2 ತಿಂಗಳ ಬಳಿಕ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸಂಪರ್ಕ; ಸೋಮವಾರದಿಂದ ಪೋಸ್ಟ್​ಪೇಯ್ಡ್​ ಸೇವೆ ಆರಂಭ

ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಿದ್ದಕ್ಕೆ ಟ್ರಾವೆಲ್ ಸಂಸ್ಥೆಗಳು ಕೇಂದ್ರ ಸರ್ಕಾರದ ಮೊರೆಹೋಗಿದ್ದವು. ಮೊಬೈಲ್ ಕನೆಕ್ಷನ್ ಇಲ್ಲದ ಕಾರಣ ಯಾವುದೇ ಪ್ರವಾಸಿಗರೂ ಕಣಿವೆ ನಾಡಿಗೆ ಬರುತ್ತಿಲ್ಲ ಎಂದು ಆಕ್ಷೇಪಿಸಿದ್ದರು. ಇದರಿಂದಾಗಿ ಸರ್ಕಾರ ತ್ವರಿತವಾಗಿ ಮೊಬೈಲ್ ಕನೆಕ್ಷನ್ ನೀಡಲು ನಿರ್ಧಾರ ತೆಗೆದುಕೊಂಡಿದೆ.

Sushma Chakre | news18-kannada
Updated:October 12, 2019, 1:23 PM IST
2 ತಿಂಗಳ ಬಳಿಕ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸಂಪರ್ಕ; ಸೋಮವಾರದಿಂದ ಪೋಸ್ಟ್​ಪೇಯ್ಡ್​ ಸೇವೆ ಆರಂಭ
ಸಾಂದರ್ಭಿಕ ಚಿತ್ರ
Sushma Chakre | news18-kannada
Updated: October 12, 2019, 1:23 PM IST
ಶ್ರೀನಗರ (ಅ. 12): ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ನಿಷೇಧಿಸಲಾಗಿದ್ದ ಪೋಸ್ಟ್​ಪೇಯ್ಡ್​ ಮೊಬೈಲ್​ ಸೇವೆ ಸೋಮವಾರದಿಂದ ಮತ್ತೆ ಆರಂಭವಾಗುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಮಾನ್ಯತೆಯನ್ನು ರದ್ದುಗೊಳಿಸಿದ ನಂತರ ಕಳೆದ 69 ದಿನಗಳಿಂದ ಪೋಸ್ಟ್​ಪೇಯ್ಡ್​ ಸೇವೆ ಸೇರಿದಂತೆ ಎಲ್ಲ ರೀತಿಯ ಸಂಪರ್ಕ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಿನ್ಸಿಪಲ್ ಸೆಕ್ರೆಟರಿ ರೋಹಿತ್ ಕನ್ಸಾಲ್, ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ಎಲ್ಲ ಪೋಸ್ಟ್​ಪೇಯ್ಡ್​ ಮೊಬೈಲ್ ಕನೆಕ್ಷನ್​ಗಳನ್ನೂ ಮತ್ತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮೊದಲು ಬಿಎಸ್​ಎನ್​ಎಲ್​ ಗ್ರಾಹಕರಿಗೆ ಮಾತ್ರ ಕನೆಕ್ಷನ್ ನೀಡಲು ನಿರ್ಧರಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಹಾಗೇ, ಖಾಸಗಿ ಮೊಬೈಲ್ ಕಂಪನಿಗಳ ಸಿಮ್ ಹೊಂದಿರುವವರಿಗೆ ಇನ್​ಕಮಿಂಗ್ ಕಾಲ್​ಗಳಿಗೆ ಮಾತ್ರ ಅವಕಾಶ ನೀಡುವ ಸಾಧ್ಯತೆಯಿದೆ. ಆರಂಭಿಕವಾಗಿ ಪೋಸ್ಟ್​​ಪೇಯ್ಡ್​ ಸೇವೆಯನ್ನು ಮರುಆರಂಭಿಸಲಾಗುತ್ತದೆ. ಮತ್ತು ಪ್ರೀಪೇಯ್ಡ್ ಸೇವೆ ಪುನರಾರಂಭಿಸುವುದು ಸ್ವಲ್ಪ ತಡವಾಗಲಿದೆ. ಪೋಸ್ಟ್​ಪೇಯ್ಡ್​ ಮೊಬೈಲ್​ ಗ್ರಾಹಕರ ಸೇವೆಯನ್ನು ಸರಿಯಾಗಿ ಪರಿಶೀಲನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮುದ್ರ ದಡದಲ್ಲಿ ಕಸ ಆಯ್ದು ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ ಮೋದಿ

ಕಣಿವೆಯಲ್ಲಿ 66 ಲಕ್ಷ ಮೊಬೈಲ್​ ಚಂದಾದಾರರಿದ್ದಾರೆ. ಇವರಲ್ಲಿ ಸುಮಾರು 40 ಲಕ್ಷ ಮಂದಿ ಪೋಸ್ಟ್​ಪೇಯ್ಡ್ ಗ್ರಾಹಕರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕಣಿವೆ ಕೇಂದ್ರಾಡಳಿತ ಪ್ರದೇಶವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿ, ಕೇಂದ್ರ ಸಲಹಾ ಸಮಿತಿ ಅವಕಾಶ ನೀಡಿದ ಎರಡು ದಿನಗಳ ಬಳಿಕ ಪೋಸ್ಟ್​ಪೇಯ್ಡ್ ಸೇವೆಯನ್ನು ಪುನರಾರಂಭಿಸುವ ಬೆಳವಣಿಗೆ ನಡೆದಿದೆ. ಮೊಬೈಲ್​ ಫೋನ್​ಗಳನ್ನು ಸ್ಥಗಿತಗೊಳಿಸಿದರೆ ಯಾವ ಪ್ರವಾಸಿಗರು ಜಮ್ಮು-ಕಾಶ್ಮೀರಕ್ಕೆ ಬರುವುದಿಲ್ಲ ಎಂದು ಪ್ರವಾಸ ಸಂಘ ಸಂಸ್ಥೆಗಳು ಆಡಳಿತಕ್ಕೆ ಮನವಿ ಮಾಡಿದ್ದವು.

ಇಂದಿನಿಂದ ಪೋಸ್ಟ್​ಪೇಯ್ಡ್​ ಸೇವೆಯನ್ನು ಆರಂಭಿಸಲಾಗುವುದು ಎಂದು ಮೊದಲು ಹೇಳಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಆ ನಿರ್ಧಾರವನ್ನು ಬದಲಾಯಿಸಲಾಗಿದೆ.  ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಿದ್ದಕ್ಕೆ ಟ್ರಾವೆಲ್ ಸಂಸ್ಥೆಗಳು ಕೇಂದ್ರ ಸರ್ಕಾರದ ಮೊರೆಹೋಗಿದ್ದವು. ಮೊಬೈಲ್ ಕನೆಕ್ಷನ್ ಇಲ್ಲದ ಕಾರಣ ಯಾವುದೇ ಪ್ರವಾಸಿಗರೂ ಕಣಿವೆ ನಾಡಿಗೆ ಬರುತ್ತಿಲ್ಲ ಎಂದು ಆಕ್ಷೇಪಿಸಿದ್ದರು. ಇದರಿಂದಾಗಿ ಸರ್ಕಾರ ತ್ವರಿತವಾಗಿ ಮೊಬೈಲ್ ಕನೆಕ್ಷನ್ ನೀಡಲು ನಿರ್ಧಾರ ತೆಗೆದುಕೊಂಡಿದೆ.

 
Loading...

First published:October 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...