ಬೆಂಕಿ ನಂದಿಸುವ ವೇಳೆ ನಾಪತ್ತೆಯಾಗಿದ್ದ ಅಗ್ನಿಶಾಮಕ ದಳದ ಇಬ್ಬರು ಅಸ್ಸಾಂನ ತೈಲ ಬಾವಿ ಬಳಿ ಶವವಾಗಿ ಪತ್ತೆ

ಆಯಿಲ್ ಇಂಡಿಯಾ ಲಿಮಿಟೆಡ್ ತೈಲ ಬಾವಿಯಲ್ಲಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ಎಷ್ಟು ತೀವ್ರವಾಗಿತ್ತು ಅಂದರೆ ಅದು 30 ಕಿ.ಮೀ. ದೂರದವರೆಗೂ ಕಾಣುತ್ತಿತ್ತು. ಬೆಂಕಿಯಿಂದ ಎದ್ದ ಹೊಗೆ ನೂರಾರು ಮೀಟರ್ ಎತ್ತರದವರೆಗೂ ಚಾಚಿಕೊಂಡಿತ್ತು.

ಅಸ್ಸಾಂನ ಆಯಿಲ್ ಇಂಡಿಯಾ ತೈಲ ಬಾವಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ.

ಅಸ್ಸಾಂನ ಆಯಿಲ್ ಇಂಡಿಯಾ ತೈಲ ಬಾವಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ.

 • Share this:
  ಆಯಿಲ್ ಇಂಡಿಯಾ ಲಿಮಿಟೆಡ್‌ನ ಕಾಣೆಯಾದ ಇಬ್ಬರು ಅಗ್ನಿಶಾಮಕ ದಳದವರು ಅಸ್ಸಾಂನ ದೊಡ್ಡ ತೈಲ ಬಾವಿಯ ಬಳಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಅಸ್ಸಾಂನ ತಿನ್​​ಸುಕಿಯಾ ಜಿಲ್ಲೆಯಲ್ಲಿ ಬಾಗ್ಜಾನ್​ ತೈಲ ಬಾವಿ ಇದೆ. ಕಳೆದ ಎರಡು ವಾರಗಳಿಂದ ಇಲ್ಲಿ ಅನಿಯಂತ್ರಿಕವಾಗಿ ಅನಿಲ ಹೊರಸೂಸುತ್ತಿದ್ದು, ಮಂಗಳವಾರ ಬೆಂಕಿ ಕಾಣಿಸಿಕೊಂಡಿತ್ತು.

  ಅಸ್ಸಾಂ ರಾಜ್ಯ ಸರ್ಕಾರ ಸಹಾಯಕ್ಕೆ ಮನವಿ ಮಾಡಿದ ಬಳಿಕ ಭಾರತೀಯ ವಾಯುಪಡೆ ಮತ್ತು ಸೇನೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದವು. ಅರೆಸೈನಿಕ ಪಡೆಯ ಜೊತೆಗೆ ಎನ್​ಡಿಆರ್​ಎಫ್ ತಂಡ ಕೂಡ ಸ್ಥಳದಲ್ಲಿ ಬೀಡು ಬಿಟ್ಟು ಬೆಂಕಿ ನಂದಿಸುವ ಕಾರ್ಯಾಚರಣೆ ಪಾಲ್ಗೊಂಡಿದ್ದವು.

  ಶುಚಿ ಕಾರ್ಯಾಚರಣೆ ವೇಳೆ ಬಾವಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಆಯಿಲ್ ಇಂಡಿಯಾ ಹೇಳಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ಗ್ಯಾಸ್​ ಲೀಕ್​ ಆಗುತ್ತಿದ್ದ ಸ್ಥಳದ ಸಮೀಪದಲ್ಲಿ ಜನರು ಪ್ರತಿಭಟನೆ ಮಾಡುತ್ತಿದ್ದರು. ಮತ್ತು ಎಲ್ಲಾ ಆಯಿಲ್ ಇಂಡಿಯಾ ಮತ್ತು ಒಎನ್‌ಜಿಸಿ (ತೈಲ ಮತ್ತು ನೈಸರ್ಗಿಕ ಅನಿಲ ನಿಗಮ) ತಂಡಗಳನ್ನು ಸ್ಥಳಾಂತರಿಸಲಾಗಿತ್ತು ಎಂದು ಹೇಳಿದೆ.

  ಇದನ್ನು ಓದಿ: ಮತ್ತೆ 9.9 ಸಾವಿರ ಕೊರೋನಾ ಪ್ರಕರಣ ಪತ್ತೆ; ದೇಶದಲ್ಲಿ 3 ಲಕ್ಷದ ಗಡಿ ಸಮೀಪಿಸಿದ ಸೋಂಕಿತರ ಸಂಖ್ಯೆ

  ಆಯಿಲ್ ಇಂಡಿಯಾ ಲಿಮಿಟೆಡ್ ತೈಲ ಬಾವಿಯಲ್ಲಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ಎಷ್ಟು ತೀವ್ರವಾಗಿತ್ತು ಅಂದರೆ ಅದು 30 ಕಿ.ಮೀ. ದೂರದವರೆಗೂ ಕಾಣುತ್ತಿತ್ತು. ಬೆಂಕಿಯಿಂದ ಎದ್ದ ಹೊಗೆ ನೂರಾರು ಮೀಟರ್ ಎತ್ತರದವರೆಗೂ ಚಾಚಿಕೊಂಡಿತ್ತು. ಮೇ 27 ರಂದು ಸಂಭವಿಸಿದ ಭಾರೀ ಸ್ಫೋಟದ ನಂತರ ಈಗಾಗಲೇ ಧ್ವಂಸಗೊಂಡಿರುವ ಜೈವಿಕ ವೈವಿಧ್ಯತೆ ಇದೀಗ ಮತ್ತೆ ಅಪಾಯಕ್ಕೆ ಸಿಲುಕಿದಂತಾಗಿದೆ.

   
  First published: