2022ರಲ್ಲಿ 2 ಹೊಚ್ಚಹೊಸ Mahindra SUV ಮಾರುಕಟ್ಟೆಗೆ ಲಗ್ಗೆ: ಬೆಲೆ ಹಾಗೂ ವಿಶೇಷತೆಗಳ ವಿವರ ಇಲ್ಲಿದೆ..

Mahindra: ವಾಹನ ಕ್ಷೇತ್ರದಲ್ಲಿ ಗಮನ ಸೆಳೆಯಬೇಕೆಂಬ ಉದ್ದೇಶದಿಂದಲೇ ಮಹೀಂದ್ರಾ ತನ್ನ ಅತ್ಯಾಧುನಿಕ ವಾಹನಗಳಲ್ಲಿ ವಿನ್ಯಾಸವನ್ನು ವಿಶೇಷವಾಗಿ ಸಿದ್ಧಪಡಿಸಿದೆ. ಸುರಕ್ಷತೆಯ ಅಂಶಗಳಿಗೂ ಹೆಚ್ಚಿನ ಗಮನ ನೀಡಲಾಗಿದ್ದು ವಾಹನಗಳು ಹೆಚ್ಚಿನ ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡಿದೆ.

Mahindra

Mahindra

 • Share this:

  ಸ್ವದೇಶಿ ಕಾರು ತಯಾರಕ ಸಂಸ್ಥೆ ಮಹೀಂದ್ರಾ,ಇದೀಗ Mahindra XUV700 5/7 ಸೀಟರ್‌ SUV ಅನ್ನು ಇತ್ತೀಚೆಗೆ ಪರಿಚಯಿಸಿದೆ. ಅದೇ ರೀತಿ ಈ ವರ್ಷ ರಸ್ತೆಗಿಳಿಯಲಿರುವ ಹೊಸ ಮಾಡೆಲ್‌ಗಳನ್ನು ಮಹೀಂದ್ರಾ ಹೊಂದಿದ್ದು ವರದಿಯ ಪ್ರಕಾರ 2022ರ ಆರಂಭದಲ್ಲಿ ಮಹೀಂದ್ರಾ ಎರಡು ಹೊಸ SUVಗಳನ್ನು ಪರಿಚಯಿಸುವ ಯೋಜನೆಯಲ್ಲಿದೆ. ಅದುವೇ ಮಹೀಂದ್ರಾ eKUV100 ಹಾಗೂ ನ್ಯೂ ಜನರೇಶನ್ ಮಹೀಂದ್ರಾ ಸ್ಕಾರ್ಪಿಯೋ. ಈ ಎರಡೂ ಮಾಡೆಲ್‌ಗಳ ಬೆಲೆ ಹಾಗೂ ವಿಶೇಷತೆಗಳನ್ನು ತಿಳಿದುಕೊಳ್ಳೋಣ.


  ಮಹೀಂದ್ರಾ eKUV100:


  ಎಲೆಕ್ಟ್ರಿಕ್ ಮಿನಿ SUV ಯು 15.9kWh ಬ್ಯಾಟರಿ ಪ್ಯಾಕ್‌ನೊಂದಿಗೆ ಮಾರುಕಟ್ಟೆಗೆ ದುಮುಖಲಿದ್ದು 54.4bhp ಹಾಗೂ 120Nmಗೆ ಸಾಕಷ್ಟಾಗುವ ಒಂದೇ ಎಲೆಕ್ಟ್ರಿಕ್ ಮೋಟರ್‌ಗೆ ಶಕ್ತಿಯನ್ನು ಇದು ನೀಡುತ್ತದೆ. ಬ್ಯಾಟರಿಯು ಸ್ಟ್ಯಾಂಡರ್ಡ್ ಚಾರ್ಜರ್ ಹೊಂದಿರುವುದರಿಂದ ಬರೋಬ್ಬರಿ 5 ಗಂಟೆ 45 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. eKUV100 150 ಕಿ.ಮೀಗಿಂತ ಅಧಿಕ ರೇಂಜನ್ನು ಒದಗಿಸುವುದರಿಂದ ಉತ್ಪಾದನೆ ಮಾದರಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಇನ್ನು ವಾಹನದ ಬೆಲೆ ನೋಡುವುದಾದರೆ ಮೈಕ್ರೋ SUV 9 ಲಕ್ಷ ರೂ. - 13 ಲಕ್ಷ ರೂ. ಬೆಲೆಯಲ್ಲಿ ದೊರಕುವ ಸಾಧ್ಯತೆ ಇದೆ. ಮಹೀಂದ್ರಾ eKUV100 ದೇಶದಲ್ಲಿಯೇ ಅತ್ಯಂತ ಉತ್ತಮ EV ವಾಹನವಾಗಲಿದೆ.


  ನ್ಯೂ ಜೆನ್ ಮಹೀಂದ್ರಾ ಸ್ಕಾರ್ಪಿಯೋ:


  ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋ ಮುಂದಿನ ವರ್ಷದ ಕಾರು ಬಿಡುಗಡೆಗಳಲ್ಲಿ ಪ್ರಮುಖ ಕಾರಾಗಿದೆ. SUV ಹೊಸ ಎಂಜಿನ್ ಸೆಟಪ್‌ನೊಂದಿಗೆ ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸದಲ್ಲಿ ಅನೇಕ ಬದಲಾವಣೆಗಳನ್ನು ಹೊರತಂದಿದೆ. ಇತ್ತೀಚೆಗೆ ದೊರಕಿದ ಕಾರಿನ ಹೊಸ ಚಿತ್ರಗಳಲ್ಲಿ ತೋರಿಸಿರುವಂತೆ ಹೊಸ ಮಾಡೆಲ್‌ನಲ್ಲಿ 360 ಡಿಗ್ರಿ ಪಾರ್ಕಿಂಗ್ ಕ್ಯಾಮರಾ ಇದ್ದು ಇದರೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್-ಟೋನ್ ಲೆಥೆರೆಟ್ ಅಪ್‌ಹೋಲ್ಸ್‌ಟರಿ, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಫ್ಲಾಟ್ ಬಾಟಮ್ ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವೀಲ್ ಹೊಂದಿದೆ ಎನ್ನಲಾಗಿದೆ.


  ಎಂಜಿನ್ ಮುಂಭಾಗದಲ್ಲಿ 2022 ಮಹೀಂದ್ರಾ ಸ್ಕಾರ್ಪಿಯೋ 2.0L ಟರ್ಬೊ ಇರಲಿದ್ದು 2.2L mHawk ಡೀಸೆಲ್ ಮೋಟಾರ್ ಅನ್ನು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಪಡೆಯುತ್ತದೆ ಎನ್ನಲಾಗಿದೆ. ಇನ್ನು ವಾಹನದ ಬೆಲೆ 12 ಲಕ್ಷ ರೂ ನಿಂದ ಆರಂಭವಾಗುವ ಸಾಧ್ಯತೆ ಇದೆ.


  ಇದನ್ನೂ ಓದಿ: Electric vehicle: ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ 26 ಸಾವಿರ ಕೋಟಿ ಪ್ರೋತ್ಸಾಹ ಯೋಜನೆ ಘೋಷಿಸಿದ ಕೇಂದ್ರ

  ವಾಹನ ಕ್ಷೇತ್ರದಲ್ಲಿ ಗಮನ ಸೆಳೆಯಬೇಕೆಂಬ ಉದ್ದೇಶದಿಂದಲೇ ಮಹೀಂದ್ರಾ ತನ್ನ ಅತ್ಯಾಧುನಿಕ ವಾಹನಗಳಲ್ಲಿ ವಿನ್ಯಾಸವನ್ನು ವಿಶೇಷವಾಗಿ ಸಿದ್ಧಪಡಿಸಿದೆ. ಸುರಕ್ಷತೆಯ ಅಂಶಗಳಿಗೂ ಹೆಚ್ಚಿನ ಗಮನ ನೀಡಲಾಗಿದ್ದು ವಾಹನಗಳು ಹೆಚ್ಚಿನ ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡಿದೆ. ವಾಹನಗಳ ಬೆಲೆಯನ್ನು ಅಂದಾಜಿನಲ್ಲಿ ತಿಳಿಸಲಾಗಿದ್ದು ಕಂಪನಿ ತನ್ನ ವಾಹನಗಳ ಬೆಲೆಯನ್ನು ಇನ್ನೂ ಅಧಿಕೃತವಾಗಿ ಘೋಷಿಸಬೇಕಾಗಿದೆ. ಆದರೆ ನವೀನ ವಿನ್ಯಾಸಗಳೊಂದಿಗೆ ಬಂದಿರುವ ಮಹೀಂದ್ರಾ eKUV100 ಹಾಗೂ ನ್ಯೂ ಜೆನ್ ಮಹೀಂದ್ರಾ ಸ್ಕಾರ್ಪಿಯೋ ಮಹೀಂದ್ರಾ ಅಭಿಮಾನಿಗಳ ಮನ ಗೆಲ್ಲುವುದಂತೂ ನಿಜವಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: