Communal Peace: ಈ ಇಬ್ಬರು ಬಾಲಕರು ಸೇರಿ ಬಾಂಗ್ಲಾದೇಶದಲ್ಲಿ ಎಂಥಾ ಅದ್ಭುತ ಸಂದೇಶ ಸಾರಿದ್ದಾರೆ ನೋಡಿ!

Communal Harmony: 9ರ ಹರೆಯದ ಲಿಜೇಶ್ ಪೊದ್ದಾರ್ ಮತ್ತು ಅವನಿಗಿಂತ ಒಂದು ವರ್ಷ ಹಿರಿಯವನಾದ ಎಡ್ವಿನ್ ಸೂತ್ರಧರ್ ಪ್ರಾಥಮಿಕ ಶಾಲಾ ಗೆಳೆಯರಾಗಿದ್ದರು. ಪ್ರಸ್ತುತ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಲಿಜೇಶ್ ಬೇರೆ ಶಾಲೆಯಲ್ಲಿದ್ದಾನೆ ಹಾಗೂ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಡ್ವಿನ್ ಅನ್ನು ಆಗಾಗ್ಗೆ ಭೇಟಿಯಾಗುತ್ತಿರುತ್ತಾನೆ.

ಎಲ್ಲೆಡೆ ಈ ಗೆಳೆಯರದ್ದೇ ಚರ್ಚೆ

ಎಲ್ಲೆಡೆ ಈ ಗೆಳೆಯರದ್ದೇ ಚರ್ಚೆ

  • Share this:
ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಲ್ಲಿ (Political Party) ಅವಾಮಿ ಲೀಗ್ (Awami League) ಒಂದಾಗಿದೆ. ಕುರಾನ್ ಸೇರಿದಂತೆ ಧರ್ಮನಿಂದನೆಯ ಘಟನೆಗಳನ್ನು ಹಿಂದೂಗಳು ಕೈಗೊಂಡಿದ್ದಾರೆ ಎಂದು ಆರೋಪಿಸಿ ಆಗ್ನೇಯ ನೊವಾಖಾಲಿ ಜಿಲ್ಲೆಯಲ್ಲಿ ನೂರಾರು ಮುಸ್ಲಿಮರು ಪ್ರತಿಭಟನೆ (Protest) ನಡೆಸಿದಾಗ ಕೋಮು ಘರ್ಷಣೆಗಳು ಪ್ರಾರಂಭವಾದವು. ಈ ದಾಳಿಗಳನ್ನು ಖಂಡಿಸಿ ಬಾಂಗ್ಲಾದೇಶದ ಆಡಳಿತ ಪಕ್ಷದ (Ruling Party) (ಅವಾಮಿ ಲೀಗ್) ಸಾವಿರಾರು ಸದಸ್ಯರು ಇತ್ತೀಚೆಗೆ ಕೋಮು ಹಿಂಸಾಚಾರದ ವಿರುದ್ಧ ಒಟ್ಟುಗೂಡಿ ಪ್ರತಿಭಟನೆ ನಡೆಸಿದರು. ತಮ್ಮ ನೆಲದಲ್ಲಿ ಕೋಮು ದ್ವೇಷವನ್ನು (Communal Violence) ಎಂದಿಗೂ ಅನುಮತಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು. ಸ್ವಾಹಿದ್ ಮಿನಾರ್‌ವರೆಗೆ ನಡೆಸಿದ ಮೆರವಣಿಗೆಯಲ್ಲಿ ಅವಾಮಿ ಲೀಗ್‌ನ ಕೇಂದ್ರ ನಾಯಕರು (Leaders) ಭಾಗವಹಿಸಿದ್ದರು. ಈ ಪ್ರತಿಭಟನಾ ಮೆರವಣಿಗೆಯಲ್ಲಿನ ಬ್ಯಾನರ್‌ಗಳಲ್ಲಿ ಹಿಂದೂ ಮುಸ್ಲಿಂ ಕೋಮು ಸೌಹಾರ್ದತೆ ಬಿಂಬಿಸುವ ಮಕ್ಕಳಿಬ್ಬರ ಫೋಟೋಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಈ ಮಕ್ಕಳು ಯಾರು ಅವರ ಫೋಟೋ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಹೇಗೆ ಕಾಣಿಸಿಕೊಂಡಿತು ಎಂಬುದನ್ನು ತಿಳಿದುಕೊಳ್ಳೋಣ.

ಪಶ್ಚಿಮ ಬ್ರಹ್ಮಪುತ್ರ ಕಣಿವೆಯಲ್ಲಿ ಅವಿಭಜಿತ ಕಾಮ್ರುಪ್ ಮತ್ತು ಗೋಲ್ಪಾರಾ ಪ್ರದೇಶಗಳನ್ನು ಒಳಗೊಂಡಿರುವ ಅಸ್ಸಾಂನ ಲಿಜೇಶ್ ಪೊದ್ದಾರ್ ಮತ್ತು ಎಡ್ವಿನ್ ಸೂತ್ರಧರ್ ಚಿತ್ರ ಒಳಗೊಂಡಿರುವ ಪೋಸ್ಟರ್‌ಗಳು ಅವಾಮಿ ಲೀಗ್‌ನ ಪ್ರತಿಭಟನೆಯಲ್ಲಿ ಪ್ರದರ್ಶನಗೊಂಡಿದ್ದವು. ಹಿಂದೂ ಹಾಗೂ ಮುಸ್ಲಿಂ ಬಾಂಧವ್ಯದ ಭಾವೈಕ್ಯ ಸಾರುವ ಈ ಮಕ್ಕಳ ಫೋಟೋಗಳು ಹಿಂದೂಗಳ ಮೇಲಿನ ದಾಳಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಗಳಲ್ಲಿ ಪ್ರದರ್ಶಿಸಲಾಯಿತು. ಇಬ್ಬರು ಮಕ್ಕಳನ್ನು ಹಿಂದು ಹಾಗೂ ಮುಸ್ಲಿಂ ಹುಡುಗರಂತೆ ವೇಷ ಹಾಕಿಸಿ ಬೊಂಗೈಗಾಂವ್‌ನ ಛಾಯಾಗ್ರಾಹಕ ತಪಸ್ ಪಾಲ್ ಸೃಜನಾತ್ಮಕವಾಗಿ ಫೋಟೋ ಸೆರೆಹಿಡಿದಿದ್ದಾರೆ.

ಪ್ರತಿಭಟನೆಯಲ್ಲಿ ಮಕ್ಕಳ ಫೋಟೋ

ಢಾಕಾದಲ್ಲಿ ಅವಾಮಿ ಲೀಗ್ ನಡೆಸಿದ ಪ್ರತಿಭಟನೆಗಳಲ್ಲಿ ತನ್ನ ಮಗ ಹಾಗೂ ಆತನ ಗೆಳೆಯನ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿದೆ ಎಂಬುದನ್ನು ಮೊದಲಿಗೆ ಲಿಜೇಶ್ ಪೊದ್ದಾರ್‌ನ ತಂದೆ ಲಿಟ್ಟನ್ ಪೊದ್ದಾರ್ ನಂಬಿರಲಿಲ್ಲ. ಹೌದು ಈ ಇಬ್ಬರು ಮಕ್ಕಳು ಹಿಂದೂ ಹಾಗೂ ಮುಸ್ಲಿಂ ಮಕ್ಕಳಂತೆ ವೇಷ ಧರಿಸಿದ ಫೋಟೋಗಳು ಪ್ರತಿಭಟನೆಗಳಲ್ಲಿ ಧರ್ಮ ಭಾವೈಕ್ಯ ಸಾರುವ ಪ್ರಮುಖ ಪೋಸ್ಟರ್‌ಗಳಾಗಿ ಪ್ರದರ್ಶನಗೊಂಡವು. ಢಾಕಾದಲ್ಲಿ ನಡೆಯುತ್ತಿರುವ ಅವಾಮಿ ಲೀಗ್‌ನ ಪ್ರತಿಭಟನೆಗಳಲ್ಲಿ ಮಕ್ಕಳ ಹಿಂದು ಮುಸ್ಲಿಂ ಭಾವೈಕ್ಯ ಸಾರುವ ಫೋಟೋಗಳು ಪ್ರದರ್ಶನಗೊಂಡಿವೆ ಎಂದು ಲಿಟ್ಟನ್ ಪೊದ್ದಾರ್‌ಗೆ ಅವರ ಗೆಳೆಯರು ತಿಳಿಸಿದ್ದರು. ನನ್ನ ಮಗ ಹಾಗೂ ಆತನ ಸ್ನೇಹಿತ ಇದೀಗ ಬಾಂಗ್ಲಾದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಗಾಗಿ ಪೋಸ್ಟರ್ ಬಾಯ್‌ಗಳಾಗಿದ್ದಾರೆ ಎಂದು ಲಿಟ್ಟನ್ ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: T20 World Cup- ಅಲ್ಲಾಹು ದಾರಿ ತೋರಿಸು: ಬಾಂಗ್ಲಾ ಕೋಮುಗಲಭೆಗೆ ಕಣ್ಣೀರಿಟ್ಟ ಕ್ರಿಕೆಟಿಗ ಮೊರ್ತಾಜಾ

ಶಾಲಾ ಗೆಳೆಯರು ಇವರು

9ರ ಹರೆಯದ ಲಿಜೇಶ್ ಪೊದ್ದಾರ್ ಮತ್ತು ಅವನಿಗಿಂತ ಒಂದು ವರ್ಷ ಹಿರಿಯವನಾದ ಎಡ್ವಿನ್ ಸೂತ್ರಧರ್ ಪ್ರಾಥಮಿಕ ಶಾಲಾ ಗೆಳೆಯರಾಗಿದ್ದರು. ಪ್ರಸ್ತುತ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಲಿಜೇಶ್ ಬೇರೆ ಶಾಲೆಯಲ್ಲಿದ್ದಾನೆ ಹಾಗೂ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಡ್ವಿನ್ ಅನ್ನು ಆಗಾಗ್ಗೆ ಭೇಟಿಯಾಗುತ್ತಿರುತ್ತಾನೆ. 2020ರಲ್ಲಿ ರಾಹುಲ್ ಗಾಂಧಿಯವರು ಮಕ್ಕಳ ಈ ಚಿತ್ರಗಳನ್ನು ಟ್ವೀಟ್ ಮಾಡಿ ಸೌಹಾರ್ದತೆಯ ಶಾಂತಿ ಮಂತ್ರದ ಶೀರ್ಷಿಕೆಯುಳ್ಳ ಕಾಮೆಂಟ್ ಬರೆದುಕೊಂಡಿದ್ದರು.

ಧರ್ಮ,ಜಾತಿ ಹಾಗೂ ವರ್ಗದ ಭಿನ್ನತೆಗಳನ್ನು ಬದಿಗಿಟ್ಟು ಸೌಹಾರ್ದತೆ ಸಾರಲು ಕೊರೋನಾ ವೈರಸ್ ನೀತಿಪಾಠವಾಗಿದೆ. ಈ ಮಾರಣಾಂತಿಕ ವೈರಸ್ ಸೋಲಿಸಲು ಎಲ್ಲರೂ ಒಂದಾಗಿ ಸಹಾನುಭೂತಿ ಹಾಗೂ ಸ್ವಯಂ ತ್ಯಾಗದ ಮೂಲಕ ಕೆಲಸ ಮಾಡಬೇಕಾಗಿದೆ. ಜೊತೆಯಾಗಿದ್ದಾಗ ಯಾವುದೇ ಯುದ್ಧವನ್ನು ನಾವು ಗೆಲ್ಲುತ್ತೇವೆ ಎಂಬ ಶೀರ್ಷಿಕೆ ನೀಡಿದ್ದರು.

ಇದನ್ನೂ ಓದಿ: Subramanian Swamy| ಚೀನಾ-ತಾಲಿಬಾನ್ ಆಯ್ತು ಈಗ ಬಾಂಗ್ಲಾವನ್ನೂ ಕಂಡು ಹೆದರುತ್ತಿದೆಯೇ ಭಾರತ?; ಸುಬ್ರಮಣಿಯನ್ ಸ್ವಾಮಿ ಚಾಟಿ

ಇವರ ಚಿತ್ರಗಳು ಬಹಳ ಫೇಮಸ್!

ಸರಕಾರಿ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಲಿಟ್ಟನ್ ಸ್ನೇಹಿತರ ಫೋಟೋಗಳನ್ನು ರಾಜಸ್ಥಾನದ ಸಂಸದರು ಮತ್ತು ಅಸೋಮ್ ಜಾತಿಯ ಪಕ್ಷದ ಅಧ್ಯಕ್ಷ ಲುರಿನ್ ಜ್ಯೋತಿ ಗೊಗೊಯ್ ಒಳಗೊಂಡಂತೆ ಹೆಚ್ಚಿನವರು ಬೇರೆ ಬೇರೆ ಸಂದರ್ಭಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಈ ಬಾರಿ ಈ ಚಿತ್ರವು ತನ್ನ ಸರಿಯಾದ ಉದ್ದೇಶದ ಗುರಿ ತಲುಪಿದೆ. ನನ್ನ ಚಿತ್ರವನ್ನು ಬೇರೆ ಬೇರೆ ವೇದಿಕೆಗಳಲ್ಲಿ ನೋಡಿದಾಗ ನಾನೊಬ್ಬ ಸೆಲೆಬ್ರಿಟಿಯಂತೆ ಅನಿಸುತ್ತದೆ ಎಂದು ಲಿಜೇಶ್ ಹೇಳುತ್ತಾನೆ ಎಂದು ತಂದೆ ಲಿಟ್ಟನ್ ತಿಳಿಸುತ್ತಾರೆ.

ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ

ಹಿಂಸಾಚಾರದಿಂದ ಇಬ್ಬರು ಹಿಂದೂಗಳು ಸೇರಿದಂತೆ 6 ಜನರ ಮರಣಕ್ಕೆ ಕಾರಣವಾಗಿದ್ದು ಹಲವಾರು ಮನೆಗಳನ್ನು ನಾಶಪಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘರ್ಷಣೆಯ ಹಿನ್ನಲೆಯಲ್ಲಿ 450 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವಾರು ಹಿಂದೂ ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಮನೆಗಳಿಗೆ ಬೆಂಕಿ ಹಚ್ಚಲಾಯಿತು. “ಈ ಕೋಮುವಾದಿ ದುಷ್ಟತನವನ್ನು ಬಾಂಗ್ಲಾದೇಶ ನಿಲ್ಲಿಸಿ” ಎಂದು ಮಹಿಳಾ ಬೆಂಬಲಿಗರು ಹಿಡಿದಿರುವ ಬ್ಯಾನರ್ ಒಂದರಲ್ಲಿ ಅಸ್ಸಾಂನ ಈ ಇಬ್ಬರು ಗೆಳೆಯರ ಫೋಟೋಗಳಿವೆ.

ಬಾಂಗ್ಲಾದೇಶದ 170 ಮಿಲಿಯನ್ ಜನಸಂಖ್ಯೆಯಲ್ಲಿ 10%ದಷ್ಟು ಹಿಂದೂಗಳಿದ್ದಾರೆ. ಹಿಂದೂಗಳ ಹಬ್ಬವಾದ ದುರ್ಗಾಪೂಜೆಯ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 71 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬಾಂಗ್ಲಾದೇಶದ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
Published by:Soumya KN
First published: