವೆಲ್ಲ್ಕಕೂ ಈ ಬೆಲೆ ಇರುವುದಿಲ್ಲ. ಬಹಳ ಜನ ಹಳೆಯ ನಾಣ್ಯಗಳ ದೊಡ್ಡ ಸಂಗ್ರಹವನ್ನೇ ಹೊಂದಿರುತ್ತಾರೆ. ಆದರೆ ಅದರಲ್ಲಿ ಇರುವ ಯಾವುದನ್ನೂ ಮಾರಲು ಇಚ್ಛಿಸುವುದಿಲ್ಲ. ನಾಣ್ಯಗಳಂಥಾ ಕೆಲ ವಸ್ತುಗಳು ಹಳೆಯದಾದಷ್ಟೂ ಬೆಲೆ ಹೆಚ್ಚಿರುತ್ತದೆ. ಇವು ಆಂಟಿಕ್ ಗುಂಪಿಗೆ ಸೇರುತ್ತವೆ. ಆದರೆ ಸದ್ಯ ಇರುವ 2 ರೂಪಾಯಿ ನಾಣ್ಯ ಇನ್ನು ಆಂಟಿಕ್ ಎನಿಸುವಷ್ಟು ಹಳೆಯದಲ್ಲ. ಕೇವಲ 25 ವರ್ಷಗಳ ಹಿಂದಿನದ್ದು. ಆದರೂ ಇದನ್ನು ಹೀಗೇ ಜೋಪಾನ ಮಾಡಿದರೆ ಬಹುಶಃ ಮುಂದಿನ ದಿನಗಳಲ್ಲಿ ಅದಕ್ಕೂ ಆಂಟಿಕ್ ಬೆಲೆಯೇ ಬಂದು ಮತ್ತಷ್ಟು ಹೆಚ್ಚಿನ ಹಣ ಸಿಕ್ಕಿದರೂ ಆಶ್ಚರ್ಯವಿಲ್ಲ. ಆದರೆ ಈಗಿರುವ ಆಫರ್ ಮಾತ್ರ ಬಹಳ ಬೇಗನೇ ಹಣ ದೊರಕಿಸಿಕೊಡುತ್ತದೆ ಎನ್ನುವುದು ಅಷ್ಟೇ ಸತ್ಯ.
Published by: Soumya KN
First published: June 9, 2021, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories