• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Choco Tank Rescue: ಚಾಕೊಲೇಟ್ ತುಂಬಿದ ಟ್ಯಾಂಕಿಗೆ ಬಿದ್ದ ಇಬ್ಬರು ; ಇವರನ್ನು ರಕ್ಷಿಸಲುಪಟ್ಟ ಹರಸಾಹಸ ನೋಡಿ

Choco Tank Rescue: ಚಾಕೊಲೇಟ್ ತುಂಬಿದ ಟ್ಯಾಂಕಿಗೆ ಬಿದ್ದ ಇಬ್ಬರು ; ಇವರನ್ನು ರಕ್ಷಿಸಲುಪಟ್ಟ ಹರಸಾಹಸ ನೋಡಿ

ಚಾಕೊಲೇಟ್ ತುಂಬಿದ ಟ್ಯಾಂಕ್ ಗೆ ಬಿದ್ದ ವ್ಯಕ್ತಿಗಳ ರಕ್ಷಣೆ

ಚಾಕೊಲೇಟ್ ತುಂಬಿದ ಟ್ಯಾಂಕ್ ಗೆ ಬಿದ್ದ ವ್ಯಕ್ತಿಗಳ ರಕ್ಷಣೆ

ಪೆನ್ಸಿಲ್ವೇನಿಯಾದ ಮಾರ್ಸ್ ಎಂ & ಎಂ ಎಂಬ ಚಾಕೊಲೇಟ್‌ಗಳು, ಕ್ಯಾಂಡಿ, ಬಾರ್ ಗಳ ಉತ್ಪಾದನೆಗೆ ಹೆಸರುವಾಸಿಯಾಗಿರುವ ಕಾರ್ಖಾನೆ ನಿನ್ನೆ ನಡೆದ ಒಂದು ಅವಘಡದಿಂದಾಗಿ ಸುದ್ದಿಯಾಗಿದೆ. ಪೆನ್ಸಿಲ್ವೇನಿಯಾದ ಮಾರ್ಸ್ ಎಂ & ಎಂ ಕಾರ್ಖಾನೆಯಲ್ಲಿ ಚಾಕೊಲೇಟ್ ತುಂಬಿದ ಟ್ಯಾಂಕ್‌ಗೆ ಇಬ್ಬರು ವ್ಯಕ್ತಿಗಳು ಬಿದ್ದಿರುವ ಘಟನೆ ವರದಿಯಾಗಿದೆ.

ಮುಂದೆ ಓದಿ ...
  • Share this:

ಪೆನ್ಸಿಲ್ವೇನಿಯಾದ ಮಾರ್ಸ್ ಎಂ & ಎಂ (Mars M&M) ಎಂಬ ಚಾಕೊಲೇಟ್‌ಗಳು, ಕ್ಯಾಂಡಿ, ಬಾರ್ ಗಳ ಉತ್ಪಾದನೆಗೆ ಹೆಸರುವಾಸಿಯಾಗಿರುವ ಕಾರ್ಖಾನೆ (Factory) ನಿನ್ನೆ ನಡೆದ ಒಂದು ಅವಘಡದಿಂದಾಗಿ ಸುದ್ದಿಯಾಗಿದೆ. ಪೆನ್ಸಿಲ್ವೇನಿಯಾದ ಮಾರ್ಸ್ ಎಂ & ಎಂ ಕಾರ್ಖಾನೆಯಲ್ಲಿ ಚಾಕೊಲೇಟ್ (chocolate) ತುಂಬಿದ ಟ್ಯಾಂಕ್‌ಗೆ (Tank) ಇಬ್ಬರು ವ್ಯಕ್ತಿಗಳು ಬಿದ್ದಿರುವ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಚಾಕೊಲೇಟ್ ತುಂಬಿದ ಟ್ಯಾಂಕ್‌ಗೆ ಬಿದ್ದ ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ (firefighters) ಸುರಕ್ಷಿತವಾಗಿ ಹೊರತರುವ ಮೂಲಕ ರಕ್ಷಿಸಿದ್ದಾರೆ. ಇಬ್ಬರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇನ್ನೊಬ್ಬ ವ್ಯಕ್ತಿಯ ಸಮೀಪವಿರುವ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ (Medical treatment) ಪಡೆಯುತ್ತಿದ್ದಾರೆ.


ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ರವಾನೆ
ಮಾರ್ಸ್ ಎಂ & ಎಂ ಕಾರ್ಖಾನೆಯಲ್ಲಿ ನಿನ್ನೆ ನಡೆದ ಈ ಅವಘಡದಲ್ಲಿ ಇಬ್ಬರೂ ವ್ಯಕ್ತಿಗಳು ಚಾಕೊಲೇಟ್ ಟ್ಯಾಂಕ್ ಒಳಗೆ ಹೇಗೆ ಬಿದ್ದಿದ್ದಾರೆ ಎಂಬುದರ ಬಗ್ಗೆ ಯಾವುದೇ ಸ್ಟಷ್ಟನೆಗಳು ದೊರೆತಿಲ್ಲ. ಇಬ್ಬರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇನ್ನೊಬ್ಬ ವ್ಯಕ್ತಿಯ ಸಮೀಪವಿರುವ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.


ಲಂಕಾಸ್ಟರ್ ಕೌಂಟಿ ವೈಡ್ ಕಮ್ಯುನಿಕೇಷನ್ಸ್‌ನ ಅಧಿಕಾರಿಗಳು,ಟ್ಯಾಂಕ್ ನಲ್ಲಿ ಅರ್ಧ ಆಳ ಮಾತ್ರ ಅಂದರೆ ಸೊಂಟದವರೆಗೆ ಮಾತ್ರ ಟ್ಯಾಂಕ್ ನಲ್ಲಿ ಚಾಕೋಲೆಟ್ ತುಂಬಿದ್ದರಿಂದ ವ್ಯಕ್ತಿಗಳು ಮುಳುಗುವ ಅಪಾಯವಿರಲಿಲ್ಲ. ಹೀಗಾಗಿ ಅವರಿಗೆ ಪ್ರಾಣಾಪಾಯದಂತಹ ಸ್ಥಿತಿ ಎದುರಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಲಂಕಾಸ್ಟರ್ ಕೌಂಟಿ 911 ಡಿಸ್ಪ್ಯಾಚ್‌ನ ಮೇಲ್ವಿಚಾರಕ ನಿಕ್ ಸ್ಕೋನ್‌ಬರ್ಗರ್ ಸುದ್ದಿ ಮಾಧ್ಯಮ ಸಿಎನ್‌ಎನ್‌ನೊಂದಿಗೆ ಮಾತನಾಡಿ, ಘಟನೆಯಿಂದ ರಕ್ಷಿಸಿದ ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿಯನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಇನ್ನೊಬ್ಬರನ್ನು ಹಾಗೆಯೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು ಎಂದರು.


ಟ್ಯಾಂಕ್ ಬದಿಯಲ್ಲಿ ರಂಧ್ರ ಕೊರೆದು ರಕ್ಷಣೆ
ಅಗ್ನಿಶಾಮಕ ಸಿಬ್ಬಂದಿ ಟ್ಯಾಂಕ್ ಒಳಗೆ ಬಿದ್ದ ವ್ಯಕ್ತಿಗಳನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ವ್ಯಕ್ತಿಗಳನ್ನು ಕೆಳಗಿನಿಂದ ಮೇಲಕ್ಕೆ ಹೊರತೆಗೆಯಲು ಸಾಧ್ಯವಾಗದ ಕಾರಣ ಅವರನ್ನು ಸುರಕ್ಷಿತವಾಗಿ ಹೊರತೆಗೆಯಲು ಟ್ಯಾಂಕ್‌ನ ಬದಿಯಲ್ಲಿ ರಂಧ್ರವನ್ನು ಕೊರೆಯಬೇಕಾಯಿತು.


ಇದನ್ನೂ ಓದಿ:  Labour Rules: ಜುಲೈನಿಂದ ವಾರದಲ್ಲಿ 4 ದಿನ ಕೆಲಸ? ಹೊಸ ಕಾರ್ಮಿಕ ನೀತಿಯಲ್ಲಿ ಏನಿದೆ?


“ಟ್ಯಾಂಕ್ ಒಳಗೆ ಸಿಲುಕಿದ ವ್ಯಕ್ತಿಗಳನ್ನು ಹೊರತರುವುದು ಸುಲಭದ ಕೆಲಸವಾಗಿರಲಿಲ್ಲ. ಅವರನ್ನು ಪ್ರಾಣಾಪಾಯದಿಂದ ರಕ್ಷಿಸಲು ಚಾಕೋಲೆಟ್ ತುಂಬಿದ ಟ್ಯಾಂಕರ್ಗಳ ಬದಿಯಲ್ಲಿ ರಂಧ್ರ ಮಾಡಲಾಯಿತು. ಈ ರಂದ್ರದ ಮೂಲಕ ಸಾಕಷ್ಟು ಚಾಕೋಲೆಟ್ ಹೊರಗೆ ಬಂದಿತು. ತದನಂತರ ಇಬ್ಬರನ್ನು ಮೇಲಕ್ಕೆ ಎತ್ತುವುದು ಸುಲಭವಾಯಿತು”ಎಂದು ಲ್ಯಾಂಕಾಸ್ಟರ್ ಕೌಂಟಿ 911 ಡಿಸ್ಪ್ಯಾಚ್‌ನ ಸಂವಹನ ಮೇಲ್ವಿಚಾರಕ ಬ್ರಾಡ್ ವೋಲ್ಫ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಸಿಎನ್‌ಎನ್ ಉಲ್ಲೇಖಿಸಿದೆ.


ಚಾಕೋಲೆಟ್ ಟ್ಯಾಂಕ್ ಗೆ ಬಿದ್ದ ವ್ಯಕ್ತಿಗಳಿಗೆ ಯಾವುದೇ ಹೆಚ್ಚಿನ ಗಾಯಗಳು ಆಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಮೂಲಗಳು ಸಿಎನ್‌ಎನ್‌ಗೆ ತಿಳಿಸಿವೆ. ಸಿಎನ್‌ಎನ್ ಉಲ್ಲೇಖಿಸರುವಂತೆ ಮಾರ್ಸ್ ರಿಗ್ಲಿ ವಕ್ತಾರರು ಮಾತನಾಡಿ "ನಾವು ಪರಿಸ್ಥಿತಿಯನ್ನು ಸಕ್ರಿಯವಾಗಿ ನಿರ್ವಹಿಸಿದ್ದೇವೆ ಮತ್ತು ಸೈಟ್‌ನಲ್ಲಿ ತುರ್ತು ತಂಡಗಳನ್ನು ಬೆಂಬಲಿಸುವುದು ನಮ್ಮ ಪ್ರಾಥಮಿಕ ಗುರಿಯಾಗಿತ್ತು" ಎಂದರು. ಅಧಿಕಾರಿಗಳ ಪ್ರಕಾರ, ವ್ಯಕ್ತಿಗಳು ಹೇಗೆ ಟ್ಯಾಂಕ್‌ಗೆ ಬಿದ್ದಿದ್ದಾರೆ ಎಂಬುದು ಆರಂಭದಲ್ಲಿ ಸ್ಪಷ್ಟವಾಗಿಲ್ಲ, ವ್ಯಕ್ತಿಗಳು ಸುಧಾರಿಸಿಕೊಂಡ ನಂತರ ಅವರೇ ಘಟನೆಯ ಬಗ್ಗೆ ವಿವರಿಸಲಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.


ಎಂ & ಎಂ ಕಾರ್ಖಾನೆಪರಿಚಯ
ಈ ಚಾಕೋಲೆಟ್ ಕಂಪನಿಯು ಪೆನ್ಸಿಲ್ವೇನಿಯಾದ ಲ್ಯಾಂಕಾಸ್ಟರ್ ಕೌಂಟಿಯಲ್ಲಿದೆ ಎಂದು ಕೆಲವು ವೆಬ್‌ಸೈಟ್ ಮಾಹಿತಿ ನೀಡುತ್ತವೆ. ಈ ಎಲಿಜಬೆತ್‌ಟೌನ್ ಮಾರ್ಸ್ ಕಾರ್ಖಾನೆಯು ಪೆನ್ಸಿಲ್ವೇನಿಯಾದ ಹರ್ಷೆಸ್‌ನಿಂದ 15 ಮೈಲುಗಳಿಗಿಂತ ಕಡಿಮೆ ದೂರದಲ್ಲಿದೆ.


ಇದನ್ನೂ ಓದಿ:  LGBTQ ಸಮುದಾಯದವರನ್ನು ಮುಕ್ತವಾಗಿ ಸ್ವಾಗತಿಸಿ, ಆಶ್ರಯ ನೀಡಿದ 5 ಭಾರತೀಯ ನಗರಗಳಿವು


ಮಾರ್ಸ್ ಎಂ & ಎಂ ಕಾರ್ಖಾನೆಯು ಚಾಕೊಲೇಟ್‌ಗಳು, ಕ್ಯಾಂಡಿ ಬಾರ್‌ಗಳು ಮುಂತಾದ ಹಲವಾರು ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳನ್ನು ಉತ್ಪಾದಿಸುವ ಕಾರ್ಖಾನೆಯಾಗಿದೆ. ಇದು ಚಾಕೋಲೆಟ್ ಉತ್ಪಾದನೆಗೆ ಹೆಚ್ಚು ಜನಪ್ರಿಯವಾಗಿದೆ.

top videos
    First published: