ಡ್ರಾಪ್ ನೆಪದಲ್ಲಿ ಮಹಿಳೆಯ ಅತ್ಯಾಚಾರ, ಕೊಲೆ! ಬಾವಿಯಲ್ಲಿ ಸಿಕ್ತು ಮೃತದೇಹ

ತವರು ಮನೆಗೆ ಬರುತ್ತಿದ್ದವಳನ್ನು ಡ್ರಾಪ್ ಕೊಡುವ ನೆಪದಲ್ಲಿ ಯುವಕರು ಕಾಡಿಗೆ ಒಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿ ಬಾವಿಗೆಸೆದ ಘಟನೆ ನಡೆದಿದೆ. ಮಹಿಳೆ ಒಬ್ಬರೇ ತವರಿಗೆ ಬರುತ್ತಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜೈಪುರ(ಏ.26): ದೌಸಾ ಜಿಲ್ಲೆಯ ಹಳ್ಳಿಯೊಂದರಲ್ಲಿ 35 ವರ್ಷದ ವಿವಾಹಿತ ಮಹಿಳೆಯನ್ನು (Married woman) ಇಬ್ಬರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ (Murder) ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಸೋಮವಾರ ಜೈಪುರ (Jaipur) ಜಿಲ್ಲೆಯ ಬಸ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾವಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಶಂಕಿತರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪೊಲೀಸರ (Police) ಪ್ರಕಾರ, ಮಹಿಳೆ ಭಾನುವಾರ ಬೆಳಿಗ್ಗೆ ದೌಸಾದಲ್ಲಿರುವ ತನ್ನ ಪೋಷಕರ ಮನೆಗೆ ಹೋಗಲು ಜೈಪುರದಿಂದ ಬಸ್‌ನಲ್ಲಿ ಹೊರಟಿದ್ದಳು.

"ಅವಳು ದೌಸಾದಲ್ಲಿನ ತನ್ನ ಹಳ್ಳಿಯ ಬಸ್ ನಿಲ್ದಾಣವನ್ನು ತಲುಪಿದಳು. ಆಕೆಯ ಪೋಷಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದಳು, ಆರೋಪಿಗಳು ತಮ್ಮ ವಾಹನದಲ್ಲಿ ಲಿಫ್ಟ್ ಅನ್ನು ನೀಡಿದರು ಎಂದು ದೌಸಾ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಗುಪ್ತಾ ಹೇಳಿದರು.

ಗ್ರಾಮಕ್ಕೆ ಕರೆದೊಯ್ಯುವ ಬದಲು ಕಾಡಿಗೆ ಒಯ್ದರು

ಆಕೆಯನ್ನು ಗ್ರಾಮಕ್ಕೆ ಕರೆದುಕೊಂಡು ಹೋಗುವ ಬದಲು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾರೆ. ಸಾಮೂಹಿಕ ಅತ್ಯಾಚಾರದ ನಂತರ, ಅವರು ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಬಾವಿಗೆ ಎಸೆದರು ಎಂದು ಅಧಿಕಾರಿ ಹೇಳಿದರು.

ಒಬ್ಬ ಆರೋಪಿ ವಶಕ್ಕೆ

ಸಂತ್ರಸ್ತೆ ಮನೆಗೆ ಬಾರದಿದ್ದಾಗ, ಆಕೆಯ ಪೋಷಕರು ಭಾನುವಾರ ಸಂಜೆ ದೌಸಾದ ರಾಮಗಢ ಪಚವಾರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದಾರೆ. ಸೋಮವಾರ ಮುಂಜಾನೆ ಮೃತದೇಹ ಪತ್ತೆಯಾಗಿದೆ ಎಂದು ಗುಪ್ತಾ ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಕಲುರಾಮ್ ಮೀನಾ ಎಂದು ಗುರುತಿಸಲಾಗಿದ್ದು, ಇತರ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಎಸ್ಪಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯು ಆರೋಪಿಗೆ ಮಹಿಳೆ ತಿಳಿದಿಲ್ಲ ಎಂದು ಸೂಚಿಸುತ್ತದೆ, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಗುಪ್ತಾ ಹೇಳಿದರು.

ಇದನ್ನೂ ಓದಿ: Viral Video: ಮಾತನಾಡುತ್ತಲೇ ಮ್ಯಾನ್‌ಹೋಲ್ ಒಳಗೆ ಬಿದ್ದ ಮಹಿಳೆ! ಭಯಾನಕ ದೃಶ್ಯ ಇಲ್ಲಿದೆ ನೋಡಿ

17 ವರ್ಷದ ಬಾಲಕಿ ಮೇಲೆ 12ರ ಬಾಲಕನಿಂದ ರೇಪ್!

17 ವರ್ಷದ ಬಾಲಕಿಯ ಮೇಲೆ 12 ವರ್ಷದ ಬಾಲಕ ಅತ್ಯಾಚಾರ ಮಾಡಿದ್ದಾನೆ. ತಮಿಳುನಾಡಿನ ತಂಜಾವೂರಿನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಶಾಲೆ ಬಿಟ್ಟು ಮನೆಯಲ್ಲೇ ಇದ್ದ 17 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯಲ್ಲಿದ್ದ 12 ವರ್ಷದ ಬಾಲಕ ಅತ್ಯಾಚಾರ ಮಾಡಿದ್ದಾನಂತೆ. ಆ ಬಾಲಕನೂ ಶಾಲೆ ಬಿಟ್ಟು, ಮನೆಯಲ್ಲೇ ಇದ್ದ ಎನ್ನಲಾಗಿದೆ.

ಸಂತ್ರಸ್ತೆಗೆ ಕಾಣಿಸಿಕೊಂಡ ಹೊಟ್ಟೆನೋವು

ಒಂದು ದಿನ ಇದ್ದಕ್ಕಿಂದ್ದಂತೆ ಸಂತ್ರಸ್ತ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ತುಂಬಾ ದಿನಗಳಿಂದ ಈ ರೀತಿ ಆಗುತ್ತಿದ್ದರೂ ಆಕೆ ಪೋಷಕರಿಂದ ವಿಷಯ ಮುಚ್ಚಿಟ್ಟಿದ್ದಳು. ಆದರೆ ವಿಪರೀತ ಹೊಟ್ಟೆನೋವಿನಿಂದ ಪೋಷಕರಿಗೆ ತಿಳಿಸಿದ್ದು, ಆಕೆಯನ್ನು ಏಪ್ರಿಲ್ 16 ರಂದು ರಾಜಾ ಮಿರಾಸುಂದರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಪರೀಕ್ಷೆ ನಡೆಸಿದಾಗಿ ಆಕೆ 9 ತಿಂಗಳ ಗರ್ಭಿಣಿ ಎನ್ನುವುದು ಗೊತ್ತಾಗಿದೆ.

ಇದನ್ನೂ ಓದಿ: Crime: ಓದಿನ ಒತ್ತಡಕ್ಕೆ ವಿದ್ಯಾರ್ಥಿ ಆತ್ಮಹತ್ಯೆ; ಮೇಲ್ಚಾವಣಿಯಿಂದ ಬಿದ್ದು ಮತ್ತೊಬ್ಬ Medical Student ಸಾವು

ಮಗುವಿಗೆ ಜನ್ಮ ನೀಡಿದ 17ರ ಬಾಲಕಿ

ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಆ ಬಾಲಕಿ, ಅಲ್ಲೇ ಹೆಣ್ಣು ಮಗುವಿಗೆ ಜನ್ಮವನ್ನೂ ನೀಡಿದ್ದಾಳೆ. ಈ ವೇಳೆ ಆಕೆ ಮೇಲೆ 12 ವರ್ಷದ ಬಾಲಕ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಈ ವಿಚಾರವನ್ನು ಖುದ್ದು ಆಕೆಯೇ ಹೇಳಿದ್ದಾಳೆ.
Published by:Divya D
First published: