Afghanistan Crisis| ಹಾರುವ ವಿಮಾನದಿಂದ ಕೆಳಗೆ ಬಿದ್ದವರ ಶವ; ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆ!

ವಿಮಾನದಿಂದ ಕೆಳಗೆ ಬಿದ್ದವರ ಮೃತದೇಹ 49 ವರ್ಷದ ಸೆಕ್ಯುರಿಟಿ ಗಾರ್ಡ್ ವಾಲಿ ಸಾಲೆಕ್ ಒಡೆತನದ ಮನೆಯ ಮೇಲ್ಛಾವಣಿಯ ಮೇಲೆ ಬಿದ್ದು, ತಲೆ ಮತ್ತು ದೇಹದ ಇತರೆ ಭಾಗಗಳು ಛಿದ್ರಗೊಂಡಿವೆ ಎಂದು ಎನ್​ಡಿವಿ ವರದಿ ಮಾಡಿದೆ.

ಅಫಘನಿಸ್ತಾನ ವಿಮಾನ ನಿಲ್ದಾಣದಲ್ಲಿ ಜನರ ಪರದಾಟ

ಅಫಘನಿಸ್ತಾನ ವಿಮಾನ ನಿಲ್ದಾಣದಲ್ಲಿ ಜನರ ಪರದಾಟ

 • Share this:
  ಕಾಬೂಲ್ (ಆಗಸ್ಟ್​ 19); ಕಳೆದ ಒಂದು ವಾರದಲ್ಲಿ ಆಫ್ಘಾನಿಸ್ತಾನದಲ್ಲಿ ಎಲ್ಲವೂ ಬದಲಾಗಿದೆ. ಜನರಿಂದ ಚುನಾಯಿತಗೊಂಡ ಸರ್ಕಾರ ಉರುಳಿದೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯ ನ ಮಾಡಿದ್ದಾರೆ. 20 ವರ್ಷಗಳಿಂದ ಅಧಿಕಾರದ ದಾಹದಲ್ಲಿ ಹಪಹಪಿಸು ತ್ತಿದ್ದ ತಾಲಿಬಾನಿಗಳು ಕೊನೆಗೂ ಆಫ್ಘನ್​ನಲ್ಲಿ ತಮ್ಮ ಅಧಿಕಾರದ ಚುಕ್ಕಾಣಿ ಯನ್ನು ಹಿಡಿದಿದ್ದಾರೆ. ತಾಲಿಬಾನಿಗಳಿಗೆ ಹೆದರಿರುವ ಆಫ್ಘನ್​ ಜನ ದೇಶದಿಂದ ಪಲಾಯನ ಮಾಡಲು ಮುಂದಾಗಿ ಅಮೆರಿಕದ ವಿಮಾನ ಹತ್ತಿ ಪರಾರಿಯಾಗಲು ಯತ್ನಿಸಿದ್ದ ಹಾಗೂ ಆ ವಿಮಾನದ ಲ್ಯಾಂಡಿಂಗ್​ ವ್ಹೀಲ್​ನಲ್ಲಿ ಕುಳಿತು ಪ್ರಯಾಣಿ ಸುವಾಗ ಸಂದರ್ಭದಲ್ಲಿ ಟೇಕಾಫ್​ ವೇಳೆ ಮೇಲಿಂದ ಇಬ್ಬರು ಕೆಳಗೆ ಬಿದ್ದ ದೃಶ್ಯಗ ಳು ವಿಶ್ವದಾದ್ಯಂತ ವೈರಲ್ ಆಗಿತ್ತು. ಇದೀಗ ವಿಮಾನದಿಂದ ಕೆಳಕ್ಕೆ ಬಿದ್ದು ಮೃತಪಟ್ಟವರ ದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. 

  ವಿಮಾನದಿಂದ ಕೆಳಗೆ ಬಿದ್ದವರ ಮೃತದೇಹ 49 ವರ್ಷದ ಸೆಕ್ಯುರಿಟಿ ಗಾರ್ಡ್ ವಾಲಿ ಸಾಲೆಕ್ ಒಡೆತನದ ಮನೆಯ ಮೇಲ್ಛಾವಣಿಯ ಮೇಲೆ ಬಿದ್ದು, ತಲೆ ಮತ್ತು ದೇಹದ ಇತರೆ ಭಾಗಗಳು ಛಿದ್ರಗೊಂಡಿವೆ ಎಂದು ಎನ್​ಡಿವಿ ವರದಿ ಮಾಡಿದೆ.

  ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರು ಸಲೆಕ್, "ಘಟನೆ ವೇಳೆ ನಾನು ನನ್ನ ಕುಟುಂಬದವರ ಜೊತೆಗೆ ಮನೆಯಲ್ಲೇ ಇದ್ದೆ. ಇದ್ದಕ್ಕಿದ್ದಂತೆ ಮನೆತ ಛಾವಣಿಯಿಂದ ಜೋರಾಗಿ ಥಡ್ ಎಂಬ ಶಬ್ಧ ಕೇಳಿ ಬಂದಿತ್ತು. ಆ ಶಬ್ಧ ಟ್ರಕ್ ಟೈರ್ ಛಿದ್ರವಾದಂತೆಯೇ ಇತ್ತು. ಆದರೆ ನಾನು ಮನೆಯ ಮೇಲ್ಛಾವಣಿಗೆ ಆಗಮಿಸಿ ನೋಡಿದಾಗ ಆ ದೃಶ್ಯವನ್ನು ಕಂಡು ಸಂಪೂರ್ಣವಾಗಿ ಆಘಾತಗೊಂಡೆ. ಮನೆಯ ಮೇಲೆ ಬಿದ್ದು ಇಬ್ಬರ ದೇಹವೂ ಛಿದ್ರವಾಗಿತ್ತು. ಈ ಭಯಾನಕ ದೃಶ್ಯವನ್ನು ಕಂಡು ನನ್ನ ಪತ್ನಿ ಮೂರ್ಛೆ ಹೋದಳು" ಎಂದು ಆತ ವಿವರಿಸಿದ್ದಾನೆ.

  ಕಾಬೂಲ್ ವಿಮಾನ ನಿಲ್ದಾಣದಲ್ಲಿ ಯುಎಸ್ ವಿಮಾನದಿಂದ ಕೆಳಗೆ ಬಿದ್ದ ವ್ಯಕ್ತಿಗಳು ತಾಲಿಬಾನ್ ಸೇನೆ ಅಫ್ಘಾನನ್ನು ನಿಯಂತ್ರಣವನ್ನು ವಶಪಡಿಸಿಕೊಂಡ ಒಂದು ದಿನದ ನಂತರ ರಾಜಧಾನಿ ಕಾಬೂಲ್​ನಿಂದ ಪಲಾಯನ ಮಾಡಲು ಸಾವಿರಾರು ಜನರ ಜೊತೆಗೆ ಇವರೂ ಸಹ ವಿಮಾನ ನಿಲ್ದಾಣದಲ್ಲಿ ನೆರೆದಿದ್ದರು. ಎಂದು ತನ್ನ ನೆರೆಹೊರೆಯವರು ತನಗೆ ಮಾಹಿತಿ ನೀಡಿದರು ಎಂದು ಸಲೆಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

  ಮೃತ ಇಬ್ಬರೂ ಪುರುಷರು ವಿಮಾನದ ಚಕ್ರಗಳನ್ನು ಹಿಡಿದು ಪ್ರಯಾಣ ಮಾಡಿದ್ದರು. ಆದರೆ, ವಿಮಾನ ಹೊರಟ ಕೆಲವೇ ನಿಮಿಷಗಳಲ್ಲಿ ಕೆಳಗೆ ಬಿದ್ದರು. ಅವರು ವಿಮಾನ ನಿಲ್ದಾಣ ದಿಂದ 4 ಕಿಲೋಮೀಟರ್ ದೂರದಲ್ಲಿರುವ ಸಾಲೆಕ್ ಅವರ ಮನೆಯ ಟೆರೇಸ್ ಮೇಲೆ ಅಪ್ಪಳಿಸಿದರು. ಅವರನ್ನು ವೈದ್ಯರಾದ ಸಫೀವುಲ್ಲಾ ಹೊಟಕ್ ಮತ್ತು ಫಿದಾ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಅಲ್ಲದೆ, ಮೃತರು 30ರ ಹರೆಯದವರು ಎಂದು ತಿಳಿದುಬಂದಿದೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊ ಳ್ಳಬೇಕು.
  Published by:MAshok Kumar
  First published: